dakshina kannada

ಪುತ್ತೂರು: ಬೈಕ್ ಹಾಗೂ ಶಾಲಾ ವಾಹನದ ನಡುವೆ ಅಪಘಾತ – ಬೈಕ್ ಸವಾರನಿಗೆ ಗಾಯ

(ನ್ಯೂಸ್ ಕಡಬ) newskadaba.com ಪುತ್ತೂರು, ಸೆ. 19. ಬೈಕ್ ಮತ್ತು ಶಾಲಾ ಬಸ್ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಬೈಕ್ ಸವಾರ ಗಂಭೀರ ಗಾಯಗೊಂಡಿರುವ ಘಟನೆ ಪುತ್ತೂರಿನ ತಾಲೂಕಿನ ಸರ್ವೇ ಗ್ರಾಮದ ಭಕ್ತಕೋಡಿಯಲ್ಲಿ ನಡೆದಿದೆ. ಗಾಯಗೊಂಡವರನ್ನು ಬೈಕ್ ಸವಾರ ನವಾಝ್ ಎಂದು ಗುರುತಿಸಲಾಗಿದೆ. ಪುತ್ತೂರು ಕಡೆಯಿಂದ ಕಾಣಿಯೂರು ಕಡೆಗೆ ಬರುತ್ತಿದ್ದ ಬೈಕ್ ಹಾಗೂ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಕಾಣಿಯೂರಿನ ಖಾಸಗಿ ವಿದ್ಯಾಸಂಸ್ಥೆಯ ಬಸ್ ಮಧ್ಯೆ ಅಪಘಾತ ಸಂಭವಿಸಿದೆನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ನವಾಝ್ ರಸ್ತೆಗೆಸೆಯಲ್ಪಟ್ಟಿದ್ದು ಅವರ […]

ಪುತ್ತೂರು: ಬೈಕ್ ಹಾಗೂ ಶಾಲಾ ವಾಹನದ ನಡುವೆ ಅಪಘಾತ – ಬೈಕ್ ಸವಾರನಿಗೆ ಗಾಯ Read More »

ಕರಾವಳಿ, ಕ್ರೈಮ್ ನ್ಯೂಸ್

ಮನಪಾ ಚುನಾವಣೆ- ನೂತನ ಮೇಯರ್ ಆಗಿ ಮನೋಜ್ ಕುಮಾರ್ ಕೋಡಿಕಲ್, ಉಪಮೇಯರ್ ಆಗಿ ಭಾನುಮತಿ ಆಯ್ಕೆ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 19. ಮಂಗಳೂರು ಮಹಾನಗರ ಪಾಲಿಕೆಯ ಮುಂದಿನ ಅವಧಿಗೆ ಮೇಯರ್ ಹಾಗೂ ಉಪಮೇಯರ್ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ವಾರ್ಡ್ ನಂಬರ್ 17 ಮನಪಾ ಸದಸ್ಯ ಮನೋಜ್ ಕುಮಾರ್ ಕೋಡಿಕಲ್ ಹಾಗೂ ಉಪಮೇಯರ್ ಆಗಿ ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ವಾರ್ಡ್ ನಂಬರ್ 58ರ ಸದಸ್ಯೆ ಭಾನುಮತಿ ಪಿ.ಎಸ್ ಆಯ್ಕೆಯಾಗಿದ್ದಾರೆ. ಮೇಯರ್ ಚುನಾವಣೆಗೆ “ಎಸ್ ಸಿ” ಮೀಸಲಾತಿಯಡಿ ಕಾಂಗ್ರೆಸ್ ಅಭ್ಯರ್ಥಿಗಳು ಇಲ್ಲದಿದ್ದರಿಂದ ಮೇಯರ್ ಆಯ್ಕೆ

ಮನಪಾ ಚುನಾವಣೆ- ನೂತನ ಮೇಯರ್ ಆಗಿ ಮನೋಜ್ ಕುಮಾರ್ ಕೋಡಿಕಲ್, ಉಪಮೇಯರ್ ಆಗಿ ಭಾನುಮತಿ ಆಯ್ಕೆ Read More »

ಕರಾವಳಿ

ಮರವೂರು ಸೇತುವೆ ಪರಿಶೀಲನೆ ನಡೆಸಿದ ತಾಂತ್ರಿಕ ತಜ್ಞರ ಸಮಿತಿ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 18. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಚಾರಕ್ಕೆ ಅಪಾಯಕಾರಿಯಾಗಿರುವ ಸೇತುವೆಗಳ ಪರಿಶೀಲನೆಗೆ ಬೆಂಗಳೂರಿನಿಂದ ಆಗಮಿಸಿರುವ ತಾಂತ್ರಿಕ ತಜ್ಞರ ಸಮಿತಿಯು ಮರವೂರು ಸೇತುವೆಯ ಪರಿಶೀಲನೆ ನಡೆಸಿದೆ. ಮರವೂರಿನ ಹಳೆ ಸೇತುವೆಯ ಪಿಲ್ಲರ್‌ಗೆ ಹಾನಿಯಾಗಿರುವ ಹಿನ್ನೆಲೆ ಜೂನ್ 14ರಿಂದ ಈ ಸೇತುವೆಯಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ. ಬೃಹತ್‌ ಕ್ರೇನ್‌ ಮೂಲಕ ಸೇತುವೆಯ ಅಡಿಭಾಗಕ್ಕೆ ತೆರಳಿದ ತಾಂತ್ರಿಕ ತಜ್ಞರು ಮರವೂರು ಸೇತುವೆಯನ್ನು ಪರಿಶೀಲಿಸಿ, ಸೇತುವೆಯ ಪಿಲ್ಲರ್‌, ಗರ್ಡರ್‌ನ ಕಾಂಕ್ರೀಟ್‌ ಭಾಗಗಳನ್ನು ಸಂಗ್ರಹಿಸಿದ್ದಾರೆ. ಇದರ ಮೂಲಕ ಸೇತುವೆಯ ದೃಢತೆಯನ್ನು

ಮರವೂರು ಸೇತುವೆ ಪರಿಶೀಲನೆ ನಡೆಸಿದ ತಾಂತ್ರಿಕ ತಜ್ಞರ ಸಮಿತಿ Read More »

ಕರಾವಳಿ

ವಿದ್ಯುತ್ ಪ್ರವಹಿಸಿ ಇಲೆಕ್ಟ್ರಿಷಿಯನ್ ಮೃತ್ಯು

(ನ್ಯೂಸ್ ಕಡಬ) newskadaba.com ಬಂಟ್ವಾಳ, ಸೆ. 14. ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ ಎಲೆಕ್ಟ್ರೀಷಿಯನ್ ಓರ್ವರು ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ಉಳಿ ಗ್ರಾಮದ, ಉರ್ಕುಂಜ ಎಂಬಲ್ಲಿ ನಡೆದಿದೆ. ಮೃತಪಟ್ಟವರನ್ನು ಉಳಿ ಗ್ರಾಮದ ನೆಕ್ಕಿಲ ಪಲ್ಕೆ ನಿವಾಸಿ ಸದಾನಂದ ಗೌಡ ಅವರ ಪುತ್ರ ದೇವದಾಸ್ (35) ಎಂದು ಗುರುತಿಸಲಾಗಿದೆ. ವೃತ್ತಿಯಲ್ಲಿ ಇಲೆಕ್ಟ್ರೀಷಿಯನ್ ಆಗಿರುವ ದೇವದಾಸ್ ಉರ್ಕುಂಜ ಎಂಬಲ್ಲಿ ಮನೆಯೊಂದರ ವೈರಿಂಗ್ ಕೆಲಸ ಮಾಡಿ, ಮನೆಯ ಹೊರಗಡೆಯಲ್ಲಿದ್ದ ಮೈನ್ ಸ್ವಿಚ್ ಬಳಿ ಕೆಲಸ ಮಾಡುತ್ತಿರುವಾಗ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿದ ಪರಿಣಾಮ

ವಿದ್ಯುತ್ ಪ್ರವಹಿಸಿ ಇಲೆಕ್ಟ್ರಿಷಿಯನ್ ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್

ಬಾಲನ್ಯಾಯ ಕಾಯ್ದೆ ಮಂಡಳಿ ದ.ಕ. ಜಿಲ್ಲಾ ಸಮಿತಿ ಸದಸ್ಯರಾಗಿ ನ್ಯಾಯವಾದಿ ಸಾಹಿರಾ ಝುಬೇರ್ ನೇಮಕ

(ನ್ಯೂಸ್ ಕಡಬ) newskadaba.com ಪುತ್ತೂರು, ಸೆ. 13. ಪುತ್ತೂರು ಬಾಲನ್ಯಾಯ ಕಾಯ್ದೆ ಮಂಡಳಿ ಇದರ ದ.ಕ. ಜಿಲ್ಲಾ ಸಮಿತಿ ಸದಸ್ಯರಾಗಿ ನ್ಯಾಯವಾದಿ ನೋಟರಿ ಸಾಯಿರಾ ಝುಬೇರ್‌ರವರು ನೇಮಕಗೊಂಡಿದ್ದಾರೆ. ಪುತ್ತೂರು ದರ್ಬೆ ನಿವಾಸಿಯಾಗಿರುವ ಸಾಯಿರಾ ಝುಬೇರ್‌ ಪ್ರಸ್ತುತ ಹೈಕೋರ್ಟ್ ನ ವಕೀಲೆಯಾಗಿದ್ದಾರೆ. ಪುತ್ತೂರು ಬ್ಲಾಕ್ ಕಾಂಗ್ರೆಸ್ ಮಹಿಳಾ ಸಮಿತಿ ಹಾಗೂ ಜಿಲ್ಲಾ ಕಾಂಗ್ರೆಸ್ ಮಹಿಳಾ ಸಮಿತಿಯ ಪದಾಧಿಕಾರಿಯಾಗಿದ್ದ ಇವರು, ಪ್ರಸ್ತುತ ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪುತ್ತೂರು ದರ್ಬೆ ನಿವಾಸಿ, ಪ್ರಕಾಶ್

ಬಾಲನ್ಯಾಯ ಕಾಯ್ದೆ ಮಂಡಳಿ ದ.ಕ. ಜಿಲ್ಲಾ ಸಮಿತಿ ಸದಸ್ಯರಾಗಿ ನ್ಯಾಯವಾದಿ ಸಾಹಿರಾ ಝುಬೇರ್ ನೇಮಕ Read More »

ಕರಾವಳಿ

ಮಂಗಳೂರು: ಮನೆ ಗೋಡೆ ಕುಸಿದು ಇಬ್ಬರು ಮೃತ್ಯು

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 12. ನಗರದ ಜೈಲು‌ ರಸ್ತೆಯ ಬಳಿ ಹಳೆ ಮನೆಯೊಂದನ್ನು ಕೆಡವುತ್ತಿದ್ದ ವೇಳೆ ಗೋಡೆ ಕುಸಿದು ಇಬ್ಬರು ದಾರುಣವಾಗಿ ಮೃತಪಟ್ಟ ಘಟನೆ ಗುರುವಾರ ಬೆಳಗ್ಗೆ ನಡೆದಿದೆ. ಮೃತ ದುರ್ದೈವಿಗಳನ್ನು ಜೇಮ್ಸ್ ಸ್ಯಾಮುವೆಲ್ ಜತ್ತನ್ನ ಮತ್ತು ಅಡ್ವಿನ್ ಎಂದು ಗುರುತಿಸಲಾಗಿದೆ. ಇಂದು ಬೆಳಗ್ಗೆ ಜೆಸಿಬಿ ಮೂಲಕ ಮನೆಯನ್ನು ಕೆಡವುತ್ತಿದ್ದ ವೇಳೆ ಕಾಂಕ್ರೀಟ್ ಲಿಂಟೆಲ್ ಸಹಿತ ಗೋಡೆ ಮೈಮೇಲೆ ಬಿದ್ದು ಈ ದುರ್ಘಟನೆ ಸಂಭವಿಸಿದೆನ್ನಲಾಗಿದೆ.

ಮಂಗಳೂರು: ಮನೆ ಗೋಡೆ ಕುಸಿದು ಇಬ್ಬರು ಮೃತ್ಯು Read More »

ಕರಾವಳಿ, ಕ್ರೈಮ್ ನ್ಯೂಸ್

ಇಂದು ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 11. ದ.ಕ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ, ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು, ಕಂಕನಾಡಿ ಮಂಗಳೂರು, ರಾಷ್ಟ್ರೀಯ ಸೇವಾ ಯೋಜನೆ ವಿಶ್ವವಿದ್ಯಾನಿಲಯ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆ ಕಾರ್ಯಕ್ರಮವನ್ನು ಸೆಪ್ಟೆಂಬರ್ 11ರಂದು ಬೆಳಿಗ್ಗೆ 10 ಗಂಟೆಗೆ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜ್‍ನ ಡೆಸಿನಿಯಲ್ ಮೆಮೋರಿಯಲ್ ಸಭಾಂಗಣದಲ್ಲಿ

ಇಂದು ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆ Read More »

ಕರಾವಳಿ

ಸುಳ್ಯ : ತೂಕ, ಅಳತೆ ಸಾಧನಗಳ ಮುದ್ರೆ ಶಿಬಿರ

(ನ್ಯೂಸ್ ಕಡಬ) newskadaba.com ಸುಳ್ಯ, ಸೆ. 10. ಕಾನೂನು ಮಾಪನಶಾಸ್ತ್ರ ನಿರೀಕ್ಷಕರು ಪುತ್ತೂರು ಕಚೇರಿಯಿಂದ ತೂಕ, ಅಳತೆ ಮತ್ತು ತೂಕದ ಸಾಧನಗಳ 2024ನೇ ಸಾಲಿನ ವಾರ್ಷಿಕ ಸತ್ಯಾಪನೆ ಮುದ್ರೆ ಶಿಬಿರವು ಸುಳ್ಯ ಗಾಂಧಿನಗರದ ಸರ್ಕಾರಿ ಪ್ರೌಢಶಾಲಾ ಮೈದಾನದ ಎದುರುಗಡೆ ಇರುವ ಎಸ್.ಜಿ ಸ್ಟೋರ್ ಬಿಲ್ಡಿಂಗ್‍ನ  ಕೆಳ ಮಹಡಿಯಲ್ಲಿ ಪ್ರಾರಂಭಿಸಲಾಗಿದೆ. ಸುಳ್ಯ ಶಿಬಿರ ವ್ಯಾಪ್ತಿಯಲ್ಲಿನ ಜಾಲ್ಸೂರು, ಸುಳ್ಯ, ಅಜ್ಜಾವರ, ಕಲ್ಲುಗುಂಡಿ, ಕುಕ್ಕುಜಡ್ಕ, ದೊಡ್ಡತೋಟ, ಎಲಿಮಲೆ, ಮಂಡೆಕೋಲು, ಸಂಪಾಜೆ, ಉಬರಡ್ಕ, ಉಬರಡ್ಕ ಮಿತ್ತೂರು, ಕನಕಮಜಲು, ಮರ್ಕಂಜ, ತೊಡಿಕಾನ, ಅರಂತೋಡು, ಕೊಡಿಯಾಳ,

ಸುಳ್ಯ : ತೂಕ, ಅಳತೆ ಸಾಧನಗಳ ಮುದ್ರೆ ಶಿಬಿರ Read More »

ಕರಾವಳಿ

ಬಂಡೆಗೆ ಅಪ್ಪಳಿಸಿ ಮಗುಚಿಬಿದ್ದ ದೋಣಿ- ಮೀನುಗಾರರ ರಕ್ಷಣೆ

(ನ್ಯೂಸ್ ಕಡಬ) newskadaba.com ಉಡುಪಿ, ಸೆ. 07. ಆಳಸಮುದ್ರ ಮೀನುಗಾರಿಕೆಯ ಬೋಟೊಂದು ಮಲ್ಪೆ ಬಂದರಿನಿಂದ ಹೊರಟು ತೆಂಗಿನಗುಂಡಿ ಬಂದರಿನ ಬಳಿ ಬಂಡೆಗೆ ಬಡಿದು ಸಮುದ್ರದಲ್ಲಿ ಮುಳುಗಿದ ಘಟನೆ ಭಟ್ಕಳ ಸಮೀಪ ನಡೆದಿದೆ. ಕೊಡವೂರಿನ ಸವಿತಾ ಎಸ್ ಸಾಲಿಯಾನ್ ಒಡೆತನದ ಶ್ರೀ ಕುಲಮಹಾಸ್ತ್ರೀ ಫಿಶರೀಸ್ ಎಂಬ ಬೋಟ್, ಸೆಪ್ಟೆಂಬರ್ 5 ರಂದು ಮುಂಜಾನೆ 4 ಗಂಟೆಯ ಸುಮಾರಿಗೆ ಮಲ್ಪೆ ಬಂದರಿನಿಂದ ಹೊರಟು, ಬೈಂದೂರಿನಿಂದ ಸುಮಾರು 13 ನಾಟಿಕಲ್ ಮೈಲಿ ದೂರದಲ್ಲಿ, ಒಂದು ಟ್ರಾಲ್ ಮುಗಿಸಿ ಸೆಕೆಂಡ್ ಟ್ರಾಲ್ ಆರಂಭಿಸಿದ

ಬಂಡೆಗೆ ಅಪ್ಪಳಿಸಿ ಮಗುಚಿಬಿದ್ದ ದೋಣಿ- ಮೀನುಗಾರರ ರಕ್ಷಣೆ Read More »

ಕರಾವಳಿ, ಕ್ರೈಮ್ ನ್ಯೂಸ್

ರಸ್ತೆ ಅಪಘಾತ- ವ್ಯಕ್ತಿ ಮೃತ್ಯು..!

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 07. ಲಾರಿ ಮತ್ತು ಸ್ಕೂಟರ್ ನಡುವೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಮಂಜನಾಡಿಯ ಮಂಗಳಾಂತಿ ಮಸೀದಿ ಬಳಿ ನಡೆದಿದೆ.   ಮೃತರನ್ನು ಮಂಜೇಶ್ವರದ ಪೈವಳಿಕೆ ಕಲ್ಲೇಕರುಗುತ್ತು ನಿವಾಸಿ ಚಂದ್ರಹಾಸ್ ಶೆಟ್ಟಿ (67) ಎಂದು ಗುರುತಿಸಲಾಗಿದೆ. ಮೃತ ಚಂದ್ರಹಾಸ ಶೆಟ್ಟಿಯವರು ಹರೇಕಲ್ ದೆಬ್ಬೇಲಿಯಲ್ಲಿರುವ ತಮ್ಮ ಪತ್ನಿಯ ಮನೆಯಿಂದ ಕಲ್ಲೇಕರುಗುತ್ತು ಕಡೆಗೆ ಹೋಗುತ್ತಿದ್ದಾಗ ಅವರ ಸ್ಕೂಟರ್‌ಗೆ ಲಾರಿ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದೆನ್ನಲಾಗಿದೆ. ಈ ಕುರಿತು ಮಂಗಳೂರು

ರಸ್ತೆ ಅಪಘಾತ- ವ್ಯಕ್ತಿ ಮೃತ್ಯು..! Read More »

ಕರಾವಳಿ, ಕ್ರೈಮ್ ನ್ಯೂಸ್
Scroll to Top