death

ಮೋಚಾ ಚಂಡಮಾರುತಕ್ಕೆ ತತ್ತರಿಸಿದ ಜನ..!➤ ಮೃತಪಟ್ಟವರ ಸಂಖ್ಯೆ 81ಕ್ಕೆ ಏರಿಕೆ

(ನ್ಯೂಸ್ ಕಡಬ)newskadaba.com ನವದೆಹಲಿ,ಮೇ.17 ಮ್ಯಾನ್ಮಾರ್ ಮತ್ತು ಬಾಂಗ್ಲಾದೇಶದಲ್ಲಿ ಮೋಚಾ ಚಂಡಮಾರುತಕ್ಕೆ ಜನ ತತ್ತರಿಸಿ ಹೋಗಿದ್ದಾರೆ. ಮ್ಯಾನ್ಮಾರ್ ದೇಶದಲ್ಲಿ ಇದುವರೆಗೂ 81ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ನೂರಾರು ಜನ ನಾಪತ್ತೆಯಾಗಿದ್ದಾರೆ.ರಕ್ಷಣಾ ಕಾರ್ಯಚರಣೆ ಮುಂದುವರೆದಿದೆ. ಸಂಪರ್ಕ ವ್ಯವಸ್ಥೆ ಹದಗೆಟ್ಟಿದೆ. ದೊಡ್ಡ ಪ್ರಮಾಣದ ಪ್ರವಾಹಕ್ಕೆ ಭಾರಿ ಹಾನಿಯಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.ನಂತರ 209 ಕಿಲೋಮೀಟರ್ (130 ಮೈಲುಗಳು) ವೇಗದ ಗಾಳಿಯೊಂದಿಗೆ ರಾಖೈನ್ ರಾಜ್ಯದ ಸಿಟ್ವೆ ಟೌನ್‌ಶಿಪ್ ಬಳಿ ಮೋಚಾ ಚಂಡಮಾರುತ ಬಂದು ಅಪ್ಪಳಿಸಿದ್ದು, ಭೂಕುಸಿತ ಉಂಟು ಮಾಡಿತ್ತು. ಸೋಮವಾರ […]

ಮೋಚಾ ಚಂಡಮಾರುತಕ್ಕೆ ತತ್ತರಿಸಿದ ಜನ..!➤ ಮೃತಪಟ್ಟವರ ಸಂಖ್ಯೆ 81ಕ್ಕೆ ಏರಿಕೆ Read More »

ರಾಷ್ಟ್ರೀಯ ನ್ಯೂಸ್

ನದಿಯಲ್ಲಿ ಈಜಲು ಹೋಗಿ ಇಬ್ಬರು ಯುವಕರು ಮೃತ್ಯು.!

(ನ್ಯೂಸ್ ಕಡಬ)newskadaba.com ತಲಕಾಡು,ಮೇ.17 ಸೇತುವೆ ಬಳಿ ಕಾವೇರಿ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಪ್ರವಾಸಕ್ಕೆ ಆಗಮಿಸಿದ್ದ ನಾಲ್ವರು ಯುವಕರಲ್ಲಿ ಮೈಸೂರಿನ ಆಲನಹಳ್ಳಿಯ ನಿವಾಸಿ ಸಣ್ಣಮಾದ (ಪುಟ್ಟ) ರವರ ಮಗ ಅಭಿಷೇಕ್ (21), ಅಲತ್ತೂರು ಹುಂಡಿಯ ಮಾದೇವರ ಮಗ ಮಹದೇವ ಪ್ರಸಾದ್ (20) ಮೃತಪಟ್ಟವರು.ಈ ಸಂಬಂಧ ತಲಕಾಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.    

ನದಿಯಲ್ಲಿ ಈಜಲು ಹೋಗಿ ಇಬ್ಬರು ಯುವಕರು ಮೃತ್ಯು.! Read More »

ಕರ್ನಾಟಕ

ಸುರತ್ಕಲ್: ಬಲೆಗೆ ಸಿಲುಕಿ ಸಮುದ್ರದಲ್ಲಿ ಮುಳುಗಿ ಮೀನುಗಾರ ಮೃತ್ಯು

(ನ್ಯೂಸ್ ಕಡಬ)newskadaba.com ಮೀನುಗಾರ ಬಲೆ ಹಾಕುತ್ತಿದ್ದ  ವೇಳೆ  ಸಮುದ್ರದಲ್ಲಿ ಮುಳುಗಿ ಮೃತ ಪಟ್ಟಿರುವ ಘಟನೆ ಮಂಗಳವಾರ ನಡೆದಿದೆ. ಜಯರಾಜ್ (46 ವರ್ಷ) ಮೀನುಗಾರ ಬಲೆ ಹಾಕುತ್ತಿದ್ದ  ವೇಳೆ  ಸಮುದ್ರದಲ್ಲಿ ಮುಳುಗಿ ಮೃತ ಪಟ್ಟಿದ್ದು,  ಸಮುದ್ರಕ್ಕೆ ಹಾಕಿದ ಬಲೆ ಕಾಲಿಗೆ ಸಿಲುಕಿದ್ದಲ್ಲದೆ, ಸಮುದ್ರದ ಅಲೆ ಅಪ್ಪಳಿಸಿ ಮುಳುಗಿದರು ಎನ್ನಲಾಗಿದೆ. ಅಲ್ಲಿ ಇದ್ದ ಮೀನುಗಾರ ತಕ್ಷಣ ಸ್ಥಳೀಯರಿಗೆ ತಿಳಿಸಿದ್ದು, ಸಹಾಯಕ್ಕೆ ಧಾವಿಸಿದ ಸ್ಥಳೀಯರು ಜಯರಾಜ್ ನನ್ನು ಮೇಲಕ್ಕೆತ್ತಿ ಆಸ್ಪತ್ರೆಗೆ ಸಾಗಿಸಿದರೂ  ಕೂಡ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ.ಇನ್ನೂ  ಮೃತ ಜಯರಾಜ್  ಪತ್ನಿ

ಸುರತ್ಕಲ್: ಬಲೆಗೆ ಸಿಲುಕಿ ಸಮುದ್ರದಲ್ಲಿ ಮುಳುಗಿ ಮೀನುಗಾರ ಮೃತ್ಯು Read More »

ಕರಾವಳಿ

ಕಾರಿಗೆ ಲಾರಿ ಢಿಕ್ಕಿ ಹೊಡೆದು ಭೀಕರ ಅಪಘಾತ ➤ ಇಬ್ಬರು ಯುವಕರು ಮೃತ್ಯು

(ನ್ಯೂಸ್ ಕಡಬ)newskadaba.com ಕಣ್ಣೂರು, ಮೇ.17. ಇನ್ನೋವಾ ಕಾರು- ಲಾರಿಗೆ ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿರುವ ಘಟನೆ ವಯನಾಡಿನಲ್ಲಿ ನಡೆದಿದೆ. ಮೃತರನ್ನು ಕಣ್ಣೂರು ಮೂಲದ ಅಫ್ರೀದ್ ಮತ್ತು ಮುನವೀರ್ ಎಂದು ಗುರುತಿಸಲಾಗಿದೆ. ಮಾನಂತವಾಡಿ-ಕಲ್ಪೆಟ್ಟಾ ಮಾರ್ಗದಲ್ಲಿ ಈ ಘಟನೆ ನಡೆದಿದೆ.

ಕಾರಿಗೆ ಲಾರಿ ಢಿಕ್ಕಿ ಹೊಡೆದು ಭೀಕರ ಅಪಘಾತ ➤ ಇಬ್ಬರು ಯುವಕರು ಮೃತ್ಯು Read More »

ಕರಾವಳಿ

ಮಂಡ್ಯದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಸಿಕ್ಕಿ ಮಹಿಳೆ ಮೃತ್ಯು

(ನ್ಯೂಸ್ ಕಡಬ)newskadaba.com ಮಂಡ್ಯ,ಮೇ.17 ಮಂಡ್ಯ ರೈಲು ನಿಲ್ದಾಣದಲ್ಲಿ ಅಪರಿಚಿತ ಮಹಿಳೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.ಮಹಿಳೆ ಪ್ಲಾಟ್‌ಫಾರ್ಮ್ ನಂ 2ರ ಬಳಿ ರೈಲ್ವೆ ಹಳಿಗಳ ಮೇಲೆ ನಡೆದುಕೊಂಡು ಹೋಗುತ್ತಿದ್ದರು ಎಂದು ಹೇಳಲಾಗಿದೆ. ಬೆಂಗಳೂರಿನಿಂದ ಮೈಸೂರಿಗೆ ಹೊರಟಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಅತ್ಯಂತ ವೇಗದಲ್ಲಿ ನಿಲ್ದಾಣವನ್ನು ದಾಟಿತು ಆ ವೇಳೆ ರೈಲು ಮಹಿಳೆಗೆ ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದರು ಎಂದು ವರದಿಗಳು ತಿಳಿಸಿವೆ.    

ಮಂಡ್ಯದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಸಿಕ್ಕಿ ಮಹಿಳೆ ಮೃತ್ಯು Read More »

ಕರ್ನಾಟಕ

ಕೌಟುಂಬಿಕ ಕಲಹ ಹಿನ್ನೆಲೆ➤ ಪತ್ನಿಯನ್ನೇ ಹತ್ಯೆಗೈದ ಪತಿ..!

(ನ್ಯೂಸ್ ಕಡಬ) newskadaba.com ಯಾದಗಿರಿ,ಮೇ.17 ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪತ್ನಿಯನ್ನು ಪತಿಯೇ ಹತ್ಯೆಗೈದ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ದೋರನಹಳ್ಳಿಯಲ್ಲಿ ನಡೆದಿದೆ.ಮಲಗಿದ್ದಾಗ ಕತ್ತು ಹಿಸುಕಿ ಪತ್ನಿಯನ್ನು ಹತ್ಯೆ ಮಾಡಿದ್ದಾನೆ. ಲಕ್ಷ್ಮೀ ಮೃತ ಮಹಿಳೆ. ನಿಂಗಪ್ಪ ಪತ್ನಿಯನ್ನೇ ಕೊಲೆಗೈದ ಪತಿ. ಕೌಟುಂಬಿಕ ಕಲಹದಿಂದಾಗಿ ಪತಿ ಹಾಗೂ ಪತ್ನಿ ಇಬ್ಬರೂ ದೂರವಿದ್ದರು.ಮಗಳ ಮದುವೆ ಎಂದು ಪತಿ ನಿಂಗಪ್ಪ ಮನೆಗೆ ವಾಪಸ್ ಬಂದಿದ್ದ. ರಾತ್ರಿ ಪತ್ನಿಯನ್ನು ಕತ್ತು ಹಿಸುಕಿ ಕೊಲೆ ಮಾಡಿ ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ. ಶಹಾಪುರ ಪೊಲೀಸ್

ಕೌಟುಂಬಿಕ ಕಲಹ ಹಿನ್ನೆಲೆ➤ ಪತ್ನಿಯನ್ನೇ ಹತ್ಯೆಗೈದ ಪತಿ..! Read More »

ಕರ್ನಾಟಕ

ಆಟೋಗೆ ಲಾರಿ ಡಿಕ್ಕಿ..!➤ಐವರು ಕೂಲಿ ಕಾರ್ಮಿಕರು ಮೃತ್ಯು

(ನ್ಯೂಸ್ ಕಡಬ) newskadaba.com  ತೆಲಂಗಾಣ,ಮೇ.17 ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಆಟೋಗೆ ಲಾರಿ ಡಿಕ್ಕಿ ಹೊಡೆದಿದ್ದು, ಈ ಅಪಘಾತದಲ್ಲಿ ಐವರು ಕೂಲಿ ಕಾರ್ಮಿಕರು ಮೃತಪಟ್ಟಿರುವ ಘಟನೆ ಎಪಿಯ ಪಲ್ನಾಡು ಜಿಲ್ಲೆಯಲ್ಲಿ ಸಂಭವಿಸಿದೆ. ಹತ್ತು ಮಂದಿ ಗಾಯಗೊಂಡಿದ್ದು, ಸ್ಥಳೀಯರು ಗಾಯಾಳುಗಳನ್ನು ಆಂಬ್ಯುಲೆನ್ಸ್ ಸಹಾಯದಿಂದ ಸ್ಥಳೀಯ ಗುರ್ಜಾಲ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು. ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.ರಸ್ತೆ ಅಪಘಾತದ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ಅವಲೋಕಿಸಿದರು. ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಆಟೋ ಮುಂಭಾಗ ನಜ್ಜುಗುಜ್ಜಾಗಿದೆ. ಇದರಿಂದ ಮೃತರ

ಆಟೋಗೆ ಲಾರಿ ಡಿಕ್ಕಿ..!➤ಐವರು ಕೂಲಿ ಕಾರ್ಮಿಕರು ಮೃತ್ಯು Read More »

ರಾಷ್ಟ್ರೀಯ ನ್ಯೂಸ್

ಮೋಚಾ ಚಂಡಮಾರುತಕ್ಕೆ ಮೃತಪಟ್ಟವರ ಸಂಖ್ಯೆ 41ಕ್ಕೆ ಏರಿಕೆಯಾಗಿದೆ.!

(ನ್ಯೂಸ್ ಕಡಬ) newskadaba.com ನವದೆಹಲಿ,ಮೇ.17 ಮಯೆನ್ಮಾರ್‌ ರಖೀನೆ ಪ್ರದೇಶ, ಮೋಚಾ ಚಂಡಮಾರುತದ ಅಬ್ಬರಕ್ಕೆ ಅಕ್ಷರಶಃ ನುಲುಗಿಹೋಗಿದ್ದು, ಪ್ರದೇಶದಲ್ಲಿ ಮೃತಪಟ್ಟವರ ಸಂಖ್ಯೆ 41ಕ್ಕೆ ಏರಿಕೆಯಾಗಿದೆ.ಗಂಟೆಗೆ 195 ಕಿ.ಮೀ.ವೇಗದ ಗಾಳಿ ಮಳೆಯ ಪರಿಣಾಮ ಭಾರೀ ಅವಘಡಗಳು ಸಂಭವಿಸಿವೆ.ಮನೆಗಳು, ಮರಗಳು ಮುರಿದುಬಿದ್ದಿವೆ. , 100ಕ್ಕೂ ಅಧಿಕ ಮಂದಿ ಕಾಣೆಯಾಗಿದ್ದಾರೆ. ಅವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಂತ್ರಸ್ಥರ ಸ್ಥಳಾಂತರ ಕಾರ್ಯಾಚರಣೆಯನ್ನೂ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ. ಬಾಂಗ್ಲಾದೇಶದಲ್ಲಿ ಚಂಡಮಾರುತದಿಂದಾಗಿ ಮರಗಳು ನೆಲಕ್ಕೆ ಉರುಳಿದ್ದು ಬಹುತೇಕ ಪ್ರದೇಶಗಳಲ್ಲಿ ವಿದ್ಯುತ್‌ ಕಡಿತಗೊಂಡಿದೆ.ಮತ್ತೊಂದೆಡೆ ಬಾಂಗ್ಲಾ-ಮ್ಯಾನ್ಮಾರ್‌ಗೆ

ಮೋಚಾ ಚಂಡಮಾರುತಕ್ಕೆ ಮೃತಪಟ್ಟವರ ಸಂಖ್ಯೆ 41ಕ್ಕೆ ಏರಿಕೆಯಾಗಿದೆ.! Read More »

ರಾಷ್ಟ್ರೀಯ ನ್ಯೂಸ್

ಟ್ರಕ್ ಟ್ರೇಲರ್ ಮತ್ತು ವ್ಯಾನ್ ನಡುವೆ ಅಪಘಾತ ➤ 26 ಮಂದಿ ಮೃತ್ಯು

(ನ್ಯೂಸ್ ಕಡಬ)newskadaba.com ಮೆಕ್ಸಿಕೋ, ಮೇ.16. ಉತ್ತರ ಮೆಕ್ಸಿಕನ್ ರಾಜ್ಯವಾದ ತಮೌಲಿಪಾಸ್‌ ನಲ್ಲಿ ಟ್ರಕ್ ಟ್ರೇಲರ್ ಮತ್ತು ವ್ಯಾನ್ ಅಪಘಾತಕ್ಕೀಡಾಗಿ ಬೆಂಕಿ ಹೊತ್ತಿಕೊಂಡು 26 ಮಂದಿ ಮೃತಪಟ್ಟಿದ್ದಾರೆ. ಖಾಸಗಿ ಸಾರಿಗೆ ಸಂಸ್ಥೆಗೆ ಸೇರಿದ ವ್ಯಾನ್ ನಲ್ಲಿ ಮಕ್ಕಳನ್ನು ಹಾಗೂ ಪ್ರಯಾಣಿಕರನ್ನು ಕೊಂಡ್ಯೊಯುವ ವೇಳೆಗೆ ಅಪಘಾತ ಸಂಭವಿಸಿ ಬೆಂಕಿ ಕಾಣಿಸಿಕೊಂಡ ಪರಿಣಾಮ  26 ಮಂದಿ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಟ್ರಕ್ ಚಾಲಕ ಕೂಡ ಸಾವನ್ನಪ್ಪಿದ್ದಾನೆಯೇ ಅಥವಾ ಅವನು ಪರಾರಿಯಾಗಿದ್ದಾನೆಯೇ ಎಂಬುದು ಖಚಿತವಾಗಿಲ್ಲ.  

ಟ್ರಕ್ ಟ್ರೇಲರ್ ಮತ್ತು ವ್ಯಾನ್ ನಡುವೆ ಅಪಘಾತ ➤ 26 ಮಂದಿ ಮೃತ್ಯು Read More »

ರಾಷ್ಟ್ರೀಯ ನ್ಯೂಸ್

ಮಗಳ ವಿವಾಹ ದಿನದಂದೇ ತಂದೆ ಹೃದಯಾಘಾತದಿಂದ ಮೃತ್ಯು

(ನ್ಯೂಸ್ ಕಡಬ)newskadaba.com ಕೊಣಾಜೆ, ಮೇ.16. ಬೋಳಿಯಾರ್ ನ ಕುಚುಗುಡ್ಡೆಯಲ್ಲಿ ಮಗಳ ಮದುವೆಯ ದಿನದಂದೇ ತಂದೆ ಹೃದಯಘಾತಗೊಂಡು ಮೃತಪಟ್ಟ ಘಟನೆ ಸಂಭವಿಸಿದೆ. ಮೃತಪಟ್ಟ‌ ವ್ಯಕ್ತಿಯನ್ನು ಬೋಳಿಯಾರ್ ನ ಕುಕ್ಕೋಟ್ಟು ಕುಚುಗುಡ್ಡೆಯ ಹಸನಬ್ಬ(60) ಎಂದು ಗುರುತಿಸಲಾಗಿದೆ. ಹಸನಬ್ಬ ಅವರ ಮಗಳಿಗೆ ಕಾಸರಗೋಡುವಿನ ಯುವಕನೊಂದಿಗೆ ಹೊಸಂಗಡಿಯ ಸಭಾಂಗಣವೊಂದರಲ್ಲಿ ಮದುವೆ ನಿಗಧಿಯಾಗಿತ್ತು.‌ ದುರದೃಷ್ಟವಶಾತ್ ಹಸನಬ್ಬರಿಗೆ ತೀವ್ರ ಎದೆನೋವು ಕಾಣಿಸಿಕೊಂಡಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯುವ ಪಯತ್ನ ಮಾಡಿದರೂ ಯಾವುದೇ ಪ್ರಯೋಜನವಾಗದೆ ಹೃದಯಾಘಾತದಿಂದ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಮಗಳ ವಿವಾಹ ದಿನದಂದೇ ತಂದೆ ಹೃದಯಾಘಾತದಿಂದ ಮೃತ್ಯು Read More »

ಕರ್ನಾಟಕ
Scroll to Top