dead body

Death, deadbody, Waterfall

ಬಂಟ್ವಾಳ: ರೈಲ್ವೆ ಬ್ರಿಡ್ಜ್ ನಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ..!

(ನ್ಯೂಸ್ ಕಡಬ)newskadaba.com ಬಂಟ್ವಾಳ, ಫೆ.03. ಬಿ.ಸಿ ರೋಡಿನ ಮುಖ್ಯ ವೃತ್ತದ ಬಳಿ ರೈಲ್ವೆ ಓವರ್ ಬ್ರಿಡ್ಜ್ ನಲ್ಲಿ ಅಪರಿಚಿತ ವ್ಯಕ್ತಿಯ ಶವವೊಂದು ಪತ್ತೆಯಾಗಿದೆ ಎನ್ನಲಾಗಿದೆ. ಸುಮಾರು 55 ಪ್ರಾಯದ ಅಪರಿಚಿತ ವ್ಯಕ್ತಿ ಮಲಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅಪರಿಚಿತ ವ್ಯಕ್ತಿ ಅಮಲು ಪದಾರ್ಥ ಸೇವಿಸಿ ಮಲಗಿದ್ದ ಎಂದು ಹೇಳಲಾಗಿದೆ. ಸಾರ್ವಜನಿಕರು ಮೃತದೇಹವನ್ನು ನೋಡಿ ಪೋಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂಟ್ವಾಳ ‌ನಗರ ಠಾಣಾ ಎಸ್. ಐ.ರಾಮಕೃಷ್ಣ ಹಾಗೂ ಸಿಬ್ಬಂದಿ ಗಳು ಭೇಟಿ ನೀಡಿ ಶವವನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ […]

ಬಂಟ್ವಾಳ: ರೈಲ್ವೆ ಬ್ರಿಡ್ಜ್ ನಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ..! Read More »

ಕರಾವಳಿ, ಕ್ರೈಮ್ ನ್ಯೂಸ್

ಕಾಸರಗೋಡು: ಶೆಡ್ ನಲ್ಲಿ ಮಹಿಳೆಯ ಮೃತದೇಹ ಪತ್ತೆ

(ನ್ಯೂಸ್ ಕಡಬ)newskadaba.com ಕಾಸರಗೋಡು, ಫೆ.02. ಪೆರ್ಲ ಸಮೀಪದ ಏಳ್ಕಾನ ಶೇಣಿ ಎಂಬಲ್ಲಿ ರಬ್ಬರ್ ಎಸ್ಟೇಟ್ ನ ಶೆಡ್ ನೊಳಗೆ ಮಹಿಳೆಯೋರ್ವರ ಮೃತದೇಹ ಪತ್ತೆಯಾಗಿದೆ. ಕೊಲ್ಲಂ ಮೂಲದ ನೀತು ಕೃಷ್ಣ ಮೃತಪಟ್ಟವರು ಎಂದು ಗುರುತಿಸಲಾಗಿದೆ. ಮಹಿಳೆಯ ಪತಿ ವಯನಾಡ್ ಮೂಲದ ಆಂಟೋ ಸೆಬಾಸ್ಟಿಯನ್ ಎಂಬಾತ ನಾಪತ್ತೆಯಾಗಿದ್ದು ಸಂಶಯಕ್ಕೆ ಕಾರಣವಾಗಿದೆ. ಒಂದೂವರೆ ತಿಂಗಳ ಹಿಂದೆ ಈ ದಂಪತಿ ರಬ್ಬರ್ ಟ್ಯಾಪಿಂಗ್ ವೃತ್ತಿಗಾಗಿ ಆಗಮಿಸಿದ್ದರು. ಇವರು ವಾಸಿಸುತ್ತಿದ್ದ ಮನೆ ಸಮೀಪದ ಶೆಡ್ ನಲ್ಲಿ ಇತರ ಕಾರ್ಮಿಕರಾದ ವೆಳ್ಳರಿಕುಂಡುವಿನ ರಿಜೋ ಹಾಗೂ ಪಶ್ಚಿಮ

ಕಾಸರಗೋಡು: ಶೆಡ್ ನಲ್ಲಿ ಮಹಿಳೆಯ ಮೃತದೇಹ ಪತ್ತೆ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಮಂಗಳೂರು: ನದಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ

(ನ್ಯೂಸ್ ಕಡಬ)newskadaba.com ಮಂಗಳೂರು, ಜ.30. ಕಲ್ಲಾಪು ಸನಿಹ ನೇತ್ರಾವತಿ ನದಿಯ ತಂತ್ರಿ ರಸ್ತೆ ಬಳಿ ಅಪರಿಚಿತ ಮೃತದೇಹ ಪತ್ತೆಯಾದ ಘಟನೆ ಮಂಗಳೂರಿನಲ್ಲಿ ವರದಿಯಾಗಿದೆ. ಮೂರು ದಿನಗಳ ಹಿಂದೆ ನದಿಗೆ ಬಿದ್ದು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದ್ದು, ಲುಂಗಿ, ಟೀಶರ್ಟ್ ಧರಿಸಿದ್ದು ಕೈಯಲ್ಲಿ ವಾಚ್, ಪತ್ತೆಯಾಗಿದೆ. ಮೃತದೇಹ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿದ್ದು, ಉಳ್ಳಾಲ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಕೈಗೆತ್ತಿಕೊಂಡಿದ್ದಾರೆ. ಬಜಾಲ್ ಅಥವಾ ಬಂಟ್ವಾಳ ಭಾಗದಲ್ಲಿ ನದಿಗೆ ಬಿದ್ದಿರುವ ಶಂಕೆವ್ಯಕ್ತವಾಗಿದ್ದು , ನದಿ ಮಧ್ಯದಲ್ಲಿ ತೇಲುತ್ತಿದ್ದ ಮೃತದೇಹವನ್ನು ಸಮಾಜ ಸೇವಕ

ಮಂಗಳೂರು: ನದಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ Read More »

ಕರಾವಳಿ, ಕ್ರೈಮ್ ನ್ಯೂಸ್

ಅರಣ್ಯದಲ್ಲಿ ನಿಗೂಢವಾಗಿ ಸಿಕ್ಕ ಸೂಟ್​ಕೇಸ್​ ತೆರೆದ ಪೊಲೀಸರಿಗೆ ಕಾದಿತ್ತು ಶಾಕ್​..!

(ನ್ಯೂಸ್ ಕಡಬ)newskadaba.com ಭುವನೇಶ್ವರ, ಜ.25. ಒಡಿಶಾದ ಗ್ರಾಮವೊಂದರ ಸಮೀಪದ ಅರಣ್ಯದಲ್ಲಿ ಅನಾಥವಾಗಿ ಬಿದ್ದಿದ್ದ ಸೂಟ್​ಕೇಸ್ ತೆರೆದ ಪೊಲೀಸರು ಅದರಲ್ಲಿದ್ದ ವ್ಯಕ್ತಿಯೊಬ್ಬನ ಶವವನ್ನು ಕಂಡು ಶಾಕ್​ ಆಗಿದ್ದಾರೆ. ಈ ಘಟನೆ ಖೋರ್ಧಾ ಜಿಲ್ಲೆಯ ನಚುನಿ ಪೊಲೀಸ್​ ಠಾಣಾ ವ್ಯಾಪ್ತಿಯ ಹರಿಪುರ ಗ್ರಾಮದ ಸಮೀಪ ಇರುವ ಅರಣ್ಯದಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಮನೋರಂಜನ್​ ಮೋಹಪಾತ್ರ (32) ಎಂದು ಗುರುತಿಸಲಾಗಿದೆ. ಆತ ರಣಪುರ್ ಬ್ಲಾಕ್ ಅಡಿಯಲ್ಲಿ ಬರುವ ಬಲಭದ್ರಪುರ ಪಂಚಾಯತ್‌ನ ಲಖಪದ ಗ್ರಾಮದ ಗಂಗಾಧರ್ ಅವರ ಪುತ್ರ. ಉರುವಲು ಸಂಗ್ರಹಿಸಲು ಕಾಡಿಗೆ

ಅರಣ್ಯದಲ್ಲಿ ನಿಗೂಢವಾಗಿ ಸಿಕ್ಕ ಸೂಟ್​ಕೇಸ್​ ತೆರೆದ ಪೊಲೀಸರಿಗೆ ಕಾದಿತ್ತು ಶಾಕ್​..! Read More »

ರಾಷ್ಟ್ರೀಯ ನ್ಯೂಸ್

ಸುರತ್ಕಲ್ : ರೈಲ್ವೇ ಹಳಿ  ಮೇಲೆ ಯುವಕನೋರ್ವನ ಮೃತದೇಹ ಪತ್ತೆ

(ನ್ಯೂಸ್ ಕಡಬ)newskadaba.com ಮಂಗಳೂರು, ಜ.23. ಅಪರಿಚಿತ ಯುವಕನೊಬ್ಬನ ಮೃತದೇಹವು ರೈಲ್ವೇ ಹಳಿಗಳ ಮೇಲೆ ಪತ್ತೆಯಾಗಿರುವ ಘಟನೆ ಕುಳಾಯಿಗುಡ್ಡೆ ರೈಲ್ವೆ ಸೇತುವೆ ಬಳಿ ನಡೆದಿದೆ ಎಂದು ವರದಿ ತಿಳಿಸಿದೆ. 30 ವರ್ಷದ ಯುವಕನ ಛಿದ್ರವಾದ ಮೃತದೇಹ ಪತ್ತೆಯಾಗಿದ್ದು, ಈತ ರೈಲಿಗೆ ಸಿಲುಕಿ ಮೃತಪಟ್ಟ ಶಂಕೆ ವ್ಯಕ್ತವಾಗಿದೆ. ಮೃತ ವ್ಯಕ್ತಿಯು ಕಪ್ಪು ನೈಟ್ ಪ್ಯಾಂಟ್, ಹಳದಿ ಬಣ್ಣದ ಪೂರ್ಣ ತೋಳಿನ ಶರ್ಟ್ ಮತ್ತು ಕಪ್ಪು ಜರ್ಕಿನ್ ಧರಿಸಿರುತ್ತಾರೆ. ಇವರ ಬಗ್ಗೆ ಮಾಹಿತಿ ಇದ್ದರೆ ಸುರತ್ಕಲ್ ಪೊಲೀಸರನ್ನು ಸಂಪರ್ಕಿಸಲು ಕೋರಲಾಗಿದೆ.  

ಸುರತ್ಕಲ್ : ರೈಲ್ವೇ ಹಳಿ  ಮೇಲೆ ಯುವಕನೋರ್ವನ ಮೃತದೇಹ ಪತ್ತೆ Read More »

ಕರಾವಳಿ, ಕ್ರೈಮ್ ನ್ಯೂಸ್

ಬಂಟ್ವಾಳ; ಭಜರಂಗದಳದ ಮುಖಂಡನ ಮೃತದೇಹ ನೇತ್ರಾವತಿ ನದಿಯಲ್ಲಿ ಪತ್ತೆ..!         

(ನ್ಯೂಸ್ ಕಡಬ) newskadaba.com  ಬಂಟ್ವಾಳ, ಜ.12. ಬಜರಂಗದಳದ ಮುಖಂಡನೋರ್ವನ ಮೃತದೇಹ ನೇತ್ರಾವತಿ ನದಿಯಲ್ಲಿ ಪತ್ತೆಯಾದ ಘಟನೆ ಪಾಣೆಮಂಗಳೂರು ಹಳೆ ಸೇತುವೆ ಬಳಿ ಸಂಭವಿಸಿದೆ. ಮೃತಪಟ್ಟವರನ್ನು ಸಜೀಪ ನಿವಾಸಿ ರಾಜೇಶ್ ಪೂಜಾರಿ ಎಂದು ಗುರುತಿಸಲಾಗಿದೆ. ರಾಜೇಶ್ ಪೂಜಾರಿ ಬಜರಂಗದಳದ ಕಲ್ಲಡ್ಕ ಪ್ರಖಂಡ ಗೋ ರಕ್ಷಣಾ ಪ್ರಮುಖ ಆಗಿದ್ದರು ಎಂದು ತಿಳಿದುಬಂದಿದೆ. ಯುವಕ ನದಿಗೆ ಬಿದ್ದ ವಿಷಯ ತಿಳಿಯುತ್ತಿದ್ದಂತೆ ಸ್ಥಳೀಯ ಮುಸ್ಲಿಮ್ ಯುವಕರ ತಂಡ ಸ್ಥಳಕ್ಕೆ ಧಾವಿಸಿ ಅಗ್ನಿಶಾಮಕ ದಳದ ಸಿಬ್ಬಂದಿಯ ಸಹಕಾರದೊಂದಿಗೆ ಮೃತದೇಹವನ್ನು ನೀರಿನಿಂದ ಮೇಲಕ್ಕೆ ಎತ್ತಿದೆ. ಮೃತದೇಹವನ್ನು

ಬಂಟ್ವಾಳ; ಭಜರಂಗದಳದ ಮುಖಂಡನ ಮೃತದೇಹ ನೇತ್ರಾವತಿ ನದಿಯಲ್ಲಿ ಪತ್ತೆ..!          Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಬೆಳ್ತಂಗಡಿ:  ಯುವಕನೋರ್ವನ ಮೃತದೇಹ ಪತ್ತೆ…!           

(ನ್ಯೂಸ್ ಕಡಬ) newskadaba.com  ಬೆಳ್ತಂಗಡಿ, ಜ.11. ಯುವಕನೊರ್ವನ ಮೃತದೇಹ ನದಿಯ ಅಣೆಕಟ್ಟಿನ ಬದಿಯಲ್ಲಿ ಕುಳಿತ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಬೆಳ್ತಂಗಡಿಯಲ್ಲಿ ವರದಿಯಾಗಿದೆ. ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಸೋಮವತಿ ನದಿ ಸಂಗಾತಿನಗರ ರಸ್ತೆಯ ಬದಿಯಲ್ಲಿರುವ ಕಿಂಡಿ ಅಣೆಕಟ್ಟಿನಲ್ಲಿ ಲಾಯಿಲ ಗ್ರಾಮದ ಅಯೋಧ್ಯನಗರದ ನಿವಾಸಿ ಕಿರಣ್ (27) ಮೃತದೇಹ ಪತ್ತೆಯಾಗಿದೆ ಎನ್ನಲಾಗಿದೆ. ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಶವ ಪರೀಕ್ಷೆಗಾಗಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ತಿಳಿದುಬಂದಿದೆ. ಈ ಕುರಿತು ಹೆಚ್ಚಿನ

ಬೆಳ್ತಂಗಡಿ:  ಯುವಕನೋರ್ವನ ಮೃತದೇಹ ಪತ್ತೆ…!            Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಸಮುದ್ರದ ಸೆಳೆತಕ್ಕೆ ಸಿಲುಕಿ ನಾಪತ್ತೆಯಾಗಿದ್ದ ಯುವಕನ ಮೃತದೇಹ ಪತ್ತೆ…!                     

(ನ್ಯೂಸ್ ಕಡಬ) newskadaba.com ಸುರತ್ಕಲ್, ಜ. 02. ಸುರತ್ಕಲ್ ಬಳಿಯ ಲೈಟ್ ಹೌಸ್ ಬೀಚ್ ನಲ್ಲಿ ಸಮುದ್ರದ ಸೆಳೆತಕ್ಕೆ ಸಿಲುಕಿ ನಾಪತ್ತೆಯಾಗಿದ್ದ ಯುವಕನ ಮೃತದೇಹ ಪತ್ತೆಯಾಗಿದೆ ಎಂದು ವರದಿ ತಿಳಿಸಿದೆ. ಮೃತ ಯುವಕನನ್ನು ಕಾನ ನಿವಾಸಿ ಸುರೇಶ್ ಪ್ರಸಾದ್ ಯಾದವ್ ಎಂಬವರ ಪುತ್ರ ಸತ್ಯಂ (18) ಎಂದು ಗುರುತಿಸಲಾಗಿದೆ. ಲೈಟ್ ಹೌಸ್ ಬೀಚ್ ನಿಂದ 1.5 ಕಿ.ಮೀ ದೂರದಲ್ಲಿರುವ ರೇಡ್ ರಾಕ್ ಬೀಚ್ ನಲ್ಲಿ ಮೃತದೇಹ ಪತ್ತೆಯಾಗಿದೆ ಎನ್ನಲಾಗಿದೆ. ಸತ್ಯಂ ಮತ್ತು ಆತನ ಸ್ನೇಹಿತ ಸಮುದ್ರದಲ್ಲಿ ಈಜಲು

ಸಮುದ್ರದ ಸೆಳೆತಕ್ಕೆ ಸಿಲುಕಿ ನಾಪತ್ತೆಯಾಗಿದ್ದ ಯುವಕನ ಮೃತದೇಹ ಪತ್ತೆ…!                      Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಪುತ್ತೂರು: ವ್ಯಕ್ತಿಯ ಮೃತದೇಹ ರೈಲ್ವೇ ಹಳಿ ಸಮೀಪ ಚರಂಡಿಯಲ್ಲಿ ಪತ್ತೆ…!

(ನ್ಯೂಸ್ ಕಡಬ) newskadaba.com ಪುತ್ತೂರು, ಡಿ. 23. ವ್ಯಕ್ತಿಯೊಬ್ಬರ ಮೃತದೇಹ ಚರಂಡಿಯೊಂದರಲ್ಲಿ ಪತ್ತೆಯಾದ ಘಟನೆ ಮುರದ ರೈಲ್ವೇ ಹಳಿ ಬಳಿ ವರದಿಯಾಗಿದೆ. ಮುರದಲ್ಲಿರುವ ರೈಲ್ವೇ ಹಳಿ ಸಮೀಪದ ಮೃತದೇಹ ಪತ್ತೆಯಾಗಿದ್ದು, ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ತನಿಖೆಯ ಬಳಿಕವಷ್ಟೇ ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.  

ಪುತ್ತೂರು: ವ್ಯಕ್ತಿಯ ಮೃತದೇಹ ರೈಲ್ವೇ ಹಳಿ ಸಮೀಪ ಚರಂಡಿಯಲ್ಲಿ ಪತ್ತೆ…! Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ನಾಪತ್ತೆಯಾಗಿದ್ದ ಯುವತಿಯ ಮೃತದೇಹ ಪತ್ತೆ

(ನ್ಯೂಸ್ ಕಡಬ) newskadaba.com ಕಲಬುರಗಿ, ಡಿ. 17. ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಕುರಿಕೋಟಾ ಸೇತುವೆ ಬಳಿ ಯುವತಿ ಶವ ಪತ್ತೆಯಾಗಿದ್ದು, ಮೃತ ಯುವತಿಯನ್ನು ಸೃಷ್ಟಿ ಮಾರುತಿ (21) ಎಂದು ಗುರುತಿಸಲಾಗಿದೆ. ಸೃಷ್ಟಿ ಅಂತಿಮ ವರ್ಷದ ಪದವಿ ವಿದ್ಯಾರ್ಥಿನಿಯಾಗಿದ್ದಳು ಎಂದು ತಿಳಿದುಬಂದಿದೆ. ಕಾಲೇಜಿಗೆ ಹೋಗಿದ್ದ ಯುವತಿ ಸಂಜೆಯಾದ್ರು ಮನೆಗೆ ಬಂದಿರಲಿಲ್ಲ, ಈ ಹಿನ್ನೆಲೆ ಪೋಷಕರು ಹುಡುಕಾಟ ನಡೆಸಿದ್ದರು ಎನ್ನಲಾಗಿದೆ. ಇದೀಗ ಸೃಷ್ಟಿ ಸಾವಿನ ಕುರಿತು ತನಿಖೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ. ಮೃತದೇಹ ಪತ್ತೆಯಾದ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪೊಲೀಸರು

ನಾಪತ್ತೆಯಾಗಿದ್ದ ಯುವತಿಯ ಮೃತದೇಹ ಪತ್ತೆ Read More »

ಕರ್ನಾಟಕ, ಕ್ರೈಮ್ ನ್ಯೂಸ್
Scroll to Top