Kadaba

ಆತೂರು: ಶ್ರೀ ಸದಾಶಿವ ಶ್ರೀ ಮಹಾಗಣಪತಿ ದೇವಸ್ಥಾನ ಜಾತ್ರೋತ್ಸವ ►ದುಗಲಾಯಿ ದೈವದ ನೇಮೋತ್ಸವ

(ನ್ಯೂಸ್ ಕಡಬ) newskadaba.com ಕಡಬ,ಎ.3.  ಕಡಬ ತಾಲೂಕು ಕೊೖಲ ಗ್ರಾಮದ ಆತೂರು ಶ್ರೀ ಸದಾಶಿವ ಮಹಾಗಣಪತಿ ದೇವಳದ ವಾರ್ಷಿಕ ಮಹೋತ್ಸವ ಅಂಗವಾಗಿ ಮಂಗಳವಾರ ಶ್ರೀ ದುಗಲಾಯಿ ಹಾಗೂ ಪರಿವಾರ ದೈವಗಳ ನೇಮೋತ್ಸವ ನಡೆಯಿತು. ಈ ಸಂದರ್ಭ ಪವಿತ್ರಪಾಣಿ ವೆಂಕಟ್ರಮಣ ಕುದ್ರೆತ್ತಾಯ, ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುನಿತ್ರಾಜ್ ಶೆಟ್ಟಿ , ಸದಸ್ಯರಾದ ವಿಷ್ಣುಮೂರ್ತಿ ಬಡಕಿಲ್ಲಾಯ, ಪುರಂದರ ರೈ, ಬಿ.ಕೆ.ಚಂದ್ರಶೇಖರ್, ಬಿ.ಚಂದ್ರಶೇಖರ ಗೌಡ, ವಸಂತ ಅಮೀನ್, ಪುಷ್ಪಾವತಿ , ಕೆ.ರಾಧಿಕಾ , ಉತ್ಸವ ಸಮಿತಿ ಅಧ್ಯಕ್ಷ ಸಂತೋಷ್ ರೈ ಸಬಳೂರು, ಪ್ರಧಾನ […]

ಆತೂರು: ಶ್ರೀ ಸದಾಶಿವ ಶ್ರೀ ಮಹಾಗಣಪತಿ ದೇವಸ್ಥಾನ ಜಾತ್ರೋತ್ಸವ ►ದುಗಲಾಯಿ ದೈವದ ನೇಮೋತ್ಸವ Read More »

ಕರಾವಳಿ

ಮಕ್ಕಳ ಬೇರುಗಳಲ್ಲಿಯೇ ಸಂಸ್ಕೃತಿಯನ್ನು ಬೆಳೆಸಿ: ಆಶಾ ಬೆಳ್ಳಾರೆ

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಎ.3. ದಿನಾಂಕ 31.03.2018 ರಂದು ಶ್ರೀ ರಾಮ ವಿದ್ಯಾಲಯ ಸೂರ್ಯನಗರ ನೆಲ್ಯಾಡಿ ಇಲ್ಲಿನ ಶಿಶುಮಂದಿರದಲ್ಲಿ ಸಾಮೂಹಿಕ ಹುಟ್ಟುಹಬ್ಬ, ನೂತನ ಜೋಕಾಲಿ ಸಮರ್ಪಣೆ, ಮಾತೃಭೋಜನ ಕಾರ್ಯಕ್ರಮಗಳು ನಡೆಯಿತು. ಪಾಶ್ಚಿಮಾತ್ಯ ಆಚರಣೆಗಳ ಮಧ್ಯೆ ಭಾರತೀಯ ಸಂಸ್ಕೃತಿಯನ್ನು ಬೆಳೆಸುವುದು ನಮ್ಮ ಆಧ್ಯ ಕರ್ತವ್ಯವಾಗಿದೆ, ಇದನ್ನು ಉಳಿಸುವತ್ತ ನಮ್ಮ ಪ್ರಯತ್ನ ಇರಬೇಕು ಮತ್ತು ಯುವಜನತೆಯು ಈ ನಿಟ್ಟಿನಲ್ಲಿ ಆಸಕ್ತಿ ವಹಿಸುವುದು ಅಗತ್ಯ. ಮಕ್ಕಳೇ ದೇಶದ ಸಂಸ್ಕೃತಿಯನ್ನು ಪರಿಚಯಿಸುವ ರಾಯಭಾರಿಗಳೆಂದು ಸಮಾರಂಭದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ವಿನೇಕಾನಂದ ಕನ್ನಡ ಮಾಧ್ಯಮದ ಮುಖ್ಯೋಪಾಧ್ಯಾಯರಾದ

ಮಕ್ಕಳ ಬೇರುಗಳಲ್ಲಿಯೇ ಸಂಸ್ಕೃತಿಯನ್ನು ಬೆಳೆಸಿ: ಆಶಾ ಬೆಳ್ಳಾರೆ Read More »

ಕರಾವಳಿ

ಬಹು ನಿರೀಕ್ಷಿತ ಮರ್ಧಾಳ ಝರಿ ನೀರು ಕುಡಿಯುವ ನೀರಿನ ಯೋಜನೆ ನೇಪಥ್ಯಕ್ಕೆ

(ನ್ಯೂಸ್ ಕಡಬ) newskadaba.com ಕಡಬ, ಎ.3. ಸುಬ್ರಹ್ಮಣ್ಯ ಸಮೀಪದ ಬಿಸಿಲೆಘಾಟ್ನ ಅಡ್ಡಹೊಳೆಯಿಂದ ಕೊಳವೆ ಮುಖಾಂತರ ಕಡಬ ಭಾಗಕ್ಕೆ ಕುಡಿಯುವ ನೀರು ತರುವ ಸುಮಾರು 25 ಲಕ್ಷ ರೂ ವೆಚ್ಚದ ಬಹುನಿರೀಕ್ಷಿತ ಮರ್ಧಾಳ ಝರಿ ನೀರು ಕುಡಿಯುವ ನೀರಿನ ಯೋಜನೆ ನೇಪಥ್ಯಕ್ಕೆ ಸರಿದಿದೆ. ರಾಜ್ಯ ಹೆದ್ದಾರಿ 85 ರ ಬಳಿಯ ಬಿಸಿಲೆಘಾಟ್ನಿಂದ ನೀರು ತಂದು ಕಡಬ ಭಾಗದ ಶೇ 60 ಗ್ರಾಮಗಳಿಗೆ ಭರಪುರ ನೀರುಣಿಸಬಹುದಾದ ಬೃಹತ್ ಯೋಜನೆ ಅನುಷ್ಟಾನಕ್ಕೆ ಕಳೆದ ಎಂಟು ವರ್ಷಗಳಿಂದ ಪಟ್ಟ ಪ್ರಯತ್ನಗಳೆಲ್ಲವೂ ನೀರಿನಲ್ಲಿ ಇಟ್ಟ ಹೋಮದಂತಾಗಿದೆ. ಉದ್ದೇಶಿತ

ಬಹು ನಿರೀಕ್ಷಿತ ಮರ್ಧಾಳ ಝರಿ ನೀರು ಕುಡಿಯುವ ನೀರಿನ ಯೋಜನೆ ನೇಪಥ್ಯಕ್ಕೆ Read More »

ಕರಾವಳಿ

ಆತೂರು: ಶ್ರೀ ಸದಾಶಿವ ಶ್ರೀ ಮಹಾಗಣಪತಿ ದೇವಳದ ಜಾತ್ರೋತ್ಸವ ದರ್ಶನ ಬಲಿ

  (ನ್ಯೂಸ್ ಕಡಬ) newskadaba.com ಕಡಬ, ಎ.2.  ಕಡಬ ತಾಲೂಕಿನ ಕೊೖಲ ಗ್ರಾಮದ ಆತೂರು ಶ್ರೀ ಸದಾಶಿವ ಮತ್ತು ಶ್ರೀ ಮಹಾಗಣಪತಿ ದೇವಳದ ವಾರ್ಷಿಕ ಜಾತ್ರೋತ್ಸವ ಅಂಗವಾಗಿ ಶನಿವಾರ ದರ್ಶನ ಬಲಿ, ಬಟ್ಟಲು ಕಾಣಿಕೆ ನಡೆಯಿತು. ಸಾಯಂಕಾಲ ಬಲಿಹೊರಟು ಉತ್ಸವ,  ಕೊೖಲ ಫಾರ್ಮ್ನಿಂದಾಗಿ ಆನೆಗುಂಡಿಯವರೆಗೆ ಸವಾರಿ, ಕೆರೆ ಉತ್ಸವ, ಕಟ್ಟೆ ಪುಜೆಗಳು, ದುಗಲಾಯಿ ದೈವದ ಭಂಡಾರ ತರುವುದು, ರಂಗಪುಜೆ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ನಾಗೇಶ್ ತಂತ್ರಿ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನೇರವೇರಿತು. ಕಾರ್ಯಕ್ರಮದಲ್ಲಿ ಪವಿತ್ರಪಾಣಿ ವೆಂಕಟ್ರಮಣ ಕುದ್ರೆತ್ತಾಯ, ಉತ್ಸವ

ಆತೂರು: ಶ್ರೀ ಸದಾಶಿವ ಶ್ರೀ ಮಹಾಗಣಪತಿ ದೇವಳದ ಜಾತ್ರೋತ್ಸವ ದರ್ಶನ ಬಲಿ Read More »

ಕರಾವಳಿ

ಕಡಬ: ಬೇರಿಕೆ ಕುರಿಯಾಳಕೊಪ್ಪ ಕಾಂಕ್ರೀಟಿಕರಣ ರಸ್ತೆ ಉದ್ಘಾಟನೆ

(ನ್ಯೂಸ್ ಕಡಬ) newskadaba.com ಕಡಬ, ಮಾ.28. ನೂಜಿಬಾಳ್ತಿಲ ಗ್ರಾಮದ ಬೇರಿಕೆಯಿಂದ ಕುರಿಯಾಳಕೊಪ್ಪ ಶ್ರೀಲಕ್ಷ್ಮೀ ಜನಾರ್ಧನ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗೆ 13.5 ಲಕ್ಷ ವೆಚ್ಚದಲ್ಲಿ ಸುಮಾರು 300 ಮೀಟರ್ ಕಾಂಕ್ರಿಟಿಕರಣ ರಸ್ತೆಯ ಸೋಮವಾರ ಉದ್ಘಾಟನೆ ನಡೆಯಿತು. ಜಿ.ಪಂ.ಸದಸ್ಯ ಪಿ.ಪಿ ವರ್ಗೀಸ್ ಉದ್ಘಾಟಿಸಿ ಮಾತನಾಡಿ, ಜಿ.ಪಂ.ಅನುದಾನದೊಂದಿಗೆ ಗ್ರಾ.ಪಂ. ಹಾಗೂ ಉದ್ಯೋಗ ಖಾತರಿ ಯೋಜನೆ ಅನುದಾನವನ್ನು ಹೊಂದಿಸಿಕೊಂಡು ಸುಮಾರು 13.5 ಲಕ್ಷ ಅನುದಾನದಲ್ಲಿ ಅತ್ಯುತ್ತಮ ಕಾಂಕ್ರೀಟಿ ರಸ್ತೆಯನ್ನು ನಿರ್ಮಿಸಲಾಗಿದೆ. ಹಲವಾರು ವರ್ಷಗಳ ಬೇಡಿಕೆಯಾಗಿರುವ ಈ ರಸ್ತೆಯು ಇನ್ನೂ ದೇವಸ್ಥಾನದವರೆಗೆ ಅಭಿವೃದ್ದಿಯಾಗಬೇಕಾಗಿದ್ದು ಮುಂದಿನ

ಕಡಬ: ಬೇರಿಕೆ ಕುರಿಯಾಳಕೊಪ್ಪ ಕಾಂಕ್ರೀಟಿಕರಣ ರಸ್ತೆ ಉದ್ಘಾಟನೆ Read More »

ಕರಾವಳಿ

ಕಲ್ಲುಗುಡ್ಡೆ ಅಂಗನವಾಡಿಯಲ್ಲಿ ಚುನಾವಣಾ ಪ್ರಮಾಣ ವಚನ ಬೋಧನೆ

(ನ್ಯೂಸ್ ಕಡಬ) newskadaba.com ಕಡಬ, ಮಾ.28.  ಮುಂಬರುವ ಚುನಾವಣೆಯಲ್ಲಿ ಗ್ರಾಮ ಮಟ್ಟದಲ್ಲಿ  ಶೇ.100 ಮತದಾನ ಮಾಡುವ ಬಗ್ಗೆ ಕಲ್ಲುಗುಡ್ಡೆ ಅಂಗನವಾಡಿ ಕೇಂದ್ರದಲ್ಲಿ ಮತದಾನದ ಜಾಗೃತಿ ಮೂಡಿಸುವ ಬಗ್ಗೆ ಪ್ರಮಾಣ ವಚನ ಬೋಧಿಸಲಾಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖಾ ಕಡಬ ವಲಯ ಮೇಲ್ವಿಚಾರಕಿ ಹೇಮ ರಾಮ್ದಾಸ್ ಪ್ರಮಾಣವಚನ ಬೋಧಿಸಿದರು. ಗ್ರಾ.ಪಂ.ಅಧ್ಯಕ್ಷ ಸದಾನಂದ ಗೌಡ, ಸದಸ್ಯೆ ರಜಿತಾಪದ್ಮನಾಭ ಕೇಪುಂಜ, ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಆನಂದ, ಸ್ತ್ರೀಶಕ್ತಿ ಮಹಿಳೆಯರಾದ ಉಮಾವತಿ ರೈ, ಡೀಕಮ್ಮ ಜಾಲು, ರತ್ನಾವತಿ, ಲೀಲಾವತಿ, ರೇವತಿ, ಖತೀಜ ನೀರಾರಿ, ಮಮ್ತಾಜ್,

ಕಲ್ಲುಗುಡ್ಡೆ ಅಂಗನವಾಡಿಯಲ್ಲಿ ಚುನಾವಣಾ ಪ್ರಮಾಣ ವಚನ ಬೋಧನೆ Read More »

ಕರಾವಳಿ

ಕಡಬದಲ್ಲಿ ಏಕಾಹ ಭಜನೋತ್ಸವ ► ಸಾಮೂಹಿಕ ಸಂಕೀರ್ತನೆಯಿಂದ ಹೆಚ್ಚಿನ ಫಲ ಪ್ರಾಪ್ತಿ: ಸುಬ್ರಹ್ಮಣ್ಯ ಶ್ರೀ

(ನ್ಯೂಸ್ ಕಡಬ) newskadaba.com ಕಡಬ, ಮಾ.28. ಹಿಂದಿನ ಕಾಲದಲ್ಲಿ ದೇವರನ್ನು ಒಲಿಸಿಕೊಳ್ಳಲು ಕಠಿಣ ತಪಸ್ಸು, ಯಾಗ ಯಜ್ಞಾದಿಗಳನ್ನು ಮಾಡಬೇಕಿತ್ತು. ಆದರೆ ಕಲಿಯುಗದಲ್ಲಿ ದೇವರನ್ನು ಒಲಿಸಿಕೊಳ್ಳಲು ಸಂಕೀರ್ತನೆ ಸುಲಭಮಾರ್ಗ. ಅದರಲ್ಲಿಯೂ ಸಾಮೂಹಿಕ ಸಂಕೀರ್ತನೆಯಿಂದ ಹೆಚ್ಚಿನ ಫಲ ಪ್ರಾಪ್ತಿಯಾಗಲು ಸಾಧ್ಯ ಎಂದು ಸುಬ್ರಹ್ಮಣ್ಯದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು. ಕಡಬದ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದಲ್ಲಿ 57ನೇ ವರ್ಷದ ಏಕಾಹ ಭಜನೋತ್ಸವದ ಪ್ರಯುಕ್ತ ಆಯೋಜಿಸಲಾಗಿದ್ದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ಭಜನೆ ಎಂಬುದು ದೇವರನ್ನು ಸಂತೃಪ್ತಿ ಪಡಿಸಲು ಇರುವ ಅತ್ಯಂತ

ಕಡಬದಲ್ಲಿ ಏಕಾಹ ಭಜನೋತ್ಸವ ► ಸಾಮೂಹಿಕ ಸಂಕೀರ್ತನೆಯಿಂದ ಹೆಚ್ಚಿನ ಫಲ ಪ್ರಾಪ್ತಿ: ಸುಬ್ರಹ್ಮಣ್ಯ ಶ್ರೀ Read More »

ಕರಾವಳಿ

ಕಾಣಿಯೂರು ಕಲೆಂಜೋಡಿ ದಲಿತ ಕಾಲೋನಿ ರಸ್ತೆಗೆ ಮಾ.30ರೊಳಗೆ ಕಾಂಕ್ರೀಟಿಕರಣಕ್ಕೆ ಭರವಸೆ ► ಎ.2ರ ಪ್ರತಿಭಟನೆ ಮುಂದೂಡಿಕೆ

(ನ್ಯೂಸ್ ಕಡಬ) newskadaba.com ಕಡಬ, ಮಾ.28. ಕಾಣಿಯೂರು ಗ್ರಾಮದ ಕಲೆಂಜೋಡಿ ದಲಿತ ಕಾಲೋನಿ ರಸ್ತೆಗೆ ಮಂಜೂರಾದ ಅನುದಾನವನ್ನು ಬದಲಾಯಿಸಿದ ಬಗ್ಗೆ ಪ್ರತಿಭಟನೆಗೆ ಮುಂದಾದ ದಲಿತ ಮುಖಂಡರ ಬೇಡಿಕೆಗೆ ಸ್ಪಂಧಿಸಿದ ಪಿಡಬ್ಲ್ಯುಡಿ ಸುಳ್ಯ ವಿಧಾನಸಭಾ ಕ್ಷೇತ್ರದ ಅಧಿಕಾರಿ ಗೋಕುಲದಾಸ್ ಸ್ಥಳ ಪರಿಶೀಲನೆ ನಡೆಸಿ ಕಾಮಗಾರಿ ಮಾಡಿಸಿಕೊಡಲಾಗುವುದೆಂದು ಭರವಸೆ ನೀಡಿದರು. ಕಾಣಿಯೂರು ಗ್ರಾಮ ವ್ಯಾಪ್ತಿಯ ಕಲೆಂಜೋಡಿ ದಲಿತ ಕಾಲೋನಿಗೆ 2017-18ರ ಶಾಸಕರ ನಿಧಿಯಿಂದ ಬಿಡುಗಡೆಯಾದ ಕಾಂಕ್ರೀಟ್ ರಸ್ತೆಯನ್ನು ಅಕ್ರಮವಾಗಿ ದಲಿತ ಕಾಲೋನಿಗೆ ಕಾಂಕ್ರೀಟ್ ರಸ್ತೆಯನ್ನು ಮಾಡದೆ ಸ್ಥಳೀಯ ಮೇಲ್ವರ್ಗದ ನಿವಾಸಿಗಳ ರಸ್ತೆಗೆ

ಕಾಣಿಯೂರು ಕಲೆಂಜೋಡಿ ದಲಿತ ಕಾಲೋನಿ ರಸ್ತೆಗೆ ಮಾ.30ರೊಳಗೆ ಕಾಂಕ್ರೀಟಿಕರಣಕ್ಕೆ ಭರವಸೆ ► ಎ.2ರ ಪ್ರತಿಭಟನೆ ಮುಂದೂಡಿಕೆ Read More »

ಕರಾವಳಿ

ಕಡಬ: ಪಿಜಕಳ-ಉಜ್ರುಪಾದೆ ಸಂಪರ್ಕ ರಸ್ತೆ ಕಾಮಗಾರಿಗೆ ಗುದ್ದಲಿಪುಜೆ

(ನ್ಯೂಸ್ ಕಡಬ) newskadaba.com ಕಡಬ, ಮಾ.28. ಕಡಬ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಿಜಕಳ-ಉಜ್ರುಪಾದೆ ಸಂಪರ್ಕ ರಸ್ತೆಯ 145 ಮೀಟರ್ ಕಾಂಕ್ರಿಟ್ಕರಣ ಕಾಮಗಾರಿಗೆ ಗುದ್ದಲಿಪುಜೆ ಸೋಮವಾರ ನಡೆಯಿತು. ಪುತ್ತೂರು ಎಪಿಎಂಸಿ ಮಾಜಿ ಅಧ್ಯಕ್ಷ ಕೃಷ್ಣ ಶೆಟ್ಟಿ ಕಡಬ ಗುದ್ದಲಿಪುಜೆ ನೆರವೇರಸಿ ಮಾತನಾಡಿ, ಸುಳ್ಯ ಶಾಸಕರ ಸುಮಾರು 5 ಲಕ್ಷ ರೂ ಅನುದಾನದಲ್ಲಿ ರಸ್ತೆ ಕಾಂಕ್ರಿಟಿಕರಣ ನಡೆಸಲಾಗುವುದು ಎಂದರು. ಈ ಸಂದರ್ಭ ಎಪಿಎಂಸಿ ನಿರ್ದೇಶಕಿ ಪುಲಸ್ತ್ಯಾ ರೈ, ಕಡಬ ಗ್ರಾಮ ಪಂಚಾಯಿತಿ ಸದಸ್ಯ ಆದಂ ಕುಂಡೋಳಿ, ಕಡಬ ಸಿ ಎ

ಕಡಬ: ಪಿಜಕಳ-ಉಜ್ರುಪಾದೆ ಸಂಪರ್ಕ ರಸ್ತೆ ಕಾಮಗಾರಿಗೆ ಗುದ್ದಲಿಪುಜೆ Read More »

ಕರಾವಳಿ

ಹಳೆನೇರಿಂಕಿ ಕುಡಿಯುವ ನೀರಿನ ಘಟಕಕ್ಕೆ ಶಂಕುಸ್ಥಾಪನೆ

(ನ್ಯೂಸ್ ಕಡಬ) newskadaba.com ಕಡಬ, ಮಾ.28. ಹಳೆನೇರಿಂಕಿ ಗ್ರಾಮದ ಕಲ್ಲೇರಿ ದಲಿತ ಕಾಲೋನಿಯಲ್ಲಿ ಕುಡಿಯುವ ನೀರಿನ ಘಟಕಕ್ಕೆ ಗುದ್ದಲಿ ಪುಜೆ ಸೋಮವಾರ ನಡೆಯಿತು. ತಾಲೂಕು ಪಂಚಾಯಿತಿ ಸದಸ್ಯೆ ತೇಜಶ್ವಿನಿ ಕಟ್ಟಪುಣಿ ಮಾತನಾಡಿ, ಸುಳ್ಯ ಶಾಸಕ ಎಸ್ ಅಂಗಾರ 2.30 ಲಕ್ಷ , ತಾಲೂಕು ಪಂಚಾಯಿತಿಯ 85 ಸಾವಿರ ಮತ್ತು ರಾಮಕುಂಜ ಗ್ರಾಮ ಪಂಚಾಯಿತಿಯ 1ಲಕ್ಷದ 60 ಸಾವಿರ ರೂ ಅನುದಾನದಲ್ಲಿ ಕುಡಿಯುವ ನೀರಿನ ಘಟಕಕ್ಕೆ ಸಂಬಂದಪಟ್ಟಂತೆ ಕೊಳವೆಬಾವಿ, ಪಂಪ್ , ನೀರಿನ ಟ್ಯಾಂಕ್, ಪೈಪು ಅಳವಡಿಕೆಗೆ ಮಾಡಲಾಗುವುದು. ಕಾಮಗಾರಿ ಶೀಘ್ರದಲ್ಲಿ

ಹಳೆನೇರಿಂಕಿ ಕುಡಿಯುವ ನೀರಿನ ಘಟಕಕ್ಕೆ ಶಂಕುಸ್ಥಾಪನೆ Read More »

ಕರಾವಳಿ
Scroll to Top