death

ಆಟೊ ಪಲ್ಟಿ ➤ ಓರ್ವ ಮಹಿಳೆ ಮೃತ್ಯು ಹಾಗೂ ಆರು ಮಂದಿಗೆ ಗಾಯ

(ನ್ಯೂಸ್ ಕಡಬ) newskadaba.comಕೊಪ್ಪಳ, ಜ.03. ಆಟೊವೊಂದು ಪಲ್ಟಿಯಾದ ಪರಿಣಾಮ ಓರ್ವ ಮಹಿಳೆ ಸ್ಥಳದಲ್ಲೇ ಮೃತಪಟ್ಟ ಹಾಗೂ ಆರು ಮಂದಿ ಗಾಯಗೊಂಡ ಘಟನೆ ಕೊಪ್ಪಳ ಸಮೀಪದ ಒಜೋನಹಳ್ಳಿ ಕ್ರಾಸ್ ಬಳಿ ವರದಿಯಾಗಿದೆ. ಮೃತಪಟ್ಟವರನ್ನು ಅನ್ನಪೂರ್ಣಮ್ಮ (38) ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಸಮೀಪದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಗೌಂಡಿ ಕೆಲಸ ಮಾಡುವ ಕಾರ್ಮಿಕರ ಆಟೊದಲ್ಲಿ ತೆರಳುವಾಗ ಪ್ರಾಣಿಯೊಂದು ಅಡ್ಡ ಬಂದಿದ್ದರಿಂದ ಪಲ್ಟಿಯಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಆಟೊ ಪಲ್ಟಿ ➤ ಓರ್ವ ಮಹಿಳೆ ಮೃತ್ಯು ಹಾಗೂ ಆರು ಮಂದಿಗೆ ಗಾಯ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಸುಳ್ಯ : ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಮೃತ್ಯು

(ನ್ಯೂಸ್ ಕಡಬ) newskadaba.com  ಸುಳ್ಯ, ಜ.03. ಬಾವಿಗೆ ಹಾರಿ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸುಳ್ಯದ ಸಂಪಾಜೆ ಗ್ರಾಮದ ಕಲ್ಲುಗುಂಡಿಯಲ್ಲಿ ಸಂಭವಿಸಿದೆ. ಮೃತರನ್ನು ಬಾಬು ಡಿಸೋಜಾ ಅವರ ಪುತ್ರ ಡೆನಿಸ್ (51) ಎಂದು ಗುರುತಿಸಲಾಗಿದೆ.      ಕಳೆದ ಕೆಲವು ದಿನಗಳಿಂದ ಮಾನಸಿಕವಾಗಿ ಕುಗ್ಗಿ ಹೋಗಿದ್ದರು ಎಂದು ಹೇಳಲಾಗುತ್ತಿದ್ದು ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ ಎನ್ನಲಾಗಿದೆ. ಕಲ್ಲುಗುಂಡಿ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸಿದ್ದಾರೆ.    

ಸುಳ್ಯ : ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಮೃತ್ಯು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಆರು ಸರಣಿ ಅಪಘಾತ ➤ ಒಂದೇ ಕುಟುಂಬದ ಐವರು ಮೃತ್ಯು..!!

(ನ್ಯೂಸ್ ಕಡಬ) newskadaba.com .   ಚೆನ್ನೈ, ಜ. 03:  ಆರು ವಾಹನಗಳ ಸರಣಿ ಅಪಘಾತದಿಂದ ಒಂದೇ ಕುಟುಂಬದ ಐವರು ಮೃತಪಟ್ಟ ಘಟನೆ ತಮಿಳುನಾಡಿನ ಕಡಲೂರು ಜಿಲ್ಲೆಯ ತಿರುಚ್ಚಿ-ಚೆನ್ನೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ವರದಿಯಾಗಿದೆ. ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದ್ದಾರೆ. ವಾಹನದ ಆರ್‌ಸಿ ಪರಿಶೀಲನೆ ವೇಳೆ ಕಾರು ಚೆನ್ನೈನಲ್ಲಿ ನೋಂದಣಿ ಮಾಡಿರುವುದು ಬೆಳಕಿಗೆ ಬಂದಿದೆ ಎಂದರು. ಎರಡು ಬಸ್‌ಗಳು, ಎರಡು ಟ್ರಕ್‌ಗಳು ಮತ್ತು ಎರಡು

ಆರು ಸರಣಿ ಅಪಘಾತ ➤ ಒಂದೇ ಕುಟುಂಬದ ಐವರು ಮೃತ್ಯು..!! Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಬೆಳ್ತಂಗಡಿ : ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಜ.03. ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಕಲ್ಮಂಜ ಗ್ರಾಮದ ಕಜೆ ಸಮೀಪ ಸಂಭವಿಸಿದೆ. ಮೃತಪಟ್ಟ ಮಹಿಳೆಯನ್ನು ಸುಂದರಿ(25) ಎಂದು ಗುರುತಿಸಲಾಗಿದೆ. ಸುಂದರಿ ಎಂಬವರು ವಿಷ ಸೇವಿಸಿದ್ದು, ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎನ್ನಲಾಗಿದೆ.ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ. ಈ ಕುರಿತು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ವರದಿ ತಿಳಿಸಿದೆ.  

ಬೆಳ್ತಂಗಡಿ : ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ನೆಲ್ಯಾಡಿ : ಕಾಲು ಜಾರಿ ಕೆರೆಗೆ ಬಿದ್ದು ಓರ್ವ ಮಹಿಳೆ ಮೃತ್ಯು   

(ನ್ಯೂಸ್ ಕಡಬ) newskadaba.com  ನೆಲ್ಯಾಡಿ, ಜ.03. ಮಹಿಳೆಯೋರ್ವರು ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟಿರುವ ಘಟನೆ ಕಡಬ ತಾಲೂಕಿನ ನೆಲ್ಯಾಡಿ ಸಮೀಪದ ಕೊಣಾಲು ಗ್ರಾಮದಲ್ಲಿ ಸಂಭವಿಸಿದೆ. ಮೃತಪಟ್ಟವರನ್ನು ಕೊಣಾಲು ಗ್ರಾಮದ ನಿವಾಸಿ ಚೆನ್ನಮ್ಮ (70) ಎಂದು ಗುರುತಿಸಲಾಗಿದೆ. ಚೆನ್ನಮ್ಮರವರು ತೋಟಕ್ಕೆ ತೆರಳುತ್ತಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿದ್ದಾರೆ ಎನ್ನಲಾಗಿದೆ. ಮೃತದೇಹವನ್ನು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಮಹಜರು ನಡೆಸಲಾಗಿದೆ ಎನ್ನಲಾಗಿದೆ. ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ವರದಿ ತಿಳಿಸಿದೆ.      

ನೆಲ್ಯಾಡಿ : ಕಾಲು ಜಾರಿ ಕೆರೆಗೆ ಬಿದ್ದು ಓರ್ವ ಮಹಿಳೆ ಮೃತ್ಯು    Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಕೆರೆಗೆ ಆಕಸ್ಮಿಕವಾಗಿ ಬಿದ್ದು ಯುವಕ ಮೃತ್ಯು.!

 (ನ್ಯೂಸ್ ಕಡಬ) newskadaba.com ಬೆಂಗಳೂರು, ಜ.03.  ಕೆರೆಯಲ್ಲಿ ಮೀನು ಹಿಡಿಯಲು ಹೋಗಿ ಯುವಕನೋರ್ವ ಕೆರೆಗೆ ಬಿದ್ದು ಮೃತಪಟ್ಟ ಘಟನೆ ದೊಡ್ಡಬೆಳವಂಗಲ ಬಳಿ ವರದಿಯಾಗಿದೆ. ಮೃತ ಯುವಕನನ್ನು ಮದುರೆ ಹೋಬಳಿಯ ಪುಟ್ಟಯ್ಯ ಅಗ್ರಹಾರದ ನಿವಾಸಿ ಮುನಿರಾಜ್ (26) ಎಂದು ಗುರುತಿಸಲಾಗಿದೆ. ಕೆರೆಯಲ್ಲಿ ಮೀನು ಹಿಡಿಯಲು ಹೋಗಿ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ.ವಿಷಯ ತಿಳಿದ ತಕ್ಷಣ ಘಟನೆ ನಡೆದ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ಮೃತದೇಹವನ್ನು ಹೊರ ತೆಗೆದಿದ್ದಾರೆ  ಈ ಬಗ್ಗೆ ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು

ಕೆರೆಗೆ ಆಕಸ್ಮಿಕವಾಗಿ ಬಿದ್ದು ಯುವಕ ಮೃತ್ಯು.! Read More »

ಕರ್ನಾಟಕ, ಕ್ರೈಮ್ ನ್ಯೂಸ್

ಬೈಕ್ ಗೆ ಬಸ್ ಢಿಕ್ಕಿ ➤ ಸವಾರ ಸ್ಥಳದಲ್ಲೇ ಮೃತ್ಯು..!

(ನ್ಯೂಸ್ ಕಡಬ) newskadaba.com ರಾಮನಗರ, ಜ. 02.  ಖಾಸಗಿ ಬಸ್ಸೊಂದು ಬೈಕ್ ಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಚನ್ನಪಟ್ಟಣ ತಾಲೂಕಿನ ಪೊಲೀಸ್ ತರಬೇತಿ ಶಾಲೆ ಬಳಿ ವರದಿಯಾಗಿದೆ. ಮೃತರನ್ನು ತಡಿಕವಾಗಿಲು ಗ್ರಾಮದ ನಿವಾಸಿ ಶಿವಸ್ವಾಮಿ (51) ಎಂದು ಗುರುತಿಸಲಾಗಿದೆ. ಮೃತ ಶಿವಸ್ವಾಮಿ ಅವರು ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಚನ್ನಪಟ್ಟಣದದಿಂದ ರಾಮನಗರದ ಕಡೆಗೆ ಹೊರಡುತ್ತಿದ್ದ ಬಸ್ ಬೈಕ್ ಗೆ ಢಿಕ್ಕಿ ಹೊಡೆದು ನಂತರ ಡಿವೈಡರ್ ಗೆ ಗುದ್ದಿ ನಿಂತಿದೆ ಎನ್ನಲಾಗಿದೆ.

ಬೈಕ್ ಗೆ ಬಸ್ ಢಿಕ್ಕಿ ➤ ಸವಾರ ಸ್ಥಳದಲ್ಲೇ ಮೃತ್ಯು..! Read More »

ಕರ್ನಾಟಕ, ಕ್ರೈಮ್ ನ್ಯೂಸ್

ಬಾಂಬ್ ಸ್ಫೋಟ ➤ ನಾಲ್ವರು ಮೃತ್ಯು, ಹಲವರಿಗೆ ಗಾಯ

(ನ್ಯೂಸ್ ಕಡಬ) newskadaba.com ಜಮ್ಮು- ಕಾಶ್ಮೀರ, ಜ. 02. ಬಾಂಬ್ ಸ್ಫೋಟಗೊಂಡ ಪರಿಣಾಮ ಕನಿಷ್ಠ ನಾಲ್ವರು ನಾಗರಿಕರು ಮೃತಪಟ್ಟ ಹಲವರು ಗಾಯಗೊಂಡ ಘಟನೆ ಜಮ್ಮು ಕಾಶ್ಮೀರದ ರಜೌರಿ ಜಿಲ್ಲೆಯ ಹಳ್ಳಿಯಲ್ಲಿ ವರದಿಯಾಗಿದೆ. ಮೃತಪಟ್ಟಿರುವವರನ್ನು ಸತೀಶ್ ಕುಮಾರ್ (45), ದೀಪಕ್ ಕುಮಾರ್ (23), ಪ್ರೀತಮ್ ಲಾಲ್ (57) ಮತ್ತು ಶಿಶುಪಾಲ್ (32) ಹಾಗೂ ಗಾಯಗೊಂಡವರನ್ನು ಪವನ್ ಕುಮಾರ್ (38), ರೋಹಿತ್ ಪಂಡಿತ್ (27), ಸರೋಜ್ ಬಾಲಾ (35), ರಿದಮ್ ಶರ್ಮಾ (17) ಮತ್ತು ಪವನ್ ಕುಮಾರ್ (32) ಎಂದು

ಬಾಂಬ್ ಸ್ಫೋಟ ➤ ನಾಲ್ವರು ಮೃತ್ಯು, ಹಲವರಿಗೆ ಗಾಯ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಹೆಲಿಕಾಪ್ಟರ್ ಮಧ್ಯೆ ಡಿಕ್ಕಿ…!!  ➤ ನಾಲ್ವರು ಮೃತ್ಯು, ಮೂವರ ಸ್ಥಿತಿ ಚಿಂತಾಜನಕ 

(ನ್ಯೂಸ್ ಕಡಬ) newskadaba.com ಆಸ್ಟ್ರೇಲಿಯ, ಜ. 02. ಎರಡು ಹೆಲಿಕಾಪ್ಟರ್‌ಗಳ ನಡುವೆ ಢಿಕ್ಕಿ ಸಂಭವಿಸಿ ನಾಲ್ವರು ಮೃತಪಟ್ಟಿದ್ದು, ಮೂವರ ಸ್ಥಿತಿ ಚಿಂತಾಜನಕವಾಗಿರುವ ಘಟನೆ ಆಸ್ಟ್ರೇಲಿಯಾದ ಬ್ರಿಸ್ಬೇನ್‌ ನ ದಕ್ಷಿಣದಲ್ಲಿರುವ ಗೋಲ್ಡ್ ಕೋಸ್ಟ್ ಮೇನ್ ಬೀಚ್‌ ನ ಪ್ರವಾಸೋದ್ಯಮ ತಾಣದಲ್ಲಿ ವರದಿಯಾಗಿದೆ. ಎರಡು ಹೆಲಿಕಾಪ್ಟರ್‌ ಗಳು, ಡಿಕ್ಕಿಯಾಗಿ ಸೀ ವರ್ಲ್ಡ್ ರೆಸಾರ್ಟ್‌ನಿಂದ ಹೊರಗಿರುವ ಮರಳಿನ ದಂಡೆಯ ಮೇಲೆ ಬಿದ್ದವು. ತುರ್ತು ಸೇವೆಗಳು ಕರಾವಳಿಯಿಂದ ದೂರದಲ್ಲಿರುವ ಮರಳು ದಂಡೆಗೆ ಪ್ರವೇಶಿಸಲು ಕಷ್ಟಕರವಾಗಿದೆ. ಆದರೂ ಕಾರ್ಯಾಚರಣೆ ಆರಂಭವಾಗಿದೆ ಎಂದು ಆಗ್ನೇಯ ಪ್ರದೇಶದ

ಹೆಲಿಕಾಪ್ಟರ್ ಮಧ್ಯೆ ಡಿಕ್ಕಿ…!!  ➤ ನಾಲ್ವರು ಮೃತ್ಯು, ಮೂವರ ಸ್ಥಿತಿ ಚಿಂತಾಜನಕ  Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಟಾಟಾ ಸನ್ಸ್‌ನ ಮಾಜಿ ನಿರ್ದೇಶಕ ಆರ್‌. ಕೃಷ್ಣಕುಮಾರ್ ವಿಧಿವಶ

(ನ್ಯೂಸ್ ಕಡಬ) newskadaba.com ಮುಂಬಯಿ, ಜ. 02. ಟಾಟಾ ಗ್ರೂಪ್ ನಲ್ಲಿ ಹಲವು ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದ ಹಾಗೂ ರತನ್ ಟಾಟಾ ಅವರಿಗೆ ಆತ್ಮೀಯರಾಗಿದ್ದ ಕೇರಳ ಮೂಲದ ಆರ್. ಕೃಷ್ಣಕುಮಾರ್(84) ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಇವರು ಟಾಟಾ ಸಮೂಹದ ಇಂಡಿಯನ್ ಹೋಟೆಲ್ಸ್ ಮುಖ್ಯಸ್ಥ ಸೇರಿದಂತೆ ವಿವಿಧ ಪ್ರಮುಖ ಹುದ್ದೆಗಳನ್ನು ನಿರ್ವಹಿಸಿದ್ದರು. ಕೃಷ್ಣಕುಮಾರ್ ನಿಧನಕ್ಕೆ ರತನ್ ಟಾಟಾ ಸಂತಾಪ ಸೂಚಿಸಿದ್ದು, ನನ್ನ ಸ್ನೇಹಿತ, ಸಹೋದ್ಯೋಗಿಯ ಅಗಲಿಕೆಯನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ಉದ್ಯಮ ಮತ್ತು ವೈಯಕ್ತಿಕವಾಗಿ ಅವರ ಜೊತೆಗಿನ ಒಡನಾಟವನ್ನು ಸದಾ ಸ್ಮರಿಸುತ್ತೇನೆ.

ಟಾಟಾ ಸನ್ಸ್‌ನ ಮಾಜಿ ನಿರ್ದೇಶಕ ಆರ್‌. ಕೃಷ್ಣಕುಮಾರ್ ವಿಧಿವಶ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Scroll to Top