‘ವಾಯ್ಸ್ ಆಫ್ ಹಿಂದ್’ ಪ್ರಕರಣ: 4 ಐಸಿಸ್‌ ಕಾರ್ಯಕರ್ತರಿಗೆ ಜೈಲು ಶಿಕ್ಷೆ

(ನ್ಯೂಸ್‌ ಕಡಬ) newskadaba.com, ಸೆ. 29 . ನವದೆಹಲಿ . ‘ವಾಯ್ಸ್ ಆಫ್ ಹಿಂದ್’ ಭಯೋತ್ಪಾದಕ ಸಂಚು ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಕಾರ್ಯಕರ್ತರಿಗೆ ನವದೆಹಲಿಯ ರೌಸ್ ಅವೆನ್ಯೂ ವಿಶೇಷ ಎನ್‍ಐಎ (NIA) ನ್ಯಾಯಾಲಯ ಶಿಕ್ಷೆ ವಿಧಿಸಿದೆ.

2021ರಲ್ಲಿ ಪ್ರಕರಣ ದಾಖಲಾಗಿದ್ದು, ಸುಮಾರು 5 ವರ್ಷಗಳ ಕಾಲ ವಶದಲ್ಲಿದ್ದ ಆರೋಪಿಗಳು ತಮ್ಮ ಮೇಲಿನ ಆರೋಪಗಳನ್ನು ಒಪ್ಪಿಕೊಂಡ ಹಿನ್ನೆಲೆಯಲ್ಲಿ ಈ ತೀರ್ಪು ಬಂದಿದೆ.

ಉಮರ್ ನಿಸಾರ್, ರಮೀಜ್ ಅಹ್ಮದ್ ಲೋನ್ ಹಾಗೂ ತನ್ವೀರ್ ಅಹ್ಮದ್ ಭಟ್‌: ತಲಾ 6 ವರ್ಷ ಕಠಿಣ ಕಾರಾಗೃಹ ಶಿಕ್ಷೆ.ಅಫ್ಶಾನ್ ಪರ್ವೇಜ್ ಜರಾಬಿ: 5 ವರ್ಷ ಕಠಿಣ ಕಾರಾಗೃಹ ಶಿಕ್ಷೆ.ಯುಎಪಿಎ ಮತ್ತು ಐಪಿಸಿ ಯ ವಿವಿಧ ಕಠಿಣ ಸೆಕ್ಷನ್‌ಗಳ ಅಡಿಯಲ್ಲಿ ನ್ಯಾಯಾಧೀಶ ವಿಕಾಸ್ ಧುಲ್ ಅವರಿಂದ ಈ ಶಿಕ್ಷೆ ಪ್ರಕಟವಾಗಿದೆ.

Scroll to Top