Kadaba

ಸಮಸ್ತ ಪರೀಕ್ಷೆ: ಉಪ್ಪಿನಂಗಡಿ ರೇಂಜ್ ನಲ್ಲಿ ಆದಂ ಶಾಕಿರ್ ಪ್ರಥಮ

(ನ್ಯೂಸ್ ಕಡಬ) newskadaba.com ಕಡಬ, ಜೂ,17. ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡು ಅಧೀನದಲ್ಲಿ ಮೇ ತಿಂಗಳಿನಲ್ಲಿ ನಡೆದ +2 ಪರೀಕ್ಷೆಯಲ್ಲಿ ಆತೂರು ತದ್ಬೀರುಲ್ ಇಸ್ಲಾಂ ಮದ್ರಸದ ವಿದ್ಯಾರ್ಥಿ ಆದಂ ಶಾಕಿರ್ ಸುಹೈಬ್ ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದು, ಅಲ್ಲದೆ ಅತೀ ಹೆಚ್ಚು ಅಂಕ ಪಡೆದು ಉಪ್ಪಿನಂಗಡಿ ರೇಂಜ್ನಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಆದಂ ಶಾಕಿರ್ ಸುಹೈಬ್ 2016-17ನೇ ಸಾಲಿನ ಪಿಯುಸಿ ಪರೀಕ್ಷೆಯಲ್ಲಿಯೂ ವಿಜ್ಞಾನ ವಿಭಾಗದಲ್ಲಿ 96 ಶೇಕಡಾ ಅಂಕದೊಂದಿಗೆ ವಿಶಿಷ್ಠ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದರು. […]

ಸಮಸ್ತ ಪರೀಕ್ಷೆ: ಉಪ್ಪಿನಂಗಡಿ ರೇಂಜ್ ನಲ್ಲಿ ಆದಂ ಶಾಕಿರ್ ಪ್ರಥಮ Read More »

ಕರಾವಳಿ

ಸುಬ್ರಹ್ಮಣ್ಯ ವಲಯ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಪ್ರಕಾಶ್ ಸುಬ್ರಹ್ಮಣ್ಯ ಆಯ್ಕೆ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಜೂ.17. ಸುಬ್ರಹ್ಮಣ್ಯ ವಲಯ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಕನ್ನಡ ಪ್ರಭ ಪತ್ರಿಕೆಯ ವರದಿಗಾರ ಪ್ರಕಾಶ್ ಸುಬ್ರಹ್ಮಣ್ಯ ಆಯ್ಕೆಯಾಗಿದ್ದು, ಕಾರ್ಯದರ್ಶಿಯಾಗಿ ದಿನೇಶ್ ಹಾಲೆಮಜಲು ಆಯ್ಕೆಗೊಂಡಿದ್ದಾರೆ. ಉಪಾಧ್ಯಕ್ಷರಾಗಿ ವಿಶ್ವನಾಥ ನಡುತೋಟ ಹಾಗೂ ಕೋಶಾಧಿಕಾರಿಯಾಗಿ ಭರತ್ ನೆಕ್ರಾಜೆ ನೇಮಕಗೊಂಡಿದ್ದಾರೆ. ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಪ್ರಕಾಶ್ ರವರು ಕನ್ನಡ ಪ್ರಭ ಮತ್ತು ವಾರ್ತಾ ಭಾರತಿ ಪತ್ರಿಕೆ ಹಾಗೂ ಡೈಜಿವರ್ಲ್ಡ್ ದೃಶ್ಯ ಮಾಧ್ಯಮದ ಸುಬ್ರಹ್ಮಣ್ಯ ವಲಯದ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಸುಬ್ರಹ್ಮಣ್ಯ ವಲಯ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಪ್ರಕಾಶ್ ಸುಬ್ರಹ್ಮಣ್ಯ ಆಯ್ಕೆ Read More »

ಕರಾವಳಿ

ಮೌಲ್ಯಾಧಾರಿತ ಶಿಕ್ಷಣದಿಂದ ರಾಷ್ಟ್ರ ನಿರ್ಮಾಣ: ನಳಿನ್ ಕುಮಾರ್

(ನ್ಯೂಸ್ ಕಡಬ) newskadaba.com ಕಡಬ, ಜೂ.17. ಮೌಲ್ಯಾಧಾರಿತ ಶಿಕ್ಷಣದೊಂದಿಗೆ ರಾಷ್ಟ್ರಭಕ್ತಿಯ ಜ್ಞಾನವನ್ನು ಉದ್ದೀಪನಗೊಳಿಸುವ ಸಂಸ್ಕಾರಯುತ ಶಿಕ್ಷಣದಿಂದ ರಾಷ್ಟ್ರ ನಿರ್ಮಾಣ ಕಾರ್ಯಕ್ಕೆ ಪ್ರೇರಣೆ ದೊರೆಯುತ್ತದೆ. ಈ ಕೆಲಸವನ್ನು ಶ್ರೀ ರಾಮಕುಂಜೇಶ್ವರ ವಿದ್ಯಾಸಂಸ್ಥೆ ಮಾಡುತ್ತಿದೆ ಎಂದು ದ.ಕ ಸಂಸದ ನಳಿನ್ ಕುಮಾರ್ ಕಟೀಲ್ ಶ್ಲಾಘನೆ ವ್ಯಕ್ತಪಡಿಸಿದರು. ಅವರು ಶನಿವಾರ ಶ್ರೀ ರಾಮಕುಂಜೇಶ್ವರ ಮಹಾವಿದ್ಯಾಲಯದ ವಿವಿಧ ಶೈಕ್ಷಣಿಕ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭದಲ್ಲಿ ಸಿಸ್ಕೋ ಸಂಭ್ರಮ ಪ್ರಾಯೋಜಿತ ಸಮುದಾಯ ಕಂಪ್ಯುಟರ್ ಶಿಕ್ಷಣ ಕೇಂದ್ರದ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಿದ್ದರು. ನಮ್ಮ ಜಿಲ್ಲೆಯಲ್ಲಿ ಶಿಕ್ಷಣ ಸಂಸ್ಥೆಗಳು

ಮೌಲ್ಯಾಧಾರಿತ ಶಿಕ್ಷಣದಿಂದ ರಾಷ್ಟ್ರ ನಿರ್ಮಾಣ: ನಳಿನ್ ಕುಮಾರ್ Read More »

ಕರಾವಳಿ

ಫೈರ್ ಆ್ಯಂಡ್ ಸೇಫ್ಟಿ, ಆತಿಥ್ಯ ಕ್ಷೇತ್ರದಲ್ಲಿ ಭವಿಷ್ಯದ ಭರವಸೆ IBVE

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ.17. ಬೆಂಕಿ ಮತ್ತು ಸುರಕ್ಷತೆ ಹಾಗೂ ಹೋಟೆಲ್ ಮ್ಯಾನೇಜ್‌ಮೆಂಟ್ ಕ್ಷೇತ್ರದಲ್ಲಿ ಉದ್ಯೋಗ ಪಡೆಯಲು ಅರ್ಹತೆ ಗಳಿಸುವುದಕ್ಕೆ ಸಂಬಂಧಿಸಿದಂತೆ ಹತ್ತನೇ ತರಗತಿ ಅಥವಾ ಪಿಯುಸಿ ನಂತರದ ವಿದ್ಯಾರ್ಥಿಗಳಿಗೆ ಹಲವು ಕೋರ್ಸ್ ಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಫೈರ್ ಆ್ಯಂಡ್ ಸೇಫ್ಟಿ ಮತ್ತು ಆತಿಥ್ಯ ಕ್ಷೇತ್ರದಲ್ಲಿ ದೇಶ- ವಿದೇಶದಲ್ಲಿ ಬಹಳಷ್ಟು ಉದ್ಯೋಗದ ಅವಕಾಶಗಳು ಸೃಷ್ಟಿಯಾಗುತ್ತಿರುವುದನ್ನು ಗಮನಿಸಿ ಮಂಗಳೂರಿನ ಪ್ರತಿಷ್ಠಿತ IBVE ಸಂಸ್ಥೆಯು ಇದಕ್ಕೆ ಸಂಬಂಧಿಸಿದಂತೆ ಸೇಫ್ಟಿ ಆಫೀಸರ್, ಹೆಚ್.ಎಸ್.ಇ ಅಧಿಕಾರಿ, ಸೇಫ್ಟಿ ಇಂಜೀನಿಯರ್ ಹಾಗೂ ಹೋಟೆಲ್ ಎಂಡ್

ಫೈರ್ ಆ್ಯಂಡ್ ಸೇಫ್ಟಿ, ಆತಿಥ್ಯ ಕ್ಷೇತ್ರದಲ್ಲಿ ಭವಿಷ್ಯದ ಭರವಸೆ IBVE Read More »

ಕರಾವಳಿ

ಎಡಮಂಗಲ: ವಸತಿ ಮಂಜೂರಾತಿಯಲ್ಲಿ ಅಕ್ರಮ – ವಿಎ, ಪಿಡಿಓ ವಿರುದ್ಧ ಪ್ರಕರಣ ದಾಖಲು

(ನ್ಯೂಸ್ ಕಡಬ) newskadaba.com ಮ0ಗಳೂರು, ಜೂ.16. ಸುಳ್ಯ ತಾಲೂಕು ಎಡಮಂಗಲ ಗ್ರಾಮದ 2015-16 ನೇ ಸಾಲಿನಲ್ಲಿ ಬಸವ ವಸತಿ ಯೋಜನೆಯಲ್ಲಿ  ಎಡಮಂಗಲ ಗ್ರಾಮದ ಶಿವಮ್ಮ ಎಂಬವರಿಗೆ ಮನೆ ಮಂಜೂರು ಮಾಡಿದ್ದು, ಶಿವಮ್ಮರ ವಾರ್ಷಿಕ ಆದಾಯ ರೂ 1,93,296/- ಇದ್ದರೂ ಕೂಡಾ ಎಡಮಂಗಲ ಗ್ರಾಮ ಲೆಕ್ಕಾಧಿಕಾರಿ ಬಸವರಾಜ್ ರೂ.31,000/- ಆದಾಯ ಇರುವುದಾಗಿ ಸುಳ್ಳು ಆದಾಯ ಪ್ರಮಾಣ ಪತ್ರ ನೀಡಿರುತ್ತಾರೆ. ಇದೇ ಪ್ರಕರಣದಲ್ಲಿ ಈ ಹಿಂದೆ ಎಡಮಂಗಲ ಪಿಡಿಓ ಚೆನ್ನಪ್ಪ ಗೌಡ ಬಸವ ವಸತಿ ಯೋಜನೆಯಲ್ಲಿ ಮನೆ ಮಂಜೂರುಗೊಳಿಸಿ ಭ್ರಷ್ಟಾಚಾರ

ಎಡಮಂಗಲ: ವಸತಿ ಮಂಜೂರಾತಿಯಲ್ಲಿ ಅಕ್ರಮ – ವಿಎ, ಪಿಡಿಓ ವಿರುದ್ಧ ಪ್ರಕರಣ ದಾಖಲು Read More »

ಕರಾವಳಿ

ಕಡಬ: ಯುವಕ ನಾಪತ್ತೆ – ದೂರು

(ನ್ಯೂಸ್ ಕಡಬ) newskadaba.com ಕಡಬ, ಜೂ.16. ಕಡಬ ಸಮೀಪದ ಪೆಲತ್ರಾಣೆ ನಿವಾಸಿ ಅಬ್ಬಾಸ್ ಅವರ ಪುತ್ರ ಆದಂ(23) ಗುರುವಾರ ಮಧ್ಯಾಹ್ನ ತನ್ನ ಸ್ನೇಹಿತ ಮರ್ದಾಳ ನಿವಾಸಿ ಸಂತೋಷ್ ಎಂಬವನೊಂದಿಗೆ ತನ್ನ ಕಾರಿನಲ್ಲಿ ಹೋಗಿದ್ದು ಮುರಳಿ ಬಾರದೇ ನಾಪತ್ತೆಯಾಗಿದ್ದಾನೆ. ಗುರುವಾರ ರಾತ್ರಿ 12 ಗಂಟೆಯಾದರೂ ಆದಂ ಮನೆಗೆ ಬಾರದ ಕಾರಣ ಮನೆಯವರು ಸಂತೋಷನಿಗೆ ಕರೆ ಮಾಡಿ ವಿಚಾರಿಸಿದ್ದಾರೆ. ಆ ಸಮಯ “ಆದಂ ಪೆರಿಯಶಾಂತಿಯಲ್ಲಿ ಕಾರಿನಿಂದ ಇಳಿದಿರುವುದಾಗಿ” ಹೇಳಿದ್ದು ಆದಂ ನ ಕಾರನ್ನು ಮನೆಗೆ ತಂದು ಕೊಟ್ಟಿದ್ದಾನೆ. ಗುರುವಾರ ಮಧ್ಯಾಹ್ನ 2

ಕಡಬ: ಯುವಕ ನಾಪತ್ತೆ – ದೂರು Read More »

ಕರಾವಳಿ

ಇಚಿಲಂಪಾಡಿ: ಚರ್ಚಿಗೆ ನುಗ್ಗಿದ ಕಳ್ಳರು

(ನ್ಯೂಸ್ ಕಡಬ) newskadaba.com ಕಡಬ, ಜೂ.16. ಠಾಣಾ ವ್ಯಾಪ್ತಿಯ ಇಚಿಲಂಪಾಡಿ ಸೈಂಟ್ ಜಾರ್ಜ್ ಸಿರಿಯನ್ ಜಾಕೋಬೈಟ್ ಚರ್ಚಿಗೆ ನುಗಿರುವ ಕಳ್ಳರು ಚಿಲ್ಲರೆ ಹಣದೊಂದಿಗೆ ಶಿಲುಬೆಯನ್ನು ಹೊತ್ತೊಯ್ದ ಘಟನೆ ಶುಕ್ರವಾರದಂದು ಬೆಳಗ್ಗೆ ಬೆಳಕಿಗೆ ಬಂದಿದೆ. ಚರ್ಚಿನ ಶಿಲುಬೆ ಗೋಪುರದ ಬೀಗ ಒಡೆದು ಕಾಣಿಕೆ ಹುಂಡಿಯಲ್ಲಿದ್ದ ಚಿಲ್ಲರೆ ಹಣವನ್ನು ದೋಚಿದ್ದಾರೆ.

ಇಚಿಲಂಪಾಡಿ: ಚರ್ಚಿಗೆ ನುಗ್ಗಿದ ಕಳ್ಳರು Read More »

ಕರಾವಳಿ

ಗುತ್ತಿಗಾರು: ನೀರಿನ ಟ್ಯಾಂಕಿಗೆ ಬಿದ್ದು ಮಹಿಳೆ ಮೃತ್ಯು

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಜೂ.15. ಮನೆಯ ಪಕ್ಕದಲ್ಲಿದ್ದ ನೀರಿನ ಟ್ಯಾಂಕಿಗೆ ನೀರು ನೋಡಲು ಹೋದ ಸಮಯದಲ್ಲಿ ಆಕಸ್ಮಿಕವಾಗಿ ಕಾಲುಜಾರಿ ಬಿದ್ದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಬಳ್ಳಕ ಎಂಬಲ್ಲಿ ಗುರುವಾರ ಬೆಳಗಿನ ಜಾವ ನಡೆದಿದೆ. ಮೃತ ದುರ್ದೈವಿಯನ್ನು ನಿವೃತ್ತ ಯೋಧ ಹಾಗೂ ಸುಬ್ರಹ್ಮಣ್ಯ ಕಾರ್ಪೋರೇಷನ್ ಬ್ಯಾಂಕಿನ ಉದ್ಯೋಗಿ ಚೆನ್ನಪ್ಪ ಗೌಡರ ಪತ್ನಿ ಯಮುನಾವತಿ(44) ಎಂದು ಗುರುತಿಸಲಾಗಿದೆ. ಟ್ಯಾಂಕಿಗೆ ಪ್ರತಿನಿತ್ಯ ನೀರು ತಮ್ಮ ಮನೆಯ ಬೋರ್ವೆಲ್ ನಿಂದ ಪಂಪ್ ಮೂಲಕ ಹಾಯಿಸಲಾಗುತ್ತಿತ್ತು. ಗುರುವಾರ ಬೆಳಗಿನ ಜಾವ ಯಮುನಾವತಿ ಪಂಪ್ ಚಾಲನೆ ಮಾಡಿ

ಗುತ್ತಿಗಾರು: ನೀರಿನ ಟ್ಯಾಂಕಿಗೆ ಬಿದ್ದು ಮಹಿಳೆ ಮೃತ್ಯು Read More »

ಕರಾವಳಿ

ಪ್ರಾಣಿ ಎಂದು ತಿಳಿದು ಗುಂಡು ಹಾರಾಟ: ವ್ಯಕ್ತಿ ಮೃತ್ಯು

(ನ್ಯೂಸ್ ಕಡಬ) newskadaba.com ಕಾರ್ಕಳ, ಜೂ.15. ಶಿಕಾರಿಗೆ ತೆರಳಿದ ವೇಳೆ ಪ್ರಾಣಿ ಎಂದು ತಿಳಿದು ಮರ ಕಡಿಯುತ್ತಿದ್ದ ವ್ಯಕ್ತಿಯ ಮೇಲೆ ಗುಂಡು ಹಾರಿಸಿದ ಪರಿಣಾಮ ಹಾರಿಸಿದ ಗುಂಡು ಮರ ಕಡಿಯುತ್ತಿದ್ದ ವ್ಯಕ್ತಿಗೆ ತಗುಲಿ ಸಾವನ್ನಪ್ಪಿದ ‌ಘಟನೆ ತಡರಾತ್ರಿ ಕಾಕ೯ಳ ತಾಲೂಕಿನ ಕಡ್ತಲ ಮೀಸಲು ಅರಣ್ಯದಲ್ಲಿ ನಡೆದಿದೆ. ನಿನ್ನೆ ತಡರಾತ್ರಿ ಐದು ಜನರನ್ನೊಳಗೊಂಡ ತಂಡವೊಂದು ಕಡ್ತಲ ಮೀಸಲು ಅರಣ್ಯದಲ್ಲಿ ಶಿಕಾರಿಗೆಂದು ತೆರಳಿದ್ದರು. ಇದೇ ವೇಳೆ ರವಿ ಎಂಬಾತ ಮರಕಳ್ಳತನ ನಡೆಸಲು‌‌ ಬಂದಿದ್ದ ಎನ್ನಲಾಗಿದೆ. ರವಿ ಮರಕಡಿಯುತ್ತಿದ್ದು ಶಿಕಾರಿಗೆ ಬಂದ ತಂಡವನ್ನು

ಪ್ರಾಣಿ ಎಂದು ತಿಳಿದು ಗುಂಡು ಹಾರಾಟ: ವ್ಯಕ್ತಿ ಮೃತ್ಯು Read More »

ಕರ್ನಾಟಕ
Scroll to Top