Kadaba News

ಕೋಡಿಂಬಾಳ: ಸ.ಉ.ಹಿ.ಪ್ರಾ ಶಾಲಾ ವಾರ್ಷಿಕೋತ್ಸವ  ► ಊರವರ ಸಹಕಾರವಿದ್ದಾಗ ಸರಕಾರಿ ಶಾಲೆಗಳ ಉಳಿವು ಸಾಧ್ಯ – ಪಿ.ಪಿ.ವರ್ಗೀಸ್

(ನ್ಯೂಸ್ ಕಡಬ) newskadaba.com ಕಡಬ,  ಡಿ.25.ಕೋಡಿಂಬಾಳ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ ಹಾಗೂ ಸನ್ಮಾನ ಕಾರ್ಯಕ್ರಮ ದ.22ರಂದು ಶಾಲಾ ಸಭಾಂಗಣದಲ್ಲಿ ನಡೆಯಿತು. ಜಿ.ಪಂ.ಸದಸ್ಯ ಪಿ.ಪಿ.ವರ್ಗೀಸ್ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ, ಪುಟಾಣಿಗಳಿಗೆ ಬಹುಮಾನ ವಿತರಿಸಿ ಮಾತನಾಡಿದ ಅವರು ಸರಕಾರ ಇಂದು ಶಿಕ್ಷಣಕ್ಕಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಜೊತೆಗೆ ಮಕ್ಕಳ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಿ ಅವರಿಗೆ ಬೇಕಾದ ಪೌಷ್ಠಿಕ ಆಹಾರ ವಿತರಿಸುತ್ತಿದೆ. ಇದು ಮಕ್ಕಳ ಕಲಿಕೆಗೆ ಸಹಕಾರಿಯಾಗಿದ್ದು, ಸರಕಾರ ಈ ರೀತಿಯಾಗಿ […]

ಕೋಡಿಂಬಾಳ: ಸ.ಉ.ಹಿ.ಪ್ರಾ ಶಾಲಾ ವಾರ್ಷಿಕೋತ್ಸವ  ► ಊರವರ ಸಹಕಾರವಿದ್ದಾಗ ಸರಕಾರಿ ಶಾಲೆಗಳ ಉಳಿವು ಸಾಧ್ಯ – ಪಿ.ಪಿ.ವರ್ಗೀಸ್ Read More »

ಕರಾವಳಿ

ಕಡಬ: ಕರ್ನಾಟಕ ದ.ಸಂ.ಸ. ವತಿಯಿಂದ ಅಂಬೇಡ್ಕರ್ ಪರಿನಿಬ್ಬಾನ ದಿನಾಚರಣೆ

(ನ್ಯೂಸ್ ಕಡಬ) newskadaba.com  ಡಿ.  25. ಕಡಬ. ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೋ. ಕೃಷ್ಣಪ್ಪ ಸ್ಥಾಪಿತ 47.74/75) ಕಡಬ ತಾಲ್ಲೂಕು ಶಾಖೆ ವತಿಯಿಂದ 62 ನೇ ವರ್ಷದ ಅಂಬೇಡ್ಕರ್ ಪರಿನಿಬ್ಬಾನದಿನಾಚರಣೆಯನ್ನು ಕಡಬದ ಅಂಬೇಡ್ಕರ್ ಭವನದಲ್ಲಿ ದ.16ರಂದು ಆಚರಿಸಲಾಯಿತು. ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ದಸಂಸ ಹಿರಿಯ ಮುಖಂಡ ಆನಂದ ಮಿತ್ತಬೈಲ್ ಬಾಬಾ ಸಾಹೇಬರು ತನ್ನ ಇಡೀ ಜೀವನವನ್ನೇ ನಮ್ಮ ಏಳಿಗೆಗಾಗಿ ಮುಡಿಪಿಟ್ಟ ಧೀಮಂತ ವಿಶ್ವ ನಾಯಕರಾಗಿದ್ದು, ತನ್ನ ಮಗನ ಶವಕ್ಕೆ ಹಾಕಲು ಬಟ್ಟೆ ಇಲ್ಲದಿದ್ದರೂ

ಕಡಬ: ಕರ್ನಾಟಕ ದ.ಸಂ.ಸ. ವತಿಯಿಂದ ಅಂಬೇಡ್ಕರ್ ಪರಿನಿಬ್ಬಾನ ದಿನಾಚರಣೆ Read More »

ಕರಾವಳಿ

ಕಡಬದಿಂದ ಶಬರಿಮಲೆಗೆ ಪಾದಯಾತ್ರೆ

(ನ್ಯೂಸ್ ಕಡಬ) newskadaba.com  ಡಿ.  25. ಕಡಬ. ಶ್ರೀ ಶಬರಿಮಲೆ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯಲು ಕಡಬದಿಂದ ನಾಲ್ವರು ಭಕ್ತರು ಪಾದಯಾತ್ರೆಯನ್ನು ಸೋಮವಾರದಿಂದ ಕೈಗೊಂಡಿದ್ದಾರೆ.ಕಡಬ ಶ್ರೀ ದುರ್ಗಾಂಬಿಕಾ ಭಜನಾ ಮಂಡಳಿಯ ಕಾರ್ಯದರ್ಶಿ ಮನೋಹರ್ ರೈ ಬೆದ್ರಾಜೆ, ಜತೆ ಕಾರ್ಯದರ್ಶಿ ದಿನೇಶ್ ಶೆಟ್ಟಿ ಕಳಾರ ಹಾಗೂ ಕಡಬ ಶ್ರೀ ದೇವಿ ಪ್ರೈಬ್ರೀಕೇಶನ್‍ನ ಸಹನ್ ಮತ್ತು ಇಚ್ಲಂಪಾಡಿಯ ವೇಣುಗೋಪಾಲ ರೈ ಪಾದಯಾತ್ರೆಯ ಮೂಲಕ ಶಬರಿಮಲೆಗೆ ಹೊರಟವರು. ಸೋಮವಾರ ಕಡಬ ಬೆದ್ರಾಜೆ ಮನೆಯಲ್ಲಿ ಗೋಳಿಯಡ್ಕ ಶ್ರೀ ರವೀಂದ್ರನ್ ಗುರುಸ್ವಾಮಿಯವರ ನೇತೃತ್ವದಲ್ಲಿ ಇರುಮುಡಿ ಕಟ್ಟಿ ಹೊರಟಿದ್ದಾರೆ, ಮನೋಹರ್

ಕಡಬದಿಂದ ಶಬರಿಮಲೆಗೆ ಪಾದಯಾತ್ರೆ Read More »

ಕರಾವಳಿ

ನಾಳೆ (ಡಿ .22) ಮಂಗಳೂರಿನಲ್ಲಿ ಬೃಹತ್ ಉದ್ಯೋಗ ಮೇಳ.

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ. 21.    ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಮಂಗಳೂರು ಇದರ ವತಿಯಿಂದ ಉದ್ಯೋಗ ಮೇಳ ಕಾರ್ಯಕ್ರಮವನ್ನು ಡಿಸೆಂಬರ್ 22 ರಂದು ಬೆಳಗ್ಗೆ 10 ಗಂಟೆಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಮಹಾನಗರಪಾಲಿಕೆ ಕಟ್ಟಡ, ಲಾಲ್‍ಭಾಗ್, ಮಂಗಳೂರು ಇಲ್ಲಿ ಹಮ್ಮಿಕೊಳ್ಳಲಾಗಿದೆ.   ಕಾರ್ಯಕ್ರಮದಲ್ಲಿ Mandovi Motors Pvt Ltd, Matrix Honda, Saggraha Management Pvt Ltd, Eurekha Forbes Ltd., BSL India Pvt Ltd, Arena. Animation ಕಂಪೆನಿಗಳು ಭಾಗವಹಿಸಲಿದ್ದು,

ನಾಳೆ (ಡಿ .22) ಮಂಗಳೂರಿನಲ್ಲಿ ಬೃಹತ್ ಉದ್ಯೋಗ ಮೇಳ. Read More »

ಕರಾವಳಿ

ಉಪ್ಪಿನಂಗಡಿ: ಬಾಲಕ ನಾಪತ್ತೆ ► ಅಪಹರಣ ಶಂಕೆ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.20. ಮಂಜನಾಡಿ ಅಲ್ ಮದೀನಾ ವಿದ್ಯಾರ್ಥಿನಿಲಯದಲ್ಲಿದ್ದ ಬಾಲಕ ನಾಪತ್ತೆಯಾಗಿರುವ ಬಗ್ಗೆ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಉಪ್ಪಿನಂಗಡಿ ಮೂಲದ ಜಾಫರ್ ಸಾಧೀಕ್ (15) ಎಂಬಾತನು ಡಿ. 5ರಂದು ಸ್ಥಳೀಯ ಮಸೀದಿಯಲ್ಲಿ ವಿದ್ಯಾರ್ಥಿಗಳು ಪ್ರಾರ್ಥನೆಯಲ್ಲಿದ್ದಾಗ ಹೊರಗಡೆ ಹೋದವನು ವಾಪಾಸು ಬಂದಿಲ್ಲ. ಬಾಲಕನು ಅಪ್ರಾಪ್ತ ವಯಸ್ಕನಾಗಿದ್ದು, ಯಾರೋ ಪುಸಲಾಯಿಸಿ ಅಪಹರಿಸಿರುವ ಬಗ್ಗೆ ದೂರು ನೀಡಲಾಗಿದೆ. ಅಪಹರಕ್ಕೊಳಗಾದ ಬಾಲಕನ ಚಹರೆ ಇಂತಿವೆ: ಪ್ರಾಯ-15 ವರ್ಷ, ಎತ್ತರ-152 ಸೆಂ.ಮೀ, ಮೈಬಣ್ಣ-ಗೋಧಿ ಮೈಬಣ್ಣ, ಮುಖ-ಕೋಲು ಮುಖ, ಬಲಕಾಲು ಊನ(ಅಂಗವಿಕಲ) ಸಾಧಾರಣ ಮೈಕಟ್ಟು

ಉಪ್ಪಿನಂಗಡಿ: ಬಾಲಕ ನಾಪತ್ತೆ ► ಅಪಹರಣ ಶಂಕೆ Read More »

ಕರಾವಳಿ

ಸ್ವಚ್ಛ ಭಾರತದ ಪರಿಕಲ್ಪನೆ ► ಕೃಷಿ ವಿಜ್ಞಾನ ಕೇಂದ್ರದಲ್ಲಿ ಸ್ವಚ್ಚತಾ ಪಖ್ವಾಡ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.20.  ಭಾರತೀಯ ಕೃಷಿ ಸಂಶೋಧನಾ ಪರಿಷತ್ತಿನ ನಿರ್ದೇಶನದ ಮೇರೆಗೆ ನಗರದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸ್ವಚ್ಚತಾ ಪಖ್ವಾಡ ಕಾರ್ಯಕ್ರಮವನ್ನು ಡಿಸೆಂಬರ್ 16 ರಂದು ಚಾಲನೆ ನೀಡಲಾಯಿತು. ಈ ಅಭಿಯಾನವು ಡಿಸೆಂಬರ್ 31 ರವರೆಗೆ ಹಮ್ಮಿಕೊಳ್ಳಲಾಗುವುದು. ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿರುವ ವಿಜ್ಞಾನಿಗಳು, ತಾಂತ್ರಿಕ ಮತ್ತು ಬೋಧಕೇತರ ಸಿಬಂದಿ ವರ್ಗದವರು ಸ್ವಚ್ಚತೆಯ ಪಖ್ವಾಡದ ಬಗ್ಗೆ ಪ್ರತಿಜ್ಞೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು. ಭಾರತ ಮಾತೆಗೆ ಸೇವೆ ಸಲ್ಲಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ ಮತ್ತು ಜವಾಬ್ದಾರಿ

ಸ್ವಚ್ಛ ಭಾರತದ ಪರಿಕಲ್ಪನೆ ► ಕೃಷಿ ವಿಜ್ಞಾನ ಕೇಂದ್ರದಲ್ಲಿ ಸ್ವಚ್ಚತಾ ಪಖ್ವಾಡ Read More »

ಕರಾವಳಿ

ತನ್ನ ಯಾತ್ರೆಯ ಮೂಲಕ ಕ್ರಿಸ್‍ಮಸ್ ಸಂದೇಶ ಸಾರುವ ಕೊಕ್ಕಡದ ವಿನ್ಸೆಂಟ್ ಮಿನೇಜಸ್ ► 19 ನೇ ವರ್ಷದ ಸಾಂತಾಕ್ಲಾಸ್ ಯಾತ್ರೆಗೆ ಚಾಲನೆ

(ನ್ಯೂಸ್ ಕಡಬ) newskadaba.com ನೆಲ್ಯಾಡಿ , ಡಿ.20 ಸಾಂತಕ್ಲಾಸ್ ಯಾತ್ರೆಯ ಖ್ಯಾತಿಯ ಕೊಕ್ಕಡದ ವಿನ್ಸೆಂಟ್ ಮಿನೇಜಸ್ ಅವರ 19 ನೇ ವರ್ಷದ ಸಾಂತಾಕ್ಲಾಸ್ ಯಾತ್ರೆಗೆ ಬುಧವಾರದಂದು ನೆಲ್ಯಾಡಿಯಲ್ಲಿ ಚಾಲನೆಯನ್ನು ನೀಡಲಾಯಿತು. ನೆಲ್ಯಾಡಿ ಗ್ರಾ.ಪಂ. ಅಧ್ಯಕ್ಷ ಗಂಗಾಧರ ಶೆಟ್ಟಿ ಹೊಸಮನೆ ಇವರು ಗ್ರಾ.ಪಂ. ಪರವಾಗಿ  ಶಾಲು ಹೊದೆಸಿ ಗೌರವಿಸಿ , ಇವರ 5 ದಿನದ ಸಾಂತಾಕ್ಲಾಸ್ ಯಾತ್ರೆಯನ್ನು ಉದ್ಘಾಟಿಸಿದರು. ಕೌಕ್ರಾಡಿ ಗ್ರಾ.ಪಂ. ಅಧ್ಯಕ್ಷ ಎಂ.ಕೆ. ಇಬ್ರಾಹಿಂ, ನೆಲ್ಯಾಡಿ ತಾ.ಪಂ. ಸದಸ್ಯೆ ಉಷಾ ಅಂಚನ್ , ನೆಲ್ಯಾಡಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ

ತನ್ನ ಯಾತ್ರೆಯ ಮೂಲಕ ಕ್ರಿಸ್‍ಮಸ್ ಸಂದೇಶ ಸಾರುವ ಕೊಕ್ಕಡದ ವಿನ್ಸೆಂಟ್ ಮಿನೇಜಸ್ ► 19 ನೇ ವರ್ಷದ ಸಾಂತಾಕ್ಲಾಸ್ ಯಾತ್ರೆಗೆ ಚಾಲನೆ Read More »

ಕರಾವಳಿ

ಇನ್ಮುಂದೆ ಸಹಕಾರ ಸಂಘ ಹಾಗೂ ಬ್ಯಾಂಕ್ ಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ..?

 (ನ್ಯೂಸ್ ಕಡಬ) newskadaba.com  ಬೆಂಗಳೂರು, ಡಿ. 19 . ಸಹಕಾರ ಸಂಘಗಳು ಮತ್ತು ಬ್ಯಾಂಕ್‌ಗಳಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ಇಲ್ಲದಿರುವ ಕಾರಣ ಸಹಕಾರ ಕಾನೂನಿಗೆ ತಿದ್ದುಪಡಿ ತಂದು ಸ್ಥಳೀಯ ಸಂಸ್ಥೆಗಳ ಮಾದರಿಯಲ್ಲಿಯೇ ಮೀಸಲಾತಿ ನೀಡಬೇಕು ಎಂದು ವಿಧಾನಮಂಡಲದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಯು ಶಿಫಾರಸ್ಸುಮಾಡಿದೆ. ಸಮಿತಿ ಅಧ್ಯಕ್ಷ ಎಚ್‌.ಕೆ.ಕುಮಾರಸ್ವಾಮಿ ಕೆಳಮನೆಯಲ್ಲಿ ವರದಿಯನ್ನು ಮಂಡಿಸಿದರು. ಸಹಕಾರ ಸಂಘಗಳು ಮತ್ತು ಬ್ಯಾಂಕ್‌ಗಳಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ನೀಡದಿರುವ ಕಾರಣ ಎಸ್‌ಸಿ/ಎಸ್‌ಟಿ ಜನಾಂಗದವರು ಅವಕಾಶ

ಇನ್ಮುಂದೆ ಸಹಕಾರ ಸಂಘ ಹಾಗೂ ಬ್ಯಾಂಕ್ ಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ..? Read More »

ಕರ್ನಾಟಕ

ಶಕ್ತಿ ಶಿಕ್ಷಣ ಸಂಸ್ಥೆಗಳ ಕ್ರೀಡಾಕೂಟ ► ಮಾನಸಿಕ ಹಾಗೂ ಶಾರೀರಿಕ ದೃಢತೆಗಾಗಿ ಆಟೋಟಗಳಲ್ಲಿ ನಿತ್ಯ ಪಾಲ್ಗೊಳ್ಳಿ – ದಿನೇಶ್ ಕುಂದರ್

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.18.ಒಂದು ಆರೋಗ್ಯಕರ ದೇಹದಲ್ಲಿ ಆರೋಗ್ಯಯುಕ್ತ ಮನಸ್ಸು ಅಡಗಿರುತ್ತದೆ ಎಂಬುದು ಸುಳ್ಳಲ್ಲ. ನೀವು ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕೆಂದಿದ್ದರೆ, ಸಾಧನೆಯ ಗುರಿಯನ್ನು ಯಶಸ್ವಿಯಾಗಿ ತಲುಪಬೇಕಾದರೆ ಓದಿನೊಂದಿಗೆ ದೈಹಿಕ ವ್ಯಾಯಾಮ ಅತ್ಯಗತ್ಯ. ಆಟ-ಪಾಠ ಎರಡೂ ವಿಷಯಗಳಿಗೆ ಸಮಾನ ಆದ್ಯತೆ ನೀಡಿ ನಿಮ್ಮ ಪರಿಪೂರ್ಣ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಿ ಎಂದು ನಾಡಿನ ಹೆಸರಾಂತ ಕ್ರೀಡಾ ತರಬೇತುದಾರ, ಕಸ್ಟಮ್ಸ್ ಇಲಾಖೆಯ ಅಧೀಕ್ಷಕ ದಿನೇಶ್ ಕುಂದರ್ ಶಕ್ತಿನಗರದ ಶಕ್ತಿ ಶಿಕ್ಷಣ ಸಂಸ್ಥೆಗಳ ಕ್ರೀಡಾಕೂಟವನ್ನು ಉದ್ಘಾಟಿಸಿ ಹೇಳಿದರು. ಕೆನರಾ ಪ್ರೌಢ ಶಾಲೆ

ಶಕ್ತಿ ಶಿಕ್ಷಣ ಸಂಸ್ಥೆಗಳ ಕ್ರೀಡಾಕೂಟ ► ಮಾನಸಿಕ ಹಾಗೂ ಶಾರೀರಿಕ ದೃಢತೆಗಾಗಿ ಆಟೋಟಗಳಲ್ಲಿ ನಿತ್ಯ ಪಾಲ್ಗೊಳ್ಳಿ – ದಿನೇಶ್ ಕುಂದರ್ Read More »

ಕರಾವಳಿ

ಮಂಗಳೂರಿನ ಮೀನುಗಾರಿಕಾ ಕಾಲೇಜಿನಲ್ಲಿ ‘ರೈತ-ವಿಜ್ಞಾನಿ’ ಸಂವಾದ ಸಮಾಲೋಚನೆ

 (ನ್ಯೂಸ್ ಕಡಬ) newskadaba.com ಮಂಗಳೂರು ಡಿ .18.ಸುವರ್ಣೋತ್ಸವದ ಅಂಗವಾಗಿ ಮಂಗಳೂರಿನ ಮೀನುಗಾರಿಕಾ ಕಾಲೇಜು ದ.ಕ. ಜಿಲ್ಲೆಯ ಕೃಷಿ ವಿಜ್ಞಾನ ಕೇಂದ್ರ, ಹೈದರಾಬಾದ್‍ನ ಕೇಂದ್ರೀಯ ಮೀನುಗಾರಿಕೆ ಅಭಿವೃದ್ದಿ ಮಂಡಳಿ ಮತ್ತು ಮೀನುಗಾರಿಕಾ ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘದ ಸಹಯೋಗದಿಂದ ಒಂದು ದಿನದ ‘ರೈತ-ವಿಜ್ಞಾನಿ’ ಸಂವಾದ ಕಾರ್ಯಕ್ರಮವನ್ನು ಕಾಲೇಜಿನ ಪ್ರೋ. ಎಚ್.ಪಿ.ಸಿ.ಶೆಟ್ಟಿ ಸಭಾಂಗಣದಲ್ಲಿ ನಡೆಸಲಾಯಿತು. ಮೀನುಗಾರಿಕಾ ಕಾಲೇಜಿನಲ್ಲಿ 50ನೇ ವರ್ಷದ ಸುವರ್ಣ ಮಹೋತ್ಸವದ ಅಂಗವಾಗಿ ನಡೆಸಲಾದ ಈ ‘ರೈತ-ವಿಜ್ಞಾನಿ’ ಸಂವಾದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಮೀನುಗಾರಿಕಾ ಕಾಲೇಜಿನ ಡೀನ್ ಡಾ.

ಮಂಗಳೂರಿನ ಮೀನುಗಾರಿಕಾ ಕಾಲೇಜಿನಲ್ಲಿ ‘ರೈತ-ವಿಜ್ಞಾನಿ’ ಸಂವಾದ ಸಮಾಲೋಚನೆ Read More »

ಕರಾವಳಿ
Scroll to Top