ಕಾಸರಗೋಡು: ಕೊಲೆ ಪ್ರಕರಣ ➤ ಅರೋಪಿಗೆ 5 ವರ್ಷ ಜೈಲು ಶಿಕ್ಷೆ

(ನ್ಯೂಸ್ ಕಡಬ) newskadaba.com ಕಾಸರಗೋಡು, ಅ.16: ನ್ಯಾಯಾಲಯ ಪರಿಸರದಲ್ಲಿ ಕೊಲೆ ಪ್ರಕರಣದ ಆರೋಪಿಯ ಹತ್ಯೆಗೆತ್ನಿಸಿದ ಪ್ರಕರಣದ ಆರೋಪಿಗೆ ಕಾಸರಗೋಡು ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಐದು ವರ್ಷ ಕಠಿಣ ಸಜೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ ತೀರ್ಫು ನೀಡಿದೆ. ಶಿಕ್ಷೆಗೊಳಗಾದ ವ್ಯಕ್ತಿಯನ್ನು ಉಪ್ಪಳ ಹೀರೊ ಸ್ಟ್ರೀಟ್‌‌ನ ಮುಹಮ್ಮದ್ ಅಲಿ ಯಾನೆ ಕಸಾಯಿ ಅಲಿ ( 39) ಎಂದು ಗುರುತಿಸಲಾಗಿದೆ.

 

 

2013ರ ಡಿಸೆಂಬರ್ 16 ರಂದು ಬೆಳಿಗ್ಗೆ 11.30 ರ ಸುಮಾರಿಗೆ ವಿದ್ಯಾನಗರದಲ್ಲಿರುವ ನ್ಯಾಯಾಲಯ ಸಮುಚ್ಚಯ ಪರಿಸರದಲ್ಲಿ ಘಟನೆ ನಡೆದಿದ್ದು, ಹತ್ಯೆ ಪ್ರಕರಣದ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ ಜೈಲಿಗೆ ಕರೆದೊಯ್ಯುತ್ತಿದ್ದಾಗ ಚಾಕುವಿನಿಂದ ಇರಿದು ಹತ್ಯೆ ಮಾಡಲು ಯತ್ನಿಸಿದ್ದು, ಗಂಭೀರ ಗಾಯಗೊಂಡ ರಫೀಕ್‌‌ನನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮುತ್ತಲೀಬ್‌‌ನ ಕೊಲೆಗೆ ಪ್ರತಿಕಾರವಾಗಿ ರಫೀಕ್‌‌ನ ಕೊಲೆಗೆ ಯತ್ನಿಸಿದ್ದ ಎಂದು ತನಿಖೆಯಿಂದ ತಿಳಿದು ಬಂದಿತ್ತು. ಉಪ್ಪಳದ ಮುತ್ತಲೀಬ್ ಹತ್ಯೆ ಪ್ರಕರಣದ ಆರೋಪಿಗಳಲ್ಲಿ ಒಬ್ಬನಾದ ಮುಹಮ್ಮದ್ ರಫೀಕ್‌‌ನನ್ನು ಹತ್ಯೆಗೈಯಲು ಪ್ರಕರಣದ ಆರೋಪಿಯಾಗಿದ್ದಾನೆ.  ದಂಡ ಪಾವತಿಸದಿದ್ದಲ್ಲಿ ಒಂದು ತಿಂಗಳು ಹೆಚ್ಚು ಶಿಕ್ಷೆ ಅನುಭವಿಸಬೇಕು ಎಂದು ನ್ಯಾಯಾಲಯ ತಿಳಿಸಿದೆ.

 

Scroll to Top