Kadaba News

ಮಂಗಳೂರು ವಿಮಾನ ನಿಲ್ದಾಣದಲ್ಲಿ ಅಕ್ರಮ ಚಿನ್ನ ಸಾಗಾಟ ➤ ಓರ್ವನ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಅ. 09: ಅಂ.ರಾ.ವಿಮಾನ ನಿಲ್ದಾಣದಲ್ಲಿ 25,45,920 ರೂ. ಮೌಲ್ಯದ ಅಕ್ರಮ ಚಿನ್ನ ಸಾಗಾಟವನ್ನು ಕಸ್ಟಮ್ ಅಧಿಕಾರಿಗಳು ಪತ್ತೆ ಮಾಡಿ ಓರ್ವನನ್ನು ಬಂಧಿಸಿದ್ದಾರೆ.ಕಾಸರಗೋಡು ನಿವಾಸಿ ಸುಮೇಶ್ ಬಂಧಿತ ಆರೋಪಿ. ಈತ ಎಲೆಕ್ನಿಕ್ ಕುಕ್ಕರ್ ಒಳಗೆ ಚಿನ್ನ ಇಟ್ಟು ಸಾಗಾಟ ಮಾಡಿದ್ದು, ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.ಆರೋಪಿಯಿಂದಬರೋಬ್ಬರಿ 25,45,920 ರೂ. ಮೌಲ್ಯದ ಚಿನ್ನ ವಶಕ್ಕೆ ಪಡೆಯಲಾಗಿದೆ.    

ಮಂಗಳೂರು ವಿಮಾನ ನಿಲ್ದಾಣದಲ್ಲಿ ಅಕ್ರಮ ಚಿನ್ನ ಸಾಗಾಟ ➤ ಓರ್ವನ ಬಂಧನ Read More »

ಕರಾವಳಿ, ಕ್ರೈಮ್ ನ್ಯೂಸ್

ಬಡ್ಡಡ್ಕ: ರಸ್ತೆ ಬಿಟ್ಟು ಚರಂಡಿಗೆ ಇಳಿದ ಮಿನಿ ಟಾಟಾ ಏಸ್‌ ರಿಕ್ಷಾ

(ನ್ಯೂಸ್ ಕಡಬ) newskadaba.com ಬಡ್ಡಡ್ಕ, ಅ.09: ಬಡ್ಡಡ್ಕ ಶಾಲೆಯ ತಿರುವಿನಲ್ಲಿ ಪಾಣತ್ತೂರು ಕಡೆಯಿಂದ ಸುಳ್ಯ ಕಡೆಗೆ ಸಂಚರಿಸುತ್ತಿದ್ದ ಮಿನಿ ಟಾಟಾ ಏಸ್‌ ಗೂಡ್ಸ್‌ ರಿಕ್ಷಾವೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬಿಟ್ಟು ಚರಂಡಿಗೆ ಇಳಿದ ಘಟನೆ ಇಂದು ನಡೆದಿದೆ.   ವಾಹನದಲ್ಲಿ ಚಾಲಕ ಸೇರಿದಂತೆ ಇಬ್ಬರು ಮಹಿಳೆ ಮತ್ತು ಮಗು ಸಂಚರಿಸುತ್ತಿದ್ದು, ಅಲ್ಪ ಸ್ವಲ್ಪ ಗಾಯಗೊಂಡಿರುತ್ತದೆ. ಹಿಂದಿನಿಂದ ಕಾರಿನಲ್ಲಿ ಬರುತ್ತಿದ್ದವರು ಗಾಯಗೊಂಡವರನ್ನು ಸುಳ್ಯ ಅಸ್ಪತ್ರೆಗೆ ದಾಖಲಿಸಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.  

ಬಡ್ಡಡ್ಕ: ರಸ್ತೆ ಬಿಟ್ಟು ಚರಂಡಿಗೆ ಇಳಿದ ಮಿನಿ ಟಾಟಾ ಏಸ್‌ ರಿಕ್ಷಾ Read More »

ಕರಾವಳಿ, ಕ್ರೈಮ್ ನ್ಯೂಸ್

ಭಾರಿ ಮಳೆಗೆ ಕೊಲ್ಲಮೊಗ್ರದ ಕಡಂಬಳ ಸೇತುವೆ ಶಿಥಿಲ

(ನ್ಯೂಸ್ ಕಡಬ) newskadaba.com ಕೊಲ್ಲಮೊಗ್ರ, ಅ.09: ಕಳೆದ ದಿನ ಸುರಿದ ಸಿಡಿಲು ಮಿಂಚು ಭಾರಿ ಮಳೆಗೆ ಕೊಲ್ಲಮೊಗ್ರ ಗ್ರಾಮದ ಕಡಂಬಳ ಸೇತುವೆ ಬಿರುಕು ಬಿಟ್ಟಿದ್ದು ಸಂಪೂರ್ಣ ಶಿಥಿಲಗೊಂಡಿದೆ. ಭಾರಿ ಮಳೆ ಬಂದ ಕಾರಣ ಸೇತುವೆಯಲ್ಲಿ ಬಿರುಕು ಬಿಟ್ಟಿದ್ದು, ಸೇತುವೆಯ ಮಣ್ಣೆಲ್ಲಾ ಕೊರೆದು ಹೋಗಿದೆ. ಇಲ್ಲಿನ ಕಂಬಳ, ಪೆರ್ನಾಜೆ, ಕೊಂಬೆಟ್ಟುವಿನ ಸುಮಾರು 22 ಮನೆಯವರು ಇದರಿಂದಾಗಿ ತೊಂದರೆಗೆ ಒಳಗಾಗಿದ್ದಾರೆ. ಈ ಸೇತುವಿನಲ್ಲಿ ಕೇವಲ ದಿಚಕ್ರ ವಾಹನಗಳಷ್ಟೆ ಓಡಾಡಲು ಸಾಧ್ಯವಿರುವುದಾಗಿ ಈ ಭಾಗದ ಜನರು ತಿಳಿಸಿದ್ದಾರೆ.  

ಭಾರಿ ಮಳೆಗೆ ಕೊಲ್ಲಮೊಗ್ರದ ಕಡಂಬಳ ಸೇತುವೆ ಶಿಥಿಲ Read More »

ಕರಾವಳಿ

ಪುತ್ತೂರು : ಸ್ಕೂಟರ್‌ ಸ್ಕಿಡ್‌ ➤ ಸವಾರ ಸ್ಥಳದಲ್ಲೆ ಮೃತ್ಯು

(ನ್ಯೂಸ್ ಕಡಬ) newskadaba.com ಬನ್ನೂರು, ಅ.09: ನೆಕ್ಕಿಲ ನಿವಾಸಿ ಯುವಕರೊಬ್ಬರು ಬನ್ನೂರು ಶಾಲಾ ಬಳಿ ಸ್ಕೂಟರ್‌ವೊಂದು ಸ್ಕಿಡ್‌ ಆಗಿ ಸವಾರ ಮೃತಪಟ್ಟ ಘಟನೆ ಕಳೆದ ದಿನ ರಾತ್ರಿ ನಡೆದಿದೆ. ಮೃತರನ್ನು ಬನ್ನೂರು ನೆಕ್ಕಿಲ ನಿವಾಸಿ ಬೂಂದ್‌ ಕುಡಿಯುವ ನೀರಿನ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ನಿಶಾಂತ್(28‌ ವ.) ಎಂದು ಗುರುತಿಸಲಾಗಿದೆ. ಇವರು ರಾತ್ರಿ ವೇಳೆ ಟಿವಿಎಸ್‌ ಸ್ಕೂಟರ್‌ ನಲ್ಲಿ ಮನೆ ಕಡೆ ಬರುತ್ತಿದ್ದ ವೇಳೆ ಸ್ಕೂಟರ್‌ ಸ್ಕಿಡ್‌ ಆಗಿರಬಹುದು ಎಂದು ಹೇಳಲಾಗುತ್ತದೆ. ಅದೇ ದಾರಿಯಾಗಿ ತಡ ರಾತ್ರಿ ವ್ಯಕ್ತಿಯೊಬ್ಬರು

ಪುತ್ತೂರು : ಸ್ಕೂಟರ್‌ ಸ್ಕಿಡ್‌ ➤ ಸವಾರ ಸ್ಥಳದಲ್ಲೆ ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್

ವಿಟ್ಲ: ಒಂಟಿ ಮಹಿಳೆಯ ಮನೆಗೆ ನುಗ್ಗಿ ಮಹಿಳೆಗೆ ಹಲ್ಲೆ ನಡೆಸಿ ದರೋಡೆ

(ನ್ಯೂಸ್ ಕಡಬ) newskadaba.com ವಿಟ್ಲ, ಅ. 09. ಒಂಟಿ ಮಹಿಳೆಯಿರುವ ಮನೆಗೆ ನುಗ್ಗಿ ಮಹಿಳೆಗೆ ಹಲ್ಲೆ ನಡೆಸಿ, ಕೈಕಾಲು ಕಟ್ಟಿ ದರೋಡೆ ಮಾಡಿರುವ ಘಟನೆ ಮೇಗಿನಪೇಟೆ ಎಂಬಲ್ಲಿ ಇಂದು ಬೆಳಗ್ಗೆ ನಡೆದಿದೆ. ಮೇಗಿನಪೇಟೆ ನಿವಾಸಿಯಾದ ಲಲಿತಾ ಎಂಬವರು ಒಂಟಿ ಜೀವನ ನಡೆಸುತ್ತಿದ್ದು, ಇವರ ಮನೆಗೆ ನುಗ್ಗಿದ ಕಳ್ಳರು ಮಹಿಳೆಗೆ ಮಾರಣಾಂತಿಕ ಹಲ್ಲೆ ನಡೆಸಿ, ಬಾಯಿಗೆ ಬಟ್ಟೆ ತುರುಕಿ, ಕೈಕಾಲು ಕಟ್ಟಿ ಹಾಕಿದ್ದಾರೆ. ಬಳಿಕ ಮನೆಯೊಳಗೆ ಚಿನ್ನಕ್ಕಾಗಿ ಹುಡುಕಾಡಿ ಆಕೆಯ ಕುತ್ತಿಗೆಯಲ್ಲಿದ್ದ ಬೆಳ್ಳಿಯ ಸರ ಕಸಿದು, ಮನೆಯ ಮುಂಬಾಗಿಲಿಗೆ

ವಿಟ್ಲ: ಒಂಟಿ ಮಹಿಳೆಯ ಮನೆಗೆ ನುಗ್ಗಿ ಮಹಿಳೆಗೆ ಹಲ್ಲೆ ನಡೆಸಿ ದರೋಡೆ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

ರಾಜ್ಯದಲ್ಲಿ ಗುಟ್ಕಾ, ಪಾನ್ ಮಸಾಲಾ, ತಂಬಾಕು ಮಾರಾಟಕ್ಕೆ ಬ್ರೇಕ್ .?!

 (ನ್ಯೂಸ್ ಕಡಬ) newskadaba.com ಬೆಂಗಳೂರು, ಅ. 09: ಡ್ರಗ್ ಮಾಫಿಯಾದ ನಂಟನ್ನು ಬುಡಸಮೇತ ಕಿತ್ತು ಹಾಕಲು ರಾಜ್ಯ ಸರ್ಕಾರ ಭರ್ಜರಿಯಾಗಿಯೇ ಬೇಟೆಯಾಡ್ತಿದೆ. ಇದರ ಬೆನ್ನಲ್ಲೇ ತಂಬಾಕು, ಗುಟ್ಕಾವನ್ನ ಸಹ ಕಂಪ್ಲೀಟ್ ಆಗಿ ಬ್ಯಾನ್ ಮಾಡಲು ಸರ್ಕಾರ ಪಣತೊಟ್ಟಿದೆ.   ಈ ಸಂಬಂಧ ಸುಗ್ರಿವಾಜ್ಞೆ ಹೊರಡಿಸಲು ಮುಂದಾಗಿದೆ.ಇತ್ತೀಚೆಗ ಡ್ರಗ್ಸ್ ಜಾಲದ ನಂಟು ಅಷ್ಟರಮಟ್ಟಿಗೆ ಸದ್ದು ಮಾಡಿತ್ತು. ಡ್ರಗ್ಸ್ ಮಾಫಿಯಾವನ್ನ ಮಟ್ಟ ಹಾಕಲು ಸರ್ಕಾರ ಕೂಡ ಅಷ್ಟೇ ಸರ್ಕಸ್ ಮಾಡ್ತಿದೆ. ಇದೀಗ ಡ್ರಗ್ಸ್ ಜೊತೆಗೆ ಗುಟ್ಕಾ, ತಂಬಾಕವಿನ ಮಾರಾಟವನ್ನು ಬ್ಯಾನ್

ರಾಜ್ಯದಲ್ಲಿ ಗುಟ್ಕಾ, ಪಾನ್ ಮಸಾಲಾ, ತಂಬಾಕು ಮಾರಾಟಕ್ಕೆ ಬ್ರೇಕ್ .?! Read More »

ರಾಷ್ಟ್ರೀಯ ನ್ಯೂಸ್

ಬಾಂಬ್ ಪತ್ತೆದಳದ ಸಿಪಾಯಿ ‘ರ್‍ಯಾಂಬೊ’ ಇನ್ನಿಲ್ಲ! ➤ ಕರ್ತವ್ಯದಲ್ಲಿರುವಾಗಲೇ ಪ್ರಾಣಬಿಟ್ಟ ‘ರ‍್ಯಾಂಬೋ’

(ನ್ಯೂಸ್ ಕಡಬ) newskadaba.com ಮಡಿಕೇರಿ, ಅ. 09: ಕೊಡಗಿನ ಪೊಲೀಸ್ ಇಲಾಖೆಯಲ್ಲಿ ಬಾಂಬ್ ಪತ್ತೆದಳದಲ್ಲಿದ್ದ ರ‍್ಯಾಂಬೋ ಅನ್ನೋ ಸ್ಕ್ವಾಡ್ ಡಾಗ್ ಕರ್ತವ್ಯದಲ್ಲಿರುವಾಗಲೇ ಸಾವನ್ನಪ್ಪಿದೆ. ಹೀಗಾಗಿ ಮಡಿಕೇರಿಯ ಪೊಲೀಸ್ ಮೈದಾನದಲ್ಲಿ ಸರ್ಕಾರಿ ಗೌರವದೊಂದಿಗೆ ಅಂತ್ಯಸಂಸ್ಕಾರ ಮಾಡಲಾಗಿದೆ.ಪತ್ತೆದಳದಲ್ಲಿದ್ದ ರ‍್ಯಾಂಬೋ ಶ್ವಾನ ಆರು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿತ್ತು. 2013ರ ಅಕ್ಟೋಬರ್‌ನಲ್ಲಿ ಹುಟ್ಟಿದ ಶ್ವಾನವನ್ನು ನಾಲ್ಕು ತಿಂಗಳ ಮರಿ ಇರುವಾಗಲೇ ಪೊಲೀಸ್ ತರಬೇತಿಗೆ ಕರೆತರಲಾಗಿತ್ತು. ಈ ಶ್ವಾನ ಅಷ್ಟೇ ಶಿಸ್ತು ಮತ್ತು ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸುತ್ತಿತ್ತು. ಹೀಗಾಗಿಯೇ ಇದಕ್ಕೆ ರ‍್ಯಾಂಬೋ ಎಂಬ ಹೆಸರಿಡಲಾಗಿತ್ತು

ಬಾಂಬ್ ಪತ್ತೆದಳದ ಸಿಪಾಯಿ ‘ರ್‍ಯಾಂಬೊ’ ಇನ್ನಿಲ್ಲ! ➤ ಕರ್ತವ್ಯದಲ್ಲಿರುವಾಗಲೇ ಪ್ರಾಣಬಿಟ್ಟ ‘ರ‍್ಯಾಂಬೋ’ Read More »

ಕರ್ನಾಟಕ, ರಾಷ್ಟ್ರೀಯ ನ್ಯೂಸ್

ಕುಟುಂಬದಲ್ಲಿ ಒಬ್ಬರೇ ಇದ್ದು, ಕೊರೋನಾ ಬಂತೆಂದರೆ ಸಾಕು ಸರ್ಕಾರದಿಂದ ಉಚಿತ ಆಹಾರಧಾನ್ಯ ವಿತರಣೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಅ.08: ಮನೆಯಲ್ಲಿ ದುಡಿಯುವರು ಒಬ್ಬರೇ ಆಗಿದ್ದು, ಅವರಿಗೂ ಕೊರೊನಾ ಬಂದಿದ್ದರೆ, ಆ ಕುಟುಂಬಕ್ಕೆ ಸರ್ಕಾರದಿಂದಲೇ ಉಚಿತವಾಗಿ ಆಹಾರಧಾನ್ಯ ವಿತರಿಸಲುವ ಯೋಜನೆಯನ್ನು ರೂಪಿಸಲಾಗಿದೆ. ಒಂದು ವೇಳೆ ಮನೆಯಲ್ಲಿ ಏಕೈಕ ದುಡಿಮೆದಾರರಿಗೆ ಕೊರೊನಾ ಬಂದರೇ ಆ ಕುಟುಂಬದ ಮುಂದಿನ ಗತಿ ಏನು ಎಂಬುದಾಗಿ ಸಭೆಯಲ್ಲಿ ಚರ್ಚಿಸಲಾಯಿತು.     ಇದಕ್ಕೆ ಒಪ್ಪಿಗೆ ದೊರೆತಿದ್ದು, ಮುಖ್ಯಮಂತ್ರಿಗಳ ಅಂತಿಮ ಅನುಮತಿಗಾಗಿ ಕಾಯಲಾಗುತ್ತಿದೆ. ಸೋಂಕು ಹರಡದಂತೆ ತಡೆಗೆ ಹಾಗು ಬಡ ಕುಟುಂಬದಲ್ಲಿ ಆತ್ಮಸ್ಥರ್ಯ ಮೂಡಿಸುವಲ್ಲಿ ಈ ಕ್ರಮ ಅಗತ್ಯವಾಗಿದೆ

ಕುಟುಂಬದಲ್ಲಿ ಒಬ್ಬರೇ ಇದ್ದು, ಕೊರೋನಾ ಬಂತೆಂದರೆ ಸಾಕು ಸರ್ಕಾರದಿಂದ ಉಚಿತ ಆಹಾರಧಾನ್ಯ ವಿತರಣೆ Read More »

ಕರಾವಳಿ, ಕರ್ನಾಟಕ

ಸುಳ್ಯ: ಸಚಿನ್‌ ಪ್ರತಾಪ್‌ ರವರನ್ನು ಭಾರತದ ಕಬಡ್ಡಿ ತಂಡಕ್ಕೆ ಅವಕಾಶ ಕಲ್ಪಿಸುವಂತೆ ಮನವಿ

(ನ್ಯೂಸ್ ಕಡಬ) newskadaba.com ಸುಳ್ಯ, ಅ.08: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಐವರ್ನಾಡು ಗ್ರಾಮದ ಪಾಲೆಪ್ಪಾಡಿ ನಿವಾಸಿ, ಉಜಿರೆ ಎಸ್‌ಡಿಎಂ ಕಾಲೇಜಿನ ಹಳೆ ವಿದ್ಯಾರ್ಥಿ ಸಚಿನ್‌ ಪ್ರತಾಪ್‌ ರವರನ್ನು ಭಾರತದ ಕಬಡ್ಡಿ ತಂಡದ ಹಿರಿಯ ವಿಭಾಗದ ಸಂಭಾವ್ಯ ಆಟಗಾರರ ಪಟ್ಟಿಯಲ್ಲಿ ರಾಜ್ಯದ ಏಕೈಕ ಕಬಡ್ಡಿ ಆಟಗಾರನಾಗಿ ಆಯ್ಕೆಯಾಗಿ ಮೊದಲನೇ ಹಂತದ ಅನ್‌ ಲೈನ್‌ ತರಭೇತಿ ಶಿಬಿರದಿಂದ ಕೈಬಿಡಲಾಗಿತ್ತು.     ಸುಳ್ಯದ ಸಚಿನ್‌ ಪ್ರತಾಪ್‌ ರವರಿಗೆ ತಂಡದಲ್ಲಿ ಅವಕಾಶ ಕಲ್ಪಿಸಲು ದಿಲ್ಲಿ ರಾಷ್ಟ್ರೀಯ ಕಬಡ್ಡಿ ಅಸೋಸಿಯೇಶನ್‌

ಸುಳ್ಯ: ಸಚಿನ್‌ ಪ್ರತಾಪ್‌ ರವರನ್ನು ಭಾರತದ ಕಬಡ್ಡಿ ತಂಡಕ್ಕೆ ಅವಕಾಶ ಕಲ್ಪಿಸುವಂತೆ ಮನವಿ Read More »

ಕರಾವಳಿ

ಕಡಬ: ನಾಪತ್ತೆಯಾಗಿದ್ದ ಅವಿವಾಹಿತನ ಮೃತ ದೇಹ ಹೊಸ್ಮಠ ಹೊಳೆಯಲ್ಲಿ ಪತ್ತೆ

(ನ್ಯೂಸ್ ಕಡಬ) newskadaba.com ಕಡಬ, ಅ.08: ಕಳೆದ ಎರಡು ದಿನಗಳ ಹಿಂದೆ ಮನೆಯಿಂದ ನಾಪತ್ತೆಯಾಗಿದ್ದ ಯುವಕ ಹೊಸಮಠ ಹೊಳೆಯಲ್ಲಿ ಶವವಾಗಿ ಪತ್ತೆಯಾದ ಘಟನೆ ಇಂದು ನಡೆದಿದೆ. ಮೃತರನ್ನು ಕುಟ್ರುಪಾಡಿ ಗ್ರಾಮದ ಹೊಸಮಠ ಚೆವುಡೇಲು ನಿವಾಸಿ ಪೊಡಿಯ ಎಂಬವರ ಅವಿವಾಹಿತ ಪುತ್ರ ದಿನೇಶ್‌ (29 ವ.) ಎಂದು ಗುರುತಿಸಲಾಗಿದೆ.     ದಿನೇಶ್‌ ರವರ ಮೃತದೇಹವನ್ನು ವಿವಿಧ ಕಡೆಗಳಲ್ಲಿ ಹಡುಕಾಡಿದರೂ ಅವರ ಸುಳಿವು ಪತ್ತೆಯಾಗಿರಲಿಲ್ಲ. ಇದೀಗ ಹೊಸಮಠ ಹೊಳೆಯ ರಾಮಕಲ್ಲು ಎಂಬಲ್ಲಿ ಮೃತ ದೇಹವು ಕಂಡುಬಂದಿದೆ. ದಿನೇಶ್‌ ರವರು

ಕಡಬ: ನಾಪತ್ತೆಯಾಗಿದ್ದ ಅವಿವಾಹಿತನ ಮೃತ ದೇಹ ಹೊಸ್ಮಠ ಹೊಳೆಯಲ್ಲಿ ಪತ್ತೆ Read More »

ಕರಾವಳಿ
Scroll to Top