ಕಾಸರಗೋಡು: ಆಯ ತಪ್ಪಿ ಕೆರೆಗೆ ಬಿದ್ದು ವ್ಯಕ್ತಿ ಮೃತ್ಯು



(ನ್ಯೂಸ್ ಕಡಬ) newskadaba.com  ಕಾಸರಗೋಡು.12: ಮುಳಿಯಾರು ಎಂಬಲ್ಲಿ ಕೃಷಿಕರೋರ್ವರು ತರಕಾರಿ ಕೃಷಿಗೆ ನೀರು ಹಾಯಿಸಲು ತೆರಳಿದ್ದ ಸಂದರ್ಭದಲ್ಲಿ ಆಯ ತಪ್ಪಿ ಕೆರೆಗೆ ಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ.







 

 

ಮೃಪಟ್ಟ ವ್ಯಕ್ತಿಯನ್ನು ಮುಳಿಯಾರು ಬೇಪು ಅಂಬಲತಿಂಗಳ್‌ನ ಎಂ.ಕುಞಂಬು ನಾಯರ್(65) ಎಂದು ಗುರುತಿಸಲಾಗಿದೆ. ಪತ್ನಿಯ ಬೊಬ್ಬೆ ಕೇಳಿ ಪರಿಸರವಾಸಿಗಳು ಕುಞಂಬು ನಾಯರ್‌ರನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ತಲಪಿಸುವಷ್ಟರಲ್ಲಿ ಮೃತಪಟ್ಟಿದ್ದರು. ಇನ್ನು ಈ ಘಟನೆ ಕುರಿತು ಆದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.






 

error: Content is protected !!
Scroll to Top