ಹೃದಯಾಘಾತ- ಸಾವಿನಲ್ಲೂ ಒಂದಾದ ದಂಪತಿ

(ನ್ಯೂಸ್ ಕಡಬ) newskadaba.com ಚಾಮರಾಜನಗರ, ಆ. 24. ಪತಿ- ಪತ್ನಿ ಸಾವಿನಲ್ಲಿ ಒಂದಾಗಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮಂಗಲ ಗ್ರಾಮದಲ್ಲಿ ನಡೆದಿದೆ.

ಮೃತರನ್ನು ಶೇಖರ್​ (70) ಹಾಗೂ ಸುಮಿತ್ರಮ್ಮ (65) ಎಂದು ಗುರುತಿಸಲಾಗಿದೆ. ದಂಪತಿಗಳಿಬ್ಬರು ಕೃಷಿಕರಾಗಿದ್ದು, ಗ್ರಾಮ ಸಮೀಪದ ರಾಮನಗುಡ್ಡ ಬಳಿಯ ಜಮೀನಿನಲ್ಲಿ ವಾಸವಿದ್ದರು. ಮೊದಲಿಗೆ ಪತ್ನಿ ಸುಮಿತ್ರಮ್ಮರವರಿಗೆ ಹೃದಯಘಾತವಾಗಿ ಮೃತಪಟ್ಟರೆ, ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಪತಿ ಶೇಖರ್ ರವರು ಸಹ ತೀವ್ರ ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.

Scroll to Top