Kadaba

ಅಪಾಯದಲ್ಲಿ ಬಿ.ಸಿ.ರೋಡು-ಪುಂಜಾಲಕಟ್ಟೆ ಹೆದ್ದಾರಿ

(ನ್ಯೂಸ್ ಕಡಬ) newskadaba.com ಬಂಟ್ವಾಳ. ಸೆ.02: ಮಳೆಗಾಲದಲ್ಲಿ ಗುಡ್ಡ ಕುಸಿದು ಸಾವು ನೋವು ಸಂಭವಿಸುತ್ತಿರುವ ಘಟನೆಗಳು ನಡೆಯುತ್ತಿರುವುದನ್ನು ನಾವು ಪದೇ ಪದೇ ಕೇಳುತ್ತಲೇ ಇದ್ದೇವೆ. ಇಲ್ಲೊಂದು ಪ್ರದೇಶದಲ್ಲಿ ಹೆದ್ದಾರಿ ಕಾಮಗಾರಿಗಾಗಿ ಗುಡ್ಡವನ್ನು ಅಗೆಯಲಾಗಿದ್ದು, ಪ್ರಸ್ತುತ ಗುಡ್ಡಗಳು ಅಪಾಯಕಾರಿ ಸ್ಥಿತಿಯಲ್ಲಿದೆ. ಗುಡ್ಡದ ಮೇಲ್ಭಾಗದಲ್ಲಿ ಬೃಹತ್ ಗಾತ್ರದ ಮರಗಳೂ ಇರುವುದರಿಂದ ಅಪಾಯದ ಸಾಧ್ಯತೆ ಹೆಚ್ಚಿದೆ. ಬಿ.ಸಿ.ರೋಡು-ಪುಂಜಾಲಕಟ್ಟೆ 19.85 ಕಿ.ಮೀ.ಹೆದ್ದಾರಿ ಅಭಿವೃದ್ಧಿಗಾಗಿ ಕಾಮಗಾರಿ ನಡೆಯುವ ಪ್ರದೇಶಗಳಲ್ಲಿ ಭೂಸ್ವಾಧೀನ ಪಡಿಸಲಾದ ಪ್ರದೇಶಗಳನ್ನು ಅಗೆದು ರಸ್ತೆ ನಿರ್ಮಿಸಲಾಗಿದೆ. ರಸ್ತೆ ಸಾಗುವ ನಾವೂರು ಗ್ರಾಮದ ಬಡಗುಂಡಿ […]

ಅಪಾಯದಲ್ಲಿ ಬಿ.ಸಿ.ರೋಡು-ಪುಂಜಾಲಕಟ್ಟೆ ಹೆದ್ದಾರಿ Read More »

ಕರಾವಳಿ, ಕರ್ನಾಟಕ

ಇನ್ಫೋಸಿಸ್‍ ನಾರಾಯಣಮೂರ್ತಿಗೆರವರಿಗೆ ವಿಶ್ವ ಡಿಜಿಟಲ್ ಅವಾರ್ಡ್

(ನ್ಯೂಸ್ ಕಡಬ) newskadaba.com ನವದೆಹಲಿ. ಸೆ.02:  ಪ್ರಥಮ ಬಾರಿಗೆ ನೀಡಲಾಗುತ್ತಿರುವ ವಿಶ್ವ ಡಿಜಿಟಲ್ ಅವಾರ್ಡ್‍ಗೆ ಇನ್ಫೋಸಿಸ್‍ನ ನಾರಾಯಣಮೂರ್ತಿ, ರತನ್ ಟಾಟಾ , ಮುಖೇಶ್ ಅಂಬಾನಿ ಹಾಗೂ ಆನಂದ್ ಮಹೀಂದ್ರಾ ಅವರು ಭಾಜನರಾಗಿದ್ದಾರೆ. ಐಎಎ ಸಂಸ್ಥೆ ಘೋಷಣೆ ಮಾಡಿರುವ ವಿಶ್ವ ಡಿಜಿಟಲ್ ಅವಾರ್ಡ್‍ನಲ್ಲಿ ಜೀವ ಮಾನ ಸಾಧನೆಗಾಗಿ ಈ ನಾಲ್ವರು ಈ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.   ಅದೇ ರೀತಿ ಇತರ ವಿಭಾಗಗಳಲ್ಲಿ ಮಹತ್ತರ ಸಾಧನೆ ಮಾಡಿರುವ ಸಾಧಕರಿಗೂ ಡಿಜಿಟಲ್ ಪ್ರಶಸ್ತಿ ನೀಡಲಾಗಿದೆ. ಕೊರೊನಾ ಸಂದರ್ಭದಲ್ಲಿ ಜನರ ಸಂಕಷ್ಟಗಳಿಗೆ ಸ್ಪಂದಿಸಿದ

ಇನ್ಫೋಸಿಸ್‍ ನಾರಾಯಣಮೂರ್ತಿಗೆರವರಿಗೆ ವಿಶ್ವ ಡಿಜಿಟಲ್ ಅವಾರ್ಡ್ Read More »

ರಾಷ್ಟ್ರೀಯ ನ್ಯೂಸ್

ನಾಡಹಬ್ಬ ದಸರಾ ಆಚರಣೆಗೆ ಹೆಚ್ಚಿದ ಒತ್ತಡ: ಸಿಎಂ ಅಧ್ಯಕ್ಷತೆಯಲ್ಲಿ ನಡೆಯಲಿದೆ ಸಭೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ.02. ಕೊರೋನಾ  ಕಾರಣ ಮುಂದಿಟ್ಟು ನಾಡಹಬ್ಬ ಮೈಸೂರು ದಸರಾ ಆಚರಣೆ ಕೈಬಿಡಬಾರದು ಎಂಬ ಒತ್ತಡದ ನಡುವೆ ಮೈಸೂರು ದಸರಾ ನಡೆಯುವುದೇ ಇಲ್ಲವೇ ಎಂಬ ಸಂದೇಹ ಹೆಚ್ಚಾಗಿದೆ. ಕಳೆದ ತಿಂಗಳು ಕಾವೇರಿ ನದಿಗೆ ಬಾಗಿನ ಸಮರ್ಪಿಸಲು ತೆರಳುವ ಸಂದರ್ಭದಲ್ಲೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ದಸರಾ ಆಚರಣೆ ಬಗ್ಗೆ ತೀರ್ಮಾನಿಸಲು ಚಿಂತನೆ ನಡೆದಿದ್ದು, ಶೀಘ್ರವೇ ಸಭೆ ನಡೆಸುವುದಾಗಿ ತಿಳಿಸಿದ್ದರು. ಈ ಹಿನ್ನೆಲೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಸೆ.7ರಂದು ಉನ್ನತಮಟ್ಟದ ಸಭೆ ನಿಗದಿಯಾಗಿದೆ ಎಂದು

ನಾಡಹಬ್ಬ ದಸರಾ ಆಚರಣೆಗೆ ಹೆಚ್ಚಿದ ಒತ್ತಡ: ಸಿಎಂ ಅಧ್ಯಕ್ಷತೆಯಲ್ಲಿ ನಡೆಯಲಿದೆ ಸಭೆ Read More »

ಕರಾವಳಿ, ಕರ್ನಾಟಕ

ಕಡಬ: ಶ್ರೀದುರ್ಗಾ ಫ್ಯಾನ್ಸಿ ಮತ್ತು ಫೂಟ್ ವೇರ್ ಹೌಸ್ ಶುಭಾರಂಭ

(ನ್ಯೂಸ್ ಕಡಬ) newskadaba.com ಕಡಬ, ಸೆ.02. ಇಲ್ಲಿನ ಸಿ.ಎ. ಬ್ಯಾಂಕ್‌ ಯೋಗಕ್ಷೇಮ ಸಂಕೀರ್ಣದಲ್ಲಿ ಶ್ರೀದುರ್ಗಾ ಫ್ಯಾನ್ಸಿ ಮತ್ತು ಫೂಟ್ ವೇರ್ ಹೌಸ್‌ ಇಂದು ಶುಭಾರಂಭಗೊಂಡಿತು. ಶುಭವತಿ ರೈ ಬೆದ್ರಾಜೆ ಇವರು ದೀಪ ಬೆಳಗಿಸಿ ಉದ್ಘಾಟನೆ ಮಾಡಿದರು.   ಈ ಸಂದರ್ಭದಲ್ಲಿ ಕಡಬ ಎಸ್.ಐ.ರುಕ್ಮ ನಾಯ್ಕ್‌, ಕಡಬ ಸಿ.ಎ ಬ್ಯಾಂಕ್‌ ಅಧ್ಯಕ್ಷ ರಮೇಶ್‌ ಭಟ್‌ ಕಲ್ಪುರೆ, ಸೀತಾರಾಮ ಗೌಡ ಪೊಸವಳಿಕೆ, ಕಡಬ ದುರ್ಗಾಂಬಿಕಾ ಭಜನಾ ಮಂಡಳಿಯ ಅಧ್ಯಕ್ಷ ಸೋಮಪ್ಪ ನಾಯಕ್‌, ರಂಜಿತ್‌ ರೈ ಬೆದ್ರಾಜೆ ಉಪಸ್ಥಿತರಿದ್ದರು. ನೂತನ ಫ್ಯಾನ್ಸಿ

ಕಡಬ: ಶ್ರೀದುರ್ಗಾ ಫ್ಯಾನ್ಸಿ ಮತ್ತು ಫೂಟ್ ವೇರ್ ಹೌಸ್ ಶುಭಾರಂಭ Read More »

ಕರಾವಳಿ, ಕರ್ನಾಟಕ

ಕಡಬ – ಪುತ್ತೂರಿನಲ್ಲಿ ಇಂದು 51 ಕೊರೋನ ಪಾಸಿಟಿವ್ ದೃಢ

(ನ್ಯೂಸ್ ಕಡಬ) newskadaba.com ಕಡಬ. ಸೆ.02: ಕಡಬ ಮತ್ತು ಪುತ್ತೂರು ತಾಲೂಕುಗಳಲ್ಲಿ ಬುಧವಾರ ಒಟ್ಟು 51 ಕೊರೋನ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದೆ. ಕಡಬ ತಾಲೂಕಿನ ಕೋಡಿಂಬಾಳದ 58ರ ಪುರುಷ, 53ರ ಪುರುಷ, 30ರ ಪುರುಷ, 68ರ ಮಹಿಳೆ, ಕಡಬ ತಾಲೂಕು ಕಚೇರಿ ಸಿಬ್ಬಂದಿ 34ರ ಪುರುಷ, 102 ನೆಕ್ಕಿಲಾಡಿಯ 32 ವರ್ಷದ ಪುರುಷ, 14ರ ಬಾಲಕ, 34ರ ಮಹಿಳೆ, ಕಡಬ ಠಾಣೆಯ 27 ವರ್ಷದ ಪುರುಷ ಸಿಬ್ಬಂದಿ, ನೆಲ್ಯಾಡಿಯ 65ರ ಪುರುಷ, 50ರ ಮಹಿಳೆ, ಬಿಳಿನೆಲೆಯ 21ರ

ಕಡಬ – ಪುತ್ತೂರಿನಲ್ಲಿ ಇಂದು 51 ಕೊರೋನ ಪಾಸಿಟಿವ್ ದೃಢ Read More »

ಕರಾವಳಿ, ಕರ್ನಾಟಕ

ಅಗ್ನಿ ಚಿತ್ರಕಲೆಯ ಮೂಲಕ ವಿಶ್ವ ದಾಖಲೆ ಮಾಡಿದ ಗ್ರಾಮೀಣ ಪ್ರತಿಭೆ ಪರೀಕ್ಷಿತ್‌‌ ನೆಲ್ಯಾಡಿ

(ನ್ಯೂಸ್ ಕಡಬ) newskadaba.com ನೆಲ್ಯಾಡಿ. ಸೆ.02 : ಬೆಂಕಿಯಲ್ಲಿ ಚಿತ್ರ ಬಿಡಿಸುವ ಕೌಶಲ್ಯದಿಂದಾಗಿ ಪರೀಕ್ಷಿತ್‌‌ ನೆಲ್ಯಾಡಿ ಅವರು ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಅಗ್ನಿ ಚಿತ್ರಕಲೆ (ಫೈರ್‌ ಆರ್ಟ್‌)ಯ ಮೂಲಕ ಪರೀಕ್ಷಿತ್‌ ರಚಿಸಿದ ಚಿತ್ರಕಲೆ ವಿಶೇಷ ವಿಶ್ವ ದಾಖಲೆಯ ಅಗ್ನಿ ಚಿತ್ರಕಲೆ ಮನ್ನಣೆ ಗಳಿಸಿದೆ. ಫೈರ್‌ ಆರ್ಟ್‌‌ನ ಅವರ ಕಲಾ ಪಾಂಡಿತ್ಯವನ್ನು ಗಣನೆಗೆ ತೆಗೆದುಕೊಂಡು ಆಗಸ್ಟ್‌ 19ರಂದು ವಿಶ್ವ ದಾಖಲೆ ಘೋಷಿಸಲಾಗಿತ್ತು.   ಸ್ವಾಮಿ ವಿವೇಕಾನಂದರ ಚಿತ್ರವನ್ನು ಲೈವ್‌ ಮೂಲಕ ಮಾಡಿ ಸೈ ಎನಿಸಿಕೊಂಡಿದ್ದ ಪರೀಕ್ಷಿತ್‌‌‌ಗೆ ಈ ಮನ್ನಣೆ ದೊರೆತಿದೆ.

ಅಗ್ನಿ ಚಿತ್ರಕಲೆಯ ಮೂಲಕ ವಿಶ್ವ ದಾಖಲೆ ಮಾಡಿದ ಗ್ರಾಮೀಣ ಪ್ರತಿಭೆ ಪರೀಕ್ಷಿತ್‌‌ ನೆಲ್ಯಾಡಿ Read More »

ಕರಾವಳಿ

ಬಸ್ಸಿನಡಿಗೆ ಬಿದ್ದು ಗರ್ಭಿಣಿ ಮಹಿಳೆ ಮೃತ್ಯು

(ನ್ಯೂಸ್ ಕಡಬ) newskadaba.com ಕಾಸರಗೋಡು. ಸೆ.02: ಗರ್ಭಿಣಿಯಾಗಿದ್ದ ನರ್ಸ್  ಬಸ್ಸಿನಡಿಗೆ ಬಿದ್ದು  ಮೃತಪಟ್ಟ ದಾರುಣ ಘಟನೆ ಕಣ್ಣೂರಿನ  ಪೆರವೂರು ಎಂಬಲ್ಲಿ ಇಂದು ಬೆಳಿಗ್ಗೆ  ನಡೆದಿದೆ.   ಕಣ್ಣೂರು ಆಸ್ಟರ್ ಮಿಮ್ಸ್ ಆಸ್ಪತ್ರೆಯ ನರ್ಸ್ ದಿವ್ಯಾ (27) ಎಂದು ಗುರುತಿಸಲಾಗಿದೆ. ಇಂದು ಬೆಳಿಗ್ಗೆ ಸುಮಾರು ಎಂಟು ಗಂಟೆಗೆ ಆಸ್ಪತ್ರೆಗೆ ತೆರಳಲು ಬಸ್ಸು ಹತ್ತುತ್ತಿದ್ದಾಗ ಈ ಘಟನೆ ನಡೆದಿದೆ. ದಿವ್ಯಾ ರವರು ಆರು ತಿಂಗಳ ಗರ್ಭಿಣಿಯಾಗಿದ್ದರು. ಗಂಭೀರ ಗಾಯಗೊಂಡ ದಿವ್ಯಾ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.

ಬಸ್ಸಿನಡಿಗೆ ಬಿದ್ದು ಗರ್ಭಿಣಿ ಮಹಿಳೆ ಮೃತ್ಯು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಸುಬ್ರಹ್ಮಣ್ಯ : ರವಿ ಕಕ್ಕೆಪದವುರವರಿಗೆ ಮಾತೃವಿಯೋಗ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ. ಸೆ.02:  ಕುಕ್ಕೆ ಸುಬ್ರಹ್ಮಣ್ಯದ ಉದ್ಯಮಿ ಆರ್ಯಭಟ ಪ್ರಶಸ್ತಿ ಪುರಸ್ಕøತ ರವಿ ಕಕ್ಕೆಪದವುರವರ ತಾಯಿ ಚಂದು ಪೂಜಾರಿಯವರ ಧರ್ಮಪತ್ನಿ ಶ್ರೀಮತಿ ಕಮಲರವರು ಇಂದು ಮುಂಜಾನೆ ಕಕ್ಕೆಪದವುವಿನಲ್ಲಿ ನಿಧನರಾಗಿದ್ದಾರೆ.   ಇವರಿಗೆ 71 ವರುಷ ವಯಸ್ಸಾಗಿತ್ತು. ಮೃತರು ತಮ್ಮ ಹಿರಿಯ ಪುತ್ರ ರವಿ ಕಕ್ಕೆಪದವುರವರೊಂದಿಗೆ ಸುಬ್ರಹ್ಮನ್ಯದಲ್ಲಿಯೇ ವಾಸವಾಗಿದ್ದರು. ಆದರೆ ಮೃತ ಕಮಲರವರು ಪತಿಯ ಮನೆ ಕಕ್ಕೆಪದವುಗೆ ಹೋಗಬೇಕೆಂದು ಕೇಳಿಕೊಂಡ ಮೇರೆಗೆ ಆ. 31 ರಂದು ಸುಬ್ರಹ್ಮಣ್ಯದಿಂದ ಕಕ್ಕೆಪದವುಗೆ ತೆರಳಿದ್ದರು. ಪತಿಯ ಮನೆಯಲ್ಲೆ ವಿಧಿವಶರಾಗಿದ್ದಾರೆ. ಮೃತರು

ಸುಬ್ರಹ್ಮಣ್ಯ : ರವಿ ಕಕ್ಕೆಪದವುರವರಿಗೆ ಮಾತೃವಿಯೋಗ Read More »

ಕರ್ನಾಟಕ

ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟ ದೇವಸ್ಥಾನಗಳ ಸೇವೆಗೆ ಶರತ್ತು ಬದ್ಧ ಅನುಮತಿ ನೀಡಿದ ಸರಕಾರ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ. ಸೆ.02: ರಾಜ್ಯದ ಹಿಂದು ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಗೆ ಒಳಪಡುವ ಅಧಿಸೂಚಿತ ದೇವಾಲಯಗಳಲ್ಲಿ ಸೇವೆಗಳನ್ನು ಪುನರಾರಂಭಿಸಲು ಶರತ್ತು ಬದ್ದ ಅನುಮತಿಯನ್ನು ನೀಡಿ ಸರಕಾರ ಸುತ್ತೋಲೆ ಹೊರಡಿಸಿದೆ. ದೇವಸ್ಥಾನಗಳಲ್ಲಿ ನಡೆಸಬಹುದಾದ ಸೇವೆಗಳ ಮಟ್ಟಿ ಮಾಡಲು ಆಯಾಯ ದೇವಸ್ಥಾನಗಳ ಇಒ,ಆಡಳಿತಧಿಕಾರಿ ಹಾಗೂ ಅನುವಂಶಿಕ ಮೊಕ್ತೇಸರರಿಗೆ ಅಧಿಕಾರ ನೀಡಲಾಗಿದೆ.   ಕಳೆದ ದಿನ ಹಿಂದು ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಇಲಾಖಾ ಆಯುಕ್ತರ ಕಾರ್ಯಾಲಯದಿಂದ ಸುತ್ತೋಲೆ ಹೊರಡಿಸಲಾಗಿದೆ. ಕಳೆದದ ದಿನದಿಂದಲೇ ಅನ್ವಯವಾಗುವಂತೆ ವೈಯಕ್ತಿಕ ಅಂತರ ಕಾಪಾಡಿ,ಸ್ಯಾನಿಟೈಸ್‌

ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟ ದೇವಸ್ಥಾನಗಳ ಸೇವೆಗೆ ಶರತ್ತು ಬದ್ಧ ಅನುಮತಿ ನೀಡಿದ ಸರಕಾರ Read More »

ಕರಾವಳಿ, ಕರ್ನಾಟಕ

ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಲಘು ವಾಹನ ಸಂಚಾರಕ್ಕೆ ಅವಕಾಶ ➤ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ. ಸೆ,02: ರಾಷ್ಟ್ರೀಯ ಹೆದ್ದಾರಿ-73, ಮಂಗಳೂರು-ವಿಲ್ಲಂಪುರ ರಸ್ತೆಯ 86.200 ರಿಂದ 90.200ಕಿಮೀ ಕೊಟ್ಟಿಗೆಹಾರದವರೆಗಿನ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ದಿನದ 24 ಗಂಟೆ ಲಘುವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.   ಹೆದ್ದಾರಿ ವಿಭಾಗದ ಕಾರ್ಯಪಾಲಕ ಅಭಿಯಂತರರ ವರದಿಯನ್ವಯ ಪ್ರಸ್ತುತ ಚಾರ್ಮಾಡಿ ಘಾಟ್ ಪ್ರದೇಶದಲ್ಲಿ ಮಳೆಯ ಪ್ರಮಾಣ ಕ್ಷೀಣಿಸಿರುವುದರಿಂದ ವಾಹನಗಳ ಸುಗಮ ಸಂಚಾರ ಹಾಗೂ ಪ್ರಯಾಣಿಕರ ಹಿತದೃಷ್ಟಿಯಿಂದ ಕೇಂದ್ರ ಮೋಟಾರು ವಾಹನ ಕಾಯ್ದೆ ಅನ್ವಯ ರಾಷ್ಟ್ರೀಯ ಹೆದ್ದಾರಿ-73ರ ಮಂಗಳೂರು-ತುಮಕೂರು ರಸ್ತೆಯ 86.200ಕಿಮೀ. (ಚಿಕ್ಕಮಗಳೂರು ಜಿಲ್ಲಾಗಡಿ) 99.200ಕಿಮೀ

ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಲಘು ವಾಹನ ಸಂಚಾರಕ್ಕೆ ಅವಕಾಶ ➤ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ Read More »

ಕರ್ನಾಟಕ
Scroll to Top