ಸುಬ್ರಹ್ಮಣ್ಯ : ರವಿ ಕಕ್ಕೆಪದವುರವರಿಗೆ ಮಾತೃವಿಯೋಗ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ. ಸೆ.02:  ಕುಕ್ಕೆ ಸುಬ್ರಹ್ಮಣ್ಯದ ಉದ್ಯಮಿ ಆರ್ಯಭಟ ಪ್ರಶಸ್ತಿ ಪುರಸ್ಕøತ ರವಿ ಕಕ್ಕೆಪದವುರವರ ತಾಯಿ ಚಂದು ಪೂಜಾರಿಯವರ ಧರ್ಮಪತ್ನಿ ಶ್ರೀಮತಿ ಕಮಲರವರು ಇಂದು ಮುಂಜಾನೆ ಕಕ್ಕೆಪದವುವಿನಲ್ಲಿ ನಿಧನರಾಗಿದ್ದಾರೆ.

 

ಇವರಿಗೆ 71 ವರುಷ ವಯಸ್ಸಾಗಿತ್ತು. ಮೃತರು ತಮ್ಮ ಹಿರಿಯ ಪುತ್ರ ರವಿ ಕಕ್ಕೆಪದವುರವರೊಂದಿಗೆ ಸುಬ್ರಹ್ಮನ್ಯದಲ್ಲಿಯೇ ವಾಸವಾಗಿದ್ದರು. ಆದರೆ ಮೃತ ಕಮಲರವರು ಪತಿಯ ಮನೆ ಕಕ್ಕೆಪದವುಗೆ ಹೋಗಬೇಕೆಂದು ಕೇಳಿಕೊಂಡ ಮೇರೆಗೆ ಆ. 31 ರಂದು ಸುಬ್ರಹ್ಮಣ್ಯದಿಂದ ಕಕ್ಕೆಪದವುಗೆ ತೆರಳಿದ್ದರು. ಪತಿಯ ಮನೆಯಲ್ಲೆ ವಿಧಿವಶರಾಗಿದ್ದಾರೆ. ಮೃತರು ಪುತ್ರರಾದ ರವಿ ಕಕ್ಕೆಪದವು, ಸುರೇಶ್ ಕಕ್ಕೆಪದವು, ಸೊಸೆಯಂದಿರು, ಮೊಮ್ಮಕ್ಕಳು ಸೇರಿದಂತೆ ಅಪಾರ ಕುಟುಂಬಸ್ಥರನ್ನು ಅಗಲಿದ್ದಾರೆ.

 

Also Read  ಇಂದು ಕಡಬದಲ್ಲಿ ಉಚಿತ ಕೊವೀಡ್ -19 ಪರೀಕ್ಷೆ

error: Content is protected !!
Scroll to Top