Kadaba News

ಬಂಟ್ವಾಳದಲ್ಲಿ ಚಿನ್ನಾಭರಣ ದೋಚಿದ ಪ್ರಕರಣ ➤ ಇಬ್ಬರು ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ

(ನ್ಯೂಸ್ ಕಡಬ) newskadaba.com ಬಂಟ್ವಾಳ ನ. 12: ಬಿ.ಸಿ.ರೋಡಿನ ಕೈಕಂಬದಲ್ಲಿ ಕ್ರೈಬ್ರಾಂಚ್ ಪೊಲೀಸರೆಂದು ನಂಬಿಸಿ ವ್ಯಕ್ತಿಯೊಬ್ಬರ ಚಿನ್ಮಾಭರಣ ದೋಚಿದ ಹಳೆಯ ಪ್ರಕರಣದಲ್ಲಿ ಬಂಧನಕ್ಕೊಳಗಾದ ಇಬ್ಬರು ಆರೋಪಿಗಳಿಗೆ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.   ಇರಾನಿ ಗ್ಯಾಂಗ್ ಸದಸ್ಯರಾದ ಮಹಾರಾಷ್ಟ್ರ ದ ಝಾಕಿರ್ ಹುಸೈನ್(26) ಮತ್ತು ಕಂಬರ್ ರಹೀಂ ಮಿರ್ಜಾ(32) ಬಂಧಿತ ಆರೋಪಿಗಳು.2020ರ ಜ.18ರಂದು ಮಧ್ಯಾಹ್ನ ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮಿತ್ತಬೈಲು ಕೊಡಂಗೆ ನಿವಾಸಿ ಶಿವಪ್ರಸಾದ್ ಶರ್ಮ ಅವರು ಕೈಕಂಬದಲ್ಲಿ ನಡೆದುಕೊಂಡು ಹೋಗುವ ವೇಳೆ […]

ಬಂಟ್ವಾಳದಲ್ಲಿ ಚಿನ್ನಾಭರಣ ದೋಚಿದ ಪ್ರಕರಣ ➤ ಇಬ್ಬರು ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ Read More »

ಕರಾವಳಿ, ಕ್ರೈಮ್ ನ್ಯೂಸ್

ಗುತ್ತಿಗಾರು: ಚಾಲಕನ ನಿಯಂತ್ರಣ ತಪ್ಪಿ ಕರೆಂಟ್ ಕಂಬಕ್ಕೆ ಢಿಕ್ಕಿ ಹೊಡೆದ ಕಾರು

(ನ್ಯೂಸ್ ಕಡಬ) newskadaba.com ಗುತ್ತಿಗಾರು, ನ.12: ಗುತ್ತಿಗಾರು ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ಇದ್ದ ಕರೆಂಟ್ ಕಂಬಕ್ಕೆ ಚಾಲಕನ ನಿಯಂತ್ರಣ ತಪ್ಪಿ ಓಮ್ನಿ ಕಾರೊಂದು ಢಿಕ್ಕಿ ಹೊಡೆದು ಕಂಬ ತುಂಡಾದ ಘಟನೆ ನಡೆದಿದೆ.     ಕುವೆಕೋಡಿ ಸೋಮಪ್ಪರವರ ಕಾರು ನಿಯಂತ್ರಣ ತಪ್ಪಿ ಕಂಬಕ್ಕೆ ಢಿಕ್ಕಿ ಹೊಡೆದಿದೆ. ಢಿಕ್ಕಿ ಹೊಡೆದ ಪರಿಣಾಮದಿಂದಾಗಿ ಕಂಬ ತುಂಡಾಗಿ ಕೆಳಕ್ಕೆ ಬೀಳದ ಕಾರಣ ಕಾರಲ್ಲಿ ಇದ್ದ ಸೋಮಪ್ಪ ಹಾಗೂ ಅವರ ಪುತ್ರ ಅದೃಷ್ಟವಶತ್ ನಿಂದ ಪಾರಾಗಿದ್ದಾರೆ.    

ಗುತ್ತಿಗಾರು: ಚಾಲಕನ ನಿಯಂತ್ರಣ ತಪ್ಪಿ ಕರೆಂಟ್ ಕಂಬಕ್ಕೆ ಢಿಕ್ಕಿ ಹೊಡೆದ ಕಾರು Read More »

ಕರಾವಳಿ

ಕಡಬ: ಎಕ್ಸ್.ಎಲ್.ಲೇಡಿಸ್ ಬೊಟಿಕ್ಯು ವಸ್ತ್ರ ಮಾರಾಟ ಮಳಿಗೆ ಶುಭಾರಂಭ

(ನ್ಯೂಸ್ ಕಡಬ) newskadaba.com ಕಡಬ, ನ.12: ಇಂದು ಮುಖ್ಯ ರಸ್ತೆಯಲ್ಲಿರುವ ಪಂಚಾಯತ್ ಬಿಲ್ಡಿಂಗ್ ನಲ್ಲಿ ಮಹಿಳೆಯರ ವಸ್ತ್ರ ಮಾರಾಟ ಮಳಿಗೆ ಎಕ್ಸ್.ಎಲ್.ಲೇಡಿಸ್ ಬೊಟಿಕ್ಯು ಶುಭಾರಂಭಗೊಂಡಿದೆ.     ಕಾರ್ಯಕ್ರಮದಲ್ಲಿ ಕಡಬ ಪೊಲೀಸ್ ಉಪನಿರೀಕ್ಷಕ ರುಕ್ಮ ನಾಯ್ಕ್ ಮಳಿಗೆಯನ್ನು ಉದ್ಘಾಟಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಜಿ.ಪಂ. ಸದಸ್ಯ ಪಿ.ಪಿ ವರ್ಗೀಸ್, ಹಾಜಿ ಸೈಯದ್ ಮೀರಾ ಸಾಹೇಬ್, ಹಾಜಿ ಹನೀಫ್ ಕೆ.ಎಂ. ರಾಯ್ ಅಬ್ರಹಾಂ, ನಾರಾಯಣ ರೈ, ಅಶ್ರಫ್ ಶೇಡಿಗುಂಡಿ, ಶರೀಫ್ ಎ.ಎಸ್. ಸವಾದ್ ಪುರುಷರಕಟ್ಟೆ ಹಾಗೂ ಮಳಿಗೆ ಮಾಲಕ

ಕಡಬ: ಎಕ್ಸ್.ಎಲ್.ಲೇಡಿಸ್ ಬೊಟಿಕ್ಯು ವಸ್ತ್ರ ಮಾರಾಟ ಮಳಿಗೆ ಶುಭಾರಂಭ Read More »

ಕರಾವಳಿ

ಪಂಜ: ಪುತ್ಯ ಬಸ್ ತಂಗುದಾಣದ ಬಳಿ ಮಿನಿ ಅಶೋಕ್ ಲೈಲ್ಯಾಂಡ್ ವಾಹನ ಪಲ್ಟಿ

(ನ್ಯೂಸ್ ಕಡಬ) newskadaba.com ಪಂಜ , ನ.12: ಇಂದು ಮುಂಜಾನೆ ಮಿನಿ ಅಶೋಕ್ ಲೈಲ್ಯಾಂಡ್ ವಾಹನವೊಂದು ಪಂಜದ ಪುತ್ಯ ಬಸ್ ತಂಗುದಾಣದ ಬಳಿ ಪಲ್ಟಿಯಾಗಿದೆ.     ಅಶೋಕ್ ಲೈಲ್ಯಾಂಡ್ ವಾಹನವು ರಸ್ತೆಗೆ ಅಡ್ಡಲಾಗಿ ಬಿದ್ದಿದ್ದು, ವಾಹನದಲ್ಲಿದ್ದವರಿಗೆ ಯಾವುದೇ ಗಾಯಾಗಳಾಗದೆ ಅದೃಷ್ಟಶವಶತ್‍ನಿಂದ ಪಾರಾಗಿದ್ದಾರೆ.  

ಪಂಜ: ಪುತ್ಯ ಬಸ್ ತಂಗುದಾಣದ ಬಳಿ ಮಿನಿ ಅಶೋಕ್ ಲೈಲ್ಯಾಂಡ್ ವಾಹನ ಪಲ್ಟಿ Read More »

ಕರಾವಳಿ

ಪುತ್ತೂರು: ವಿದ್ಯುತ್ ಕಂಬಕ್ಕೆ ಲಾರಿ ಢಿಕ್ಕಿ

(ನ್ಯೂಸ್ ಕಡಬ) newskadaba.com ಪುತ್ತೂರು, ನ.12: ಕಳೆದ ದಿನ ರಾತ್ರಿ ವಿದ್ಯುತ್ ಕಂಬಕ್ಕೆ ಲಾರಿಯೊಂದು ಢಿಕ್ಕಿ ಹೊಡೆದ ಘಟನೆ ಬಲ್ನಾಡು ರಸ್ತೆಯ ಬಪ್ಪಳಿಕೆ ಎಂಬಲ್ಲಿ ನಡೆದಿದೆ.     ಪುತ್ತೂರು ಕಡೆಯಿಂದ ಬಲ್ನಾಡು ಕಡೆ ಹೋಗುತ್ತಿದ್ದ ಲಾರಿ ಬಪ್ಪಳಿಕೆ ಶ್ರೀ ಸತ್ಯ ನಾರಾಯಣ ಪೂಜಾ ಕಟ್ಟೆಯ ಬಳಿ ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದಿದೆ. ತಕ್ಷಣ ಆಗಮಿಸಿದ ಮೆಸ್ಕಾಂ ಸಿಬ್ಬಂದಿಗಳು, ಢಿಕ್ಕಿಯಾಗಿ ಪರಾರಿಯಾದ ಲಾರಿಯನ್ನು ಮೆಸ್ಕಾಂ ಜೀಪಿನಲ್ಲಿ ಲಾರಿಯನ್ನು ಬೆನ್ನತ್ತಿದ್ದರು. ಇನ್ನು ವಿದ್ಯುತ್ ಕಂಬಗಳು ಮುರಿದುಬಿದ್ದಿದ್ದು, ಅಂಬಿಕಾ

ಪುತ್ತೂರು: ವಿದ್ಯುತ್ ಕಂಬಕ್ಕೆ ಲಾರಿ ಢಿಕ್ಕಿ Read More »

ಕರಾವಳಿ

ಹಸಿರು ಪಟಾಕಿ ಮಾರಾಟಕ್ಕೆ ಗ್ರೀನ್ ಸಿಗ್ನಲ್ ನೀಡಿದ ರಾಜ್ಯ ಸರ್ಕಾರ

(ನ್ಯೂಸ್ ಕಡಬ) newskadaba.com ಬೆಂಗಳೂರು, ನ.12: ಕೊರೋನಾ ಕಾರಣದಿಂದಾಗಿ ರಾಜ್ಯ ಸರ್ಕಾರ ಪಟಾಕಿಯನ್ನು ನಿಷೇದಿಸಿತ್ತು. ಆದ್ರೇ ಹಸಿರು ಪಟಾಕಿ ಹೊಡೆದು, ದೀಪಾವಳಿ ಹಬ್ಬ ಆಚರಣೆಗೆ ಅನುಮತಿಸಿತ್ತು. ಇಂತಹ ಹಸಿರು ಪಟಾಕಿ ಮಾರಾಟಕ್ಕೆ ರಾಜ್ಯಾದ್ಯಂತ ಇಂದಿನಿಂದ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ.     ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಹಸಿರು ಪಟಾಕಿ ಮಾರಾಟಕ್ಕೆ ಮಾರಾಟಗಾರರಿಗೆ ಲೈಸೆನ್ಸ್ ನೀಡಲು ಬಿಬಿಎಂಪಿ, ಪೊಲೀಸ್ ಇಲಾಖೆಗೆ ಅವಕಾಶ ನೀಡಿದೆ. ಇನ್ನು ಹಸಿರು ಪಟಾಕಿಯನ್ನನಷ್ಟೆ ಮಾರಾಟ ಮಾಡಬೇಕು. ಹಾಗೇಯೆ 5 ದಿನ ಪಟಾಕಿ ಮಾರಾಟಕ್ಕೆ

ಹಸಿರು ಪಟಾಕಿ ಮಾರಾಟಕ್ಕೆ ಗ್ರೀನ್ ಸಿಗ್ನಲ್ ನೀಡಿದ ರಾಜ್ಯ ಸರ್ಕಾರ Read More »

ಕರ್ನಾಟಕ

ಕಡಬ,ಪುತ್ತೂರು ತಾಲೂಕಿನಲ್ಲಿ ಇಂದು 3 ಮಂದಿಯಲ್ಲಿ ಕೋವಿಡ್ ದೃಢ

(ನ್ಯೂಸ್ ಕಡಬ) newskadaba.com  ಕಡಬ , ನ.12: ಕಡಬ ಮತ್ತು ಪುತ್ತೂರು ತಾಲೂಕುಗಳಲ್ಲಿ ಆರೋಗ್ಯ ಇಲಾಖೆಯ ವರದಿಯಂತೆ ಇಂದು 3 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ.     ಕಡಬ ತಾಲೂಕಿನ ಪಾಲ್ತಾಡಿ ನಿವಾಸಿ 60 ವರ್ಷದ ಮಹಿಳೆ, ಪುತ್ತೂರು ತಾಲೂಕಿನ ಕರ್ನೂರು ನಿವಾಸಿ 46 ವರ್ಷದ ಮಹಿಳೆ, 82 ವರ್ಷದ ವ್ಯಕ್ತಿಯಲ್ಲಿ ಕೊರೋನಾ ಸೋಂಕು ದೃಡಪಟ್ಟಿದೆ.  

ಕಡಬ,ಪುತ್ತೂರು ತಾಲೂಕಿನಲ್ಲಿ ಇಂದು 3 ಮಂದಿಯಲ್ಲಿ ಕೋವಿಡ್ ದೃಢ Read More »

ಕರಾವಳಿ

ಕಾಸರಗೋಡು: ಆಯ ತಪ್ಪಿ ಕೆರೆಗೆ ಬಿದ್ದು ವ್ಯಕ್ತಿ ಮೃತ್ಯು

(ನ್ಯೂಸ್ ಕಡಬ) newskadaba.com  ಕಾಸರಗೋಡು, ನ.12: ಮುಳಿಯಾರು ಎಂಬಲ್ಲಿ ಕೃಷಿಕರೋರ್ವರು ತರಕಾರಿ ಕೃಷಿಗೆ ನೀರು ಹಾಯಿಸಲು ತೆರಳಿದ್ದ ಸಂದರ್ಭದಲ್ಲಿ ಆಯ ತಪ್ಪಿ ಕೆರೆಗೆ ಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ.     ಮೃಪಟ್ಟ ವ್ಯಕ್ತಿಯನ್ನು ಮುಳಿಯಾರು ಬೇಪು ಅಂಬಲತಿಂಗಳ್‌ನ ಎಂ.ಕುಞಂಬು ನಾಯರ್(65) ಎಂದು ಗುರುತಿಸಲಾಗಿದೆ. ಪತ್ನಿಯ ಬೊಬ್ಬೆ ಕೇಳಿ ಪರಿಸರವಾಸಿಗಳು ಕುಞಂಬು ನಾಯರ್‌ರನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ತಲಪಿಸುವಷ್ಟರಲ್ಲಿ ಮೃತಪಟ್ಟಿದ್ದರು. ಇನ್ನು ಈ ಘಟನೆ ಕುರಿತು ಆದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.  

ಕಾಸರಗೋಡು: ಆಯ ತಪ್ಪಿ ಕೆರೆಗೆ ಬಿದ್ದು ವ್ಯಕ್ತಿ ಮೃತ್ಯು Read More »

ಕರ್ನಾಟಕ

ಸುಳ್ಯ: ಯುವ ನಾಯಕ ಮುದ್ದಸೀರ್ ಕುದ್ರೋಳಿ ನಿಧನಕ್ಕೆ ಸಂತಾಪ

(ನ್ಯೂಸ್ ಕಡಬ) newskadaba.com ಸುಳ್ಯ, ನ.12: ಮಂಗಳೂರಿನ ಅಸುಪಾಸಿನ ಬಡ ಹಾಗೂ ನಿರ್ಗತಿಕ ಜನರಿಗೆ ಆಶಾಕಿರಣ ವಾಗಿ ಬಡವರ ಹಸಿವು ನೀಗಿಸಲು ಸಹಾಯ ಮಾಡಬಲ್ಲ ವ್ಯಕ್ತಿತ್ವ ರಾಜಕೀಯ ಸಮಾಜಿಕ ಧಾರ್ಮಿಕ ರಂಗದಲ್ಲಿ ತನ್ನನ್ನು ತಾನೂ ಸಮಾಜ ಸೇವೆಯಲ್ಲಿ ತೊಡಗಿ ಸಮಾಜಕ್ಕೆ ಮಾದರಿಯಾದ ಯುವ ನಾಯಕ ಮುದ್ದಸೀರ್ ರವರ ನಿಧನಕ್ಕೆ ಅರಂತೋಡು ವಲಯ ಕಾಂಗ್ರೆಸ್ ಸಂಘಟನಾ ಕಾರ್ಯದರ್ಶಿ ತಾಜುದ್ದೀನ್ ಅರಂತೋಡು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.       ಭಗವಂತನು ಮನೆಯವರಿಗೆ ಕುಟುಂಬದ ಬಂಧು ಮಿತ್ರ ರಿಗೆ ನೋವುವನ್ನು ಸಹಿಸುವ

ಸುಳ್ಯ: ಯುವ ನಾಯಕ ಮುದ್ದಸೀರ್ ಕುದ್ರೋಳಿ ನಿಧನಕ್ಕೆ ಸಂತಾಪ Read More »

ಕರಾವಳಿ

ಸುಳ್ಯ: ಕೋವಿಡ್ ಶಂಕಿತ ವ್ಯಕ್ತಿ ಮೃತ್ಯು

(ನ್ಯೂಸ್ ಕಡಬ) newskadaba.com  ಸುಳ್ಯ, ನ.12: ಸುಳ್ಯ ಖಾಸಗಿ ಆಸ್ಪತ್ರೆಯಲ್ಲಿ ಇಂದು ಉಬರಡ್ಕ ಮಿತ್ತೂರು ಗ್ರಾಮದ ಸೂಂತೋಡು ನಿವಾಸಿ ಯೋಗೀಶ್ ಗೌಡ(35) ಎಂಬವರು ಅಸೌಖ್ಯದಿಂದ ನಿಧನರಾಗಿದ್ದರು.     ಅಸೌಖ್ಯದ ಕಾರಣಕ್ಕಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪರೀಕ್ಷೆಯ ವೇಳೆ ಅವರಿಗೆ ಕೋವಿಡ್ ಪಾಸಿಟಿವ್ ಬಂದಿರುವುದು ಕಂಡು ಬಂದಿದೆ. ಇದರಿಂದಾಗಿ ಯೋಗೀಶ್ ಗೌಡ ರವರು ಕೋವಿಡ್ ಸೋಂಕಿಗೆ ಮೃತಪಟ್ಟಿರುವುದಾಗಿ ಹೇಳಲಾಗುತ್ತಿದೆ.    

ಸುಳ್ಯ: ಕೋವಿಡ್ ಶಂಕಿತ ವ್ಯಕ್ತಿ ಮೃತ್ಯು Read More »

ಕರಾವಳಿ
Scroll to Top