Kadaba

ಕೊಯಿಲ ಗ್ರಾಮ ಪಂಚಾಯತ್ ಸದಸ್ಯ ವಿಷ ಸೇವಿಸಿ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಕಡಬ, ಸೆ.10. ಠಾಣಾ ವ್ಯಾಪ್ತಿಯ ಕೊಯಿಲ ಗ್ರಾಮ ಪಂಚಾಯತ್ ಸದಸ್ಯರೋರ್ವರು ಶುಕ್ರವಾರದಂದು ವಿಷ ಸೇವಿಸಿ‌ದ್ದು, ಶನಿವಾರ ರಾತ್ರಿ ಮೃತಪಟ್ಟ ಘಟನೆ ಮಂಗಳೂರಿನಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡವರನ್ನು ಕೊಯಿಲ ಗ್ರಾಮ ಪಂಚಾಯತಿ ಸದಸ್ಯ, ವಳಕಡಮ ನಿವಾಸಿ ದಿ| ವೆಂಕಪ್ಪ ಕುಂಬಾರ ಎಂಬವರ ಪುತ್ರ ನಾಗೇಶ್ ಕುಂಬಾರ (30) ಎಂದು ಗುರುತಿಸಲಾಗಿದೆ. ಕೈ ಸಾಲದ ಬಾಧೆಯಿಂದ ಬಳಲುತ್ತಿದ್ದರೆನ್ನಲಾಗಿದ್ದು, ಈ ಬಗ್ಗೆ ಕಡಬ ಠಾಣೆಗೆ ದೂರು ನೀಡಲಾಗಿದೆ.

ಕೊಯಿಲ ಗ್ರಾಮ ಪಂಚಾಯತ್ ಸದಸ್ಯ ವಿಷ ಸೇವಿಸಿ ಆತ್ಮಹತ್ಯೆ Read More »

ಕರಾವಳಿ

2ನೇ ತರಗತಿ ಬಾಲಕನ ಬರ್ಬರ ಹತ್ಯೆ ► ಶಾಲಾ ಟಾಯ್ಲೆಟ್‍ನಲ್ಲಿ ಕತ್ತು ಸೀಳಿದ ಸ್ಥಿತಿಯಲ್ಲಿ ಶವ ಪತ್ತೆ..!!!

(ನ್ಯೂಸ್ ಕಡಬ) newskadaba.com ಗುರ್ಗಾವ್,ಸೆ.8, ಇಲ್ಲಿನ ರಿಯಾನ್ ಇಂಟರ್ ನ್ಯಾಷನಲ್ ಶಾಲೆಯ ಶೌಚಾಲಯದಲ್ಲಿ 2ನೇ ತರಗತಿ ವಿದ್ಯಾರ್ಥಿಯ ಶವ ಕತ್ತು ಸೀಳಿದ ಸ್ಥಿತಿಯಲ್ಲಿ ಶುಕ್ರವಾರ ಪತ್ತೆಯಾಗಿದೆ.  7 ವರ್ಷದ ಪ್ರದ್ಯುಮನ್ ಕೊಲೆಯಾದ ಬಾಲಕ. ಪ್ರದ್ಯುಮನ್‍ನ ಕತ್ತು ಸೀಳಲಾಗಿದ್ದು, ಮೃತದೇಹದ ಪಕ್ಕದಲ್ಲಿ ಚಾಕು ಪತ್ತೆಯಾಗಿದೆ. ಇಂದು ಬೆಳಿಗ್ಗೆ 8.45ರ ವೇಳೆಗೆ ಶಾಲೆಯ ಅಧಿಕಾರಿಯೊಬ್ಬರು ಟಾಯ್ಲೆಟ್‍ಗೆ ಹೋದಾಗ ಬಾಲಕ ರಕ್ತದ ಮಡುವಿನಲ್ಲಿ ಬಿದ್ದಿದ್ದ. ಕೂಡಲೇ ಬಾಲಕನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತಾದರೂ, ದುರಾದೃಷ್ಟವಶಾತ್  ಬಾಲಕ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.   ಬಾಲಕನ ತಂದೆ ವರುಣ್

2ನೇ ತರಗತಿ ಬಾಲಕನ ಬರ್ಬರ ಹತ್ಯೆ ► ಶಾಲಾ ಟಾಯ್ಲೆಟ್‍ನಲ್ಲಿ ಕತ್ತು ಸೀಳಿದ ಸ್ಥಿತಿಯಲ್ಲಿ ಶವ ಪತ್ತೆ..!!! Read More »

ರಾಷ್ಟ್ರೀಯ ನ್ಯೂಸ್

ಅಗ್ನಿಸಾಕ್ಷಿ ಧಾರವಾಹಿಯ ಖ್ಯಾತ ಸ್ವಾಮೀಜಿ ► ಹಿರಿಯ ನಟ ಸುದರ್ಶನ್ ವಿಧಿವಶ

(ನ್ಯೂಸ್ ಕಡಬ) newskadaba.com ಬೆಂಗಳೂರು,ಸೆ.8, ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಗ್ನಿಸಾಕ್ಷಿ ಧಾರವಾಹಿಯಲ್ಲಿ ಸ್ವಾಮೀಜಿ ಪಾತ್ರ ನಿಭಾಯಿಸುತ್ತಿದ್ದ ಹಿರಿಯ ನಟ ಸುದರ್ಶನ್ (78) ನಿಧನರಾಗಿದ್ದಾರೆ. ಸಪ್ಟೆಂಬರ್ 5ರ ನಸುಕಿನ ಜಾವ ಮನೆಯ ಸ್ನಾನಗೃಹದಲ್ಲಿ ಕಾಲು ಜಾರಿ ಬಿದ್ದು ಮೂಳೆಮುರಿತಕ್ಕೊಳಗಾಗಿದ್ದ ಸುದರ್ಶನ್ ಅವರನ್ನು ಬನ್ನೇರುಘಟ್ಟದ್ದಲ್ಲಿರುವ ಸಾಗರ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ವಯೋಸಹಜ ಖಾಯಿಲೆಯಿಂದಲೂ ಬಳಲುತ್ತಿದ್ದ ಸುದರ್ಶನ್‍ರವರಿಗೆ ಚಿಕಿತ್ಸೆ ಫಲಿಸದೇ ಶುಕ್ರವಾರ ಮಧ್ಯಾಹ್ನ ಮೃತಪಟ್ಟಿದ್ದಾರೆ. ‘ನಗುವ ಹೂವು’ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ್ದ ಸುದರ್ಶನ್ ಸುಮಾರು 60ಕ್ಕೂ ಹೆಚ್ಚು ಚಿತ್ರಗಳಲ್ಲಿ

ಅಗ್ನಿಸಾಕ್ಷಿ ಧಾರವಾಹಿಯ ಖ್ಯಾತ ಸ್ವಾಮೀಜಿ ► ಹಿರಿಯ ನಟ ಸುದರ್ಶನ್ ವಿಧಿವಶ Read More »

ಕರ್ನಾಟಕ

ಚೆಸ್ ಪಂದ್ಯಾಟ ► ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಸರಸ್ವತೀ ವಿದ್ಯಾಲಯದ ವಿದ್ಯಾರ್ಥಿಗಳು

(ನ್ಯೂಸ್ ಕಡಬ) newskadaba.com ಕಡಬ,ಸೆ.8, ಆಂದ್ರಪ್ರದೇಶದ ಗುಂಟೂರು ಜಿಲ್ಲೆಯ ನರಸರಾವ್ ಪೇಟ್ ನಲ್ಲಿ ಜರಗಿದ ವಿದ್ಯಾಭಾರತಿ ದಕ್ಷಿಣ ಮಧ್ಯಕ್ಷೇತ್ರೀಯ ಮಟ್ಟದ ಚೆಸ್ ಪಂದ್ಯಾಟದಲ್ಲಿ ಕಡಬದ ಸರಸ್ವತೀ ವಿದ್ಯಾಲಯ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನವನ್ನು ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಕಿಶೋರ ವರ್ಗದ ಬಾಲಕಿಯರ ವಿಭಾಗದಲ್ಲಿ 10 ನೇ ತರಗತಿಯ ಪ್ರವಿದ್ಯಾ.ಕೆ, 9ನೇ ತರಗತಿಯ ಸ್ವಸ್ತಿಕಾ, ಸಂಜನ, ಹರ್ಷಿತಾ ಭಾಗವಹಿಸಿ ಪ್ರಥಮ ಸ್ಥಾನವನ್ನು ಪಡೆದು ಹರಿಯಾಣದ ಕುರುಕ್ಷೇತ್ರ ಜಿಲ್ಲೆಯ ಶ್ರೀಮದ್ ಭಗವದ್ಗೀತಾ ವರಿಷ್ಟಾ ಮಾಧ್ಯಮಿಕ ವಿದ್ಯಾಲಯದಲ್ಲಿ ನಡೆಯುವ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆ

ಚೆಸ್ ಪಂದ್ಯಾಟ ► ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಸರಸ್ವತೀ ವಿದ್ಯಾಲಯದ ವಿದ್ಯಾರ್ಥಿಗಳು Read More »

ಕ್ರೀಡಾ ನ್ಯೂಸ್

ನಡುರಸ್ತೆಯಲ್ಲೇ ಜುಟ್ಟು ಹಿಡಿದು ಮಹಿಳೆಯರಿಬ್ಬರ ಕಿತ್ತಾಟ ►ಸಾರ್ವಜನಿಕರಿಗೆ ಸಿಕ್ಕಿದೆ ಪುಕ್ಕಟೆ ಮನರಂಜನೆ..!!!

(ನ್ಯೂಸ್ ಕಡಬ) newskadaba.com ತುಮಕೂರು,ಸೆ.8, ಬೈಕ್ ಹಾಗೂ ಆಕ್ಟಿವಾ ನಡುವೆ ಲಘುವಾಗಿ ಡಿಕ್ಕಿ ಆಗಿದ್ದನ್ನು ನೆಪವಾಗಿಸಿಕೊಂಡು ಮಹಿಳೆಯರಿಬ್ಬರು ನಡುರಸ್ತೆಯಲ್ಲೇ ಪರಸ್ಪರ ಜಡೆ ಹಿಡಿದು ಕಿತ್ತಾಡಿದ ಘಟನೆ ತುಮಕೂರಿನ ಕೋತಿತೋಪಿನಲ್ಲಿ ನಡೆದಿದೆ.  ಕೋತಿತೋಪಿನ ರಸ್ತೆಯಲ್ಲಿ ಹಂಪ್ಸ್ ದಾಟುವಾಗ ಬೈಕ್ ಹಾಗೂ ಆಕ್ಟಿವಾ ನಡುವೆ ಲಘುವಾಗಿ ಡಿಕ್ಕಿ ಸಂಭವಿಸಿದೆ. ಈ ಎರಡೂ ವಾಹನಗಳಲ್ಲಿ ದಂಪತಿಗಳು ಪ್ರಯಾಣಿಸುತ್ತಿದ್ದರು. ಡಿಕ್ಕಿಗೆ ಸಂಬಧಿಸಿ ಮೊದಲು ಪುರುಷರ ನಡುವೆ ಮಾತಿನ ಚಕಮಕಿ ನಡೆದಿದೆ. ಬಳಿಕ ಮಧ್ಯಪ್ರವೇಶಿಸಿದ ಮಹಿಳೆಯರಿಬ್ಬರೂ ಅವಾಚ್ಯ ಶಬ್ದಗಳಿಂದ ಬೈದು ಕೊಂಡಿದ್ದಾರೆ. ಮಾತಿಗೆ ಮಾತು ಬೆಳೆದು

ನಡುರಸ್ತೆಯಲ್ಲೇ ಜುಟ್ಟು ಹಿಡಿದು ಮಹಿಳೆಯರಿಬ್ಬರ ಕಿತ್ತಾಟ ►ಸಾರ್ವಜನಿಕರಿಗೆ ಸಿಕ್ಕಿದೆ ಪುಕ್ಕಟೆ ಮನರಂಜನೆ..!!! Read More »

ಕರ್ನಾಟಕ

ರಾಷ್ಟ್ರಗೀತೆ ಹಾಗೂ ರಾಷ್ಟ್ರಧ್ವಜದ ಮಹತ್ವ ► ವಿದ್ಯಾರ್ಥಿಗಳೊಂದಿಗೆ ಪರಸ್ಪರ ಸಂವಾದ

(ನ್ಯೂಸ್ ಕಡಬ) newskadaba.com ಕಡಬ,ಸೆ.8, ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನದ ಸಹಯೋಗದಲ್ಲಿ ರಾಷ್ಟ್ರಗೀತೆ ಹಾಗೂ ರಾಷ್ಟ್ರಧ್ವಜದ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮ ಶ್ರೀ ಭಾರತೀ ಕಾಲೇಜಿನಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಪ್ರತಿಷ್ಠಾನದ ಕಾರ್ಯದರ್ಶಿಗಳಾದ ಡಾ. ಮುರಳಿ ಮೋಹನ್ ಚೂಂತಾರು ಅವರು ರಾಷ್ಟ್ರಗೀತೆ ಹಾಗೂ ರಾಷ್ಟ್ರಧ್ವಜದ ಮಹತ್ವವನ್ನು ಅರಿತುಕೊಳ್ಳಬೇಕು ಎಂದರು. ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ಭಾರತ ಸೇವಾ ದಳದ ಕರ್ನಾಟಕ ರಾಜ್ಯದ ಕಾರ್ಯಕಾರಿಣಿ ಸದಸ್ಯರಾದ ಆಲ್ಫೋನ್ಸ್‌ ಫ್ರಾಂಕೊ ಅವರು ಪ್ರಾತ್ಯಕ್ಷಿತೆಯ

ರಾಷ್ಟ್ರಗೀತೆ ಹಾಗೂ ರಾಷ್ಟ್ರಧ್ವಜದ ಮಹತ್ವ ► ವಿದ್ಯಾರ್ಥಿಗಳೊಂದಿಗೆ ಪರಸ್ಪರ ಸಂವಾದ Read More »

ಕರಾವಳಿ

ಭರತನಾಟ್ಯ ಜೂನಿಯರ್ ಗ್ರೇಡ್ ► ಉಪ್ಪಿನಂಗಡಿ ಇಂದ್ರಪ್ರಸ್ತ ವಿದ್ಯಾರ್ಥಿನಿ ಭವಿಷ್ಯಗೆ ವಿಶಿಷ್ಟ ಶ್ರೇಣಿ

(ನ್ಯೂಸ್ ಕಡಬ) newskadaba.com ಕಡಬ,ಸೆ.8, ಬೆಂಗಳೂರು ಕರ್ನಾಟಕ ಪ್ರೌಢಶಿಕ್ಷಣ ಮಂಡಳಿಯು 2017 ಮೇ ತಿಂಗಳಲ್ಲಿ ನಡೆಸಿದ ಭರತನಾಟ್ಯ ಜೂನಿಯರ್ ಗ್ರೇಡ್ ಪರೀಕ್ಷೆಯಲ್ಲಿ ಉಪ್ಪಿನಂಗಡಿ ಇಂದ್ರಪ್ರಸ್ತ ವಿದ್ಯಾಲಯದ 7 ನೇ ತರಗತಿ ವಿದ್ಯಾರ್ಥಿನಿ ಭವಿಷ್ಯ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಶ್ರೀ ಶಾರದ ಕಲಾ ಕೇಂದ್ರದ ಸುದರ್ಶನ್ ಭಟ್ ಮತ್ತು ಮಂಜುನಾಥ್ ಭಟ್ ಅವರ ಶಿಷ್ಯೆಯಾಗಿರುವ ಈಕೆ ರಾಮಕುಂಜ ಗ್ರಾಮದ ತಾವೂರು ನಿವಾಸಿ ನಾಗೇಶ್ ಎನ್ ಸಿ ಮತ್ತು ನವ್ಯ ದಂಪತಿ ಪುತ್ರಿಯಾಗಿರುತ್ತಾಳೆ.

ಭರತನಾಟ್ಯ ಜೂನಿಯರ್ ಗ್ರೇಡ್ ► ಉಪ್ಪಿನಂಗಡಿ ಇಂದ್ರಪ್ರಸ್ತ ವಿದ್ಯಾರ್ಥಿನಿ ಭವಿಷ್ಯಗೆ ವಿಶಿಷ್ಟ ಶ್ರೇಣಿ Read More »

ಕರಾವಳಿ

ತೂಫಾನ್- ಕೆಎಸ್ಆರ್ಟಿಸಿ ಬಸ್ ಢಿಕ್ಕಿ ► 6 ಮಂದಿ ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ) newskadaba.com ಬಾಗಲಕೋಟೆ,ಸೆ8, ತೂಫಾನ್ ಹಾಗೂ ಬಸ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸ್ಥಳದಲ್ಲೇ ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಕೊರ್ತಿ ಕ್ರಾಸ್ ನಲ್ಲಿ ಶುಕ್ರವಾರ ಮುಂಜಾನೆ ಸಂಭವಿಸಿದೆ. ಭೀಕರ ಅಪಘಾತದಲ್ಲಿ ಇಬ್ಬರು ಗಾಯಗೊಂಡಿದ್ದು, ಅವರನ್ನು ಬೀಳಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಹಾರಾಷ್ಟ್ರ ಪಾಸಿಂಗ್ ಇರುವ ತೂಫಾನ್ ಹಾಗೂ ವಿಜಯಪುರದಿಂದ ಹುಬ್ಬಳಿ ಮಾರ್ಗವಾಗಿ ಬರುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಆರು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ತೂಫಾನ್- ಕೆಎಸ್ಆರ್ಟಿಸಿ ಬಸ್ ಢಿಕ್ಕಿ ► 6 ಮಂದಿ ಸ್ಥಳದಲ್ಲೇ ಮೃತ್ಯು Read More »

ಕರಾವಳಿ

ಕಡಬ ಸಹಿತ 49 ಹೊಸ ತಾಲೂಕುಗಳಿಗೆ ಸಂಪುಟ ಅನುಮೋದನೆ ► 2018 ಜನವರಿ 01ರಿಂದ ಅಸ್ತಿತ್ವಕ್ಕೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ. 08. ರಾಜ್ಯ ಸರ್ಕಾರ ಘೋಷಿಸಿರುವ 49 ಹೊಸ ತಾಲೂಕುಗಳು 2018ರ ಜನವರಿ ಒಂದರಿಂದ ಅಸ್ತಿತ್ವಕ್ಕೆ ಬರಲಿದ್ದು, ಈ ಸಂಬಂಧ ಕಂದಾಯ ಇಲಾಖೆಯು ಆದೇಶ ಹೊರಡಿಸಿದೆ. ಆರ್ಥಿಕ ಇಲಾಖೆಯ ಅನುಮೋದನೆ ಪಡೆದು ಹೊಸ ತಾಲ್ಲೂಕುಗಳಿಗೆ ತಹಶೀಲ್ದಾರ್ ಕಚೇರಿ ಮತ್ತು ಬೇರೆ ಬೇರೆ ಇಲಾಖೆಗಳ ತಾಲ್ಲೂಕು ಮಟ್ಟದ ಕಚೇರಿಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ತಾಲ್ಲೂಕು ಪುನರ್ ರಚನೆ ಸಂಬಂಧ 1973ರಲ್ಲಿ ವಾಸುದೇವ ರಾವ್ ಆಯೋಗ, 84ರಲ್ಲಿ ಟಿ.ಎಂ. ಹುಂಡೇಕರ್, 86ರಲ್ಲಿ ಪಿ.ಸಿ. ಗದ್ದಿಗೌಡರ್,

ಕಡಬ ಸಹಿತ 49 ಹೊಸ ತಾಲೂಕುಗಳಿಗೆ ಸಂಪುಟ ಅನುಮೋದನೆ ► 2018 ಜನವರಿ 01ರಿಂದ ಅಸ್ತಿತ್ವಕ್ಕೆ Read More »

ಕರ್ನಾಟಕ

ಬೈಕ್‌ ರ್ಯಾಲಿ ತಡೆದರೂ ನಾವು ಮಂಗಳೂರು ತಲುಪಿದ್ದೇವೆ ► ಮಂಗಳೂರು ಚಲೋ ಯಶಸ್ವಿಯಾಗಿದೆ: ಯಡಿಯೂರಪ್ಪ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ.07. ಬಿಜೆಪಿ ಯುವ ಮೋರ್ಚಾ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮಂಗಳೂರು ಚಲೋ ಬೈಕ್ ರ್ಯಾಲಿಯನ್ನು ತಡೆದ ಸಂದರ್ಭ ಪೊಲೀಸರು ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ – ತಳ್ಳಾಟವುಂಟಾಗಿದ್ದು, ನೂಕುನುಗ್ಗಲಿನ ಪರಿಣಾಮ ಕೆಲವರು ಗಾಯಗೊಂಡ ಘಟನೆಯೂ ಗುರುವಾರದಂದು ನಡೆದಿದೆ. ಈ ಸಂದರ್ಭ ಜಿಲ್ಲಾಧಿಕಾರಿ ಕಚೇರಿ ಸಮೀಪ ತೆರಳಲೆತ್ನಿಸಿದ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದು, ನಂತರ ಬಿಡುಗಡೆಗೊಳಿಸಲಾಗಿದೆ. ನೆಹರೂ ಮೈದಾನದ ಕ್ರಿಕೆಟ್ ಅಸೋಸಿಯೇಶನ್ ಮುಂಭಾಗ ಬಿಜೆಪಿ ನಾಯಕರ ನೇತೃತ್ವದಲ್ಲಿ ಸಭೆ

ಬೈಕ್‌ ರ್ಯಾಲಿ ತಡೆದರೂ ನಾವು ಮಂಗಳೂರು ತಲುಪಿದ್ದೇವೆ ► ಮಂಗಳೂರು ಚಲೋ ಯಶಸ್ವಿಯಾಗಿದೆ: ಯಡಿಯೂರಪ್ಪ Read More »

ಕರಾವಳಿ
Scroll to Top