Highway

ಶವಯಾತ್ರೆಯಲ್ಲಿನ ಕಲ್ಲುತೂರಾಟ ಪೂರ್ವಯೋಜಿತ ಕೃತ್ಯವೇ…? ► ಸಂಶಯಕ್ಕೆ ಕಾರಣವಾದ ವೀಡಿಯೋ ಇದೀಗ ವೈರಲ್

(ನ್ಯೂಸ್ ಕಡಬ) newskadaba.com ಮಂಗಳೂರು, ಜು.08. ದುಷ್ಕರ್ಮಿಗಳಿಂದ ಕೊಲೆಯಾದ ಆರೆಸ್ಸೆಸ್ ಕಾರ್ಯಕರ್ತ ಶರತ್ ದೇವಾಡಿಗರ ಅಂತಿಮ ಯಾತ್ರೆಯಲ್ಲಿ ಭಾಗವಹಿಸಿದ್ದ ಕೆಲವು ಕಿಡಿಗೇಡಿಗಳು ರಸ್ತೆಬದಿಯಲ್ಲಿನ ಕೆಲವು ಕಲ್ಲುಗಳನ್ನು ತೆಗೆದು ಕಾರಿನೊಳಗೆ ಶೇಖರಿಸುತ್ತಿರುವುದನ್ನು ಯಾರೋ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದು, ಸಂಶಯಕ್ಕೆ ಕಾರಣವಾಗಿದೆ. ಶವಯಾತ್ರೆಯಲ್ಲಿ ಕೈಕಂಬ ಹಾಗೂ ಬಿ.ಸಿ.ರೋಡಲ್ಲಿ ನಡೆದ ಕಲ್ಲು ತೂರಾಟ ಘಟನೆಯು ಹಿಂದೂ ಪರ ಸಂಘಟನೆಯ ಕೆಲವು ಗೂಂಡಾ ಪ್ರವೃತ್ತಿಯ ಕಾರ್ಯಕರ್ತರ ಪೂರ್ವಯೋಜಿತ ಕೃತ್ಯವಾಗಿರಬಹುದು ಎಂದು ಜಿಲ್ಲೆಯ ಶಾಂತಿಪ್ರಿಯ ಜನರಾಡಿಕೊಳ್ಳುತ್ತಿದ್ದಾರೆ. ಅದಕ್ಕೆ ಇದೀಗ ವೈರಲ್ ಆಗಿರುವ […]

ಶವಯಾತ್ರೆಯಲ್ಲಿನ ಕಲ್ಲುತೂರಾಟ ಪೂರ್ವಯೋಜಿತ ಕೃತ್ಯವೇ…? ► ಸಂಶಯಕ್ಕೆ ಕಾರಣವಾದ ವೀಡಿಯೋ ಇದೀಗ ವೈರಲ್ Read More »

ಕರಾವಳಿ

ಕಲ್ಲಡ್ಕ: ಬೈಕ್ ಅಪಘಾತ ► ಸವಾರ ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ) newskadaba.com ಬಂಟ್ವಾಳ, ಜು.06. ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಕಲ್ಲಡ್ಕ ಸಮೀಪದ ಕೆ.ಸಿ.ರೋಡ್ ಎಂಬಲ್ಲಿ ಸ್ಕಾರ್ಪಿಯೋ ಕಾರೋದು ಬೈಕಿಗೆ ಢಿಕ್ಕಿ ಹೊಡೆದುದರ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಗುರುವಾರ ಬೆಳಿಗ್ಗೆ ನಡೆದಿದೆ. ಕೆಎ.19.ಇವಿ.497 ಸಂಖ್ಯೆಯ ಬಜಾಜ್ ಪಲ್ಸರ್ ಬೈಕ್ ಗೆ ಸ್ಕಾರ್ಪಿಯೋ ಕಾರೊಂದು ಢಿಕ್ಕಿ ಹೊಡೆದು ಪರಾರಿಯಾಗಿದ್ದು, ಬೈಕ್ ಸವಾರ ರಸ್ತೆಗೆಸೆಯಲ್ಪಟ್ಟಿದ್ದರಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತ ಬೈಕ್ ಸವಾರನನ್ನು ನಂದರಬೆಟ್ಟು ನಿವಾಸಿ ಉವೈಸ್ (21) ಎಂದು ಗುರುತಿಸಲಾಗಿದೆ. ಸ್ಥಳಕ್ಕೆ ಬಂಟ್ವಾಳ ಟ್ರಾಫಿಕ್

ಕಲ್ಲಡ್ಕ: ಬೈಕ್ ಅಪಘಾತ ► ಸವಾರ ಸ್ಥಳದಲ್ಲೇ ಮೃತ್ಯು Read More »

ಕರಾವಳಿ

ಅರಿಯಡ್ಕ: ಕಾರು – ಲಾರಿ ಮುಖಾಮುಖಿ ►ನಾಲ್ವರು ಗಂಭೀರ

(ನ್ಯೂಸ್ ಕಡಬ) newskadaba.com ಪುತ್ತೂರು, ಜು.5. ಲಾರಿ ಮತ್ತು ಕಾರು ಮಧ್ಯೆ ಢಿಕ್ಕಿ ಸಂಭವಿಸಿ, ವಿದೇಶ ಪ್ರಯಾಣಕ್ಕಾಗಿ ಬಜ್ಪೆ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ಇಬ್ಬರ ಸಹಿತ ನಾಲ್ವರು ಗಂಭೀರ ಗಾಯಗೊಂಡ ಘಟನೆ ಮಾಣಿ ಮೈಸೂರು ರಾಜ್ಯ ಹೆದ್ದಾರಿಯ ಕೌಡಿಚ್ಚಾರು ಎಂಬಲ್ಲಿ ಬುಧವಾರ ಸಂಜೆ ನಡೆದಿದೆ. ಗಂಭೀರ ಗಾಯಗೊಂಡಿರುವ ಗಾಯಾಳುಗಳನ್ನು ಕೊಡಗು ಜಿಲ್ಲೆಯ ನಾಪೊಕ್ಲು ನಿವಾಸಿಗಳಾದ ಖಾಸಿಂ (40), ಹಾರೀಸ್ (28) ಮತ್ತು ಅಶ್ಫಾಕ್ (40) ಮತ್ತು ಕಾರು ಚಾಲಕ ಅರ್ಷದ್ (27) ಎಂದು ಗುರುತಿಸಲಾಗಿದ್ದು, ಪುತ್ತೂರಿನ ಖಾಸಗಿ ಆಸ್ಪತ್ರೆಗೆ

ಅರಿಯಡ್ಕ: ಕಾರು – ಲಾರಿ ಮುಖಾಮುಖಿ ►ನಾಲ್ವರು ಗಂಭೀರ Read More »

ಕರ್ನಾಟಕ

ಕಾರು – ಬೈಕ್ ಡಿಕ್ಕಿ: ಸವಾರನಿಗೆ ಗಾಯ

(ನ್ಯೂಸ್ ಕಡಬ) newskadaba.com ಕಾರ್ಕಳ, ಜು.05. ಕಾರು ಹಾಗೂ ಬೈಕ್ ‌ಮಧ್ಯೆ ಢಿಕ್ಕಿ ಸಂಭವಿಸಿ ಬೈಕ್ ಸವಾರ ಗಾಯಗೊಂಡ ಘಟನೆ ತಾಲೂಕಿನ ಬೆಳ್ಮಣ್ ಎಂಬಲ್ಲಿ ಬುಧವಾರ ಸಂಜೆ ನಡೆದಿದೆ. ಗಾಯಗೊಂಡ ಬೈಕ್ ಸವಾರನನ್ನು ಉಚ್ಚಿಲ ನಿವಾಸಿ ಸುನೀಲ್ ಎಂದು ಗುರುತಿಸಲಾಗಿದ್ದು, ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರ್ಕಳ ಗ್ರಾಮಾಂತರ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ‌ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕಾರು – ಬೈಕ್ ಡಿಕ್ಕಿ: ಸವಾರನಿಗೆ ಗಾಯ Read More »

ಕರ್ನಾಟಕ

ಬಿಳಿನೆಲೆ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ

(ನ್ಯೂಸ್ ಕಡಬ) newskadaba.com ಕಡಬ, ಜು.01. ಸುಬ್ರಹ್ಮಣ್ಯ – ಧರ್ಮಸ್ಥಳ ರಾಜ್ಯ ಹೆದ್ದಾರಿಯ ಬಿಳಿನೆಲೆ ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಮಾರುತಿ 800 ಕಾರೊಂದು ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದುದರ ಪರಿಣಾಮ ವಿದ್ಯುತ್ ಕಂಬ ರಸ್ತೆಗೆ ಅಡ್ಡಲಾಗಿ ಮುರಿದು ಬಿದ್ದ ಘಟನೆ ಶನಿವಾರ ಬೆಳಿಗ್ಗೆ ನಡೆದಿದೆ. ಕಾರು ಢಿಕ್ಕಿ ಹೊಡೆದು ಚರಂಡಿಗೆ ಇಳಿದರೂ ಅದೃಷ್ಟವಶಾತ್ ಕಾರಿನಲ್ಲಿದ್ದ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.bi

ಬಿಳಿನೆಲೆ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ Read More »

ಕರಾವಳಿ

ಕಾರು ಬಸ್ಸು ಢಿಕ್ಕಿ: ಕಡಬದ ವ್ಯಕ್ತಿ ಗಂಭೀರ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಜೂ.30. ಇಲ್ಲಿಗೆ ಸಮೀಪದ ಕರಾಯದ ಕಲ್ಲೇರಿ ಎಂಬಲ್ಲಿ ಕಾರು ಹಾಗೂ ಸರಕಾರಿ ಬಸ್ ನಡುವೆ ನಡೆದ ಅಪಘಾತದಲ್ಲಿ ಕಾರು ಚಾಲಕ ಕಡಬದ ವ್ಯಕ್ತಿ ಓರ್ವರು ಗಂಭೀರ ಗಾಯಗೊಂಡ ಘಟನೆ ಶುಕ್ರವಾರ ಅಪರಾಹ್ನ ನಡೆದಿದೆ. ಗಾಯಾಳುವನ್ನು ಕಡಬದ ಕಳಾರ ನಿವಾಸಿ ಸಾಯಿಪ್ರಸಾದ್ ಪೈ ಎಂದು ಗುರುತಿಸಲಾಗಿದೆ. ಗಾಯಾಳುವನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.  

ಕಾರು ಬಸ್ಸು ಢಿಕ್ಕಿ: ಕಡಬದ ವ್ಯಕ್ತಿ ಗಂಭೀರ Read More »

ಕರಾವಳಿ

ಕಾರು-ಟ್ಯಾಂಕರ್ ಢಿಕ್ಕಿ: ನಾಲ್ವರು ಗಂಭೀರ

(ನ್ಯೂಸ್ ಕಡಬ) newskadaba.com ವಿಟ್ಲ, ಜೂ.25. ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮಾಣಿ ಸಮೀಪದ ಬುಡೋಳಿ ಎಂಬಲ್ಲಿ ಕಾರು ಹಾಗೂ ಟ್ಯಾಂಕರ್ ಢಿಕ್ಕಿಯಾಗಿ ಕಾರಿನಲ್ಲಿದ್ದ ನಾಲ್ವರು ಗಂಭೀರ ಗಾಯಗೊಂಡ ಘಟನೆ ಭಾನುವಾರ ಬೆಳಿಗ್ಗೆ ನಡೆದಿದೆ. ಉಪ್ಪಿನಂಗಡಿಯಿಂದ ಮಂಗಳೂರಿಗೆ ತೆರಳುತ್ತಿದ್ದ ಕಾರು ಮತ್ತು ಬೆಂಗಳೂರು ಕಡೆಗೆ ತೆರಳುತ್ತಿದ್ದ ಟ್ಯಾಂಕರ್ ನಡುವೆ ಮುಖಾಮುಖಿಯಾಗಿ ಈ ಅವಘಡ ಸಂಭವಿಸಿದೆ. ಗಾಯಾಳುಗಳನ್ನು ಬೆಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾರು-ಟ್ಯಾಂಕರ್ ಢಿಕ್ಕಿ: ನಾಲ್ವರು ಗಂಭೀರ Read More »

ಕರಾವಳಿ

ಲಾರಿ-ಬೈಕ್ ಢಿಕ್ಕಿ: ಯುವಕ ಮೃತ್ಯು

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಜೂ.13. ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಪೆರ್ನೆ ಕಡಂಬು ಎಂಬಲ್ಲಿ ಲಾರಿ ಹಾಗೂ ಬೈಕ್ ಮಧ್ಯೆ ಢಿಕ್ಕಿ ಸಂಭವಿಸಿ ಬೈಕ್ ಸವಾರ ಮೃತಪಟ್ಟ ಘಟನೆ ಮಂಗಳವಾರ ಬೆಳಿಗ್ಗೆ ನಡೆದಿದೆ. ಮೃತ ಸವಾರನನ್ನು ಕಡೇಶಿವಾಲಯ ನಿವಾಸಿ ಕಾಂತಪ್ಪ ಪೂಜಾರಿ ಎಂಬವರ ಪುತ್ರ ಗುರುಪ್ರಸಾದ್ ಎಂದ್ ಗುರುತಿಸಲಾಗಿದೆ. ಉಪ್ಪಿನಂಗಡಿಯಿಂದ ಮಂಗಳೂರಿಗೆ ತೆರಳುತ್ತಿದ್ದ ಲಾರಿ ಹಾಗೂ ಕಡೇಶಿವಾಲಯದಿಂದ ಉಪ್ಪಿನಂಗಡಿಗೆ ಬರುತ್ತಿದ್ದ ಬೈಕ್ ಮಧ್ಯೆ ಢಿಕ್ಕಿ ಸಂಭವಿಸಿ ಈ ದುರ್ಘಟನೆ ನಡೆದಿದೆ. ಪುತ್ತೂರು ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಲಾರಿ-ಬೈಕ್ ಢಿಕ್ಕಿ: ಯುವಕ ಮೃತ್ಯು Read More »

ಕರಾವಳಿ

ಬಸ್ – ಲಾರಿ ಡಿಕ್ಕಿ: 7 ಜನ ಗಂಭೀರ

(ನ್ಯೂಸ್ ಕಡಬ) newskadaba.com ಭಟ್ಕಳ, ಜೂ.07. ಖಾಸಗಿ ಬಸ್ ಹಾಗೂ ಲಾರಿ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ 7 ಜನರು ಗಂಭೀರವಾಗಿ ಗಾಯಗೊಂಡ ಘಟನೆ ಭಟ್ಕಳ ತಾಲೂಕಿನ ಬೆಳಕೆ ಬಳಿ ನಡೆದಿದೆ. ವಿ.ಆರ್.ಎಲ್. ಬಸ್ ಸಂಸ್ಥೆಗೆ ಸೇರಿದ ವೋಲ್ವೊ ಬಸ್ ಇದಾಗಿದ್ದು, ಬೆಳಗಾವಿಯಿಂದ ಮಂಗಳೂರಿನತ್ತ ತೆರಳುತ್ತಿತ್ತು ಎನ್ನಲಾಗಿದೆ. ಅಪಘಾತದಲ್ಲಿ ಹಲವರಿಗೆ ಗಾಯಗಳಾಗಿದ್ದು, ಬಸ್ ಚಾಲಕ ಸೇರಿದಂತೆ 7 ಜನರ ಸ್ಥಿತಿ ಗಂಭೀರವಾಗಿದ್ದು, ಗಾಯಾಳುಗಳನ್ನು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಸ್ – ಲಾರಿ ಡಿಕ್ಕಿ: 7 ಜನ ಗಂಭೀರ Read More »

ಕರ್ನಾಟಕ
Scroll to Top