ನೆಲ್ಯಾಡಿ : ಕಾಲು ಜಾರಿ ಕೆರೆಗೆ ಬಿದ್ದು ಓರ್ವ ಮಹಿಳೆ ಮೃತ್ಯು   



(ನ್ಯೂಸ್ ಕಡಬ) newskadaba.com  ನೆಲ್ಯಾಡಿ, ಜ.03. ಮಹಿಳೆಯೋರ್ವರು ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟಿರುವ ಘಟನೆ ಕಡಬ ತಾಲೂಕಿನ ನೆಲ್ಯಾಡಿ ಸಮೀಪದ ಕೊಣಾಲು ಗ್ರಾಮದಲ್ಲಿ ಸಂಭವಿಸಿದೆ.







ಮೃತಪಟ್ಟವರನ್ನು ಕೊಣಾಲು ಗ್ರಾಮದ ನಿವಾಸಿ ಚೆನ್ನಮ್ಮ (70) ಎಂದು ಗುರುತಿಸಲಾಗಿದೆ. ಚೆನ್ನಮ್ಮರವರು ತೋಟಕ್ಕೆ ತೆರಳುತ್ತಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿದ್ದಾರೆ ಎನ್ನಲಾಗಿದೆ. ಮೃತದೇಹವನ್ನು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಮಹಜರು ನಡೆಸಲಾಗಿದೆ ಎನ್ನಲಾಗಿದೆ. ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ವರದಿ ತಿಳಿಸಿದೆ.






 

 

 

error: Content is protected !!
Scroll to Top