Kadaba

ಕಡಬ: ಎಡೆಬಿಡದ ಮಳೆಗೆ ಗುಡ್ಡ ಕುಸಿದು ಧರೆಗುರುಳಿದ ವಿದ್ಯುತ್ ಕಂಬ ► ಕೆಲವೇ ಕ್ಷಣಗಳ ಅಂತರದಲ್ಲಿ ಅಪಾಯದಿಂದ ಪಾರಾದ ವಿದ್ಯಾರ್ಥಿಗಳು

(ನ್ಯೂಸ್ ಕಡಬ) newskadaba.com ಕಡಬ, ಜೂ.26. ಎಡೆಬಿಡದೆ ಮಳೆ‌ ಸುರಿಯುತ್ತಿರುವುದರಿಂದಾಗಿ ವಿದ್ಯುತ್ ಕಂಬದ ಜೊತೆಗೆ ಗುಡ್ಡ ಕುಸಿದು ಬಿದ್ದ ಘಟನೆ ಕಡಬದ ಮುಖ್ಯ ಪೇಟೆಯಲ್ಲಿ ಮಂಗಳವಾರ ಸಂಜೆ‌ ನಡೆದಿದೆ. ಇಲ್ಲಿನ ಮೀನು ಮಾರುಕಟ್ಟೆಯ ಸಮೀಪದದಲ್ಲಿನ ಗುಡ್ಡೆ ಕುಸಿದಿದ್ದು, ತುದಿಯಲ್ಲಿದ್ದ ವಿದ್ಯುತ್ ಕಂಬ ಧರೆಗುರುಳಿದೆ. ಇದರಿಂದಾಗಿ ಮೀನು ಮಾರುಕಟ್ಟೆಯ ಶೆಡ್ ಗೆ ಹಾನಿಯಾಗಿದೆ. ಎಲ್ಲಾ ದಿನಗಳಲ್ಲಿ ಈ ಸ್ಥಳದಲ್ಲಿ ವಾಹನಗಳನ್ನು ನಿಲುಗಡೆಗೊಳಿಸಲಾಗುತ್ತಿತ್ತಾದರೂ ಇಂದು ಯಾವುದೇ ವಾಹನಗಳಿರಲಿಲ್ಲ. ಅಲ್ಲದೆ ಘಟನೆ ನಡೆಯುವುದಕ್ಕಿಂತ ಕೆಲವೇ ಕ್ಷಣಗಳ ಮೊದಲು ಶಾಲಾ ವಿದ್ಯಾರ್ಥಿಗಳು ಇದೇ […]

ಕಡಬ: ಎಡೆಬಿಡದ ಮಳೆಗೆ ಗುಡ್ಡ ಕುಸಿದು ಧರೆಗುರುಳಿದ ವಿದ್ಯುತ್ ಕಂಬ ► ಕೆಲವೇ ಕ್ಷಣಗಳ ಅಂತರದಲ್ಲಿ ಅಪಾಯದಿಂದ ಪಾರಾದ ವಿದ್ಯಾರ್ಥಿಗಳು Read More »

ಕರಾವಳಿ

ಕೋಡಿಂಬಾಳದ ಅರ್ಪಾಜೆ ಕೆರೆ ಒತ್ತುವರಿ ಆರೋಪ ► ಕೆರೆ ಅಭಿವೃದ್ಧಿಗೆ ಮುಂದಾದ ಸ್ಥಳೀಯರಿಗೆ ಕಾನೂನಿನ ತೊಡಕು

(ನ್ಯೂಸ್ ಕಡಬ) newskadaba.com ಕಡಬ, ಜೂ.26. ಇಲ್ಲಿನ ಕೋಡಿಂಬಾಳ ಗ್ರಾಮದ ಅರ್ಪಾಜೆಯಲ್ಲಿ  ಸರ್ವೆ ನಂ.33/3 ರಲ್ಲಿ 0.62 ಎಕರೆ ವಿಸ್ತೀರ್ಣದಲ್ಲಿರುವ ಸರಕಾರಿ ಕೆರೆಯನ್ನು ಒತ್ತುವರಿ ಮಾಡಿ ಕೆರೆಯ ಜಮೀನಿನಲ್ಲಿ ಖಾಸಗಿ ವ್ಯಕ್ತಿಗಳು ರಸ್ತೆ ನಿರ್ಮಿಸಿರುವುದರ ವಿರುದ್ಧ ಸ್ಥಳೀಯರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿ ಹಲವು ತಿಂಗಳು ಕಳೆದರೂ ಯಾವುದೇ ಪ್ರಯೋಜನವಾಗಿಲ್ಲ. ತಿಂಗಳ ಹಿಂದೆ ದೂರಿಗೆ ಸ್ಪಂದಿಸಿದ ಪುತ್ತೂರು ತಹಶೀಲ್ದಾರ್ ಅನಂತ ಶಂಕರ ಅವರು ಕೆರೆಯನ್ನು ಅಳೆದು ಗಡಿ ಗುರುತು ಮಾಡಿ ಅತಿಕ್ರಮಣ ನಡೆದಿದ್ದರೆ ಕೂಡಲೇ ತೆರವುಗೊಳಿಸುವಂತೆ ಕಡಬ ಕಂದಾಯ

ಕೋಡಿಂಬಾಳದ ಅರ್ಪಾಜೆ ಕೆರೆ ಒತ್ತುವರಿ ಆರೋಪ ► ಕೆರೆ ಅಭಿವೃದ್ಧಿಗೆ ಮುಂದಾದ ಸ್ಥಳೀಯರಿಗೆ ಕಾನೂನಿನ ತೊಡಕು Read More »

ಕರಾವಳಿ

ಟೀಂ ಇಂಡಿಯಾದ ಆರಂಭಿಕ ಆಟಗಾರ ಕೆ.ಎಲ್.ರಾಹುಲ್ ಕುಕ್ಕೇ ಸುಬ್ರಹ್ಮಣ್ಯಕ್ಕೆ ಭೇಟಿ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಜೂ.22. ಟೀಮ್ ಇಂಡಿಯಾದ ಆರಂಭಿಕ ಆಟಗಾರ ಕೆ.ಎಲ್. ರಾಹುಲ್ ಕುಟುಂಬ ಸಮೇತರಾಗಿ ದಕ್ಷಿಣ ಭಾರತದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಕುಕ್ಕೇ ಸುಬ್ರಹ್ಮಣ್ಯಕ್ಕೆ ಗುರುವಾರದಂದು ಭೇಟಿ ನೀಡಿದರು. ರಾಹುಲ್ ಅವರನ್ನು ಶ್ರೀ ಕ್ಷೇತ್ರ ಸುಬ್ರಹ್ಮಣ್ಯ ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಪ್ರಸಾದದೊಂದಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ಈ ಸಂದರ್ಭ ಶ್ರೀ ದೇವಳದ ಶಿಷ್ಠಾಚಾರ ಅಧಿಕಾರಿ ಕೆ.ಎಂ.ಗೋಪಿನಾಥನ್ ನಂಬೀಶ, ಶಿಷ್ಠಾಚಾರ ವಿಭಾಗದ ಪ್ರಮೋದ್ ಕುಮಾರ್.ಎಸ್, ಹರೀಶ್, ತಾ.ಪಂ.ಸದಸ್ಯ ಅಶೋಕ್ ನೆಕ್ರಾಜೆ, ಸ್ಥಳೀಯರಾದ

ಟೀಂ ಇಂಡಿಯಾದ ಆರಂಭಿಕ ಆಟಗಾರ ಕೆ.ಎಲ್.ರಾಹುಲ್ ಕುಕ್ಕೇ ಸುಬ್ರಹ್ಮಣ್ಯಕ್ಕೆ ಭೇಟಿ Read More »

ರಾಷ್ಟ್ರೀಯ ನ್ಯೂಸ್

ಹದಗೆಟ್ಟ ಕಲ್ಲಾಜೆ – ಅಂತಿಬೆಟ್ಟು ರಸ್ತೆಗೆ ಊರವರಿಂದಲೇ ಕಾಯಕಲ್ಪ ► ಸಡಕ್ ರಸ್ತೆಗೆ ಕಾದು ಸುಸ್ತಾಗಿ ಕೊನೆಗೆ ಶ್ರಮದಾನದ ಮೊರೆ ಹೋದ ಗ್ರಾಮಸ್ಥರು

(ನ್ಯೂಸ್ ಕಡಬ) newskadaba.com ಕಡಬ, ಜೂ.17. ಮರ್ದಾಳ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕಲ್ಲಾಜೆ ಅಂತಿಬೆಟ್ಟು ಮಾರ್ಗವಾಗಿ ಕೋರಿಯಾರ್ ಮೂಲಕ ಕೋಡಿಂಬಾಳ ಸೇರಬೇಕಾದ ಗ್ರಾಮ ಸಡಕ್ ರಸ್ತೆಯು ಮಂಜೂರಾಗಿ ವರ್ಷಗಳೇ ಕಳೆದರೂ ರಸ್ತೆ ಅಭಿವೃದ್ಧಿಯಾಗದ ಹಿನ್ನೆಲೆಯಲ್ಲಿ ಈ ಭಾಗದ ಗ್ರಾಮಸ್ಥರೆಲ್ಲ ಸೇರಿಕೊಂಡು ಕೆಸರುಮಯ, ಹೊಂಡ, ಗುಂಡಿಗಳಿಂದ ಕೂಡಿದ ರಸ್ತೆಯನ್ನು ಶ್ರಮದಾನದ ಮೂಲಕ ದುರಸ್ತಿಗೊಳಿಸಿದ ಘಟನೆ ಭಾನುವಾರದಂದು ‌ನಡೆದಿದೆ. ಕಲ್ಲಾಜೆಯಿಂದ ಅಂತಿಬೆಟ್ಟುವರೆಗಿನ ಸುಮಾರು ೫೦ಕ್ಕೂ ಮೆಲ್ಪಟ್ಟ ಗ್ರಾಮಸ್ಥರು ಒಟ್ಟಾಗಿ ಬೆಳಿಗ್ಗೆಯಿಂದ ಸಂಜೆಯ ತನಕ ಶ್ರಮದಾನದ ಮೂಲಕ ರಸ್ತೆಯನ್ನು ದುರಸ್ಥಿಗೊಳಿಸಿದ್ದಾರೆ.

ಹದಗೆಟ್ಟ ಕಲ್ಲಾಜೆ – ಅಂತಿಬೆಟ್ಟು ರಸ್ತೆಗೆ ಊರವರಿಂದಲೇ ಕಾಯಕಲ್ಪ ► ಸಡಕ್ ರಸ್ತೆಗೆ ಕಾದು ಸುಸ್ತಾಗಿ ಕೊನೆಗೆ ಶ್ರಮದಾನದ ಮೊರೆ ಹೋದ ಗ್ರಾಮಸ್ಥರು Read More »

ಕರಾವಳಿ

ಕಡಬ ತಾಲೂಕು ಕಾರ್ಯಾರಂಭಕ್ಕೆ ಅಧಿಕಾರಿಗಳಿಂದ ಭರದ ಸಿದ್ಧತೆ ► ಕೋರ್ಟ್ ಸೇರಿದಂತೆ ಹೆಚ್ಚಿನ ಇಲಾಖೆಗಳು ಬಂಟ್ರ ಗ್ರಾಮದ ಮುಂಚಿಕಾಪಿಗೆ

(ನ್ಯೂಸ್ ಕಡಬ) newskadaba.com ಕಡಬ, ಜೂ.17. ನೂತನ ಕಡಬ ತಾಲೂಕು ಅನುಷ್ಠಾನಗೊಂಡು ಉದ್ಘಾಟನಾ ಭಾಗ್ಯಕ್ಕೆ ಕಾಲ ಸನ್ನಿಹಿತವಾಗಿದ್ದು, ಈ ಭಾಗದ ಜನರ ಬಹುದಿನಗಳ ಬೇಡಿಕೆ ಈಡೇರುವ ಸಮಯ ಬಂದಿದೆ. ಪುತ್ತೂರು ತಾಲೂಕಿನ 35 ಗ್ರಾಮಗಳು ಹಾಗೂ ಸುಳ್ಯ ತಾಲೂಕಿನ 7 ಗ್ರಾಮಗಳನ್ನು ಸೇರಿಸಿಕೊಂಡು ಒಟ್ಟು 42 ಗ್ರಾಮಗಳ ವ್ಯಾಪ್ತಿಯ ನೂತನ ಕಡಬ ತಾಲೂಕು ರೂಪುಗೊಂಡಿದ್ದು, ಹೊಸ ತಾಲೂಕಿನ ಒಟ್ಟು ಜನಸಂಖ್ಯೆ 1,20,086 (2011ರ ಜನಗಣತಿಯಂತೆ) ಇದ್ದು, ಒಟ್ಟು 149159.8 ಎಕರೆ ಭೌಗೋಳಿಕ ವಿಸ್ತೀರ್ಣವನ್ನು ಹೊಂದಿದೆ. ನೂತನ ತಾಲೂಕಿನಲ್ಲಿ

ಕಡಬ ತಾಲೂಕು ಕಾರ್ಯಾರಂಭಕ್ಕೆ ಅಧಿಕಾರಿಗಳಿಂದ ಭರದ ಸಿದ್ಧತೆ ► ಕೋರ್ಟ್ ಸೇರಿದಂತೆ ಹೆಚ್ಚಿನ ಇಲಾಖೆಗಳು ಬಂಟ್ರ ಗ್ರಾಮದ ಮುಂಚಿಕಾಪಿಗೆ Read More »

ಕರಾವಳಿ

ಕಡಬ: ಇಬ್ಬರು ಮಕ್ಕಳೊಂದಿಗೆ ತಾಯಿ ನಾಪತ್ತೆ

(ನ್ಯೂಸ್ ಕಡಬ) newskadaba.com ಕಡಬ, ಜೂ.01. ಮಹಿಳೆಯೋರ್ವರು ತನ್ನ ಇಬ್ಬರು ಮಕ್ಕಳೊಂದಿಗೆ ನಾಪತ್ತೆಯಾಗಿರುವ ಘಟನೆ ಗುರುವಾರದಂದು ಕುಂತೂರಿನಿಂದ ವರದಿಯಾಗಿದೆ. ಐತ್ತೂರು ಗ್ರಾಮದ ಮಾಯಿಪತ್ತೆಪಾಲು ನಿವಾಸಿ ಹುಕ್ರಪ್ಪ ಗೌಡ ಎಂಬವರ ಪುತ್ರಿ ಯಶೋಧಾ(37) ಎಂಬಾಕೆಯನ್ನು ಕುಂತೂರು ಗ್ರಾಮದ ಬಾಚಡ್ಕ‌ ಎಂಬಲ್ಲಿಗೆ ಸುಮಾರು ಹದಿನೈದು ವರ್ಷಗಳ ಹಿಂದೆ ಮದುವೆ ಮಾಡಿಕೊಡಲಾಗಿತ್ತು. ಗುರುವಾರದಂದು ಆಕೆಯ ಮನೆಯವರು ಕರೆ ಮಾಡಿದಾಗ ಕರೆಯನ್ನು ಸ್ವೀಕರಿಸದ ಹಿನ್ನೆಲೆಯಲ್ಲಿ ಅನುಮಾನಗೊಂಡು ಕುಂತೂರಿನ ಮನೆಗೆ ತೆರಳಿದ ಆಕೆಯ ಹೆತ್ತವರಿಗೆ ಬೀಗ ಹಾಕಿರುವುದು ಕಂಡುಬಂದಿದ್ದು, ಬಳಿಕ ಆಕೆ ಕೆಲಸ ನಿರ್ವಹಿಸುತ್ತಿದ್ದ

ಕಡಬ: ಇಬ್ಬರು ಮಕ್ಕಳೊಂದಿಗೆ ತಾಯಿ ನಾಪತ್ತೆ Read More »

ಕರಾವಳಿ

ಕುಡಿಯಲು ಹನಿ ಹನಿಯಾಗಿ ತೊಟ್ಟಿಕ್ಕುವ ಕಲುಷಿತ ನೀರು ► ‘ನೀರು – ಕಣ್ಣೀರು’ ಕಲ್ಲಾಜೆ ಕಾಲನಿಯ ದುಸ್ಥಿತಿ

(ನ್ಯೂಸ್ ಕಡಬ) newskadaba.com ಕಡಬ, ಎ.24. ಹನಿ ಹನಿಯಾಗಿ ತೊಟ್ಟಿಕ್ಕುವ ನೀರು… ಅದನ್ನು ಸಂಗ್ರಹಿಸಲು 24 ಗಂಟೆಗಳ ಕಾಲ ಕಾಯುವ ಪರಿಸ್ಥಿತಿ… ಮೂಲಭೂತ ಸೌಕರ್ಯಗಳಲ್ಲೊಂದಾದ ಕುಡಿಯಲು ನೀರಿಲ್ಲದೆ ಕಲುಷಿತ ನೀರನ್ನೇ ಕುಡಿಯುವ ಪರಿಸ್ಥಿತಿ… ಇದು ಕಂಡುಬಂದಿರೋದು ಕಡಬ ತಾಲೂಕಿನ ಐತ್ತೂರು ಗ್ರಾಮದ ಕಲ್ಲಾಜೆ ಕಾಲನಿಯಲ್ಲಿ. ಸುಮಾರು ಐವತ್ತಕ್ಕೂ ಹೆಚ್ಚು ಮನೆಗಳಿರುವ ಈ ಕಾಲನಿಯಲ್ಲಿ ಕರ್ನಾಟಕ ರಾಜ್ಯ ರಬ್ಬರ್ ಅಭಿವೃದ್ಧಿ ನಿಗಮದ ವತಿಯಿಂದ ಹಾಗೂ ಐತ್ತೂರು ಗ್ರಾಮ ಪಂಚಾಯತ್ ವತಿಯಿಂದ ತಲಾ ಒಂದರಂತೆ ಒಟ್ಟು ಎರಡು ಬೋರ್ವೆಲ್ಗಳಿದ್ದರೂ ಕಳೆದ

ಕುಡಿಯಲು ಹನಿ ಹನಿಯಾಗಿ ತೊಟ್ಟಿಕ್ಕುವ ಕಲುಷಿತ ನೀರು ► ‘ನೀರು – ಕಣ್ಣೀರು’ ಕಲ್ಲಾಜೆ ಕಾಲನಿಯ ದುಸ್ಥಿತಿ Read More »

ಕರಾವಳಿ

ಆಲಂಕಾರು: ಸಿಡಿಲು ಬಡಿದು ಬಾಲಕಿಗೆ ಗಾಯ

(ನ್ಯೂಸ್ ಕಡಬ) newskadaba.com ಕಡಬ, ಎ.20. ಗುರುವಾರ ಸಂಜೆ ಸುರಿದ ಭಾರೀ ಗಾಳಿ ಮಳೆಯ ಸಂದರ್ಭದಲ್ಲಿ ಸಿಡಿಲು ಬಡಿದು ಬಾಲಕಿಯೋರ್ವಳು ಗಾಯಗೊಂಡ ಘಟನೆ ತಾಲೂಕಿನ ಆಲಂಕಾರಿನಲ್ಲಿ ನಡೆದಿದೆ. ಗಾಯಾಳು‌ ಬಾಲಕಿಯನ್ನು ಆಲಂಕಾರು ಗ್ರಾಮದ ಪಲ್ಲತ್ತಡ್ಕ ನಿವಾಸಿ ಕೇಶವ ಎಂಬವರ ಪುತ್ರಿ, ಆಲಂಕಾರು ಶ್ರೀ ಭಾರತಿ ವಿದ್ಯಾಕೇಂದ್ರದ 2ನೇ ತರಗತಿಯ ವಿದ್ಯಾರ್ಥಿನಿ ಭವ್ಯ(8) ಎಂದು ಗುರುತಿಸಲಾಗಿದೆ. ಈಕೆ ತನ್ನ ಹೆತ್ತವರೊಂದಿಗೆ ಮನೆಯಲ್ಲಿದ್ದ ವೇಳೆ ಸಿಡಿಲಿನ ಆಘಾತಕ್ಕೊಳಗಾಗಿದ್ದು, ತಕ್ಷಣವೇ ಆಲಂಕಾರಿನಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿನ ಖಾಸಗಿ

ಆಲಂಕಾರು: ಸಿಡಿಲು ಬಡಿದು ಬಾಲಕಿಗೆ ಗಾಯ Read More »

ಕರಾವಳಿ

ವಿಶ್ವಮಾನವ ಶಿಕ್ಷಣ ಅಗತ್ಯ: ಭೀಮೇಶ್ವರ ಜೋಷಿ ► ಆಲಂಕಾರು ಶ್ರೀ ಭಾರತೀ ಶಾಲಾ ಕಟ್ಟಡಕ್ಕೆ ಶಿಲಾನ್ಯಾಸ

(ನ್ಯೂಸ್ ಕಡಬ) newskadaba.com ಆಲಂಕಾರು, ಎ.13. ಯಾತ್ರಿಕ ಬದುಕಿಗೆ ಪ್ರೇರಣೆ ನೀಡುವ ಯಂತ್ರಮಾನವನೆಡೆಗೆ ಸಾಗುವ ಶಿಕ್ಷಣದಿಂದ ದೂರ ಸರಿದು ವಿಶ್ವಮಾನವನೆಡೆಗೆ ಕೊಂಡೊಯ್ಯುವ ಶಿಕ್ಷಣ ಇಂದು ಬೇಕಾಗಿದೆ ಎಂದು ಹೊರನಾಡು ಅನ್ನಪುರ್ಣೇಶ್ವರಿ ದೇವಸ್ಥಾನದ ಧರ್ಮಕರ್ತ ಡಾ|ಜಿ.ಭೀಮೇಶ್ವರ ಜೋಷಿ ಹೇಳಿದರು. ಅವರು ಬುಧವಾರ ಆಲಂಕಾರು ಶ್ರೀ ಭಾರತೀ ಶಾಲಾ ರಜತಮಹೋತ್ಸವ ಸಮಿತಿ ವತಿಯಿಂದ ನಡೆಯುತ್ತಿರುವ ರಜತ ಸಂಭ್ರಮದ ಹಿನ್ನೆಯಲ್ಲಿ ನಿರ್ಮಾಣವಾಗಲಿರುವ ಕಟ್ಟಡಗಳ ಕಾಮಗಾರಿಗಳಿಗೆ ಶಿಲ್ಯಾಸ ನೆರವೇರಿಸಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡುತ್ತಿದ್ದರು. ನಾವು ಇಂದು ಬದಲಾವಣೆಯ ಯುಗದಲ್ಲಿದ್ದೇವೆ, ಬದಲಾವಣೆ ಜಗದ ನಿಯಮವಾದರೂ ನಾವು ನಮ್ಮ

ವಿಶ್ವಮಾನವ ಶಿಕ್ಷಣ ಅಗತ್ಯ: ಭೀಮೇಶ್ವರ ಜೋಷಿ ► ಆಲಂಕಾರು ಶ್ರೀ ಭಾರತೀ ಶಾಲಾ ಕಟ್ಟಡಕ್ಕೆ ಶಿಲಾನ್ಯಾಸ Read More »

ಕರಾವಳಿ

ಕಡಬ: ಸರಸ್ವತೀ ವರ್ತುಲ ಕಾರ್ಯಗಾರ

(ನ್ಯೂಸ್ ಕಡಬ) newskadaba.com ಕಡಬ, ಎ.11. ಸರಸ್ವತೀ ವರ್ತುಲದ ಕಾರ್ಯಗಾರವು ಕೇವಳದ ಸರಸ್ವತೀ ವಿದ್ಯಾಲಯ ಪ್ರೌಢ ಶಾಲೆಯ ಸಭಾಂಗಣದಲ್ಲಿ ಏಪ್ರಿಲ್ 7 ರಂದು ನಡೆಯಿತು.ಈ ಕಾರ್ಯಕ್ರಮವನ್ನು ಶ್ರೀ ಗೋಪಾಲ ಕೃಷ್ಣ ನಿವೃತ್ತ ಮುಖ್ಯಗುರುಗಳು ಶ್ರೀ ಗೋಪಾಲಕೃಷ್ಣ ಪ್ರೌಢ ಶಾಲೆ ಬಿಳಿನೆಲೆ ಇವರು ಉದ್ಘಾಟಿಸಿ ಮಾತನಾಡಿದರು,ಶಿಕ್ಷಕರು ವಿದ್ಯಾರ್ಥಿಗಳ ಮೇಲೆ ವಿಶೇಷವಾದ ಜವಾಬ್ದಾರಿಯನ್ನು ವಹಿಸಬೇಕು.ಸಮಾಜದಲ್ಲಿ ಶಿಕ್ಷಕರ ಪಾತ್ರ ಮಹತ್ತರವಾದದ್ದು.ಅದೇ ರೀತಿ ಶಿಕ್ಷಕರು ನಿರಂತರ ಅಧ್ಯಯನ ಶಿಲರಾಗಬೇಕು ಎಂದು ಹೇಳಿದರು. ಸಭಾಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ಅಧ್ಯಕ್ಷರಾದ ರವಿರಾಜ್ ಶೆಟ್ಟಿ ಇವರು ಮಾತನಾಡಿ ವಿದ್ಯಾಭಾರತೀಯ

ಕಡಬ: ಸರಸ್ವತೀ ವರ್ತುಲ ಕಾರ್ಯಗಾರ Read More »

ಕರಾವಳಿ
Scroll to Top