ಉಪ್ಪಿನಂಗಡಿ: ಬಾಲಕ ನಾಪತ್ತೆ ► ಅಪಹರಣ ಶಂಕೆ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.20. ಮಂಜನಾಡಿ ಅಲ್ ಮದೀನಾ ವಿದ್ಯಾರ್ಥಿನಿಲಯದಲ್ಲಿದ್ದ ಬಾಲಕ ನಾಪತ್ತೆಯಾಗಿರುವ ಬಗ್ಗೆ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಉಪ್ಪಿನಂಗಡಿ ಮೂಲದ ಜಾಫರ್ ಸಾಧೀಕ್ (15) ಎಂಬಾತನು ಡಿ. 5ರಂದು ಸ್ಥಳೀಯ ಮಸೀದಿಯಲ್ಲಿ ವಿದ್ಯಾರ್ಥಿಗಳು ಪ್ರಾರ್ಥನೆಯಲ್ಲಿದ್ದಾಗ ಹೊರಗಡೆ ಹೋದವನು ವಾಪಾಸು ಬಂದಿಲ್ಲ. ಬಾಲಕನು ಅಪ್ರಾಪ್ತ ವಯಸ್ಕನಾಗಿದ್ದು, ಯಾರೋ ಪುಸಲಾಯಿಸಿ ಅಪಹರಿಸಿರುವ ಬಗ್ಗೆ ದೂರು ನೀಡಲಾಗಿದೆ.

ಅಪಹರಕ್ಕೊಳಗಾದ ಬಾಲಕನ ಚಹರೆ ಇಂತಿವೆ: ಪ್ರಾಯ-15 ವರ್ಷ, ಎತ್ತರ-152 ಸೆಂ.ಮೀ, ಮೈಬಣ್ಣ-ಗೋಧಿ ಮೈಬಣ್ಣ, ಮುಖ-ಕೋಲು ಮುಖ, ಬಲಕಾಲು ಊನ(ಅಂಗವಿಕಲ) ಸಾಧಾರಣ ಮೈಕಟ್ಟು ಹೊಂದಿರುತ್ತಾನೆ. ಧರಿಸಿದ ಬಟ್ಟೆ-ನೀಲಿ ಬಣ್ಣದ ಶರ್ಟ್, ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ. ಭಾಷೆ-ಕನ್ನಡ, ಬ್ಯಾರಿ, ತುಳು, ಉರ್ದು ಮಾತನಾಡುತ್ತಾನೆ.  ಈ ಬಾಲಕನ ಬಗ್ಗೆ ಮಾಹಿತಿ ದೊರಕಿದಲ್ಲಿ ಠಾಣಾಧಿಕಾರಿ, ಕೊಣಾಜೆ ಪೊಲೀಸ್ ಠಾಣೆ  ದೂರವಾಣಿ ಸಂಖ್ಯೆ: 0824-2220536, 9480802350 ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.
Scroll to Top