death

ಮೆಟಲ್ ಪ್ಲೇಟ್ ಮೈಮೇಲೆ ಬಿದ್ದು ಮಹಿಳೆ ಮೃತ್ಯು..!

(ನ್ಯೂಸ್ ಕಡಬ) newskadaba.com ಥಾಣೆ, ಜ. 05.    ಮೆಟ್ರೋ ನಿರ್ಮಾಣ ಕಾಮಗಾರಿಯ ಸ್ಥಳದಲ್ಲಿ ಹೆವಿ ಮೆಟಲ್ ಪ್ಲೇಟ್ ಮೈಮೇಲೆ ಬಿದ್ದು ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ಥಾಣೆ ನಗರದ ಈಸ್ಟರ್ನ್ ಎಕ್ಸ್‌ಪ್ರೆಸ್ ಹೆದ್ದಾರಿಯ ಮಾಲ್ ಬಳಿ ವರದಿಯಾಗಿದೆ. ಮೃತ ಮಹಿಳೆಯನ್ನು ಸುನೀತಾ ಕಾಂಬಳೆ (37) ಎಂದು ಗುರುತಿಸಲಾಗಿದೆ. ಪಿಲ್ಲರ್‌ ನಿರ್ಮಾಣಕ್ಕೆಂದು ಅಗೆದ ಹೊಂಡದ ಸಮೀಪ ಈ ಅವಘಡ ಸಂಭವಿಸಿದ್ದು, ಸ್ಥಳೀಯ ಅಗ್ನಿಶಾಮಕ ಸಿಬ್ಬಂದಿ ಮತ್ತು ಆರ್‌ಡಿಎಂಸಿಯ ತಂಡವು ಸ್ಥಳಕ್ಕೆ ಧಾವಿಸಿ ಮಹಿಳೆಯನ್ನು ಹೊಂಡದಿಂದ ಹೊರತೆಗೆದಿದ್ದಾರೆ.

ಮೆಟಲ್ ಪ್ಲೇಟ್ ಮೈಮೇಲೆ ಬಿದ್ದು ಮಹಿಳೆ ಮೃತ್ಯು..! Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

250 ಪ್ರಕರಣದ ಬೇಧಿಸಿದ್ದ ಶ್ವಾನ ದಳದ ‘ರಾಮ್‌’ ಹೃದಯಾಘಾತದಿಂದ ಮೃತ್ಯು ➤ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ!

(ನ್ಯೂಸ್ ಕಡಬ) newskadaba.com ರಾಮನಗರ, ಜ. 05. ಕಳೆದ ಆರು ವರ್ಷಗಳಿಂದ ಅಪರಾಧ ಪತ್ತೆ ಕಾರ್ಯಾಚರಣೆಯಲ್ಲಿ ನಿಷ್ಣಾತನಾಗಿದ್ದ ಶ್ವಾನ ರಾಮ್‌ ಹೃದಯಾಘಾತದಿಂದ ಮೃತಪಟ್ಟ ಘಟನೆ ರಾಮನಗರದಲ್ಲಿ ವರದಿಯಾಗಿದೆ. ಫೆಬ್ರವರಿ 8, 2017 ರಂದು ಜನಿಸಿದ ರಾಮ್, ಸುಮಾರು 250 ಪ್ರಕರಣಗಳಲ್ಲಿ ಪೊಲೀಸರಿಗೆ ಸಹಾಯ ಮಾಡಿದ ಡಾಬರ್ಮನ್ ಪಿನ್ಷರ್ ಆಗಿದ್ದ, ಈ ಪೈಕಿ ಪೊಲೀಸರ ಕೈಯಿಂದಲೂ ಪತ್ತೆಹಚ್ಚಲಾಗದ 30 ಕ್ಕೂ ಹೆಚ್ಚು ಪ್ರಕರಣಗಳಲ್ಲಿ ರಾಮ್ ಶ್ವಾನ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿ ಆಗಿತ್ತು. ಇದರಿಂದಾಗಿಯೇ ಜಿಲ್ಲಾ ಪೊಲೀಸ್‌ ಘಟಕದಲ್ಲಿ

250 ಪ್ರಕರಣದ ಬೇಧಿಸಿದ್ದ ಶ್ವಾನ ದಳದ ‘ರಾಮ್‌’ ಹೃದಯಾಘಾತದಿಂದ ಮೃತ್ಯು ➤ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ! Read More »

ಕರ್ನಾಟಕ, ಕ್ರೈಮ್ ನ್ಯೂಸ್

ಸ್ಕೂಟಿಗೆ ಟ್ರಕ್ ಢಿಕ್ಕಿ, ಮಹಿಳೆಯನ್ನು 3 ಕಿ.ಮೀ ಎಳೆದೊಯ್ದ ಟ್ರಕ್..!!

(ನ್ಯೂಸ್ ಕಡಬ) newskadaba.com ಲಖನೌ, ಜ. 05.  ದೆಹಲಿಯಲ್ಲಿ ಹೊಸ ವರ್ಷದ ಆಚರಣೆಯ ಆಸುಪಾಸಿನಲ್ಲಿ ನಡೆದಿದ್ದ ಭೀಕರ ರಸ್ತೆ ಅಪಘಾತದ ಪ್ರಕರಣ ಮಾಸುವ ಮುನ್ನವೇ ಅಂಥಹದ್ದೇ ಮತ್ತೊಂದು ಪ್ರಕರಣ ಉತ್ತರ ಪ್ರದೇಶದಲ್ಲಿ ವರದಿಯಾಗಿದೆ.  ರಾಷ್ಟ್ರ ರಾಜಧಾನಿಯಲ್ಲಿ ಬಲೇನೋ ಕಾರುವೊಂದು 20 ವರ್ಷದ ಯುವತಿಯ ಸ್ಕೂಟಿಗೆ ಢಿಕ್ಕಿ ಹೊಡೆದು ಆಕೆಯನ್ನು 12 ಕಿ.ಮೀ ಎಳೆದೊಯ್ದಿತ್ತು. ಈಗ ಉತ್ತರ ಪ್ರದೇಶದ ಬಾಂದದಲ್ಲಿ ಟ್ರಕ್ ಒಂದು ಸ್ಕೂಟಿಗೆ ಢಿಕ್ಕಿ ಹೊಡೆದು ಮಹಿಳೆಯನ್ನು 3 ಕಿ.ಮೀ ವರೆಗೂ ಎಳೆದೊಯ್ದಿದೆ ಎನ್ನಲಾಗಿದೆ. ಬಾಂದಾ ಜಿಲ್ಲೆಯ

ಸ್ಕೂಟಿಗೆ ಟ್ರಕ್ ಢಿಕ್ಕಿ, ಮಹಿಳೆಯನ್ನು 3 ಕಿ.ಮೀ ಎಳೆದೊಯ್ದ ಟ್ರಕ್..!! Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಹೃದಯಾಘಾತದಿಂದಾಗಿ ಹೆಡ್ ಕಾನ್ಸ್‌ಟೇಬಲ್ ಮೃತ್ಯು.!!

 (ನ್ಯೂಸ್ ಕಡಬ) newskadaba.com ಬೆಂಗಳೂರು, ಜ.04.  ಹೆಡ್ ಕಾನ್ಸ್‌ಟೇಬಲ್ ನೋರ್ವರು  ಹೃದಯಘಾತದಿಂದಾಗಿ ಮೃತಪಟ್ಟ ಘಟನೆ ಬೆಂಗಳೂರುನಲ್ಲಿ ವರದಿಯಾಗಿದೆ. ಮೃತರನ್ನು ಹೆಬ್ಬಾಳ ಠಾಣೆಯ ಕಾನ್ಸ್‌ಟೇಬಲ್ ವಿರೂಪಾಕ್ಷಪ್ಪ ಎಂದು ಗುರುತಿಸಲಾಗಿದೆ. ಬುಧವಾರ ಬೆಳಗ್ಗೆ 7 ಗಂಟೆಯ ಹೊತ್ತಿನಲ್ಲಿ ಹೊಯ್ಸಳ ವಾಹನದಲ್ಲಿ ರೌಂಡ್ಸ್ ನಲ್ಲಿದ್ದಾಗ ತಲೆಸುತ್ತಿ ಬಿದ್ದಿದ್ದರು, ಇದೇ ವೇಳೆ ಪೊಲೀಸರು ಹೊಯ್ಸಳ ವಾಹನದಲ್ಲೇ ಬ್ಯಾಪಿಸ್ಟ್ ಆಸ್ಪತ್ರೆಗೆ ದಾಖಲಿಸಿದದ್ದರು. ಹೆಡ್ ಕಾನ್ಸ್‌ಟೇಬಲ್ ವಿರೂಪಾಕ್ಷಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟರು, ವಿರೂಪಾಕ್ಷಪ್ಪ ಮೂಲತಃ ಬಿಜಾಪುರ ಜಿಲ್ಲೆಯಯವರಾಗಿದ್ದು, 2008 ರಲ್ಲಿ ಪೊಲೀಸ್ ಇಲಾಖೆ ಆಯ್ಕೆಯಾಗಿದ್ದರು

ಹೃದಯಾಘಾತದಿಂದಾಗಿ ಹೆಡ್ ಕಾನ್ಸ್‌ಟೇಬಲ್ ಮೃತ್ಯು.!! Read More »

ಕರ್ನಾಟಕ, ಕ್ರೈಮ್ ನ್ಯೂಸ್

ಮಂಗಳೂರು: ಶ್ವಾನ ದಳದ ‘ಜ್ವಾಲಾ’ ಮೃತ್ಯು..!

 (ನ್ಯೂಸ್ ಕಡಬ) newskadaba.com ಮಂಗಳೂರು, ಜ.04.  ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ನ ಶ್ವಾನ ದಳದ ಏಳು ವರ್ಷ ಹತ್ತು ತಿಂಗಳು ಪ್ರಾಯದ ಹೆಣ್ಣು ನಾಯಿ ‘ಜ್ವಾಲಾ’ ಮೂತ್ರಪಿಂಡದ ಸಮಸ್ಯೆಯಿಂದಾಗಿ ಮಂಗಳವಾರ ಮೃತಪಟ್ಟಿದೆ ಎಂದು ವರದಿಯಾಗಿದೆ. ಅಂತಿಮ ಗೌರವ ಸಲ್ಲಿಸಿ ಅದರ ಅಂತ್ಯಕ್ರಿಯೆ ನೆರವೇರಿಸಲಾಯಿತು ಎಂದು ತಿಳಿದುಬಂದಿದೆ. ದಕ್ಷಿಣ ಕನ್ನಡ ಜಿಲ್ಲಾ ವರಿಷ್ಠಾಧಿಕಾರಿ ಹೃಷಿಕೇಶ್ ಸೋನಾವಣೆ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ’ಜ್ವಾಲಾ’ ಗೆ ಅಂತಿಮ ನಮನ ಸಲ್ಲಿಸಿದ್ದಾರೆ ಎನ್ನಲಾಗಿದೆ. ‘ಡಾಬರ್ ಮನ್ ಪಿಂಚೆರ್ ತಳಿಯಾದ ಜ್ವಾಲಾ

ಮಂಗಳೂರು: ಶ್ವಾನ ದಳದ ‘ಜ್ವಾಲಾ’ ಮೃತ್ಯು..! Read More »

ಕರಾವಳಿ, ಕ್ರೈಮ್ ನ್ಯೂಸ್

ರಸ್ತೆ ಅಪಘಾತ ➤ ಬಾಲಕಿ ಸ್ಥಳದಲ್ಲೇ ಮೃತ್ಯು..!!!

(ನ್ಯೂಸ್ ಕಡಬ) newskadaba.com ಬೆಳಗಾವಿ, ಜ. 04.  ತನ್ನ ಗ್ರಾಮಕ್ಕೆ ನಿತ್ಯ ಬಸ್‌ ಸಂಚಾರಕ್ಕೆ ಆಗ್ರಹಿಸಿ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮನೆಗೆ ಮರಳುತ್ತಿದ್ದ ಬಾಲಕಿಯೊಬ್ಬಳು ರಸ್ತೆ ಅಪಘಾತದಲ್ಲಿ ಮೃತಪಟ್ಟಿಸುವ ಘಟನೆ ಕಿತ್ತೂರು ತಾಲೂಕಿನ ನಿಚ್ಚಣಕಿ ಗ್ರಾಮದಲ್ಲಿ  ಸಂಭವಿಸಿದೆ. ಮೃತ ಬಾಲಕಿಯನ್ನು ಅಕ್ಷತಾ ಈರಪ್ಪ ಹುಲಿಕಟ್ಟಿ ಎಂದು ಗುರುತಿಸಲಾಗಿದೆ. ಈಕೆ ಕಿತ್ತೂರು ಸರಕಾರಿ ಪ್ರೌಢಶಾಲೆಯಲ್ಲಿ 8ನೇ ತರಗತಿಯನ್ನು ಬಾಲಕಿ ವ್ಯಾಸಂಗ ಮಾಡುತ್ತಿದ್ದಳು ಎನ್ನಲಾಗಿದೆ. ಅಕ್ಷತಾ ಮತ್ತು ಅವರ ಸ್ನೇಹಿತರು ಹಲವು ಬಾರಿ ಪ್ರತಿಭಟನೆ ನಡೆಸಿ ಕಿತ್ತೂರು ಶಾಸಕ ಮಹಾಂತೇಶ

ರಸ್ತೆ ಅಪಘಾತ ➤ ಬಾಲಕಿ ಸ್ಥಳದಲ್ಲೇ ಮೃತ್ಯು..!!! Read More »

ಕರ್ನಾಟಕ, ಕ್ರೈಮ್ ನ್ಯೂಸ್

ರಸ್ತೆಯ ಗುಂಡಿ ತಪ್ಪಿಸಲು ಹೋದ ಯುವತಿಯ ಮೇಲೆ ಟ್ರಕ್ ಹರಿದು ಯುವತಿ ಮೃತ್ಯು..!

(ನ್ಯೂಸ್ ಕಡಬ) newskadaba.com .  ಚೆನ್ನೈ, ಜ. 04.   ರಸ್ತೆಯ ಗುಂಡಿ ತಪ್ಪಿಸಲು ಹೋಗಿ ಕೆಳಗೆ ಬಿದ್ದ ಯುವತಿ ಮೇಲೆ ಟ್ರಕ್ ಹರಿದು ಯುವತಿ ಸ್ಥಳದಲ್ಲೇ ಮೃತಪಟ್ಟ ಭೀಕರ ಘಟನೆ  ಚಿನ್ನೈ ಸಮೀಪದ ಮಧುರವಾಯಲ್ ನಲ್ಲಿ ಸಂಭವಿಸಿದೆ. ಸ್ಥಳದಿಂದ ಟ್ರಕ್ ಚಾಲಕ ಪರಾರಿಯಾಗಿದ್ದಾನೆ ಎನ್ನಲಾಗಿದೆ.   ಮೃತಳನ್ನು ಶೋಭನಾ (22) ಎಂದು ಗುರುತಿಸಲಾಗಿದೆ. ಈಕೆ ಜೋಹೋ ಹೆಸರಿನ ಖಾಸಗಿ ಕಂಪನಿಯೊಂದರಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡಿತ್ತಿದ್ದಳು ಎನ್ನಲಾಗಿದೆ. ನೀಟ್ ಕೋಚಿಂಗ್ ತರಗತಿಗೆ ತನ್ನ ಸಹೋದರನನ್ನು ಬಿಡಲು ತೆರಳುತ್ತಿದ್ದ

ರಸ್ತೆಯ ಗುಂಡಿ ತಪ್ಪಿಸಲು ಹೋದ ಯುವತಿಯ ಮೇಲೆ ಟ್ರಕ್ ಹರಿದು ಯುವತಿ ಮೃತ್ಯು..! Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಬೈಕ್ ಗೆ ಗುದ್ದಿದ ಕಾರು ➤ ರೈತ ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ) newskadaba.com .  ಆನೇಕಲ್‌, ಜ. 03.  ರೈತನೋರ್ವ ತನ್ನ ಬೈಕಿನಲ್ಲಿ ಬರುತ್ತಿದ್ದ ವೇಳೆ ಹಿಂದಿನಿಂದ ವೇಗವಾಗಿ ಬಂದ ಕಾರೊಂದು ಬೈಕ್‌ಗೆ ಗುದ್ದಿ  ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟ ಭೀಕರ ಘಟನೆ ಆನೇಕಲ್‌ ಠಾಣಾ ವ್ಯಾಪ್ತಿಯ ಸುರಗಜಕ್ಕನ ಹಳ್ಳಿ ಬಳಿ ಸಂಭವಿಸಿದೆ. ಮೃತ ರೈತನನ್ನು ಕುಂಬಾರನಹಳ್ಳಿ ವಾಸಿ ನಂಜುಂಡರೆಡ್ಡಿ ಎಂದು ಗುರುತಿಸಲಾಗಿದೆ .ಜಿಗಣಿ ರಸ್ತೆಯಿಂದ ಆನೇಕಲ್‌ ಕಡೆಗೆ ಬರುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಕಾರು ಚಾಲಕ ಕಾರುನಿಲ್ಲಿಸದೇ ಅದೇ ವೇಗದಲ್ಲಿ ಹೋಗಿದ್ದಾನೆ ಎಂದು

ಬೈಕ್ ಗೆ ಗುದ್ದಿದ ಕಾರು ➤ ರೈತ ಸ್ಥಳದಲ್ಲೇ ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್

ಈಜು ಬಾರದೆ ಮೂವರು ಯುವಕರು ನೀರುಪಾಲು

 (ನ್ಯೂಸ್ ಕಡಬ) newskadaba.com ರಾಣೆಬೆನ್ನೂರು, ಜ.03. ತುಂಗಾಭದ್ರಾ ನದಿಯಲ್ಲಿ ಈಜಲು ಹೋಗಿದ್ದ ಮೂವರು ಯುವಕರು ನೀರುಪಾಲಾದ ಘಟನೆ ಹಾವೇರಿ ಜಿಲ್ಲಾಯ ರಾಣೆಬೆನ್ನೂರು ತಾಲೂಕಿನ ಮುದೇನೂರು ಗ್ರಾಮದ ಬಳಿ ವರದಿಯಾಗಿದೆ. ಮೃತಪಟ್ಟ ಯುವಕರನ್ನು ನವೀನ್ ಕುರಗುಂದ (20), ವಿಕಾಸ್ ಪಾಟೀಲ್ (20), ಹಾಗೂ ನೆಪಾಳ ಪ್ರೇಮ್ ಬೋರಾ (25) ಎಂದು ಗುರುತಿಸಲಾಗಿದೆ. ಈ ಯುವಕರು ಈಜು ಬಾರದೆ ನೀರುಪಾಲಾಗಿದ್ದಾರೆನ್ನಲಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಬಂದು ನದಿಯಲ್ಲಿ ಶೋಧ ಕಾರ್ಯ ನಡೆಸಿ ವಿಕಾಸ ಎಂಬವರ ಮೃತದೇಹ

ಈಜು ಬಾರದೆ ಮೂವರು ಯುವಕರು ನೀರುಪಾಲು Read More »

ಕರ್ನಾಟಕ, ಕ್ರೈಮ್ ನ್ಯೂಸ್

ಬಸ್ ಹರಿದು ವಿದ್ಯಾರ್ಥಿ ಮೃತ್ಯು..!!!

(ನ್ಯೂಸ್ ಕಡಬ) newskadaba.com .   ಮೂಲ್ಕಿ, ಜ. 03:  ಬಸ್ ಹರಿದು ಶಾಲಾ ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ಮೂಲ್ಕಿಯ ಕಿನ್ನಿಗೋಳಿ ಬಳಿಯ ಉಲ್ಲಂಜೆಯಲ್ಲಿ ವರದಿಯಾಗಿದೆ. ಮೃತಬಾಲಕನನ್ನು ಉಲ್ಲಂಜೆಯ ನಿವಾಸಿ ಗಣೇಶ್ ಅವರ ಪುತ್ರ ಚರಣ್ (15) ಎಂದು ಗುರುತಿಸಲಾಗಿದೆ. ಈತ ಶ್ರೀದುರ್ಗಾಪರಮೇಶ್ವರಿ ದೇವಳದ ಪ್ರೌಢಶಾಲೆ 9ನೇ ತರಗತಿ ಓದುತ್ತಿದ್ದ ಎನ್ನಲಾಗಿದೆ. ಮೃತಬಾಲಕ ಶಾಲೆ ಬಿಟ್ಟುಮನೆಯತ್ತ ತೆರಳುವಾಗ ಸ್ಕೂಟರ್ ಸವಾರರೊಬ್ಬರಲ್ಲಿ ಲಿಫ್ಟ್ ಕೇಳಿದ್ದು, ಅವರೊಂದಿಗೆ ಸಾಗುವಾಗ ತಿರುವಿನಲ್ಲಿ ಸ್ಕೂಟರ್ ನಿಯಂತ್ರಣ ತಪ್ಪಿ ರಸ್ತೆಗೆ  ಬಿದ್ದಿದೆ. ಈ ವೇಳೆ

ಬಸ್ ಹರಿದು ವಿದ್ಯಾರ್ಥಿ ಮೃತ್ಯು..!!! Read More »

ಕರಾವಳಿ, ಕ್ರೈಮ್ ನ್ಯೂಸ್
Scroll to Top