Kadaba

►► ದ.ಕ. ಜಿಲ್ಲೆಯಲ್ಲೊಂದು ಸಾಮರಸ್ಯ ಘಟನೆ: ಮಾನವೀಯತೆಗೆ ಬೆಲೆ‌ ನೀಡಿದ ವ್ಯಕ್ತಿ ಫೇಸ್‌ಬುಕ್‌ ನಲ್ಲಿ ಹೀರೋ‌…

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್ 08. ದಕ್ಷಿಣ ಕನ್ನಡ ಅಥವಾ ಮಂಗಳೂರು ಅಂದ್ರೆ ಯಾವಾಗಲೂ ಕೋಮು ಗಲಭೆ, ಹೊಡೆದಾಟ, ಬಡಿದಾಟದ ಸುದ್ದಿಗಳ ಮೂಲಕವೇ ರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿರುವ ಜಿಲ್ಲೆ. ಮಂಗಳೂರಿನ ಬಗ್ಗೆ ಹೊರಗಿನವರಲ್ಲಿ ಇದು ಕೆಟ್ಟ ಅಭಿಪ್ರಾಯ ಮೂಡಿಸಿದ್ದೂ ಇದೆ. ಇದರ ಮಧ್ಯೆ ಮಂಗಳೂರಿನಲ್ಲಿಯೂ ಕೋಮು ಸಾಮರಸ್ಯ ಇದೆ ಅಂತ ತೋರಿಸಿಕೊಡುವ ಅಪರೂಪದ ಘಟನೆಗಳು ನಡೆಯುತ್ತಿರುತ್ತವೆ. ಅದಕ್ಕೆ ಸಾಕ್ಷಿಯೆಂಬಂತೆ ಮಂಗಳೂರಿನ ಹಿಂದೂ ಸಹೋದರನೋರ್ವ ಮುಸಲ್ಮಾನರ ಧರ್ಮಗುರುಗಳ ನಿದ್ದೆಗೆ ಭಂಗವುಂಟುಮಾಡದೆ ತನ್ನ‌ ಭುಜವನ್ನೇ ನೀಡಿದ ಸ್ವಾರಸ್ಯಕರ ಘಟನೆ ಇದೀಗ […]

►► ದ.ಕ. ಜಿಲ್ಲೆಯಲ್ಲೊಂದು ಸಾಮರಸ್ಯ ಘಟನೆ: ಮಾನವೀಯತೆಗೆ ಬೆಲೆ‌ ನೀಡಿದ ವ್ಯಕ್ತಿ ಫೇಸ್‌ಬುಕ್‌ ನಲ್ಲಿ ಹೀರೋ‌… Read More »

ಕರಾವಳಿ

ಎಂ.ಜೆ.ಎಸ್.ಎಸ್.ಎ. ಮಂಗಳೂರು ಧರ್ಮಪ್ರಾಂತ್ಯದ ಮುಖ್ಯ ನಿರ್ದೇಶಕರಾಗಿ ಫಾ| ಪಿ.ಕೆ. ಅಬ್ರಹಾಂ ಆಯ್ಕೆ

(ನ್ಯೂಸ್ ಕಡಬ) newskadaba.com ಕಡಬ, ಜೂ.08. ಮಲಂಕರ ಜಾಕೋಬೈಟ್ ಸಿರಿಯನ್ ಸಂಡೇ ಸ್ಕೂಲ್ ಅಸೋಶಿಯೇಶನ್ ಮಂಗಳೂರು ಧರ್ಮಪ್ರಾಂತ್ಯದ ಮುಖ್ಯ ನಿರ್ದೇಶಕರಾಗಿ ರೆ|ಫಾ| ಪಿ.ಕೆ ಅಬ್ರಹಾಂ ಆಯ್ಕೆಯಾಗಿದ್ದು ಕಾರ್ಯದರ್ಶಿಯಾಗಿ ಸುಜನ್ ಇ.ಎಸ್. ಆಯ್ಕೆಗೊಂಡಿರುತ್ತಾರೆ. ಮಂಗಳೂರು ಜೆಪ್ಪು ಸೈಂಟ್ ಅಂತೋನಿಯವರ ದೇವಾಲಯದಲ್ಲಿ ಮಂಗಳವಾರದಂದು ನಡೆದ ಮಂಗಳೂರು ಧರ್ಮಪ್ರಾಂತ್ಯದ ಬೈಂದೂರು, ಎನ್ಆರ್ ಪುರ, ದಕ್ಷಿಣ ಕನ್ನಡ, ವ್ಯಾಪ್ತಿಯ ಚರ್ಚುಗಳ ಧರ್ಮಗುರುಗಳ ಸಮಾರಂಭದಲ್ಲಿ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ. ರೆ|ಫಾ| ಪಿ.ಕೆ ಅಬ್ರಹಾಂ ರವರು ಕುಂತೂರು ಸೈಂಟ್ ಮೇರಿಸ್ ಸಿರಿಯನ್ ಚರ್ಚಿನ ಧರ್ಮಗುರುಗಳಾಗಿರುತ್ತಾರೆ.

ಎಂ.ಜೆ.ಎಸ್.ಎಸ್.ಎ. ಮಂಗಳೂರು ಧರ್ಮಪ್ರಾಂತ್ಯದ ಮುಖ್ಯ ನಿರ್ದೇಶಕರಾಗಿ ಫಾ| ಪಿ.ಕೆ. ಅಬ್ರಹಾಂ ಆಯ್ಕೆ Read More »

ಕರಾವಳಿ

ಹಳೇ ಕಾನೂನು ಬಳಸಿ ಎಂ.ಆರ್.ಪಿ.ಎಲ್.ಗೆ ಭೂಸ್ವಾಧೀನ: ಮುಖ್ಯಮಂತ್ರಿಗೆ ದೂರು

(ನ್ಯೂಸ್ ಕಡಬ) newskadaba.com ಬೆಂಗಳೂರು, ಜೂ.08. ಕೆಐಎಡಿಬಿಯು ಹಳೇ ಕಾನೂನನ್ನು ಬಳಕೆ ಮಾಡಿಕೊಂಡು ಎಂ ಆರ್ ಪಿಎಲ್ ವಿಸ್ತರಣೆಗಾಗಿ ರೈತರ ಕೃಷಿ ಭೂಮಿಯನ್ನು ಭೂಸ್ವಾಧೀನ ಮಾಡುತ್ತಿದೆ ಎಂದು ಮಂಗಳೂರು ವಿಶೇಷ ಆರ್ಥಿಕ ವಲಯ ವಿರೋಧಿ ಹೋರಾಟಗಾರ್ತಿ ವಿದ್ಯಾ ದಿನಕರ್ ಮುಖ್ಯಮಂತ್ರಿಗೆ ದೂರು ನೀಡಿದ್ದಾರೆ. ವಿಧಾನಸೌಧದಲ್ಲಿ ಮುಖ್ಯಮಂತ್ರಿಯನ್ನು ಭೇಟಿಯಾದ ವಿದ್ಯಾ ದಿನಕರ್ ನೇತೃತ್ವದ ನಿಯೋಗ, ಹಳೇ ಕಾನೂನನ್ನು ಬಳಕೆ ಮಾಡಿಕೊಂಡು ಭೂಸ್ವಾಧೀನ ಮಾಡಬಾರದು ಎಂದು ಈಗಾಗಲೇ ಹೈಕೋರ್ಟ್ ಆದೇಶ ನೀಡಿದೆ. ಯುಪಿಎ ಸರಕಾರ 2013 ರಲ್ಲಿ ಹೊಸ ಭೂಸ್ವಾಧೀನ ಕಾಯ್ದೆಯನ್ನು ಜಾರಿಗೆ

ಹಳೇ ಕಾನೂನು ಬಳಸಿ ಎಂ.ಆರ್.ಪಿ.ಎಲ್.ಗೆ ಭೂಸ್ವಾಧೀನ: ಮುಖ್ಯಮಂತ್ರಿಗೆ ದೂರು Read More »

ಕರ್ನಾಟಕ

ವ್ಯಕ್ತಿಯ ಗುರುತಿಗೆ ಆಧಾರ್ ಕಾರ್ಡ್ ಪ್ರಮುಖ ದಾಖಲೆಯಾಗಿ ಪರಿಗಣನೆ: ಡಾ| ಕೆ.ಜಿ.ಜಗದೀಶ್

(ನ್ಯೂಸ್ ಕಡಬ) newskadaba.com ಮ0ಗಳೂರು, ಜೂನ್.7. ಆಧಾರ್ ಕಾರ್ಡ್ ಜಾರಿಯಾದ ಬಳಿಕ ದೇಶದಲ್ಲಿ ಗುರುತಿನ ಚೀಟಿಗೆ ಸಂಬಂಧಪಟ್ಟ ಎಲ್ಲಾ ಗೊಂದಲಗಳು ಪರಿಹಾರವಾಗಿವೆ ಎಂದು ಜಿಲ್ಲಾಧಿಕಾರಿ ಡಾ.ಕೆ.ಜಿ. ಜಗದೀಶ್ ಹೇಳಿದರು. ಅವರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬುಧವಾರ ನಡೆದ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಮತ್ತು ಅಂಗನವಾಡಿ ಮೇಲ್ವಿಚಾರಕರಿಗೆ ಆಧಾರ್ ಸೀಡಿಂಗ್ ಮತ್ತು ಆಧಾರ್ ಕಾರ್ಡಿಗೆ ಸಂಬಂಧಿಸಿದ ಸೇವೆಗಳ ಜಾಗೃತಿ ಮತ್ತು ಅರಿವು ಮೂಡಿಸುವ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ದೇಶದ ಯಾವುದೇ ಜಾಗದಲ್ಲಿದ್ದರೂ ವ್ಯಕ್ತಿಯ ಗುರುತಿಗೆ ಆಧಾರ್ ಸಂಖ್ಯೆ ಪ್ರಬಲ ದಾಖಲೆಯಾಗಿ

ವ್ಯಕ್ತಿಯ ಗುರುತಿಗೆ ಆಧಾರ್ ಕಾರ್ಡ್ ಪ್ರಮುಖ ದಾಖಲೆಯಾಗಿ ಪರಿಗಣನೆ: ಡಾ| ಕೆ.ಜಿ.ಜಗದೀಶ್ Read More »

ಕರಾವಳಿ

ಬಸ್ – ಲಾರಿ ಡಿಕ್ಕಿ: 7 ಜನ ಗಂಭೀರ

(ನ್ಯೂಸ್ ಕಡಬ) newskadaba.com ಭಟ್ಕಳ, ಜೂ.07. ಖಾಸಗಿ ಬಸ್ ಹಾಗೂ ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ 7 ಜನರು ಗಂಭೀರವಾಗಿ ಗಾಯಗೊಂಡ ಘಟನೆ ಭಟ್ಕಳ ತಾಲೂಕಿನ ಬೆಳಕೆ ಬಳಿ ನಡೆದಿದೆ. ವಿ.ಆರ್.ಎಲ್. ಬಸ್ ಸಂಸ್ಥೆಗೆ ಸೇರಿದ ವೋಲ್ವೊ ಬಸ್ ಇದಾಗಿದ್ದು, ಬೆಳಗಾವಿಯಿಂದ ಮಂಗಳೂರಿನತ್ತ ತೆರಳುತ್ತಿತ್ತು ಎನ್ನಲಾಗಿದೆ. ಅಪಘಾತದಲ್ಲಿ ಹಲವರಿಗೆ ಗಾಯಗಳಾಗಿದ್ದು, ಬಸ್ ಚಾಲಕ ಸೇರಿದಂತೆ 7 ಜನರ ಸ್ಥಿತಿ ಗಂಭೀರವಾಗಿದ್ದು, ಗಾಯಾಳುಗಳನ್ನು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಸ್ – ಲಾರಿ ಡಿಕ್ಕಿ: 7 ಜನ ಗಂಭೀರ Read More »

ಕರ್ನಾಟಕ

ಕುಂತೂರು ರಕ್ಷಿತಾರಣ್ಯದಲ್ಲಿ ಬೀಜದ ಹುಂಡೆಗಳ ಬಿತ್ತೋತ್ಸವ

(ನ್ಯೂಸ್ ಕಡಬ) newskadaba.com ಕಡಬ, ಜೂ.07. ಕುಂತೂರು ವಲಯರಕ್ಷಿತಾರಣ್ಯದಲ್ಲಿ ಬೀಜದ ಹುಂಡೆಗಳ ಬಿತ್ತೋತ್ಸವವು ಕುಂತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಬಲ್ಯ-ಪಟ್ಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಸಹಕಾರದೊಂದಿಗೆ ನಡೆಯಿತು. ಈ ಸಂದರ್ಭ ಗ್ರಾಮ ಅರಣ್ಯ ಸಮಿತಿ ಅಧ್ಯಕ್ಷ ಶಿವಪ್ರಸಾದ್ ಪುತ್ತಿಲ, ಕುಂತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯಗುರು ಸುಮಿತ್ರಾ, ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷ ನೇಮಿರಾಜ, ಬಲ್ಯ-ಪಟ್ಟೆ ಶಾಲಾ ಮುಖ್ಯಗುರು ಪುಷ್ಪಾ, ಕುಂತೂರು ಶಾಖೆಯ ಉಪ ಅರಣ್ಯಾಧಿಕಾರಿಅಶೋಕ್, ಅರಣ್ಯರಕ್ಷಕ ಭರತೇಶ್ ಮೊದಲಾದವರು ಉಪಸ್ಥಿತರಿದ್ದರು.

ಕುಂತೂರು ರಕ್ಷಿತಾರಣ್ಯದಲ್ಲಿ ಬೀಜದ ಹುಂಡೆಗಳ ಬಿತ್ತೋತ್ಸವ Read More »

ಕರಾವಳಿ

ಸವಣೂರು: ಶ್ರೀ ಕ್ಷೇ.ಧ.ಗ್ರಾ.ಯೋ.ಯ ಮೇಲ್ವಿಚಾರಕಿಗೆ ಬೀಳ್ಕೊಡುಗೆ

(ನ್ಯೂಸ್ ಕಡಬ) newskadaba.com ಸವಣೂರು, ಜೂ.06. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸವಣೂರು ವಲಯ ಮೇಲ್ವಿಚಾರಕಿ ಕಿಶೋರಿ ಎಸ್ ರೈಯವರಿಗೆ ಮೈಸೂರು ಕೆ.ಆರ್.ನಗರಕ್ಕೆ ವರ್ಗಾವಣೆಗೊಂಡಿದ್ದು ಅವರನ್ನು ಸವಣೂರು ಹಿ.ಪ್ರಾ.ಶಾಲೆಯಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಗೌರವಿಸಲಾಯಿತು. ಗೌರವ ಸ್ವೀಕರಿಸಿದ ಕಿಶೋರಿ ಎಸ್ ರೈ ಮಾತನಾಡಿ,ಕಳೆದ ಒಂದೂವರೆ ವರ್ಷದಿಂದ ಸವಣೂರು ವಲಯದಲ್ಲಿ ಕರ್ತವ್ಯ ನಿರ್ವಹಿಸಲು ಸಹಕರಿಸಿದ ಎಲ್ಲರಿಗೂ ಕೃತಜ್ಞತಳಾಗಿದ್ದೇನೆ,ಸವಣೂರು ವಲಯವು ಅತ್ಯುತ್ತಮ ವಲಯವಾಗಿದ್ದು ಗ್ರಾಮಾಭಿವೃದ್ದಿ ಯೋಜನೆಗೆ ಉತ್ತಮ ಪ್ರೋತ್ಸಾಹ ಮತ್ತು ನಿರಂತರ ಸಹಕಾರ ನೀಡಿದ್ದಾರೆ ಎಂದರು. ಸವಣೂರು ವಲಯ

ಸವಣೂರು: ಶ್ರೀ ಕ್ಷೇ.ಧ.ಗ್ರಾ.ಯೋ.ಯ ಮೇಲ್ವಿಚಾರಕಿಗೆ ಬೀಳ್ಕೊಡುಗೆ Read More »

ಕರಾವಳಿ

ಜೂ.9: ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಪ್ರಾರಂಭೋತ್ಸವ

  (ನ್ಯೂಸ್ ಕಡಬ) newskadaba.com ಸವಣೂರು, ಜೂ.06. ಎಸ್.ಎನ್.ಆರ್.ರೂರಲ್ ಎಜುಕೇಶನ್ ಟ್ರಸ್ಟ್‌ ಪ್ರವರ್ತಿತ ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಪ್ರಾರಂಭೋತ್ಸವ ಜೂ.9ರಂದು ಸಂಸ್ಥೆಯ ವಿದ್ಯಾ ಚೇತನ ಸಭಾಂಗಣದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಬೆಟ್ಟಂಪಾಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ವರದರಾಜ ಚಂದ್ರಗಿರಿ ಉದ್ಘಾಟಿಸುವರು.ಅಧ್ಯಕ್ಷತೆಯನ್ನು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣುರು ಕೆ.ಸೀತಾರಾಮ ರೈ ವಹಿಸುವರು.ಅತಿಥಿಗಳಾಗಿ ಎಸ್.ಎನ್.ಆರ್.ರೂರಲ್ ಎಜುಕೇಶನ್ ಟ್ರಸ್ಟ್‌ನ ಟ್ರಸ್ಟಿ ಎನ್.ಸುಂದರ ರೈ ,ಸಂಸ್ಥೆಯ ಆಡಳಿತಾಧಿಕಾರಿ ಅಶ್ವಿನ್ ಎಲ್.ಶೆಟ್ಟಿ ಪಾಲ್ಗೊಳ್ಳುವರು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಜೂ.9: ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಪ್ರಾರಂಭೋತ್ಸವ Read More »

ಕರಾವಳಿ

ಲೂಟಿಕೋರ ಖಾಸಗಿ ಆಸ್ಪತ್ರೆಗಳಿಗೆ ಕಡಿವಾಣ: ರಮೇಶ್‌ಕುಮಾರ್

(ನ್ಯೂಸ್ ಕಡಬ) newskadaba.com ಬೆಂಗಳೂರು, ಜೂ.6. ಬಡ ಜನರನ್ನು ಲೂಟಿ ಮಾಡುತ್ತಿರುವ ಖಾಸಗಿ ಆಸ್ಪತ್ರೆಗಳಿಗೆ ಎರಡು ವಾರಗಳಲ್ಲಿ ಕಡಿವಾಣ ಹಾಕಲಾಗುವುದು ಎಂದು ಆರೋಗ್ಯ ಸಚಿವ ಕೆ.ಆರ್.ರಮೇಶ್ ಕುಮಾರ್‌ ಎಚ್ಚರಿಕೆ ನೀಡಿದ್ದಾರೆ. ಅವರು ಮಂಗಳವಾರ ನಗರದ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಕಾಕ್ಲಿಯಾರ್ ಇಂಪ್ಲಾಂಟ್ ಯೋಜನೆಗೆ ಚಾಲನೆ ಹಾಗೂ 25 ಹಾಸಿಗೆಗಳ ಡಯಾಲಿಸಿಸ್ ಘಟಕಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. ಖಾಸಗಿ ಆಸ್ಪತ್ರೆಗಳು ಜನರಿಂದ ಚಿಕಿತ್ಸೆಗಾಗಿ ದುಪ್ಪಟ್ಟು ಹಣವನ್ನು ಲೂಟಿಮಾಡುತ್ತಿದ್ದು, ಇದು ನಮ್ಮ ಗಮನಕ್ಕೂ ಬಂದಿದೆ. ಈ ಸಂಬಂಧ ಸದ್ಯದಲ್ಲೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ

ಲೂಟಿಕೋರ ಖಾಸಗಿ ಆಸ್ಪತ್ರೆಗಳಿಗೆ ಕಡಿವಾಣ: ರಮೇಶ್‌ಕುಮಾರ್ Read More »

ಕರ್ನಾಟಕ

ಸವಣೂರು: ಗ್ರಾ.ಪಂ.ನಿಂದ ಪರಿಸರದ ಶಾಲೆಗಳಿಗೆ ಕಸದ ತೊಟ್ಟಿ ವಿತರಣೆ

(ನ್ಯೂಸ್ ಕಡಬ) newskadaba.com ಸವಣೂರು, ಜೂ.06. ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಸ್ವಚ್ಚ ಪರಿಸರ ಯೋಜನೆ ಸಲುವಾಗಿ ಸವಣೂರು ಗ್ರಾ.ಪಂ ವತಿಯಿಂದ ಗ್ರಾ.ಪಂ ವ್ಯಾಪ್ತಿಯ ಎಲ್ಲಾ ಶಾಲೆಗಳಿಗೆ ಕಸದ ತೊಟ್ಟಿ ವಿತರಿಸಲಾಯಿತು. ಗ್ರಾ.ಪಂ.ವ್ಯಾಪ್ತಿಯ ಶಾಲೆಗಳಾದ ಸವಣೂರು ಹಿ.ಪ್ರಾ.ಶಾಲೆ ,ಪ್ರೌಢಶಾಲೆ,ಪ.ಪೂ.ಕಾಲೇಜು, ಮೊಗರು ಹಿ.ಪ್ರಾ.ಶಾಲೆ, ಆರೆಲ್ತಡಿ ಕಿ.ಪ್ರಾ.ಶಾಲೆ, ಪುಣ್ಚಪ್ಪಾಡಿ ಹಿ.ಪ್ರಾ.ಶಾಲೆ, ಕುಮಾರಮಂಗಲ ಹಿ.ಪ್ರಾ.ಶಾಲೆ, ಮಂಜುನಾಥನಗರ ಹಿ.ಪ್ರಾ.ಶಾಲೆ, ಮಂಜುನಾಥನಗರ ಪ್ರೌಢಶಾಲೆ, ಅಂಕತ್ತಡ್ಕ ಹಿ.ಪ್ರಾ.ಶಾಲೆ, ಚೆನ್ನಾವರ ಕಿ.ಪ್ರಾ.ಶಾಲೆ, ಪಾಲ್ತಾಡಿ ಹಿ.ಪ್ರಾ.ಶಾಲೆಗಳಿಗೆ ಕಸದ ತೊಟ್ಟಿಯನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಗ್ರಾ.ಪಂ.ಅಧ್ಯಕ್ಷೆ ಇಂದಿರಾ ಬಿ.ಕೆ, ಸದಸ್ಯರಾದ ಗಿರಿಶಂಕರ್ ಸುಲಾಯ, ಸತೀಶ್

ಸವಣೂರು: ಗ್ರಾ.ಪಂ.ನಿಂದ ಪರಿಸರದ ಶಾಲೆಗಳಿಗೆ ಕಸದ ತೊಟ್ಟಿ ವಿತರಣೆ Read More »

ಕರಾವಳಿ
Scroll to Top