ಶಬರಿಮಲೆ: ಅಯ್ಯಪ್ಪ ದೇವಸ್ಥಾನಕ್ಕೆ ಪ್ರವೇಶಿಸಿದ ಮಹಿಳೆಯರು ► ಮಹಿಳೆಯರನ್ನು ಪ್ರವೇಶಿಸಿದ ಕೇರಳ ಸರಕಾರವನ್ನು ವಜಾಗೊಳಿಸಲು ರಾಷ್ಟ್ರಪತಿಗೆ ಮನವಿ
(ನ್ಯೂಸ್ ಕಡಬ) newskadaba.com.ಕಡಬ,ಜ. 4. ಶಬರಿಮಲೆ ಅಯ್ಯಪ್ಪ ಸ್ವಾಮೀ ದೇವಸ್ಥಾನಕ್ಕೆ 10ರಿಂದ 50ವರ್ಷದ ಒಳಗಿನ ಮಹಿಳೆಯರ ಪ್ರವೇಶ ನಿಷಿದ್ದ ಎಂಬ ಸಂಪ್ರದಾಯ ಇರುವಾಗ ಪಿನರಾಯಿ ನೇತೃತ್ವದ ಕಮ್ಯೂನಿಸ್ಟ್ ಸರಕಾರ ಮಹಿಳೆಯರನ್ನು ಭದ್ರತೆಯಲ್ಲಿ ಪ್ರವೇಶಿಸಿದ್ದು ಘೋರ ಅನ್ಯಾಯ ಈ ಸರಕಾರವನ್ನು ವಜಾಗೊಳಿಸಿ ಅಲ್ಲಿ ರಾಷ್ಟ್ರಪತಿ ಆಡಳಿತವನ್ನು ಹೇರಬೇಕೆಂದು ಆಗ್ರಹಿಸಿ ಕಡಬ ವಿ.ಹಿಂ.ಪ ನೇತೃತ್ವದಲ್ಲಿ ಕಡಬ ತಹಸೀಲ್ದಾರ್ ಮೂಲಕ ರಾಷ್ಟಪತಿಗೆ ಮನವಿ ಸಲ್ಲಿಸಲಾಗಿದೆ. ಈ ಸಂದರ್ಭದಲ್ಲಿ ವಿ.ಹಿಂ.ಪ ಗೌರವಾಧ್ಯಕ್ಷ ಜನಾರ್ದನ ರಾವ, ಅಧ್ಯಕ್ಷ ರಾಧಾಕೃಷ್ಣ ಕೋಲ್ಪೆ, ಕಾರ್ಯದರ್ಶಿ ಪ್ರಮೋದ್ ರೈ […]









