Kadaba News

ಮೈಸೂರು: ಪೊಲೀಸ್ ಜೀಪ್ ಮರಕ್ಕೆ ಢಿಕ್ಕಿ ➤ ಎ.ಎಸ್‍ಐ ಹಾಗೂ ಪೊಲೀಸ್ ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ) newskadaba.com ಮೈಸೂರು, ನ.12: ಕೆ.ಆರ್ ನಗರ ತಾಲೂಕಿನ ಸಿದ್ದಮಕೊಪ್ಪಲು ಗೇಟ್ ಬಳಿ ಪೊಲೀಸ್ ಜೀಪ್ ವೊಂದು ನಿಯಂತ್ರಣ ತಪ್ಪಿ ಮರಕ್ಕೆ ಢಿಕ್ಕಿ ಹೊಡೆದಪರಿಣಾಮ, ಕರ್ತವ್ಯ ನಿರತ ಪೊಲೀಸರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ.   ಮೃತಪಟ್ಟಿರುವ ವ್ಯಕ್ತಿಯನ್ನು ಎಎಸ್‍ಐ ಮೂರ್ತಿ(45) ಹಾಗೂ ಮುಖ್ಯಪೇದೆ ಶಾಂತಕುಮಾರ್(40) ಎಂದು ಗುರುತಿಸಲಾಗಿದೆ. ಮಧ್ಯರಾತ್ರಿ ಪಾಳಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸರು ಸಾಲಿಗ್ರಾಮದಿಂದ ಕೆ.ಆರ್. ನಗರದ ಕಡೆ ತೆರಳುವ ವೇಳೆ ಈ ಅಪಘಾತ ಸಂಭವಿಸಿದೆ. ಘಟನಾ ಸ್ಥಳಕ್ಕೆ ಎಸ್ಪಿ ರಿಷ್ಯಂತ್ ಕುಮಾರ್ ಸೇರಿದಂತೆ […]

ಮೈಸೂರು: ಪೊಲೀಸ್ ಜೀಪ್ ಮರಕ್ಕೆ ಢಿಕ್ಕಿ ➤ ಎ.ಎಸ್‍ಐ ಹಾಗೂ ಪೊಲೀಸ್ ಸ್ಥಳದಲ್ಲೇ ಮೃತ್ಯು Read More »

ಕರ್ನಾಟಕ

ಕ್ಯಾಂಪಸ್ ಫ್ರಂಟ್ ಕುಂದಾಪುರ ವತಿಯಿಂದ ರಾಷ್ಟ್ರೀಯ ಶಿಕ್ಷಣ ದಿನಾಚರಣೆ ➤ ಎನ್ ಇ ಪಿ 2020 ಕುರಿತು ಶಿಕ್ಷಕರೊಂದಿಗೆ ಸಂವಾದ

(ನ್ಯೂಸ್ ಕಡಬ) newskadaba.com ಕುಂದಾಪುರ ನ. 12: ಭಾರತದ ಪ್ರಥಮ ಶಿಕ್ಷಣ ಮಂತ್ರಿ ಮೌಲಾನ ಅಬುಲ್ ಕಲಾಂ ಆಝಾದ್ ಸ್ಮರಣಾರ್ಥ ಆಚರಿಸುವ ಶಿಕ್ಷಣ ದಿನಾಚರಣೆಯ ಅಂಗವಾಗಿ ಕ್ಯಾಂಪಸ್ ಫ್ರಂಟ್ ಕುಂದಪುರ ಏರಿಯಾ ವತಿಯಿಂದ ರಾಷ್ಟ್ರೀಯ ಶಿಕ್ಷಣ ನೀತಿಯ ವಿಷಯದಲ್ಲಿ ಶಿಕ್ಷಕರೊಂದಿಗೆ ಸಂವಾದ ಕಾರ್ಯಕ್ರಮವು ಕುಂದಾಪುರ ಕ್ಯಾಂಪಸ್ ಫ್ರಂಟ್ ಅಧ್ಯಕ್ಷ ಝಿಶಾನ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.     ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕ್ಯಾಂಪಸ್ ಫ್ರಂಟ್ ರಾಜ್ಯಾಧ್ಯಕ್ಷರಾದ ಫಯಾಝ್ ದೊಡ್ಡಮನೆ ವಿಷಯ ಮಂಡನೆ ಮಾಡಿದರು. ವಿದ್ಯಾ ವರ್ಧಕ ಇಂಜಿನಿಯರಿಂಗ್

ಕ್ಯಾಂಪಸ್ ಫ್ರಂಟ್ ಕುಂದಾಪುರ ವತಿಯಿಂದ ರಾಷ್ಟ್ರೀಯ ಶಿಕ್ಷಣ ದಿನಾಚರಣೆ ➤ ಎನ್ ಇ ಪಿ 2020 ಕುರಿತು ಶಿಕ್ಷಕರೊಂದಿಗೆ ಸಂವಾದ Read More »

ಕರಾವಳಿ, ಕರ್ನಾಟಕ

ಮಾಣಿ: ವಿವಾಹಿತ ಮಹಿಳೆ ನಾಪತ್ತೆ

(ನ್ಯೂಸ್ ಕಡಬ) newskadaba.com ಮಾಣಿ ನ. 12: ಮಾಣಿ ಗ್ರಾಮದ ವಿವಾಹಿತ ಮಹಿಳೆಯೊಬ್ಬರು ನಾಪತ್ತೆಯಾಗಿರುವ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೂರ್ಣಿಮ(30)ರವರು ನವೆಂಬರ್ 9 ರಂದು ಸಂಜೆ ವೇಳೆಗೆ ಮನೆಯಲ್ಲಿ ಯಾರಲ್ಲಿಯೂ ಹೇಳದೇ ಮನೆಯಿಂದ ಹೋದಾಕೆ ವಾಪಾಸ್ಸು ಮನೆಗೆ ಮರಳದೆ ನಾಪತ್ತೆಯಾಗಿದ್ದಾರೆ.     ಈ ಬಗ್ಗೆ ಪತಿ ಮಾಹಿತಿ ಪಡೆದು ಮಾಣಿ ಪೇಟೆಯಲ್ಲಿ ವಿಚಾರಿಸಿದಾಗ ಆಕೆ ಬಸ್ಸಿನಲ್ಲಿ ಹಾಸನ ಕಡೆ ಹೋಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಇದಕ್ಕೆ ಸಂಬಂಧ ಪಟ್ಟಂತೆ ವಿಟ್ಲ ಪೊಲೀಸ್ ಠಾಣೆಯಲ್ಲಿ

ಮಾಣಿ: ವಿವಾಹಿತ ಮಹಿಳೆ ನಾಪತ್ತೆ Read More »

ಕರಾವಳಿ

ಕಡಬ: ನೂತನ ತಾ.ಪಂ. ಅಭಿವೃದ್ಧಿಗೆ ಅನುದಾನ ಬಿಡುಗಡೆಗೊಳಿಸಲು ಉಸ್ತುವಾರಿ ಸಚಿವರಿಗೆ ಮನವಿ

(ನ್ಯೂಸ್ ಕಡಬ) newskadaba.com ಕಡಬ, ನ.12: ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕಡಬ ತಾಲೂಕು ಪಂಚಾಯತ್ ಗೆ ಅನುದಾನ ಬಿಡುಗಡೆಗೊಳಿಸುವಂತೆ ತಾ.ಪಂ. ಅಧ್ಯಕ್ಷರ ನೇತೃತ್ವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ನ.10 ರಂದು ಕಡಬ ತಾ.ಪಂ. ಅಧ್ಯಕ್ಷರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಗಿದೆ.     ಹೊಸದಾಗಿ ರಚನೆಗೊಂಡಿರುವ ಕಡಬ ತಾಲೂಕು ಪಂಚಾಯತ್ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಅನುದಾನದ ಕೊರತೆ ಇದ್ದು, ಕೂಡಲೇ 2 ಕೋಟಿ ಅನುದಾನವನ್ನು ಬಿಡುಗಡೆಗೊಳಿಸಬೇಕೆಂದು ತಾ.ಪಂ. ಅಧ್ಯಕ್ಷೆ ರಾಜೇಶ್ವರಿ ಕನ್ಯಾಮಂಗಲ ಅವರು ನ.10 ರಂದು ಮಂಗಳೂರಿಗೆ ಆಗಮಿಸಿದ್ದ ಜಿಲ್ಲಾ ಉಸ್ತುವಾರಿ

ಕಡಬ: ನೂತನ ತಾ.ಪಂ. ಅಭಿವೃದ್ಧಿಗೆ ಅನುದಾನ ಬಿಡುಗಡೆಗೊಳಿಸಲು ಉಸ್ತುವಾರಿ ಸಚಿವರಿಗೆ ಮನವಿ Read More »

ಕರಾವಳಿ

ಉಳ್ಳಾಲ :ಅಕ್ರಮ ಜಾನುವಾರು ಸಾಗಾಟ ➤ ವಾಹನ ಚಾಲಕ ಖಾಕಿ ವಶಕ್ಕೆ

(ನ್ಯೂಸ್ ಕಡಬ) newskadaba.com ಉಳ್ಳಾಲ ನ. 12: ಉಳ್ಳಾಲದಲ್ಲಿ ಅಕ್ರಮ ಜಾನುವಾರು ಸಾಗಾಟ ಮಾಡುತ್ತಿದ್ದ ವಾಹನವನ್ನು ವಶಕ್ಕೆ ಪಡೆದುಕೊಂಡು ಜಾನುವಾರುಗಳನ್ನು ಪೊಲೀಸರು ರಕ್ಷಿಸಿದ್ದಾರೆ. ಮಂಗಳೂರಿನಿಂದ ಕೇರಳದ ಕಡೆಗೆ ಈಚರ್ ವಾಹನದಲ್ಲಿ ಸಾಗಾಟ ಮಾಡುತ್ತಿದ್ದ ಐದು ಹೋರಿ ಹಾಗೂ ಒಂದು ಹಸುವನ್ನು ವಶಕ್ಕೆ ಪಡೆದಿದ್ದಾರೆ. ದಾವಣಗೆರೆ ನೋಂದವಣಿಯ ವಾಹನವಾಗಿದ್ದು ಚಾಲಕನು ವಾಹನ ಮತ್ತು ಜಾನುವಾರುಗಳನ್ನು ಹುಬ್ಬಳ್ಳಿಯ ಕೋರ್ಟಿಂದ ಬಿಡುಗಡೆಗೊಳಿಸಿರುವುದಾಗಿ ದಾಖಲೆ ತೋರಿದ್ದಾನೆ. ಉಳ್ಳಾಲ ಪೊಲೀಸರು ವಾಹನ ಮತ್ತು ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.    

ಉಳ್ಳಾಲ :ಅಕ್ರಮ ಜಾನುವಾರು ಸಾಗಾಟ ➤ ವಾಹನ ಚಾಲಕ ಖಾಕಿ ವಶಕ್ಕೆ Read More »

ಕರಾವಳಿ

ನ. 13 ರಂದು ಕಡಬ ಸಮುದಾಯ ಆಸ್ಪತ್ರೆಯಲ್ಲಿ ಉಚಿತ ವೈದ್ಯಕೀಯ ತಪಾಸಣ ಶಿಬಿರ

(ನ್ಯೂಸ್ ಕಡಬ) newskadaba.com ಕಡಬ ನ. 11: ಸಮುದಾಯ ಆರೋಗ್ಯ ಕೇಂದ್ರ ಕಡಬ, ದ.ಕ.ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಕಡಬ ಹಾಗೂ ಪಟ್ಟಣ ಪಂಚಾಯತ್ ಕಡಬ ಇದರ ಸಂಯುಕ್ತ ಆಶ್ರಯದಲ್ಲಿ ಆಸಾಂಕ್ರಾಮಿಕ ರೋಗಗಳು ಮತ್ತು ಕೋವಿಡ್-19 ಉಚಿತ ತಪಾಸಣ ಶಿಬಿರವು ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನ. 13 ರಂದು ಜರಗಲಿದೆ.   ಶಿಬಿರದಲ್ಲಿ ಕೋವಿಡ್-19 ಪರೀಕ್ಷೆ ಮಾತ್ರವಲ್ಲದೇ ರಕ್ತದೊತ್ತಡ ಪರೀಕ್ಷೆ  ಸಕ್ಕರೆ ಕಾಯಿಲೆ ಪರೀಕ್ಷೆ ಹಾಗೂ ರಕ್ತ ವರ್ಗೀಕರಣವನ್ನು ಉಚಿತವಾಗಿ ನಡೆಸಲಾಗುವುದು ಎಂದು ಕಡಬ ಸಮುದಾಯ ಆರೋಗ್ಯ

ನ. 13 ರಂದು ಕಡಬ ಸಮುದಾಯ ಆಸ್ಪತ್ರೆಯಲ್ಲಿ ಉಚಿತ ವೈದ್ಯಕೀಯ ತಪಾಸಣ ಶಿಬಿರ Read More »

ಕರಾವಳಿ

ಉಡುಪಿ: ಕಾರು ಮತ್ತು ಈಚರ್ ವಾಹನದ ನಡುವೆ ಅಪಘಾತ ➤ ಢಿಕ್ಕಿಯಾದ ರಭಸಕ್ಕೆ ಈಚರ್ ವಾಹನದ ಒಳಗೆ ಸಿಲುಕಿದ ವೈದ್ಯರು

(ನ್ಯೂಸ್ ಕಡಬ) newskadaba.com ಉಡುಪಿ ನ. 11: ಉಡುಪಿಯ ಹಿರಿಯಡ್ಕ ದ ಬಳಿ ಕಾರು ಹಾಗೂ ಈಚರ್ ವಾಹನದ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ವೈದ್ಯರೊಬ್ಬರಿಗೆ ಗಂಭೀರಾ ಗಾಯಾವಾಗಿದೆ. ಮಣಿಪಾಲದಿಂದ ಮೂಡಬಿದ್ರೆ ಕಡೆ ತೆರಳುತ್ತಿದ್ದ ಕಾರು ಹಾಗೂ ಕಾರ್ಕಳದಿಂದ ಹಿರಿಯಡ್ಕ ಕಡೆ ಬರುತ್ತಿದ್ದ ಸಂದರ್ಭದಲ್ಲಿ ಮುಖಾಮುಖಿಯಾಗಿ ಢಿಕ್ಕಿಯಾಗಿದೆ. ಢಿಕ್ಕಿಯಾದ ರಭಸಕ್ಕೆ ಕಾರಿನಲ್ಲಿದ್ದ ಮಣಿಪಾಲದ ಕೆ.ಎಂ.ಸಿ. ಆಸ್ಪತ್ರೆ  ವೈದ್ಯರು ಈಚರ್ ವಾಹನದ ಒಳಗೆ ಸಿಲುಕಿದ್ದಾರೆ. ತಕ್ಷಣವೇ ಸ್ಥಳಿಯರ ಸಹಾಯದಿಂದ ಹೊರತೆಗೆಯಲಾಗಿದೆ. ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.    

ಉಡುಪಿ: ಕಾರು ಮತ್ತು ಈಚರ್ ವಾಹನದ ನಡುವೆ ಅಪಘಾತ ➤ ಢಿಕ್ಕಿಯಾದ ರಭಸಕ್ಕೆ ಈಚರ್ ವಾಹನದ ಒಳಗೆ ಸಿಲುಕಿದ ವೈದ್ಯರು Read More »

ಕರಾವಳಿ

ಹರಿಹರ ಪಲ್ಲತಡ್ಕ: ರಸ್ತೆ ಕಾಂಕ್ರೀಟ್ ಕಾರ್ಯ

(ನ್ಯೂಸ್ ಕಡಬ) newskadaba.com ಹರಿಹರ ಪಲ್ಲತಡ್ಕ, ನ.11: ಮಳೆ ಹಾನಿ ಯೋಜನೆಯಡಿಯಲ್ಲಿ ಮಂಜೂರಾದ 45 ಲಕ್ಷ ಅನುದಾನದಲ್ಲಿ 815 ಮೀಟರ್ ರಸ್ತೆ ಕಾಂಕ್ರೀಟ್ ಕಾರ್ಯವು ಬಾಳುಗೋಡು -ಹರಿಹರ ಸಂಪರ್ಕ ರಸ್ತೆಯ ಕಲ್ಲೆಮಠ ಎಂಬಲ್ಲಿ ಭರದಿಂದ ಸಾಗುತ್ತಿದೆ.     ಈ ಸಂದರ್ಭದಲ್ಲಿ ತಾಲೂಕು ಲೋಕೋಪಯೋಗಿ ಇಲಾಖೆಯ ಜೂನಿಯರ್ ಇಂಜಿನಿಯರ್ ಜನಾರ್ಧನ ರವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಹಾಗೆಯೇ ಪಲ್ಲತಡ್ಕ ಗ್ರಾ.ಪಂ. ನ ಮಾಜಿ ಅಧ್ಯಕ್ಷರಾದ ಚಂದ್ರಹಾಸ ಶಿವಾಲ, ಶಿವಕುಮಾರ್ ಶಿವಾಲ, ಗುತ್ತಿಗೆದಾರರ ಉಸ್ತುವಾರಿ ಯಾಹ್ಯಾ ಉಪಸ್ಥಿತರಿದ್ದರು.  

ಹರಿಹರ ಪಲ್ಲತಡ್ಕ: ರಸ್ತೆ ಕಾಂಕ್ರೀಟ್ ಕಾರ್ಯ Read More »

ಕರಾವಳಿ

ಪುತ್ತೂರು: ಶ್ರೀ ವಿಷ್ಣುಮೂರ್ತಿ ದೈವಸ್ಥಾನದಲ್ಲಿ ಆಭರಣ ಕಳವು

(ನ್ಯೂಸ್ ಕಡಬ) newskadaba.com ಪುತ್ತೂರು, ನ.11: ಕಾರಣಿಕ ಕ್ಷೇತ್ರ ಶ್ರೀ ವಿಷ್ಣುಮೂರ್ತಿ ಮತ್ತು ಪರಿವಾರ ದೈವಸ್ಥಾನ ಬಲ್ನಾಡು ಗ್ರಾಮದ ಕಾಡ್ಲ ಎಂಬಲ್ಲಿ ಕಳ್ಳತನ ಎಸಗಿರುವ ಘಟನೆ ಕಳೆದ ದಿನ ರಾತ್ರಿ ಬೆಳಕಿಗೆ ಬಂದಿದೆ.     ಕಳೆದ ದಿನ ರಾತ್ರಿ ದೀಪ ಹಚ್ಚಲು ಬಾಗಿಲು ತೆರೆದಾಗ ದೈವಸ್ಥಾನದ ಒಳಗಿರುವ ದೈವದ ಆಯುಧಗಳು ಹಾಗೂ ಆಭರಣಗಳು ಕಳವಾಗಿರುವುದು ಬೆಳಕಿಗೆ ಬಂದಿದೆ. ಘಟನಾ ಸ್ಥಳಕ್ಕೆ ಸಂಪ್ಯ ಠಾಣಾ ಎಸ್.ಐ ಉದಯ ರವಿ, ಪೊಲೀಸ್ ಸಿಬಂದಿಗಳು, ಶ್ವಾನ ದಳ ಹಾಗೂ ಬೆರಳುತಜ್ಞರು ಆಗಮಿಸಿ

ಪುತ್ತೂರು: ಶ್ರೀ ವಿಷ್ಣುಮೂರ್ತಿ ದೈವಸ್ಥಾನದಲ್ಲಿ ಆಭರಣ ಕಳವು Read More »

ಕರಾವಳಿ

ಮಂಗಳೂರು: ದೇರಳಕಟ್ಟೆ ಆಸ್ಪತ್ರೆಯಿಂದ ಹುಬ್ಬಳ್ಳಿಗೆ ಮೃತದೇಹವನ್ನು ಸಾಗಿಸಲು ನೆರವಾದ ಕರ್ನಾಟಕ ರಕ್ಷಣಾ ವೇದಿಕೆ

(ನ್ಯೂಸ್ ಕಡಬ) newskadaba.com ಮಂಗಳೂರು, ನ.11: ಉತ್ತರಕನ್ನಡ ಮೂಲದ ವ್ಯಕ್ತಿಯೋರ್ವರು ಮಂಗಳೂರು ದೇರಳಕಟ್ಟೆ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಮೃತದೇಹವನ್ನು ಅವರ ಊರಿಗೆ ತಲುಪಿಸಲು ವ್ಯವಸ್ಥೆ ಮಾಡುವ ಮೂಲಕ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ದ.ಕ ಜಿಲ್ಲಾ ಸಮಿತಿ ಯವರು ಮಾನವೀಯತೆ ಮೆರೆದಿದ್ದಾರೆ.     ಹುಬ್ಬಳ್ಳಿ ಮೂಲದ ವಿಷ್ಣು ಎಂಬ ಯುವಕ ದೇರಳಕಟ್ಟೆ ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ಮೃತರು ಮೃತದೇಹವನ್ನು ಊರಿಗೆ ಸಾಗಿಸಲು ಹಣಕಾಸಿನ ಕೊರತೆ ಇದ್ದುದರಿಂದ ಈ ವಿಚಾರ ತಿಳಿದ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನ ಬಣ ದ.ಕ.

ಮಂಗಳೂರು: ದೇರಳಕಟ್ಟೆ ಆಸ್ಪತ್ರೆಯಿಂದ ಹುಬ್ಬಳ್ಳಿಗೆ ಮೃತದೇಹವನ್ನು ಸಾಗಿಸಲು ನೆರವಾದ ಕರ್ನಾಟಕ ರಕ್ಷಣಾ ವೇದಿಕೆ Read More »

ಕರಾವಳಿ
Scroll to Top