Highway

ಅಪಘಾತವನ್ನು ಆಹ್ವಾನಿಸುತ್ತಿರುವ ರಾಷ್ಟ್ರೀಯ ಹೆದ್ದಾರಿಯ ಹೊಂಡಗಳು ► ಪಾದಚಾರಿಗಳ, ವಾಹನ ಚಾಲಕರ ಸಮಸ್ಯೆಯನ್ನು ಕೇಳುವವರು ಯಾರು..?

(ನ್ಯೂಸ್ ಕಡಬ) newskadaba.com ಮಾಣಿ, ಆ.31. ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮಾಣಿಯಿಂದ ಕಲ್ಲಡ್ಕವರೆಗಿನ ಹಳೀರ, ಸೂರಿಕುಮೇರು, ಕುದ್ರೆಬೆಟ್ಟು ಎಂಬಲ್ಲಿ ಅಪಾಯಕಾರಿ ಹೊಂಡಗಳು ತಲೆ ಎತ್ತಿದ್ದು ಹಲವಾರು ಅಪಘಾತಗಳಿಗೆ ಕಾರಣವಾಗುತ್ತಿದೆ. ಮಳೆಗಾಲದಲ್ಲಿ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೆ ಮಳೆಯ ನೀರೆಲ್ಲಾ ರಸ್ತೆಗಳಲ್ಲೇ ಹೋಗುತ್ತಿರುವುದರಿಂದ ವಾಹನ ಚಾಲಕರಿಗೆ ರಸ್ತೆಯು ಸರಿಯಾಗಿ ಗೋಚರಿಸದೆ ಇಂತಹಾ ಹೊಂಡಗಳಿಗೆ ಬಿದ್ದು ಹಾಗೂ ಕೆಲವೊಂದು ಹೊಂಡಗಳು ಹತ್ತಿರ ತಲುಪಿದ ನಂತರ ಗೋಚರಿಸುವುದರಿಂದ ಕೂಡಲೇ ಬ್ರೇಕ್ ಹಾಕಿದಾಗ ಹಿಂದಿನಿಂದ ಬರುವ ವಾಹನಗಳು ಡಿಕ್ಕಿಯಾಗಿ ಹಲವಾರು […]

ಅಪಘಾತವನ್ನು ಆಹ್ವಾನಿಸುತ್ತಿರುವ ರಾಷ್ಟ್ರೀಯ ಹೆದ್ದಾರಿಯ ಹೊಂಡಗಳು ► ಪಾದಚಾರಿಗಳ, ವಾಹನ ಚಾಲಕರ ಸಮಸ್ಯೆಯನ್ನು ಕೇಳುವವರು ಯಾರು..? Read More »

ಕರಾವಳಿ

ಮುಳುಗಡೆಯಾದ ನೆಟ್ಟಣ ಕಿರು ಸೇತುವೆ ► ಧರ್ಮಸ್ಥಳ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ ಬಂದ್

(ನ್ಯೂಸ್ ಕಡಬ), newskadaba.com ಕಡಬ, ಆ.28. ಧರ್ಮಸ್ಥಳ – ಸುಬ್ರಹ್ಮಣ್ಯ ದೇವಸ್ಥಾನವನ್ನು ಸಂಪರ್ಕಿಸುವ ರಾಜ್ಯ ಹೆದ್ದಾರಿಯ ನೆಟ್ಟಣ ಎಂಬಲ್ಲಿನ ಕಿರು ಸೇತುವೆಯು ಜಲಾವೃತಗೊಂಡಿದ್ದು, ರಸ್ತೆ ತಡೆ ಉಂಟಾಗಿದೆ. ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ತಗ್ಗು ಪ್ರದೇಶಗಳು ಜಲಾವೃತವಾಗಿದ್ದು, ಸೇತುವೆಯ ಮೇಲಿನಿಂದ ನೀರು ಹರಿಯುತ್ತಿದೆ. ಇದರಿಂದಾಗಿ ಧರ್ಮಸ್ಥಳ, ಸುಬ್ರಹ್ಮಣ್ಯ ದೇವಸ್ಥಾನಗಳನ್ನು ಹಾಗೂ ಉಪ್ಪಿನಂಗಡಿ, ಮಂಗಳೂರು ಪ್ರಯಾಣಿಸುವ ಪ್ರಯಾಣಿಕರು ಸಂಕಷ್ಟಕ್ಕೊಳಗಾಗಿದ್ದು, ನೀರು ಕಡಿಮೆಯಾಗುವವರೆಗೆ ಕಾಯಬೇಕಾಗಿದೆ.

ಮುಳುಗಡೆಯಾದ ನೆಟ್ಟಣ ಕಿರು ಸೇತುವೆ ► ಧರ್ಮಸ್ಥಳ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ ಬಂದ್ Read More »

ಕರಾವಳಿ

ಗಡಿಯಾರ: ಹೋಂಡಾ ಆಕ್ಟಿವಾ – ಬ್ರೆಝಾ ಕಾರು ಢಿಕ್ಕಿ ► ಇಬ್ಬರು ಗಂಭೀರ

(ನ್ಯೂಸ್ ಕಡಬ) newskadaba.com ಮಾಣಿ, ಆ‌.27. ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಗಡಿಯಾರ ಎಂಬಲ್ಲಿ ಮಾರುತಿ ಬ್ರೆಝಾ ಕಾರು ಮತ್ತು ಆಕ್ಟಿವಾ ನಡುವೆ ಢಿಕ್ಕಿ ಸಂಭವಿಸಿ ಸವಾರರಿಬ್ಬರು ಗಾಯಗೊಂಡ ಘಟನೆ ಭಾನುವಾರ ಸಂಜೆ ನಡೆದಿದೆ. ಗಾಯಗೊಂಡ ಆಕ್ಟಿವಾ ಸವಾರರನ್ನು ಗಡಿಯಾರದ ನಿವಾಸಿಗಳಾದ ಮೋನು ಕರಾಯ ಮತ್ತು ಅವರ ಪುತ್ರಿ ಗಾಯಗೊಂಡಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೋನುರವರು ತನ್ನ ಮಗಳೊಂದಿಗೆ ಮನೆ ಕಡೆಗೆ ತೆರಳುತ್ತಿದ್ದಾಗ ಘಟನೆ ಸಂಭವಿಸಿದೆ ಎನ್ನಲಾಗಿದೆ.

ಗಡಿಯಾರ: ಹೋಂಡಾ ಆಕ್ಟಿವಾ – ಬ್ರೆಝಾ ಕಾರು ಢಿಕ್ಕಿ ► ಇಬ್ಬರು ಗಂಭೀರ Read More »

ಕರಾವಳಿ

ಪಡುಬಿದ್ರೆ: ನಿಂತಿದ್ದ ಲಾರಿಗೆ ಟೆಂಪೊ ಢಿಕ್ಕಿ ► ಓರ್ವ ಮೃತ್ಯು, ಮೂವರು ಗಂಭೀರ

(ನ್ಯೂಸ್ ಕಡಬ) newskadaba.com ಪಡುಬಿದ್ರೆ, ಆ.19. ಠಾಣಾ ವ್ಯಾಪ್ತಿಯ ಎರ್ಮಾಳು ರಾಷ್ಟ್ರೀಯ ಹೆದ್ದಾರಿಯ ಸಮೀಪದ ಪೆಟ್ರೋಲ್ ಬಂಕ್ ಬಳಿ ನಿಲ್ಲಿಸಿದ್ದ ಲಾರಿಗೆ ಮೀನು ಸಾಗಾಟದ ಟೆಂಪೊ ಹಿಂದಿನಿಂದ ಢಿಕ್ಕಿ ಹೊಡೆದ ಪರಿಣಾಮ ಲಾರಿ ಚಾಲಕ ಮೃತಪಟ್ಟು, ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಶನಿವಾರ ರಾತ್ರಿ ನಡೆದಿದೆ‌. ಮಂಗಳೂರಿನಿಂದ ಉಡುಪಿ ಕಡೆಗೆ ಮೀನು ಸಾಗಿಸುತ್ತಿದ್ದ ಈಚರ್ ಟೆಂಪೊ ಲಾರಿಗೆ ಢಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿದ್ದ ಇನ್ನೊಂದು ಲಾರಿಯ ಚಾಲಕ ಮೃತಪಟ್ಟಿದ್ದು, ಟೆಂಪೊ ಚಾಲಕ ಸೇರಿ ಮೂವರು ಗಂಭೀರ ಗಾಯಗೊಂಡಿದ್ದಾರೆ.

ಪಡುಬಿದ್ರೆ: ನಿಂತಿದ್ದ ಲಾರಿಗೆ ಟೆಂಪೊ ಢಿಕ್ಕಿ ► ಓರ್ವ ಮೃತ್ಯು, ಮೂವರು ಗಂಭೀರ Read More »

ಕರ್ನಾಟಕ

ಸಾಗರ: ಖಾಸಗಿ ಬಸ್ – ಆಟೋ ರಿಕ್ಷಾ ಢಿಕ್ಕಿ ► ಐವರು ಮೃತ್ಯು, ಓರ್ವ ಗಂಭೀರ

(ನ್ಯೂಸ್ ಕಡಬ) newskadaba.com ಶಿವಮೊಗ್ಗ, ಆ.05. ಖಾಸಗಿ ಬಸ್ ಹಾಗೂ ಆಟೊ ನಡುವೆ ಢಿಕ್ಕಿ ಸಂಭವಿಸಿ ಆಟೊದಲ್ಲಿದ್ದ ಐದು ಮಂದಿ ಪ್ರಯಾಣಿಕರು ಸ್ಥಳದಲ್ಲಿಯೇ ಮೃತಪಟ್ಟು, ಓರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 206ರ ಸಾಗರ ತಾಲೂಕಿನ ಆನಂದಪುರ ಸಮೀಪದ ಆಚಾಪುರ ಎಂಬಲ್ಲಿ ಶನಿವಾರದಂದು ನಡೆದಿದೆ. ಮೃತಪಟ್ಟವರು ಆಟೊದಲ್ಲಿದ್ದ ತುಮಕೂರು ಜಿಲ್ಲೆ ಶಿರಾ ತಾಲೂಕಿನ ಭುವನಹಳ್ಳಿ ತಾವರೆಕೆರೆ ನಿವಾಸಿ ತಿಪ್ಪೇಸ್ವಾಮಿ, ಕುಮಾರ, ರಾಮು, ಪುಟ್ಟರಾಜು ಹಾಗೂ ಶಿವು ಎಂದು ಗುರುತಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಇನ್ನೋರ್ವನ ಸ್ಥಿತಿ ಚಿಂತಾಜನಕವಾಗಿದ್ದು, ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರು

ಸಾಗರ: ಖಾಸಗಿ ಬಸ್ – ಆಟೋ ರಿಕ್ಷಾ ಢಿಕ್ಕಿ ► ಐವರು ಮೃತ್ಯು, ಓರ್ವ ಗಂಭೀರ Read More »

ಕರ್ನಾಟಕ

ಕೋಡಂದೂರು: ಬೈಕ್ – ಕಾರು ಢಿಕ್ಕಿ ► ಸವಾರರಿಬ್ಬರಿಗೆ ಗಾಯ

(ನ್ಯೂಸ್ ಕಡಬ) newskadaba.com ಕಡಬ, ಆ.04. ಸುಬ್ರಹ್ಮಣ್ಯ – ಧರ್ಮಸ್ಥಳ ರಾಜ್ಯ ಹೆದ್ದಾರಿಯ ಕೋಡಂದೂರು ಎಂಬಲ್ಲಿ ಸ್ವಿಫ್ಟ್ ಕಾರು ಹಾಗೂ ಬೈಕ್ ನಡುವೆ ಢಿಕ್ಕಿ ಸಂಭವಿಸಿ ಸವಾರರಿಬ್ಬರು ಗಾಯಗೊಂಡ ಘಟನೆ ಶುಕ್ರವಾರದಂದು ನಡೆದಿದೆ. ಗಾಯಾಳುಗಳನ್ನು ಸ್ಥಳೀಯ ನಿವಾಸಿಗಳಾದ ಸತೀಶ್ ಹಾಗೂ ಗಫೂರ್ ಎಂದು ಗುರುತಿಸಲಾಗಿದ್ದು, ಕಡಬ ಸಮುದಾಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಕಡಬ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕೋಡಂದೂರು: ಬೈಕ್ – ಕಾರು ಢಿಕ್ಕಿ ► ಸವಾರರಿಬ್ಬರಿಗೆ ಗಾಯ Read More »

ಕರಾವಳಿ

ಮಾಣಿ: ಕಾರು – ಬೈಕ್ ಢಿಕ್ಕಿ ► ಬೈಕ್ ಸವಾರರಿಬ್ಬರು ಗಂಭೀರ

(ನ್ಯೂಸ್ ಕಡಬ) newskadaba.com ವಿಟ್ಲ, ಜು.30. ಠಾಣಾ ವ್ಯಾಪ್ತಿಯ ಮಾಣಿ ಶಾಲಾ ಬಳಿ ಕಾರು ಮತ್ತು ಬೈಕ್ ಮಧ್ಯೆ ಢಿಕ್ಕಿ ಸಂಭವಿಸಿ ಬೈಕ್ ಸವಾರರಿಬ್ಬರು ಗಂಭೀರ ಗಾಯಗೊಂಡ ಘಟನೆ ಭಾನುವಾರ ಅಪರಾಹ್ನ ನಡೆದಿದೆ. ಮಾಣಿಯಿಂದ ಉಪ್ಪಿನಂಗಡಿ ಕಡೆಗೆ ತೆರಳುತ್ತಿದ್ದ ಬೈಕಿಗೆ ಎದುರಿನಿಂದ ಬಂದ ಕೇರಳ ನೋದಣಿಯ ಕಾರು ಡಿಕ್ಕಿ ಹೊಡೆದುದರ ಪರಿಣಾಮ ಬೈಕ್ ಸವಾರ ಬೆಳ್ತಂಗಡಿ ತಾಲೂಕಿನ ಕರಾಯ ಬದಿಯಾರು ನಿವಾಸಿ ಜಾಫರ್ ಶರೀಫ್ ಹಾಗೂ ಸಹ ಸವಾರ ಕಕ್ಕೆಪದವು ನಿವಾಸಿ ಮಹಮ್ಮದ್ ಇರ್ಷಾದ್ ಗಂಭೀರ ಗಾಯಗೊಂಡಿದ್ದು, ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಾಣಿ: ಕಾರು – ಬೈಕ್ ಢಿಕ್ಕಿ ► ಬೈಕ್ ಸವಾರರಿಬ್ಬರು ಗಂಭೀರ Read More »

ಕರಾವಳಿ

ಬೈಕ್ – ಬಸ್ ಢಿಕ್ಕಿ: ರಸ್ತೆಗೆಸೆಯಲ್ಪಟ್ಟ ಸವಾರ ಮೃತ್ಯು ► ಅಪಘಾತದ ತೀವ್ರತೆಗೆ ಬಸ್ಸಿನೊಳಗೆ ಸಿಲುಕಿಕೊಂಡ ಬೈಕ್

(ನ್ಯೂಸ್ ಕಡಬ) newskadaba.com ಪಡುಬಿದ್ರೆ, ಜು. 29. ಬೈಕೊಂದು ಬಸ್ಸಿಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ರಸ್ತೆಗೆಸೆಯಲ್ಪಟ್ಟು ಮೃತಪಟ್ಟ ಘಟನೆ ಶನಿವಾರದಂದು ಮಂಗಳೂರು – ಕುಂದಾಪುರ ಹೆದ್ದಾರಿಯ ಪಡುಬಿದ್ರೆ ಸಮೀಪದ ಬೀಡು ಎಂಬಲ್ಲಿ ನಡೆದಿದೆ. ಮೃತ ಬೈಕ್  ಸವಾರನನ್ನು ಮುಲ್ಕಿಯ ಕಿಲ್ಪಾಡಿ ನಿವಾಸಿ ಅವಿನಾಶ್ ದೇವಾಡಿಗ (28) ಎಂದು ಗುರುತಿಸಲಾಗಿದೆ. ಅವಿನಾಶ್ ಚಲಾಯಿಸುತ್ತಿದ್ದ ಯಮಹಾ FZ ಬೈಕ್ ಖಾಸಗಿ ಬಸ್‍ಗೆ ಢಿಕ್ಕಿ ಹೊಡೆದ ತೀವ್ರತೆಗೆ ಬಸ್ಸಿನ ಮುಂಭಾಗ ಜಖಂಗೊಂಡಿದ್ದು, ಬೈಕ್ ಬಸ್ಸಿನ ಒಳಗಡೆ ಸಿಲುಕಿಕೊಂಡಿದೆ. ಸವಾರನ ನಿಯಂತ್ರಣ

ಬೈಕ್ – ಬಸ್ ಢಿಕ್ಕಿ: ರಸ್ತೆಗೆಸೆಯಲ್ಪಟ್ಟ ಸವಾರ ಮೃತ್ಯು ► ಅಪಘಾತದ ತೀವ್ರತೆಗೆ ಬಸ್ಸಿನೊಳಗೆ ಸಿಲುಕಿಕೊಂಡ ಬೈಕ್ Read More »

ಕರ್ನಾಟಕ

ನೆಲ್ಯಾಡಿಯಲ್ಲಿ ಬೈಕ್ ಅಪಘಾತ ► ಮರ್ಧಾಳದ ಯುವಕನಿಗೆ ಗಂಭೀರ ಗಾಯ

(ನ್ಯೂಸ್ ಕಡಬ) newskadaba.com ನೆಲ್ಯಾಡಿ, ಜು.16. ಠಾಣಾ ವ್ಯಾಪ್ತಿಯ ಮಣ್ಣಗುಂಡಿ ಎಂಬಲ್ಲಿ ಬೈಕೊಂದು ಸ್ಕಿಡ್ ಆದ ಪರಿಣಾಮ ಬೈಕ್ ಸವಾರ ಮರ್ಧಾಳದ ಯುವಕನೋರ್ವ ಗಂಭೀರ ಗಾಯಗೊಂಡ ಘಟನೆ ಭಾನುವಾರ ರಾತ್ರಿ ನಡೆದಿದೆ. ಗಾಯಾಳು ಯುವಕನನ್ನು ಮರ್ಧಾಳ ಸಮೀಪದ ಬೆತ್ತೋಡಿ ನಿವಾಸಿ ಮಧುಸೂದನ ಎಂಬವರ ಪುತ್ರ ನಿಶಾಂತ್(28) ಎಂದು ಗುರುತಿಸಲಾಗಿದೆ. ನಿಶಾಂತ್ ಮೂಡಬಿದಿರೆಯಿಂದ ನೆಲ್ಯಾಡಿ ಮೂಲಕ ಮರ್ಧಾಳಕ್ಕೆ ಬೈಕಿನಲ್ಲಿ ಬರುತ್ತಿದ್ದಾಗ ಬೈಕ್ ಸ್ಕಿಡ್ ಆಗಿ ಬಿದ್ದ ಪರಿಣಾಮ ತಲೆಗೆ ಗಾಯಗಳಾಗಿದ್ದು, ನೆಲ್ಯಾಡಿ ಅಶ್ವಿನಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ

ನೆಲ್ಯಾಡಿಯಲ್ಲಿ ಬೈಕ್ ಅಪಘಾತ ► ಮರ್ಧಾಳದ ಯುವಕನಿಗೆ ಗಂಭೀರ ಗಾಯ Read More »

ಕರಾವಳಿ

ಅಪಘಾತದ ಗಾಯಾಳು ಮುಸಲ್ಮಾನರನ್ನು ಆಸ್ಪತ್ರೆಗೆ ದಾಖಲಿಸಿದ ಹಿಂಜಾವೇ ಅಧ್ಯಕ್ಷ ► ಕರಾವಳಿಯ ಕೋಮು ಸಂಘರ್ಷದ ಮಧ್ಯೆಯೂ ಮಾನವೀಯತೆ ಜೀವಂತ

(ನ್ಯೂಸ್ ಕಡಬ) newskadaba.com ಮಂಗಳೂರು, ಜು.10. ಕರಾವಳಿಯು ಕಳೆದ ಒಂದು ತಿಂಗಳಿನಿಂದ ಕೋಮು ದಳ್ಳುರಿಯಿಂದ ಹೊತ್ತಿ ಉರಿಯುತ್ತಿದ್ದು, ಕೋಮು ಸಂಘರ್ಷಕ್ಕೆ ಎರಡು ಹೆಣಗಳು ಉರುಳಿವೆ. ಎರಡೂ ಧರ್ಮಗಳ ನಡುವೆ ಸರಿಪಡಿಸಲಾಗದಷ್ಟು ದೊಡ್ಡ ಕಂದಕ ನಿರ್ಮಾಣವಾಗಿದೆ. ದಿನಂಪ್ರತಿ ಕೋಮು ಪ್ರಚೋದಿತ ಹಿಂಸಾಚಾರಗಳ ಬಗ್ಗೆ ಮಾಧ್ಯಮಗಳಲ್ಲಿ ಬರುವ ವರದಿಗಳು ಜಿಲ್ಲೆಯ ಶಾಂತಿಪ್ರಿಯ ನಾಗರೀಕರನ್ನು ಆತಂಕಕ್ಕೀಡುಮಾಡಿದೆ. ಇವೆಲ್ಲದರ ಮಧ್ಯೆ 5 ದಿನಗಳ ಹಿಂದೆ ಪುತ್ತೂರಿನ ಅರಿಯಡ್ಕದಲ್ಲಿ ನಡೆದ ಅಪಘಾತ ಪ್ರಕರಣದಲ್ಲಿ ಮುಸ್ಲಿಂ ಸಮುದಾಯಕ್ಕೆ ಸೇರಿದ ಗಾಯಾಳು ಯುವಕರನ್ನು ಹಿಂದೂ ಸಂಘಟನೆಯ ಪ್ರಮುಖರೊಬ್ಬರು ಆಸ್ಪತ್ರೆಗೆ

ಅಪಘಾತದ ಗಾಯಾಳು ಮುಸಲ್ಮಾನರನ್ನು ಆಸ್ಪತ್ರೆಗೆ ದಾಖಲಿಸಿದ ಹಿಂಜಾವೇ ಅಧ್ಯಕ್ಷ ► ಕರಾವಳಿಯ ಕೋಮು ಸಂಘರ್ಷದ ಮಧ್ಯೆಯೂ ಮಾನವೀಯತೆ ಜೀವಂತ Read More »

ಕರಾವಳಿ
Scroll to Top