Kadaba

ಮಂಗಳೂರು ದಸರಾ: ಉದ್ಘಾಟನೆಗೆ ಕೋವಿಡ್ ವಾರಿಯರ್ ಡಾ ಆರತಿ ಕೃಷ್ಣ ಆಯ್ಕೆ

(ನ್ಯೂಸ್ ಕಡಬ) newskadaba.com ಮಂಗಳೂರು ಅ. 16:   ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದಲ್ಲಿ ಅ.17ರಿಂದ ಆರಂಭವಾಗಲಿರುವ ಮಂಗಳೂರು ದಸರಾ ಮಹೋತ್ಸವಕ್ಕೆ ಕೋವಿಡ್ ವಾರಿಯರ್, ಎನ್‌ಆರ್‌ಐ ಫೋರಂ ಮಾಜಿ ಉಪಾಧ್ಯಕ್ಷೆ ಡಾ ಆರತಿ ಕೃಷ್ಣ ಚಾಲನೆ ನೀಡಲಿದ್ದಾರೆ.   ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಅಭಿವೃದ್ಧಿಯ ರೂವಾರಿ ಜನಾರ್ದನ ಪೂಜಾರಿ ಅವರ ಆಶಯದಂತೆ ಮಂಗಳೂರು ದಸರಾ ಮಹೋತ್ಸವವು ‘ನಮ್ಮ ದಸರಾ-ನಮ್ಮ ಸುರಕ್ಷೆ’ ಘೋಷವಾಕ್ಯದಡಿ ನಡೆಯಲಿದೆ. ಈ ಹಿನ್ನಲೆಯಲ್ಲಿ ಕೋವಿಡ್-19 ವಾರಿಯರ್ ಆಗಿ ಅವಿರತ ಶ್ರಮಿಸಿದ ಡಾ ಆರತಿಕೃಷ್ಣ ಅವರನ್ನು ಮಂಗಳೂರು […]

ಮಂಗಳೂರು ದಸರಾ: ಉದ್ಘಾಟನೆಗೆ ಕೋವಿಡ್ ವಾರಿಯರ್ ಡಾ ಆರತಿ ಕೃಷ್ಣ ಆಯ್ಕೆ Read More »

ಕರಾವಳಿ, ಕರ್ನಾಟಕ

ಕಾಸರಗೋಡು: ಕೊಲೆ ಪ್ರಕರಣ ➤ ಅರೋಪಿಗೆ 5 ವರ್ಷ ಜೈಲು ಶಿಕ್ಷೆ

(ನ್ಯೂಸ್ ಕಡಬ) newskadaba.com ಕಾಸರಗೋಡು, ಅ.16: ನ್ಯಾಯಾಲಯ ಪರಿಸರದಲ್ಲಿ ಕೊಲೆ ಪ್ರಕರಣದ ಆರೋಪಿಯ ಹತ್ಯೆಗೆತ್ನಿಸಿದ ಪ್ರಕರಣದ ಆರೋಪಿಗೆ ಕಾಸರಗೋಡು ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಐದು ವರ್ಷ ಕಠಿಣ ಸಜೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ ತೀರ್ಫು ನೀಡಿದೆ. ಶಿಕ್ಷೆಗೊಳಗಾದ ವ್ಯಕ್ತಿಯನ್ನು ಉಪ್ಪಳ ಹೀರೊ ಸ್ಟ್ರೀಟ್‌‌ನ ಮುಹಮ್ಮದ್ ಅಲಿ ಯಾನೆ ಕಸಾಯಿ ಅಲಿ ( 39) ಎಂದು ಗುರುತಿಸಲಾಗಿದೆ.     2013ರ ಡಿಸೆಂಬರ್ 16 ರಂದು ಬೆಳಿಗ್ಗೆ 11.30 ರ ಸುಮಾರಿಗೆ ವಿದ್ಯಾನಗರದಲ್ಲಿರುವ ನ್ಯಾಯಾಲಯ

ಕಾಸರಗೋಡು: ಕೊಲೆ ಪ್ರಕರಣ ➤ ಅರೋಪಿಗೆ 5 ವರ್ಷ ಜೈಲು ಶಿಕ್ಷೆ Read More »

ಕರ್ನಾಟಕ

ಭಾರಿ ಮಳೆಗೆ ಮನೆ ಕುಸಿದ ಹಿನ್ನಲೆ ➤ ಸೂರು ಕಲ್ಪಿಸಿಕೊಂಡುವಂತೆ ಪಟ್ಟಣ ಪಂ. ಮತ್ತು ತಹಶೀಲ್ದಾರ್‌ ಗೆ ಮನವಿ

(ನ್ಯೂಸ್ ಕಡಬ) newskadaba.com ಕಡಬ, ಅ.16: ಅ.14 ರಂದು ಸುರಿದ ಭಾರಿ ಮಳೆ ಹಾಗೂ ಗಾಳಿಗೆ ಕೋಡಿಂಬಾಳ ಗ್ರಾಮದ ಓತ್ರಂಡ್ಕ ಮಾಣಿಗ ರವರ ಮನೆ ಕುಸಿದು ಬಿದ್ದಿದೆ. ಇದರಿಂದ ಪರಿಹಾರಕ್ಕಾಗಿ ಸರಕಾರದಿಂದ ಸಹಾಯದನ ಒದಗಿಸಬೇಕಾಗಿ ಕಡಬ ಜೆ ಡಿ ಯಸ್‌ ಅಧ್ಯಕ್ಷ ಮೀರಾ ಸಾಹೇಬ್‌ ಆಗ್ರಹಿಸಿದ್ದಾರೆ.     ಸದ್ಯಕ್ಕೆ ಊರವರು ಟರ್ಪಲ್‌ ತೆಗೆದು ಕೊಟ್ಟಿದ್ದು ತಾತ್ಕಾಲಿಕ ವ್ಯವಸ್ಥೆ ಮಾಡಿರುತ್ತಾರೆ. ಕಡಬ ತಾಲೂಕು ತಹಶೀಲ್ದಾರ್‌ ಹಾಗೂ ಕಡಬ ಪಟ್ಟಣ ಪಂಚಾಯತ್‌ ಆಡಳಿತಧಿಕಾರಿಯಾಗಿರುವ ತಹಶೀಲ್ದಾರ್‌ ಅನಂತಶಂಕರ್‌ ರವರಿಗೆ ಮನವಿ

ಭಾರಿ ಮಳೆಗೆ ಮನೆ ಕುಸಿದ ಹಿನ್ನಲೆ ➤ ಸೂರು ಕಲ್ಪಿಸಿಕೊಂಡುವಂತೆ ಪಟ್ಟಣ ಪಂ. ಮತ್ತು ತಹಶೀಲ್ದಾರ್‌ ಗೆ ಮನವಿ Read More »

ಕರಾವಳಿ

ಪುತ್ತೂರು – ಕಡಬದಲ್ಲಿ ಇಂದು 12 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆ

(ನ್ಯೂಸ್ ಕಡಬ) newskadaba.com ಕಡಬ, ಅ.16: ಪುತ್ತೂರು ಮತ್ತು ಕಡಬ ತಾಲೂಕಿನಲ್ಲಿ ಇಂದು ಆರೋಗ್ಯ ಇಲಾಖೆಯ ವರದಿಯಂತೆ 12 ಮಂದಿಗೆ ಕೊರೋನಾ ಸೋಕು  ದೃಢಗೊಂಡಿದೆ.     ಕಡಬ ತಾಲೂಕಿನ ನೆಲ್ಯಾಡಿಯ 31 ವರ್ಷದ ವ್ಯಕ್ತಿ, ಕಡಬದ 70 ವರ್ಷದ ಮಹಿಳೆಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ.  

ಪುತ್ತೂರು – ಕಡಬದಲ್ಲಿ ಇಂದು 12 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆ Read More »

ಕರಾವಳಿ

ಮರ್ಕಂಜ: ಹೆರಿಗೆ ವೇಳೆ ಮಹಿಳೆ ಮೃತ್ಯು ➤ ಮಗು ಕ್ಷೇಮ

(ನ್ಯೂಸ್ ಕಡಬ) newskadaba.com ಮರ್ಕಂಜ, ಅ.16: ಮರ್ಕಂಜದಿಂದ ಎರಡು ವರ್ಷಗಳ ಹಿಂದೆ ಪುತ್ತೂರಿನ ಕಾಪುವಿಗೆ ಮದುವೆಯಾಗಿದ್ದ ಮಹಿಳೆ ಕಳೆದ ದಿನ ಹೆರಿಗೆ ವೇಳೆ ಲೋ ಬಿಪಿ ಹಾಗೂ ರಕ್ತಸ್ರಾವ ಉಂಟಾಗಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಮೃತಪಟ್ಟವರನ್ನು ಮರ್ಕಂಜ ಗ್ರಾಮದ ಬಳ್ಳಕ್ಕಾನ ಸುಬ್ಬಣ್ಣ ನಾಯ್ಕ ರವರ ಪುತ್ರಿ ಚಂದ್ರಕಲಾ (25) ಎಂದು ಗುರುತಿಸಲಾಗಿದೆ.     ಚಂದ್ರಕಲಾರವರನ್ನು ಪುತ್ತೂರು ತಾಲೂಕಿನ ಕಾವು ಬಳ್ಳಿಕಾನ ನಿವಾಸಿ ಪ್ರವೀಣ್‌ ಎಂಬವರಿಗೆ ಮದುವೆ ಮಾಡಿಕೊಡಲಾಗಿತ್ತು. ಚಂದ್ರಕಲಾರವರು ಹೆರಿಗೆಗೆಂದು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.

ಮರ್ಕಂಜ: ಹೆರಿಗೆ ವೇಳೆ ಮಹಿಳೆ ಮೃತ್ಯು ➤ ಮಗು ಕ್ಷೇಮ Read More »

ಕರಾವಳಿ

ಕಡಬ :ಇನ್ನುಂದೆ ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯ ➤ ತಪ್ಪಿದಲ್ಲಿ ದಂಡ -ಎಸ್.ಐ ರುಕ್ಮ ನಾಯ್ಕ್

(ನ್ಯೂಸ್ ಕಡಬ) newskadaba.com ಕಡಬ ಅ. 16:  ನ್ಯಾಯಾಲಯದ ಆದೇಶ ಹಾಗೂ ಮೇಲಾಧಿಕಾರಿಗಳ ನಿರ್ದೇಶದಂತೆ ಇನ್ನು ಮುಂದೆ ದ್ವಿಚಕ್ರ ವಾಹನಗಳಲ್ಲಿ ಸಹ ಸವಾರರಾಗಿ ಸಂಚರಿಸುವವರೂ ಕಡ್ಡಾಯವಾಗಿ ಹೆಲ್ಮೆಟ್‌ ಧರಿಸಬೇಕು.   ತಪ್ಪಿದಲ್ಲಿ ದಂಡ ವಿಧಿಸಲಾಗುವುದು ಎಂದು ಕಡಬ ಠಾಣಾ ಎಸ್ಐ ರುಕ್ಮನಾಯ್ಕ್ ತಿಳಿಸಿದ್ದಾರೆ.ಕಡ್ಡಾಯವಾಗಿ ಹೆಲ್ಮೆಟ್‌ ಧರಿಸುವುದನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು ಮತ್ತು ದ್ವಿಚಕ್ರ ವಾಹನಗಳಲ್ಲಿ ಹಿಂಬದಿ ಸವಾರರು ಹೆಲ್ಮೆಟ್‌ ಧರಿಸದೇ ಸಂಚಾರಿಸುವುದು ಕಂಡು ಬಂದಲ್ಲಿ ದಂಡ ವಿಧಿಸಲಾಗುವುದು ಎಂದು ಕಡಬ ಠಾಣಾ ಎಸ್ಐ ರುಕ್ಮನಾಯ್ಕ್ ತಿಳಿಸಿದ್ದಾರೆ ತಿಳಿಸಿದ್ದಾರೆ.  

ಕಡಬ :ಇನ್ನುಂದೆ ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯ ➤ ತಪ್ಪಿದಲ್ಲಿ ದಂಡ -ಎಸ್.ಐ ರುಕ್ಮ ನಾಯ್ಕ್ Read More »

ಕರಾವಳಿ

ಮಕ್ಕಳ ಮೇಲೆ ದೌರ್ಜನ್ಯ ➤ 3ನೇ ಸ್ಥಾನದಲ್ಲಿ ಬೆಂಗಳೂರು.!!

(ನ್ಯೂಸ್ ಕಡಬ) newskadaba.com ಬೆಂಗಳೂರು ಅ. 16:  ಮಕ್ಕಳ‌ ಮೇಲಿನ ದೌರ್ಜನ್ಯ ನಡೆಯುವುದರಲ್ಲಿ ದೇಶದಲ್ಲಿ ಬೆಂಗಳೂರು ಮೂರನೇ ಸ್ಥಾನದಲ್ಲಿದೆ. ಹೀಗೊಂದು ಆತಂಕಕಾರಿ ವರದಿ ಹೊರಬಿದ್ದಿದ್ದು ಸಿಲಿಕಾನ್ ಸಿಟಿಯ ಜನರಲ್ಲಿ ತಲ್ಲಣ ಹೆಚ್ಚಿಸಿದೆ.   ದೇಶದ 19 ಮಹಾನಗರಗಳಲ್ಲಿ ನಡೆಯುವ ಅಪರಾಧಗಳ ಕ್ರೋಢೀಕೃತ ವರದಿ ನೀಡಿದೆ ಎನ್‌ ಸಿ ಆರ್ ಬಿ. ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ ಸಂಸ್ಥೆ 2019ರ ವರ್ಷದಲ್ಲಿ ಸಂಭವಿಸಿದ ಅಪರಾಧ ಪ್ರಕರಣಗಳ ವರದಿ ನೀಡಿದೆ. ಈ ಪಟ್ಟಿಯಲ್ಲಿ ದೆಹಲಿ ಮೊದಲನೇ ಸ್ಥಾನ, ಮುಂಬೈ ಎರಡನೇ ಸ್ಥಾನ,

ಮಕ್ಕಳ ಮೇಲೆ ದೌರ್ಜನ್ಯ ➤ 3ನೇ ಸ್ಥಾನದಲ್ಲಿ ಬೆಂಗಳೂರು.!! Read More »

ಕರ್ನಾಟಕ, ರಾಷ್ಟ್ರೀಯ ನ್ಯೂಸ್

ಕಾಡಾನೆ ದಾಳಿಗೆ ಸಾಕಾನೆ “ರಾಜೇಂದ್ರ” ಸಾವು.!

(ನ್ಯೂಸ್ ಕಡಬ) newskadaba.com ಮಡಿಕೇರಿ ಅ. 16: ಸಮೀಪದ ಮತ್ತಿಗೋಡು ಸಾಕಾನೆ ಶಿಬಿರದಲ್ಲಿ ಕಾಡಾನೆ ದಾಳಿಯಿಂದ ಸಾಕಾನೆಯೊಂದು ಮೃತಪಟ್ಟಿದೆ. ರಾಜೇಂದ್ರ (56) ಹೆಸರಿನ ಗಂಡಾನೆ ಮೃತಪಟ್ಟಿದೆ.   ಮಂಗಳವಾರ ರಾತ್ರಿ ಈ ಆನೆಯನ್ನು ಮೇವಿಗಾಗಿ ಕಾಡಿಗೆ ಬಿಡಲಾಗಿತ್ತು. ಮರು ದಿನ ಬೆಳಿಗ್ಗೆ ಆನೆಯನ್ನು ಶಿಬಿರಕ್ಕೆ ಕರೆತರಲು ಮಾವುತ ಮತ್ತು ಕಾವಾಡಿಗರು ತೆರಳಿದಾಗ ಕಾಡಾನೆಯೊಂದಿಗೆ ಕಾದಾಟ ನಡೆಸಿದ ಆನೆಯ ಹೊಟ್ಟೆ ಭಾಗಕ್ಕೆ ಗಂಭೀರ ಸ್ವರೂಪದ ಗಾಯವಾಗಿತ್ತು. ಶಿಬಿರಕ್ಕೆ ಕರೆ ತಂದು ಚಿಕಿತ್ಸೆ ನೀಡಲಾಗಿತ್ತು. ಅದಕ್ಕೆ ಸ್ಪಂದಿಸದೆ ತೀವ್ರ ಅಸ್ವಸ್ಥಗೊಂಡ ಆನೆಯು

ಕಾಡಾನೆ ದಾಳಿಗೆ ಸಾಕಾನೆ “ರಾಜೇಂದ್ರ” ಸಾವು.! Read More »

ಕರಾವಳಿ, ಕರ್ನಾಟಕ

ಪತ್ತೂರು: ಹಿಂಬದಿ ಸವಾರರಿಗೂ ಇನ್ಮುಂದೆ ಹೆಲ್ಮೆಟ್‌ ಕಡ್ಡಾಯ

(ನ್ಯೂಸ್ ಕಡಬ) newskadaba.com ಪುತ್ತೂರು, ಅ.16: ನ್ಯಾಯಾಲಯದ ಆದೇಶ ಹಾಗೂ ಮೇಲಾಧಿಕಾರಿಗಳ ನಿರ್ದೇಶದಂತೆ ಇನ್ನು ಮುಂದೆ ದ್ವಿಚಕ್ರ ವಾಹನಗಳಲ್ಲಿ ಸಹ ಸವಾರರಾಗಿ ಸಂಚರಿಸುವವರೂ ಕಡ್ಡಾಯವಾಗಿ ಹೆಲ್ಮೆಟ್‌ ಧರಿಸಬೇಕು. ತಪ್ಪಿದಲ್ಲಿ ದಂಡ ವಿಧಿಸಲಾಗುವುದು ಎಂದು ಸಂಚಾರ ಪೊಲೀಸ್‌ ಠಾಣಾ ಎಸ್.ಐ ತಿಳಿಸಿದ್ದಾರೆ.     ಕಡ್ಡಾಯವಾಗಿ ಹೆಲ್ಮೆಟ್‌ ಧರಿಸುವುದನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು ಮತ್ತು ದ್ವಿಚಕ್ರ ವಾಹನಗಳಲ್ಲಿ ಹಿಂಬದಿ ಸವಾರರು ಹೆಲ್ಮೆಟ್‌ ಧರಿಸದೇ ಸಂಚಾರಿಸುವುದು ಕಂಡು ಬಂದಲ್ಲಿ ದಂಡ ವಿಧಿಸಲಾಗುವುದು ಎಂದು ಸಂಚಾರಿ ಠಾಣಾ ಎಸ್‌.ಐ ರಾಮ ನಾಯ್ಕ

ಪತ್ತೂರು: ಹಿಂಬದಿ ಸವಾರರಿಗೂ ಇನ್ಮುಂದೆ ಹೆಲ್ಮೆಟ್‌ ಕಡ್ಡಾಯ Read More »

ಕರಾವಳಿ

ಮೂಡಬಿದಿರೆ: ವಿದ್ಯಾಗಮ ಯೋಜನೆಯಡಿ ಪಾಠ ಮಾಡುತ್ತಿದ್ದ ಶಿಕ್ಷಕಿ ಮೃತ್ಯು

(ನ್ಯೂಸ್ ಕಡಬ) newskadaba.com ಮಂಗಳೂರು, ಅ.16: ರಾಜ್ಯದಲ್ಲಿ ಕೊರೊನಾ ವೈರಸ್ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ವಿದ್ಯಾಗಮ ಯೋಜನೆಯಡಿ ಪಾಠ ಮಾಡಲು ಮಕ್ಕಳ ಬಳಿಗೆ ಹೋಗುತ್ತಿದ್ದ ಮೂಡುಬಿದಿರೆ ಶಿಕ್ಷಕಿಯೊಬ್ಬರು ಇಂದು ಮೃತಪಟ್ಟಿದ್ದಾರೆ.     ವಿದ್ಯಾಗಮ ಯೋಜನೆಯಡಿ ಪಾಠ ಮಾಡಲು ಮಕ್ಕಳ ಬಳಿಗೆ ಹೋಗುತ್ತಿದ್ದ ಶಿಕ್ಷಕಿ ಪದ್ಮಾಕ್ಷಿ ಯವರಿಗೆ ಸೆ. 29 ರಂದು ಕೋವಿಡ್ 19 ಸೋಂಕು ದೃಢಪಟ್ಟಿತ್ತು. ಬಳಿಕ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಮೃತಪಟ್ಟಿದ್ದಾರೆ.

ಮೂಡಬಿದಿರೆ: ವಿದ್ಯಾಗಮ ಯೋಜನೆಯಡಿ ಪಾಠ ಮಾಡುತ್ತಿದ್ದ ಶಿಕ್ಷಕಿ ಮೃತ್ಯು Read More »

ಕರಾವಳಿ
Scroll to Top