heart attack

ತುರ್ತು ಸಂದರ್ಭದಲ್ಲಿ ಕೈಕೊಟ್ಟ ‘108’ ಆಂಬ್ಯುಲೆನ್ಸ್- ಕೊಕ್ಕಡದ ಉದ್ಯಮಿ ಹೃದಯಾಘಾತದಿಂದ ನಿಧನ

(ನ್ಯೂಸ್ ಕಡಬ) newskadaba.com ಜೂ. 08. ತುರ್ತು ಸಂದರ್ಭದಲ್ಲಿ ಆಂಬ್ಯುಲೆನ್ಸ್ ಸಿಗದ ಕಾರಣ ತೀವ್ರ ಹೃದಯಾಘಾತದಿಂದ ಸ್ಥಳೀಯ ಉದ್ಯಮಿ ಧನಂಜಯ್ (36) ಎಂಬುವವರು ಮೃತಪಟ್ಟ ಘಟನೆ ಕೊಕ್ಕಡದಲ್ಲಿ ನಡೆದಿದೆ. ಶುಕ್ರವಾರ ಮಧ್ಯರಾತ್ರಿ ಅವರಿಗೆ ಎದೆನೋವು ಕಾಣಿಸಿಕೊಂಡಾಗ ಕೊಕ್ಕಡ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿತ್ತು. ಅಲ್ಲಿನ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆದೊಯ್ಯಲು ಸೂಚಿಸಿದರಾದರೂ, ಆಸ್ಪತ್ರೆಯಲ್ಲಿದ್ದ ‘108’ ಆಂಬ್ಯುಲೆನ್ಸ್ ಚಾಲಕರು ರಜೆಯಲ್ಲಿದ್ದ ಕಾರಣ ಸೇವೆ ಲಭ್ಯವಿರಲಿಲ್ಲ. ಅನಿವಾರ್ಯವಾಗಿ ಕಾರಿನಲ್ಲಿ ಕರೆದೊಯ್ಯುವಾಗ ದಾರಿಮಧ್ಯೆಯೇ ಧನಂಜಯ್ ಕೊನೆಯುಸಿರೆಳೆದಿದ್ದಾರೆ. ಸುಸಜ್ಜಿತ ಆಸ್ಪತ್ರೆಯಿದ್ದರೂ ತುರ್ತು […]

ತುರ್ತು ಸಂದರ್ಭದಲ್ಲಿ ಕೈಕೊಟ್ಟ ‘108’ ಆಂಬ್ಯುಲೆನ್ಸ್- ಕೊಕ್ಕಡದ ಉದ್ಯಮಿ ಹೃದಯಾಘಾತದಿಂದ ನಿಧನ Read More »

ಕರಾವಳಿ, ಕ್ರೈಮ್ ನ್ಯೂಸ್

ಹೃದಯಾಘಾತದಿಂದ ಇಂಜಿನಿಯರಿಂಗ್ ವಿದ್ಯಾರ್ಥಿ ಮೃತ್ಯು

(ನ್ಯೂಸ್ ಕಡಬ) newskadaba.com, ಜು. 08. ಇಂಜಿನಿಯರಿಂಗ್ ವಿದ್ಯಾರ್ಥಿಯೋರ್ವ ಹೃದಯಾಘಾತಕೊಳ್ಳಗಾಗಿ ಕುಸಿದು ಬಿದ್ದು ಮೃತಪಟ್ಟ ಘಟನೆ ಸುರತ್ಕಲ್ ಕೃಷ್ಣಾಪುರ ಹಿಲ್ ಸೈಡ್ ಬಳಿ ನಡೆದಿದೆ. ಮೃತ ಯುವಕನನ್ನು ಹಿಲ್ ಸೈಡ್ ನಿವಾಸಿ ಅಸ್ಲರ್ ಅಲಿ ಎಂಬವರ ಪುತ್ರ ಅಫ್ತಾಬ್ (18) ಎಂದು ತಿಳಿದು ಬಂದಿದೆ. ಈತ ಸುರತ್ಕಲ್ ಸೆಕ್ರೆಡ್ ಹಾರ್ಟ್ ನಲ್ಲಿ ಇಲೆಕ್ಟಿಕಲ್ ಇಂಜಿನಿಯರಿಂಗ್ ಡಿಪ್ಲೋಮಾ ಕಲಿಯುತ್ತಿದ್ದ ಎಂದು ತಿಳಿದು ಬಂದಿದೆ. ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಮನೆಯಲ್ಲಿ ಸ್ನಾನಕ್ಕೆಂದು ಹೋಗುತ್ತಿದ್ದ ವೇಳೆ ಹೃದಯಾಘಾತ ಕ್ಕೊಳಗಾಗಿ ಕುಸಿದು

ಹೃದಯಾಘಾತದಿಂದ ಇಂಜಿನಿಯರಿಂಗ್ ವಿದ್ಯಾರ್ಥಿ ಮೃತ್ಯು Read More »

ಬ್ರೇಕಿಂಗ್ ನ್ಯೂಸ್

ಬೆಳ್ತಂಗಡಿ: ಆಟೋ ರಿಕ್ಷಾ ಚಲಾಯಿಸುತ್ತಿದ್ದ ವೇಳೆ ಹೃದಯಾಘಾತ; ಚಾಲಕ ಸಾವು

(ನ್ಯೂಸ್ ಕಡಬ) newskadaba.com, ಜೂ.03. ಬೆಂಗಳೂರು: ಆಟೋ ರಿಕ್ಷಾ ಚಲಾಯಿಸುತ್ತಿದ್ದ ವೇಳೆ ಹೃದಯಾಘಾತ ಉಂಟಾಗಿ ಚಾಲಕ ಮೃತಪಟ್ಟ ಘಟನೆ ಮಂಗಳವಾರ ಬೆಳಗ್ಗೆ ಕೊಕ್ಕಡ ಸಮೀಪದ ಕೆಂಪಕೋಡಿನಲ್ಲಿ ಸಂಭವಿಸಿದೆ. ಕೆಂಪಕೋಡು ನಿವಾಸಿ ಶರತ್ ಕುಮಾರ್ ಕೆ (36) ಮೃತ ಚಾಲಕ. ಶರತ್ ಕುಮಾರ್ ಅವರು ಪ್ರತಿದಿನದಂತೆ ಇಂದು ಬೆಳಗ್ಗೆಯೂ ತಮ್ಮ ಆಟೋದಲ್ಲಿ ವಿದ್ಯಾರ್ಥಿಗಳನ್ನು ಶಾಲೆಗೆ ಬಿಟ್ಟು ವಾಪಾಸ್ಸಾಗುತ್ತಿದ್ದರು. ಈ ವೇಳೆ ಅವರಿಗೆ ತೀವ್ರ ಹೃದಯಾಘಾತ ಸಂಭವಿಸಿದ್ದು, ರಿಕ್ಷಾ ಚಲಾಯಿಸುತ್ತಿರುವಾಗಲೇ ಸಾವನ್ನಪ್ಪಿದ್ದಾರೆ. ಕೂಡಲೇ ಗಮನಿಸಿದ ಸ್ಥಳೀಯರು ಶರತ್ ಅವರನ್ನು ಕೊಕ್ಕಡ ಪ್ರಾಥಮಿಕ

ಬೆಳ್ತಂಗಡಿ: ಆಟೋ ರಿಕ್ಷಾ ಚಲಾಯಿಸುತ್ತಿದ್ದ ವೇಳೆ ಹೃದಯಾಘಾತ; ಚಾಲಕ ಸಾವು Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಕಾರ್ಕಳ: ಹೃದಯಾಘಾತದಿಂದ ರಾಜ್ಯಮಟ್ಟದ ಕಬಡ್ಡಿ ಆಟಗಾರ ನಿಧನ

(ನ್ಯೂಸ್ ಕಡಬ) newskadaba.com ಡಿ. 14 ಕಾರ್ಕಳ: ರಾಜ್ಯಮಟ್ಟದ ಕಬಡ್ಡಿ ಆಟಗಾರ, ಮುಟ್ಲುಪಾಡಿ, ನಡುಮನೆ ನಿವಾಸಿ ಪ್ರೀತಂ ಶೆಟ್ಟಿ(26) ಹೃದಯಾಘಾತದಿಂದ ಶುಕ್ರವಾರ ರಾತ್ರಿ ನಿಧನರಾಗಿದ್ದಾರೆ. ಪ್ರೀತಂ ಶೆಟ್ಟಿ ಮಂಡ್ಯದಲ್ಲಿ ಶುಕ್ರವಾರ ನಡೆದಿದ್ದ ಕಬಡ್ಡಿ ಪಂದ್ಯಾಟದಲ್ಲಿ ಭಾಗವಹಿಸಿದ್ದರು. ಆಟವಾಡುತ್ತಿದ್ದ ವೇಳೆ ಅವರಿಗೆ ತೀವ್ರ ಎದೆ ನೋವು ಕಾಣಿಸಿಕೊಂಡಿದೆ. ಅವರನ್ನು ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಹೃದಯಘಾತದಿಂದ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಮೃತರು ತಾಯಿ ಮತ್ತು ಓರ್ವ ಸಹೋದರನನ್ನು ಅಗಲಿದ್ದಾರೆ.

ಕಾರ್ಕಳ: ಹೃದಯಾಘಾತದಿಂದ ರಾಜ್ಯಮಟ್ಟದ ಕಬಡ್ಡಿ ಆಟಗಾರ ನಿಧನ Read More »

ಕರಾವಳಿ

ಬೆಳ್ತಂಗಡಿ: ಆಯುಧ ಪೂಜೆ ವೇಳೆ ಹೃದಯಾಘಾತದಿಂದ ಯುವಕ ಮೃತ್ಯು

(ನ್ಯೂಸ್ ಕಡಬ)newskadaba.com, ಅ. 11 ಬೆಳ್ತಂಗಡಿ : ಯುವಕನೊಬ್ಬ ಶುಕ್ರವಾರ ನಡೆದ ಆಯಧ ಪೂಜೆಯ ಸಂದರ್ಭದಲ್ಲಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಮೃತ ಆದಿತ್ಯ ಭಟ್ ಅತ್ತಾಜೆ ರಮೇಶ್ ಭಟ್ ಮತ್ತು ಶಾರದ ದಂಪತಿಯ ಪುತ್ರ. ಆದಿತ್ಯ ಅವರು ಶುಕ್ರವಾರ ತಮ್ಮ ನಿವಾಸದಲ್ಲಿ ನಡೆದ ಆಯುಧ ಪೂಜಾ ಆಚರಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ನಂತರ, ಅವರಿಗೆ ಎದೆ ನೋವು ಕಾಣಿಸಿಕೊಂಡಿದ್ದು, ಬಳಿಕ ಹೃದಯ ಸ್ತಂಭನಕ್ಕೆ ಕಾರಣವಾಯಿತು.ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ಆದಿತ್ಯ ಅವರು ಜರ್ಮನಿಯಲ್ಲಿ ಸ್ವಂತ ಸ್ಟಾರ್ಟಪ್ ನಡೆಸುತ್ತಿದ್ದರು. ಅವರು ತಂದೆ-ತಾಯಿ, ಸಹೋದರಿ ಮತ್ತು

ಬೆಳ್ತಂಗಡಿ: ಆಯುಧ ಪೂಜೆ ವೇಳೆ ಹೃದಯಾಘಾತದಿಂದ ಯುವಕ ಮೃತ್ಯು Read More »

ಕರಾವಳಿ

ಕಡಬ: ಹವ್ಯಾಸಿ ಗಾಯಕ ಹೃದಯಾಘಾತದಿಂದ ನಿಧನ

(ನ್ಯೂಸ್ ಕಡಬ) newskadaba.com ಕಡಬ, ಸೆ. 18. ಹವ್ಯಾಸಿ ಗಾಯಕರಾಗಿ ಚಿರಪರಿಚಿತರಾಗಿದ್ದ ಕುಟ್ರುಪ್ಪಾಡಿ ಗ್ರಾಮದ ಬಾಬು ಸಂಪಡ್ಕ ರವರು ಹೃದಯಾಘಾತದಿಂದ ನಿಧನರಾಗಿರುವ ಕುರಿತು ವರದಿಯಾಗಿದೆ. ಕಡಬದ ಬಿಎಸ್ಎನ್ಎಲ್ ಸಂಸ್ಥೆಯಲ್ಲಿ ತಾತ್ಕಾಲಿಕ ನೆಲೆಯಲ್ಲಿ ಸಹಾಯಕರಾಗಿ ಕೆಲಸ ನಿರ್ವಹಿಸಿ ಎಲ್ಲರಿಗೂ ಪರಿಚಿತರಾಗಿದ್ದ ಇವರು, ಬಳಿಕ ಆಟೋ ಚಾಲಕರಾಗಿ ದುಡಿಯುತ್ತಿದ್ದರು. ಸಾಮಾಜಿಕವಾಗಿ ಗುರುತಿಸಿಕೊಂಡಿದ್ದ ಬಾಬು ಸಂಪಡ್ಕ ಅವರು ಹಲವಾರು ಕಡೆಗಳಲ್ಲಿ ಗಾಯನ, ಭಜನೆ, ನೃತ್ಯಗಳ ಮೂಲಕ ಜನರ ಪ್ರೀತಿ ಗಳಿಸಿದ್ದರು. ಕೆಲ ದಿನಗಳ ಹಿಂದೆ ಅನಾರೋಗ್ಯಕ್ಕೆ ಒಳಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಾಗಿದ್ದ

ಕಡಬ: ಹವ್ಯಾಸಿ ಗಾಯಕ ಹೃದಯಾಘಾತದಿಂದ ನಿಧನ Read More »

ಕರಾವಳಿ, ಕ್ರೈಮ್ ನ್ಯೂಸ್

ಹೃದಯಾಘಾತ- ಪೊಲೀಸ್ ಸಿಬ್ಬಂದಿ ಮೃತ್ಯು

(ನ್ಯೂಸ್ ಕಡಬ) newskadaba.com ಉಡುಪಿ, ಸೆ. 17. ಉಡುಪಿ ಪೊಲೀಸ್‌ ವೈರ್‌ ಲೆಸ್ ವಿಭಾಗದ ಪೊಲೀಸ್ ಸಿಬ್ಬಂದಿ ನಿತ್ಯಾನಂದ ಶೆಟ್ಟಿ(52) ಎಂಬವರು ಮಂಗಳವಾರದಂದು ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ಉಡುಪಿ ಜಿಲ್ಲಾ ಪೊಲೀಸ್‌ನ ವೈರ್‌ ಲೆಸ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಇವರು ಮಲ್ಪೆಯ ಕರಾವಳಿ ಭದ್ರತಾ ಪೊಲೀಸ್‌ ನಲ್ಲಿ ಕೆಲಸ ಮಾಡುತ್ತಿದ್ದರು. ನಿತ್ಯಾನಂದ ಶೆಟ್ಟಿ ರಾತ್ರಿ ಪಾಳಿಯಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದು, ಪಾಳಿ ಮುಗಿಸಿ ಮನೆಗೆ ಮರಳಿದ್ದರು.  

ಹೃದಯಾಘಾತ- ಪೊಲೀಸ್ ಸಿಬ್ಬಂದಿ ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್

ಕ್ರಿಕೆಟ್ ಆಡುತ್ತಿದ್ದ ವೇಳೆ ಹೃದಯಾಘಾತ- ಯುವಕ ಮೃತ್ಯು..!

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 03. ಕ್ರಿಕೆಟ್ ಆಡುತ್ತಿದ್ದ ವೇಳೆ ಹೃದಯಾಘಾತ ಸಂಭವಿಸಿ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆಯೇ ಯುವಕನೋರ್ವ ಮೃತಪಟ್ಟ ಘಟನೆ ಮೂಡುಪೆರಾರ ಕಾಯರಾಣೆಯಲ್ಲಿ ನಡೆದಿದೆ. ಮೃತ ಯುವಕನನ್ನು ಮೂಡುಪೆರಾರ ಕಾಯರಾಣೆ ನಿವಾಸಿ ದಿ| ಆನಂದ ಪೂಜಾರಿ ಅವರ ಪುತ್ರ ಪ್ರದೀಪ್ ಪೂಜಾರಿ (31) ಎಂದು ಗುರುತಿಸಲಾಗಿದೆ. ಕ್ರಿಕೆಟ್ ಆಡುತ್ತಿದ್ದ ಸಂದರ್ಭ ಪ್ರದೀಪ್ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡಿದ್ದು, ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಮಾರ್ಗಮಧ್ಯೆಯೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಕ್ರಿಕೆಟ್ ಆಡುತ್ತಿದ್ದ ವೇಳೆ ಹೃದಯಾಘಾತ- ಯುವಕ ಮೃತ್ಯು..! Read More »

ಕರಾವಳಿ, ಕ್ರೈಮ್ ನ್ಯೂಸ್

ಹೃದಯಾಘಾತ- ನಿರ್ಮಾಪಕ ಪ್ರಭಾಕರ್ ವಿಧಿವಶ

(ನ್ಯೂಸ್ ಕಡಬ) newskadaba.com  ಬೆಂಗಳೂರು, ಆ. 28. ಕನ್ನಡದ ಹೆಸರಾಂತ ನಿರ್ಮಾಪಕ ಮತ್ತು ನಿರ್ದೇಶಕ ಪ್ರಭಾಕರ್ (64) ನಿನ್ನೆ ಸಂಜೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅನೇಕ ಚಿತ್ರಗಳಿಗೆ ನಿರ್ಮಾಣ ಮಾಡಿದ ಅವರು ಅವಳೇ ನನ್ನ ಹೆಂಡ್ತಿ, ಅಣ್ಣತಂಗಿ ಚಿತ್ರವನ್ನು ನಿರ್ದೇಶಿಸಿದ್ದರು. ಚಿತ್ರವು ದೊಡ್ಡ ಯಶಸ್ಸು ಕಂಡಿತು. ಈ ಗೆಲುವಿನ ನಂತರ ಅವನೇ ನನ್ನ ಗಂಡ ಚಿತ್ರವನ್ನು ನಿರ್ಮಿಸಿದರು. ವಿಷ್ಣುವರ್ಧನ್ ಅಭಿನಯದ ತುಂಬಿದ ಮನೆ ಮತ್ತು ಎಲ್ಲರಂಥಲ್ಲ ನನ್ನ ಗಂಡ, ಅಂಬರೀಶ್ ಅಭಿನಯದ ಸೋಲಿಲ್ಲದ ಸರದಾರ, ಶಶಿಕುಮಾರ್ ಅಭಿನಯದ ಮುದ್ದಿನ

ಹೃದಯಾಘಾತ- ನಿರ್ಮಾಪಕ ಪ್ರಭಾಕರ್ ವಿಧಿವಶ Read More »

ಕರ್ನಾಟಕ

ಹೃದಯಾಘಾತ- ಸಾವಿನಲ್ಲೂ ಒಂದಾದ ದಂಪತಿ

(ನ್ಯೂಸ್ ಕಡಬ) newskadaba.com ಚಾಮರಾಜನಗರ, ಆ. 24. ಪತಿ- ಪತ್ನಿ ಸಾವಿನಲ್ಲಿ ಒಂದಾಗಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮಂಗಲ ಗ್ರಾಮದಲ್ಲಿ ನಡೆದಿದೆ. ಮೃತರನ್ನು ಶೇಖರ್​ (70) ಹಾಗೂ ಸುಮಿತ್ರಮ್ಮ (65) ಎಂದು ಗುರುತಿಸಲಾಗಿದೆ. ದಂಪತಿಗಳಿಬ್ಬರು ಕೃಷಿಕರಾಗಿದ್ದು, ಗ್ರಾಮ ಸಮೀಪದ ರಾಮನಗುಡ್ಡ ಬಳಿಯ ಜಮೀನಿನಲ್ಲಿ ವಾಸವಿದ್ದರು. ಮೊದಲಿಗೆ ಪತ್ನಿ ಸುಮಿತ್ರಮ್ಮರವರಿಗೆ ಹೃದಯಘಾತವಾಗಿ ಮೃತಪಟ್ಟರೆ, ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಪತಿ ಶೇಖರ್ ರವರು ಸಹ ತೀವ್ರ ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಹೃದಯಾಘಾತ- ಸಾವಿನಲ್ಲೂ ಒಂದಾದ ದಂಪತಿ Read More »

ಕರ್ನಾಟಕ, ಕ್ರೈಮ್ ನ್ಯೂಸ್
Scroll to Top