ಆತೂರು: ಶ್ರೀ ಸದಾಶಿವ ಶ್ರೀ ಮಹಾಗಣಪತಿ ದೇವಳದ ಜಾತ್ರೋತ್ಸವ ದರ್ಶನ ಬಲಿ

 

(ನ್ಯೂಸ್ ಕಡಬ) newskadaba.com ಕಡಬ, ಎ.2.  ಕಡಬ ತಾಲೂಕಿನ ಕೊೖಲ ಗ್ರಾಮದ ಆತೂರು ಶ್ರೀ ಸದಾಶಿವ ಮತ್ತು ಶ್ರೀ ಮಹಾಗಣಪತಿ ದೇವಳದ ವಾರ್ಷಿಕ ಜಾತ್ರೋತ್ಸವ ಅಂಗವಾಗಿ ಶನಿವಾರ ದರ್ಶನ ಬಲಿ, ಬಟ್ಟಲು ಕಾಣಿಕೆ ನಡೆಯಿತು.

ಸಾಯಂಕಾಲ ಬಲಿಹೊರಟು ಉತ್ಸವ,  ಕೊೖಲ ಫಾರ್ಮ್ನಿಂದಾಗಿ ಆನೆಗುಂಡಿಯವರೆಗೆ ಸವಾರಿ, ಕೆರೆ ಉತ್ಸವ, ಕಟ್ಟೆ ಪುಜೆಗಳು, ದುಗಲಾಯಿ ದೈವದ ಭಂಡಾರ ತರುವುದು, ರಂಗಪುಜೆ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ನಾಗೇಶ್ ತಂತ್ರಿ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನೇರವೇರಿತು. ಕಾರ್ಯಕ್ರಮದಲ್ಲಿ ಪವಿತ್ರಪಾಣಿ ವೆಂಕಟ್ರಮಣ ಕುದ್ರೆತ್ತಾಯ, ಉತ್ಸವ ಸಮಿತಿ ಅಧ್ಯಕ್ಷ ಸಂತೋಷ್ ರೈ ಸಬಳೂರು, ಪ್ರಧಾನ ಕಾರ್ಯದರ್ಶಿ ಮೋಹನ್ ದಾಸ್, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸುನೀತ್ ರಾಜ್ ಶೆಟ್ಟಿ , ಕೊೖಲ ಪಂಚಾಯಿತಿ ಅಧ್ಯಕ್ಷೆ ಹೇಮಾ ಶೆಟ್ಟಿ, ಅಭಿವೃದ್ದಿ ಅಧಿಕಾರಿ ನಮಿತಾ ಮೊದಲಾದವರು ಇದ್ದರು.

 

Scroll to Top