ಮಂಗಳೂರು: ನದಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ

(ನ್ಯೂಸ್ ಕಡಬ)newskadaba.com ಮಂಗಳೂರು, ಜ.30. ಕಲ್ಲಾಪು ಸನಿಹ ನೇತ್ರಾವತಿ ನದಿಯ ತಂತ್ರಿ ರಸ್ತೆ ಬಳಿ ಅಪರಿಚಿತ ಮೃತದೇಹ ಪತ್ತೆಯಾದ ಘಟನೆ ಮಂಗಳೂರಿನಲ್ಲಿ ವರದಿಯಾಗಿದೆ. ಮೂರು ದಿನಗಳ ಹಿಂದೆ ನದಿಗೆ ಬಿದ್ದು ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದ್ದು, ಲುಂಗಿ, ಟೀಶರ್ಟ್ ಧರಿಸಿದ್ದು ಕೈಯಲ್ಲಿ ವಾಚ್, ಪತ್ತೆಯಾಗಿದೆ.

ಮೃತದೇಹ ಸಂಪೂರ್ಣ ಕೊಳೆತ ಸ್ಥಿತಿಯಲ್ಲಿದ್ದು, ಉಳ್ಳಾಲ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಕೈಗೆತ್ತಿಕೊಂಡಿದ್ದಾರೆ. ಬಜಾಲ್ ಅಥವಾ ಬಂಟ್ವಾಳ ಭಾಗದಲ್ಲಿ ನದಿಗೆ ಬಿದ್ದಿರುವ ಶಂಕೆವ್ಯಕ್ತವಾಗಿದ್ದು , ನದಿ ಮಧ್ಯದಲ್ಲಿ ತೇಲುತ್ತಿದ್ದ ಮೃತದೇಹವನ್ನು ಸಮಾಜ ಸೇವಕ ಪ್ರೇಮ್ ಪ್ರಕಾಶ್ ಡಿಸೋಜ ಅವರು ದಡಕ್ಕೆ ಸೇರಿಸಿ ಮಾನವೀಯತೆ ಮೆರೆದರು ಎಂದು ವರದಿ ತಿಳಿಸಿದೆ.

Scroll to Top