Dubai

ಭಾರತೀಯ ತೇಜಸ್ ಯುದ್ಧ ವಿಮಾನ ದುಬೈ ಏರ್ಶೋ ನಲ್ಲಿ ಪತನ

(ನ್ಯೂಸ್‌ ಕಡಬ) newskadaba.com,  ನ.22:  ದುಬೈನಲ್ಲಿ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ವೈಮಾನಿಕ ಪ್ರದರ್ಶನದ ವೇಳೆ ಭಾರತೀಯ ತೇಜಸ್ ಯುದ್ಧ ವಿಮಾನ ಪತನವಾಗಿ ಪೈಲಟ್ ಮೃತಪಟ್ಟ ಘಟನೆ ನಡೆದಿದೆ. “ಇಂದು ದುಬೈ ಏರ್ ಶೋನಲ್ಲಿ ನಡೆದ ವೈಮಾನಿಕ ಪ್ರದರ್ಶನದ ಸಮಯದಲ್ಲಿ ಐಎಎಫ್ ತೇಜಸ್ ವಿಮಾನ ಅಪಘಾತಕ್ಕೀಡಾಯಿತು. ಅಪಘಾತದಲ್ಲಿ ಪೈಲಟ್ ತೀವ್ರ ಗಾಯಗಳಿಂದ ಸಾವನ್ನಪ್ಪಿದ್ದಾರೆ. ಪೈಲಟ್‌ನ ಸಾವಿಗೆ ಐಎಎಫ್‌ತೀವ್ರವಾಗಿ ವಿಷಾದಿಸುತ್ತದೆ. ಈ ದುಃಖದ ಸಮಯದಲ್ಲಿ ದುಃಖಿತ ಕುಟುಂಬದೊಂದಿಗೆ ದೃಢವಾಗಿ ನಿಲ್ಲುತ್ತದೆ. ಅಪಘಾತದ ಕಾರಣವನ್ನು ಕಂಡುಹಿಡಿಯಲು ತನಿಖಾ ನ್ಯಾಯಾಲಯವನ್ನು ರಚಿಸಲಾಗುತ್ತಿದೆ” ಎಂದು ಭಾರತೀಯ […]

ಭಾರತೀಯ ತೇಜಸ್ ಯುದ್ಧ ವಿಮಾನ ದುಬೈ ಏರ್ಶೋ ನಲ್ಲಿ ಪತನ Read More »

ಬ್ರೇಕಿಂಗ್ ನ್ಯೂಸ್

ಮುಂದಿನ ಟಿ20 ವಿಶ್ವಕಪ್‌ ಭಾರತ ತಂಡ ಗೆಲ್ಲುವುದು ಅನುಮಾನವೆಂದ ಕೆ ಶ್ರೀಕಾಂತ್‌

(ನ್ಯೂಸ್‌ ಕಡಬ) newskadaba.com ಆ. 28. ಮುಂಬರುವ 2025ರ ಏಷ್ಯಾ ಕಪ್‌ (Asia Cup 2025) ಟೂರ್ನಿಗೆ ಅಜಿತ್‌ ಅಗರ್ಕರ್‌ ನೇತೃತ್ವದ ಆಯ್ಕೆ ಸಮಿತಿಯು ಸೂರ್ಯಕುಮಾರ್‌ ನಾಯಕತ್ವದಲ್ಲಿ 15 ಸದಸ್ಯರನ್ನೊಳಗೊಂಡ ಭಾರತ ತಂಡವನ್ನು ಆಯ್ಕೆ ಮಾಡಿದ್ದು, ಬ್ಯಾಟಿಂಗ್‌, ಬೌಲಿಂಗ್‌ ಮತ್ತು ಆಲ್‌ರೌಂಡರ್‌ ವಿಭಾಗದಲ್ಲಿ ತಂಡ ಬಲಿಷ್ಠವಾಗಿದೆ ಎನ್ನಲಾಗಿದೆ.   ಅಗ್ರ ಕ್ರಮಾಂಕದ ಬ್ಯಾಟಿಂಗ್‌ ಗೊಂದಲ ಹೊರತುಪಡಿಸಿ ಇನ್ನೆಲ್ಲಾ ವಿಭಾಗದಲ್ಲೂ ತಂಡದ ಆಯ್ಕೆ ಅತ್ಯುತ್ತಮವಾಗಿದೆ. ಮುಂಬರುವ ಟಿ-20 ವಿಶ್ವಕಪ್‌ಗೆ ಕೆಲವು ಸಣ್ಣಪುಟ್ಟ ಬದಲಾವಣೆಗಳ ಅಗತ್ಯವಿದ್ದು, ಅದನ್ನು ಹೊರತುಪಡಿಸಿದರೆ ಆಯ್ಕೆ

ಮುಂದಿನ ಟಿ20 ವಿಶ್ವಕಪ್‌ ಭಾರತ ತಂಡ ಗೆಲ್ಲುವುದು ಅನುಮಾನವೆಂದ ಕೆ ಶ್ರೀಕಾಂತ್‌ Read More »

ಕ್ರೀಡಾ ನ್ಯೂಸ್

ಉಡುಪಿ: ದುಬೈನ ಸಂಸ್ಥೆಗೆ 2.5 ಕೋಟಿ ವಂಚಿಸಿದ ಆರೋಪಿಯ ಬಂಧನ

(ನ್ಯೂಸ್ ಕಡಬ)newskadaba.com, ಅ. 14 ದೆಹಲಿ:  ಅನಿವಾಸಿ ಭಾರತೀಯ, ವಕ್ವಾಡಿ ಮೂಲದ ಉದ್ಯಮಿ ಪ್ರವೀಣ್ ಕುಮಾರ್ ಶೆಟ್ಟಿಯವರು ಆಡಳಿತ ನಿರ್ದೇಶಕರಾಗಿರುವ ದುಬೈನ ಹೋಟೆಲೊಂದಕ್ಕೆ ಬಾರ್ಕೂರು ಮೂಲದ ನಾಗೇಶ್ ಪೂಜಾರಿ ಅಕೌಂಟೆಂಟ್ ಆಗಿ ಸೇರಿ, ಹಂತಹಂತವಾಗಿ 2.5 ಕೋಟಿಗೂ ಅಧಿಕ ಹಣ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆ.ಎಂ.ಎಫ್.ಸಿ ನ್ಯಾಯಾಲಯದಲ್ಲಿ ಜಾಮೀನು ಪಡೆದು ಬಳಿಕ ಜಿಲ್ಲಾ ಸೆಶನ್ಸ್ ನ್ಯಾಯಾಲಯ &  ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಜಾಮೀನು ರದ್ಧು ಆದೇಶವಾದ ಬೆನ್ನಲ್ಲೇ ತಲೆ ಮರೆಸಿಕೊಂಡಿದ್ದ ಆರೋಪಿ ನಾಗೇಶ್ ಪೂಜಾರಿಯನ್ನು ಉಡುಪಿ ಪೊಲೀಸರು ಮೈಸೂರಿನ ನಂಜನಗೂಡು ಬಳಿ

ಉಡುಪಿ: ದುಬೈನ ಸಂಸ್ಥೆಗೆ 2.5 ಕೋಟಿ ವಂಚಿಸಿದ ಆರೋಪಿಯ ಬಂಧನ Read More »

ಬ್ರೇಕಿಂಗ್ ನ್ಯೂಸ್

ದುಬೈ: ರಸ್ತೆ ಅಪಘಾತ- ಮಂಗಳೂರಿನ ಯುವತಿ ಮೃತ್ಯು..!

(ನ್ಯೂಸ್ ಕಡಬ) newskadaba.com ಉಳ್ಳಾಲ, ಫೆ. 23. ದುಬೈಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮಂಗಳೂರಿನ ಯುವತಿ ಮೃತಪಟ್ಟ ಘಟನೆ ನಡೆದಿದೆ. ಮೃತ ಯುವತಿಯನ್ನು ಕೋಟೆಕಾರು ಬೀರಿ ಕೆಂಪುಮಣ್ಣು ನಿವಾಸಿ ವಿದಿಶಾ (28) ಎಂದು ಗುರುತಿಸಲಾಗಿದೆ. ಮಂಗಳೂರು ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷೆ ರಾಜೀವಿ ಕೆಂಪುಮಣ್ಣು ಮತ್ತು ವಿಠಲ್ ಕುಲಾಲ್ ಕೆಂಪುಮಣ್ಣು ಅವರ ಏಕೈಕ ಪುತ್ರಿ ವಿದಿಶಾ ಸಹ್ಯಾದ್ರಿ ಕಾಲೇಜಿನಲ್ಲಿ ವ್ಯವಹಾರ ಆಡಳಿತ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದು ಒಂದು ವರ್ಷ ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಕಾರ್ಯ ನಿರ್ವಹಿಸಿದ್ದರು.

ದುಬೈ: ರಸ್ತೆ ಅಪಘಾತ- ಮಂಗಳೂರಿನ ಯುವತಿ ಮೃತ್ಯು..! Read More »

ಅಂತರ್ರಾಷ್ಟ್ರೀಯ ನ್ಯೂಸ್, ಬ್ರೇಕಿಂಗ್ ನ್ಯೂಸ್

SIIMA ಅವಾರ್ಡ್ಸ್ 2023; ಯಶ್,ರಕ್ಷಿತ್ ಶೆಟ್ಟಿ ಸಹಿತ ಕನ್ನಡದ ಹಲವರಿಗೆ ಪ್ರಶಸ್ತಿ

(ನ್ಯೂಸ್ ಕಡಬ) newskadaba.com ದುಬೈ, ಸೆ. 16. ದುಬೈನಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಸೈಮಾ ಪ್ರಶಸ್ತಿ ಸಮಾರಂಭದಲ್ಲಿ ಕನ್ನಡದ ಹಲವು ನಟರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಸ್ಯಾಂಡಲ್ ವುಡ್ ವಿಭಾಗದಲ್ಲಿ ಬಂದಿರುವ ಪ್ರಶಸ್ತಿಗಳು ಹೀಗಿವೆ- ಕೆಜಿಎಫ್ 2 – ಯಶ್ ರಿಷಬ್ ಶೆಟ್ಟಿ – ಅತ್ಯುತ್ತಮ ನಟ (ಕ್ರಿಟಿಕ್ಸ್) ಭುವನ್ ಗೌಡ – ಅತ್ಯುತ್ತಮ ಛಾಯಾಗ್ರಾಹಕ (ಕೆಜಿಎಫ್ 2) ಚಾರ್ಲಿ 777- ಅತ್ಯುತ್ತಮ ಸಿನಿಮಾ, ಪೃಥ್ವಿ ಶಾಮನೂರು – ಅತ್ಯುತ್ತಮ ಉದಯೋನ್ಮುಖ ನಟ (ಪದವಿ ಪೂರ್ವ), ಪವನ್ ಒಡೆಯರ್ –

SIIMA ಅವಾರ್ಡ್ಸ್ 2023; ಯಶ್,ರಕ್ಷಿತ್ ಶೆಟ್ಟಿ ಸಹಿತ ಕನ್ನಡದ ಹಲವರಿಗೆ ಪ್ರಶಸ್ತಿ Read More »

ಅಂತರ್ರಾಷ್ಟ್ರೀಯ ನ್ಯೂಸ್, ಸಿನಿಮಾ

ಮಸೀದಿ ಸ್ಫೋಟದ ಅಪರಾಧಿ ಸೇರಿ ಐವರಿಗೆ ಗಲ್ಲು ಶಿಕ್ಷೆ  

(ನ್ಯೂಸ್ ಕಡಬ)newskadaba.com ದುಬೈ, ಜು.28. ‘2015ರಲ್ಲಿ ನಡೆದಿದ್ದ ಮಸೀದಿ ಸ್ಫೋಟ ಪ್ರಕರಣದ ಅಪರಾಧಿ ಸೇರಿದಂತೆ ಐವರನ್ನು ಕೇಂದ್ರ ಕಾರಾಗೃಹದಲ್ಲಿ ಗಲ್ಲಿಗೇರಿಸಲಾಗಿದೆ’ ಎಂದು ಪಬ್ಲಿಕ್‌ ಪ್ರಾಸಿಕ್ಯೂಷನ್‌ ತಿಳಿಸಿದೆ. ಸ್ಫೋಟದಲ್ಲಿ 27 ಮಂದಿ ಮೃತಪಟ್ಟಿದ್ದರು ಎನ್ನಲಾಗಿದೆ. ಈ ದಾಳಿಯ ಹೊಣೆಯನ್ನು ಇಸ್ಲಾಮಿಕ್‌ ಸ್ಟೇಟ್‌ ಉಗ್ರ ಸಂಘಟನೆ ಹೊತ್ತುಕೊಂಡಿತ್ತು ಎನ್ನಲಾಗಿದೆ. ‘ಈ ಐವರಲ್ಲಿ ಮಸೀದಿ ದಾಳಿಯಲ್ಲಿ ಶಿಕ್ಷೆಗೊಳಗಾದ ಅಬ್ದುಲ್ ರಹ್ಮಾನ್ ಸಬಾ ಇದಾನ್‌, ಕೊಲೆ ಶಿಕ್ಷೆಗೊಳಗಾದ ಮೂವರು ಮತ್ತು ಮಾದಕ ವಸ್ತು ಕಳ್ಳಸಾಗಣೆ ಅಪರಾಧಿಯಾದ ಶ್ರೀಲಂಕಾದ ವ್ಯಕ್ತಿ ಸೇರಿದ್ದಾರೆ’ ಎಂದು ಪಬ್ಲಿಕ್‌

ಮಸೀದಿ ಸ್ಫೋಟದ ಅಪರಾಧಿ ಸೇರಿ ಐವರಿಗೆ ಗಲ್ಲು ಶಿಕ್ಷೆ   Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ನಟಿ ಉರ್ಫಿ ಜಾವೇದ್ ಬಂಧನ..?

(ನ್ಯೂಸ್ ಕಡಬ) newskadaba.com ಮುಂಬೈ, ಡಿ. 21. ಸದಾ ಕನಿಷ್ಠ ಬಟ್ಟೆ ತೊಟ್ಟು ಸಖತ್​ ಹಾಟ್​ ಆಗಿ ಕಾಣಿಸಿಕೊಳ್ಳುತ್ತಿದ್ದ ನಟಿ ಉರ್ಫಿ ಜಾವೇದ್ ಅವರನ್ನು ದುಬೈನಲ್ಲಿ ಬಂಧಿಸಲಾಗಿದೆ ಎಂದು ವರದಿ ತಿಳಿಸಿದೆ. ಇತ್ತೀಚೆಗೆ ದುಬೈಗೆ ಭೇಟಿ ನೀಡಿರುವ ಈಕೆ, ಅಲ್ಲಿಯೂ ಅರೆಬರೆ ಮೈಮಾಟ ಪ್ರದರ್ಶಿಸುತ್ತಾ ವಿಡಿಯೋ ಶೂಟ್ ಮಾಡುತ್ತಿದ್ದು, ದುಬೈನಲ್ಲಿ ಸಾರ್ವಜನಿಕ ಪ್ರದೇಶದಲ್ಲಿ ಅಶ್ಲೀಲತೆಗೆ ಆಸ್ಪದವಿಲ್ಲದ ಕಾರಣ ಅರೆಬೆತ್ತಲೆ ದೇಶ ಪ್ರದರ್ಶನ ಮಾಡಿರುವುದು ಆಕೆಯ ಬಂಧನಕ್ಕೆ ಕಾರಣವಾಗಿದೆ ಎಂದು ವರದಿಯಾಗಿದೆ. ಫ್ಯಾಶನ್​ ಇನ್ಫ್ಲುಯೆನ್ಸರ್​ ಉರ್ಫಿ ಅವರನ್ನು ಮಂಗಳವಾರದಂದು

ನಟಿ ಉರ್ಫಿ ಜಾವೇದ್ ಬಂಧನ..? Read More »

ಕರಾವಳಿ

ಜುಲೈ 06: ದುಬೈನ ಶೇಖ್ ರಾಶಿದ್ ಅಡಿಟೋರಿಯಂನಲ್ಲಿ ರಾರಾಜಿಸಲಿದೆ ದಾಸ್ ಕುಡ್ಲ ತಂಡ ► 40 ಕ್ಕೂ ಹೆಚ್ಚು ಗಾಯಕರಿಂದ ‘ಸುರ್ ಸಂಗಮ್’ ಸಂಗೀತ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಜೂ.30. ಕರ್ನಾಟಕದಲ್ಲಿ ಸತತ 29 ವರ್ಷಗಳಿಂದ ಸಾವಿರಾರು ಗಾಯಕರಿಂದ ಸಂಗೀತ ಪ್ರೇಮಿಗಳಿಗೆ ರಸದೌತಣ ನೀಡಿದ ದಾಸ್ ಕುಡ್ಲಾಸ್ ತಂಡವು ಇದೀಗ ತಮ್ಮ 30ನೇ ವರ್ಷದ ಸಂಭ್ರಮವನ್ನು ದುಬೈನ ಊದ್ ಮೆಹ್ತಾದಲ್ಲಿರುವ ಇಂಡಿಯನ್ ಹೈಸ್ಕೂಲಿನ ಶೇಕ್ ರಾಶಿದ್ ಅಡಿಟೋರಿಯಂನಲ್ಲಿ ‘ಸುರ್ ಸಂಗಮ್’ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಿ ಬಹಳಷ್ಟು ಅದ್ಧೂರಿಯಾಗಿ ಆಚರಿಸಲಿದೆ. ಸೌಹಾರ್ದ ಲಹರಿ ಹಾಗೂ ಪ್ರೀಷಿಯಸ್ ಪಾರ್ಟೀಸ್ ಆಂಡ್ ಎಂಟರ್ಟೈನ್’ಮೆಂಟ್ ಸಹಭಾಗಿತ್ವದಲ್ಲಿ ಜುಲೈ 6 ರಂದು ಸಂಜೆ 6 ಗಂಟೆಯಿಂದ ಸತತ 4 ಗಂಟೆಗಳ

ಜುಲೈ 06: ದುಬೈನ ಶೇಖ್ ರಾಶಿದ್ ಅಡಿಟೋರಿಯಂನಲ್ಲಿ ರಾರಾಜಿಸಲಿದೆ ದಾಸ್ ಕುಡ್ಲ ತಂಡ ► 40 ಕ್ಕೂ ಹೆಚ್ಚು ಗಾಯಕರಿಂದ ‘ಸುರ್ ಸಂಗಮ್’ ಸಂಗೀತ ಕಾರ್ಯಕ್ರಮ Read More »

ಅಂತರ್ರಾಷ್ಟ್ರೀಯ ನ್ಯೂಸ್

ದುಬೈನಲ್ಲಿ ರಸ್ತೆ ಅಪಘಾತ ► ದಕ್ಷಿಣ ಕನ್ನಡದ ಯುವಕ ಮೃತ್ಯು

(ನ್ಯೂಸ್ ಕಡಬ) newskadaba.com ಮಂಗಳೂರು, ನ.03. ದುಬೈನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ‌ ಯುವಕನೋರ್ವ ಮೃತಪಟ್ಟ ಘಟನೆ ಶುಕ್ರವಾರದಂದು ನಡೆದಿದೆ. ಮೃತ ಯುವಕನನ್ನು ಮೂಡಬಿದಿರೆಯ ಗಂಟಾಲ್ಕಟ್ಟೆ ನಿವಾಸಿ ರಿಯಾಝ್ ಅಹಮ್ಮದ್(25 ) ಎಂದು ಗುರುತಿಸಲಾಗಿದೆ. ದುಬೈನ ಅಜ್ಮನ್ ನಲ್ಲಿ ಉದ್ಯೋಗದಲ್ಲಿದ್ದ ರಿಯಾಝ್ ಅಹಮದ್ ತನ್ನ ಮನೆ ಕಡೆಗೆ ಕಾರು ಚಲಾಯಿಸಿಕೊಂಡು ಹೋಗುತ್ತಿದ್ದ ವೇಳೆ ಅಪಘಾತಕ್ಕೀಡಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈತ ಒಂದೂವರೆ ತಿಂಗಳ ಹಿಂದಷ್ಟೇ ಊರಿಗೆ ಬಂದು ದುಬೈಗೆ ತೆರಳಿದ್ದನೆನ್ನಲಾಗಿದ್ದು, ಮೃತದೇಹವನ್ನು ಊರಿಗೆ

ದುಬೈನಲ್ಲಿ ರಸ್ತೆ ಅಪಘಾತ ► ದಕ್ಷಿಣ ಕನ್ನಡದ ಯುವಕ ಮೃತ್ಯು Read More »

ಅಂತರ್ರಾಷ್ಟ್ರೀಯ ನ್ಯೂಸ್

ಅನ್ಸಾರುಲ್ ಇಸ್ಲಾಂ ಕಮಿಟಿ ದುಬೈ ಸಮಿತಿಯ ಪದಾಧಿಕಾರಿಗಳ ನೇಮಕ ► ಅಧ್ಯಕ್ಷರಾಗಿ ನಝೀರ್ ಕಾಣಿಯೂರು, ಕಾರ್ಯದರ್ಶಿಯಾಗಿ ಶರೀಫ್ ಮಾಲೆಂಗ್ರಿ ಆಯ್ಕೆ

(ನ್ಯೂಸ್ ಕಡಬ) newskadaba.com ದುಬೈ, ಆ.31. ಅನ್ಸಾರುಲ್ ಇಸ್ಲಾಂ ಕಮಿಟಿ ದುಬೈ ಇದರ ಮಹಾ ಸಭೆಯು ರಿಯಾಝ್ ಕಾಣಿಯೂರು ಇವರ ಅಧ್ಯಕ್ಷತೆಯಲ್ಲಿ ದುಬೈ ಅಲ್ ಅಮಾನ್ ಆಡಿಟೋರಿಯಂ ನಲ್ಲಿ ಇತ್ತೀಚೆಗೆ ನಡೆಯಿತು. ಸಭೆಯಲ್ಲಿ 2017 – 2018 ನೇ ಸಾಲಿನ ನೂತನ ಆಡಳಿತ ಸಮಿತಿಯನ್ನು ರಚಿಸಲಾಯಿತು. ಗೌರವಾಧ್ಯಕ್ಷರಾಗಿ ಶಾಫಿ ಮೂಸಾ ಬೆಳ್ಳಾರೆ, ಅಧ್ಯಕ್ಷರಾಗಿ ನಝೀರ್ ಬೆದ್ರಾಜೆ, ಕಾರ್ಯದರ್ಶಿಯಾಗಿ ಶರೀಫ್ ಮಾಲೆಂಗ್ರಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಶರೀಫ್ ಕಲ್ಪಡ, ಜೊತೆ ಕಾರ್ಯದರ್ಶಿ ಯಾಗಿ ಇಸ್ಮಾಯಿಲ್ ಮಾಲೆಂಗ್ರಿ,

ಅನ್ಸಾರುಲ್ ಇಸ್ಲಾಂ ಕಮಿಟಿ ದುಬೈ ಸಮಿತಿಯ ಪದಾಧಿಕಾರಿಗಳ ನೇಮಕ ► ಅಧ್ಯಕ್ಷರಾಗಿ ನಝೀರ್ ಕಾಣಿಯೂರು, ಕಾರ್ಯದರ್ಶಿಯಾಗಿ ಶರೀಫ್ ಮಾಲೆಂಗ್ರಿ ಆಯ್ಕೆ Read More »

ಅಂತರ್ರಾಷ್ಟ್ರೀಯ ನ್ಯೂಸ್
Scroll to Top