dakshina kannada

ಅನೈತಿಕ ಪೊಲೀಸ್ ಗಿರಿ ಪ್ರಕರಣ – ಬಂಧಿತ ಇಬ್ಬರಿಗೆ ನ್ಯಾಯಾಂಗ ಬಂಧನ..!

(ನ್ಯೂಸ್ ಕಡಬ) newskadaba.com ಸುಳ್ಯ, ಸೆ. 24. ಇಲ್ಲಿನ ಪೈಚಾರಿನಿಂದ ಕರೆತಂದು ಸುಳ್ಯ ಬಸ್ಸು ನಿಲ್ದಾಣದ ಬಳಿಯಲ್ಲಿ ಮುಸ್ಲಿಂ ಯುವಕನ ಮೇಲೆ ನಡೆದ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಪೋಲೀಸರು ಇಬ್ಬರನ್ನು ಬಂಧಿಸಿರುವ ಕುರಿತು ವರದಿಯಾಗಿದೆ. ಬಂಧಿತರನ್ನು ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರಾದ ವರ್ಷಿತ್ ಹಾಗೂ ಮಿಥುನ್ ಎಂದು ತಿಳಿದುಬಂದಿದೆ. ಸದ್ಯ ಆರೋಪಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ಅವರಿಗೆ 14 ದಿನಗಳವರೆಗೆ ನ್ಯಾಯಾಂಗ ಬಂಧನ ವಿಧಿಸಿರುವುದಾಗಿ ತಿಳಿದು ಬಂದಿದೆ.

ಅನೈತಿಕ ಪೊಲೀಸ್ ಗಿರಿ ಪ್ರಕರಣ – ಬಂಧಿತ ಇಬ್ಬರಿಗೆ ನ್ಯಾಯಾಂಗ ಬಂಧನ..! Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಬಾಯಿ ಆರೋಗ್ಯ ನಿರ್ಲಕ್ಷಿಸಬೇಡಿ – ಡಾ. ಚೂಂತಾರು

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 23. ಬಾಯಿ ನಮ್ಮ ದೇಹದ ಆರೋಗ್ಯದ ಹೆಬ್ಬಾಗಿಲು. ನಾವು ತಿನ್ನುವ  ಆಹಾರ ಬಾಯಿಯ ಮುಖಾಂತರವೇ ಹೊಟ್ಟೆಗೆ ಹೋಗುತ್ತದೆ.  ನಾವು ತಿನ್ನುವ  ಆಹಾರ  ಸರಿಯಾಗಿ  ಜಗಿಯಲು, ಪಚನವಾಗಲು  ಮತ್ತು ಜೀರ್ಣವಾಗಲು ಆರೋಗ್ಯವಂತ ಬಾಯಿ ಮತ್ತು ಸದೃಢವಾದ  ಹಲ್ಲುಗಳು  ಅತೀ ಅಗತ್ಯ. ಹಾಲು ಹಲ್ಲುಗಳು ಕೂಡಾ ಶಾಶ್ವತ ಹಲ್ಲಿನಷ್ಟೇ  ಪ್ರಾಮುಖ್ಯವಾಗಿರುತ್ತದೆ. ಈ ಕಾರಣದಿಂದ  ಬಾಯಿ ಆರೋಗ್ಯ ಯಾವತ್ತೂ ನಿರ್ಲಕ್ಷಿಸಲೇಬಾರದು. ದಿನಕ್ಕೆರಡು ಬಾರಿ ಹಲ್ಲುಜ್ಜಿಕೊಂಡು ನಿರಂತರ ದಂತ ವೈದ್ಯರ ಸಂದರ್ಶನ ಮಾಡಿಕೊಂಡು ಹಲ್ಲಿನ ಆರೋಗ್ಯ

ಬಾಯಿ ಆರೋಗ್ಯ ನಿರ್ಲಕ್ಷಿಸಬೇಡಿ – ಡಾ. ಚೂಂತಾರು Read More »

ಕರಾವಳಿ

ದಕ್ಷಿಣ ಕನ್ನಡ: ಕೇಂದ್ರ ಸರ್ಕಾರದಿಂದ PMABHIM ಯೋಜನೆಯಡಿ 25.11 ಕೋಟಿ ಅನುದಾನ ಬಿಡುಗಡೆ- ಸಂಸದ ಕ್ಯಾ. ಚೌಟ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 23. ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಆಯುಷ್ಮಾನ್ ಭಾರತ್ ಹೆಲ್ತ್ ಇಂಫ್ರಾಸ್ಟ್ರಕ್ಚರ್ ಮಿಷನ್- PMABHIM ಯೋಜನೆಯಡಿ ದಕ್ಷಿಣ ಕನ್ನಡ ಜಿಲ್ಲೆಗೆ ಒಟ್ಟು 25.11 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಆ ಪೈಕಿ 24 ಕೋಟಿ ರೂ. ವೆಚ್ಚದಲ್ಲಿ ವೆನ್ಲಾಕ್ ಆಸ್ಪತ್ರೆಯ ಆವರಣದಲ್ಲಿ ಕ್ರಿಟಿಕಲ್ ಕೇರ್ ಯೂನಿಟ್ ಕಟ್ಟಡ ನಿರ್ಮಾಣ ಕಾಮಗಾರಿಗೆ ಅನುಮೋದನೆ ಲಭಿಸಿರುವುದಾಗಿ ಸಂಸದ ಕ್ಯಾ. ಬ್ರಿಜೇಶ್ ಚೌಟ ತಿಳಿಸಿದ್ದಾರೆ. ಇಂಟಿಗ್ರೇಟೆಡ್ ಪಬ್ಲಿಕ್ ಹೆಲ್ತ್ ಲ್ಯಾಬ್ ಕಟ್ಟಡಕ್ಕೆ 1.11 ಕೋಟಿ ಈ ಯೋಜನೆಯಡಿ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯ ಟ್ರಮಾ ಕೇರ್

ದಕ್ಷಿಣ ಕನ್ನಡ: ಕೇಂದ್ರ ಸರ್ಕಾರದಿಂದ PMABHIM ಯೋಜನೆಯಡಿ 25.11 ಕೋಟಿ ಅನುದಾನ ಬಿಡುಗಡೆ- ಸಂಸದ ಕ್ಯಾ. ಚೌಟ Read More »

ಕರಾವಳಿ

ಕಡಲತೀರದ ಸ್ವಚ್ಚತೆಗೆ ಪ್ರವಾಸಿಗರ ಸಹಕಾರ ಅಗತ್ಯ – ಡಾ.ಚೂಂತಾರು

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 23. ಮಂಗಳೂರಿನಲ್ಲಿ ಹಲವಾರು ಸುಂದರ ರಮಣೀಯ ಕಡಲ ತೀರಗಳಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಮೋಜು ಮಸ್ತಿ ಮಾಡಲು ಬರುತ್ತಿದ್ದಾರೆ.  ಆದರೆ ಮೋಜು ಮಸ್ತಿ ಮಾಡಿದ ಬಳಿಕ ಕಡಲ ತೀರದ ಸ್ವಚ್ಚತೆಗೂ ಅವರು ಗಮನ ಹರಿಸುವುದು ಅತೀ ಅಗತ್ಯ.  ಕಡಲ ತೀರವನ್ನು ಸ್ಚಚ್ಚಗೊಳಿಸುವುದು ಜಿಲ್ಲಾಡಳಿತದ ಮತ್ತು ಪ್ರವಾಸೋದ್ಯಮ ಇಲಾಖೆಗೆ ಮಾತ್ರ ಸೀಮಿತವಲ್ಲ. ಪ್ರತಿಯೊಬ್ಬ ಪ್ರವಾಸಿಗರೂ ತಮ್ಮ ಹೊಣೆ ಅರಿತು ಕಡಲ ತೀರವನ್ನು ಸ್ಚಚ್ಚಗೊಳಿಸಲು ಸಹಕರಿಸಬೇಕು. ಎಲ್ಲೆಂದರಲ್ಲಿ ಪ್ಲಾಸ್ಟಿಕ್, ಬಾಟಲ್, ಕಸ ಕಡ್ಡಿಗಳನ್ನು ಹಾಕುವುದರಿಂದ

ಕಡಲತೀರದ ಸ್ವಚ್ಚತೆಗೆ ಪ್ರವಾಸಿಗರ ಸಹಕಾರ ಅಗತ್ಯ – ಡಾ.ಚೂಂತಾರು Read More »

ಕರಾವಳಿ

ಜಮೀನು ವಿಚಾರ- ತಮ್ಮನನ್ನು ಕೊಂದಿದ್ದ ಅಣ್ಣನಿಗೆ ಜೀವಾವಧಿ ಶಿಕ್ಷೆ ಪ್ರಕಟ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 21. ಜಮೀನಿನ ವಿಚಾರದಲ್ಲಿ ಪಾಲು ಕೇಳಲು ಬಂದ ಸ್ವಂತ ತಮ್ಮನನ್ನೇ ಕೊಲೆ ಮಾಡಿದ ಅಣ್ಣ ಬಂಟ್ವಾಳ ತಾಲೂಕು ನಂದರಬೆಟ್ಟು ಗ್ರಾಮದ ಐತಪ್ಪ ನಾಯ್ಕ (45) ಎಂಬಾತನಿಗೆ ಮಂಗಳೂರಿನ ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಸುನೀತಾ ಎಸ್. ಜಿ ಅವರು ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದ್ದಾರೆ. ಈತ 2022ರ ಮೇ 10ರಂದು ಜಮೀನು ವಿಚಾರಕ್ಕೆ ಸಂಬಂಧಿಸಿ ತನ್ನ ತಮ್ಮ ಬಾಳಪ್ಪ ಯಾನೆ ರಾಮ ನಾಯ್ಕ (35)

ಜಮೀನು ವಿಚಾರ- ತಮ್ಮನನ್ನು ಕೊಂದಿದ್ದ ಅಣ್ಣನಿಗೆ ಜೀವಾವಧಿ ಶಿಕ್ಷೆ ಪ್ರಕಟ Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ದೀಪಾವಳಿ ಹಬ್ಬ; ಪಟಾಕಿ ಮಾರಾಟ- ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 21. ಸ್ಪೋಟಕ ಕಾಯ್ದೆ ಮತ್ತು ನಿಯಮದಡಿ ಮೈದಾನದಲ್ಲಿ, ತೆರೆದ ಪ್ರದೇಶದಲ್ಲಿ ಹಬ್ಬಗಳ ನಿಮಿತ್ತ ಸುಡುಮದ್ದು ಮಾರಾಟದ ತಾತ್ಕಾಲಿಕ ಪರವಾನಿಗೆ ನೀಡುವ ಬಗ್ಗೆ ಅರ್ಜಿಗಳನ್ನು ಈಗಾಗಲೇ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸ್ವೀಕರಿಸಲಾಗುತ್ತಿದೆ. ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯನ್ನು ಹೊರತುಪಡಿಸಿ ಆಸಕ್ತ ಸಾರ್ವಜನಿಕರು ಅರ್ಜಿಯನ್ನು ಜಿಲ್ಲಾಧಿಕಾರಿಯವರ ಕಚೇರಿಗೆ ಸಲ್ಲಿಸುವಂತೆ ತಿಳಿಸಲಾಗಿದೆ. ಅಕ್ಟೋಬರ್ 30ರಿಂದ ನವೆಂಬರ್ 2ರವರೆಗೆ ದೀಪಾವಳಿ ಹಬ್ಬದ ಸಂದರ್ಭ ಮತ್ತು ನವೆಂಬರ್ 12ರಿಂದ 13ರ ತುಳಸಿ ಪೂಜೆ ಸಂದರ್ಭದಲ್ಲಿ ಸುಡುಮದ್ದು ಮಾರಾಟ

ದೀಪಾವಳಿ ಹಬ್ಬ; ಪಟಾಕಿ ಮಾರಾಟ- ಅರ್ಜಿ ಆಹ್ವಾನ Read More »

ಕರಾವಳಿ

ಮುನಿರತ್ನರನ್ನು ಶಾಸಕ ಸ್ಥಾನದಿಂದ ವಜಾಗೊಳಿಸುವಂತೆ ದ.ಕ ಜಿಲ್ಲಾ ಕಾಂಗ್ರೆಸ್ ಘಟಕ ಆಗ್ರಹ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 20. ಪರಿಶಿಷ್ಟ ಜಾತಿಯ ಬಗ್ಗೆ ನಿಂದನೆಯ ಪದವನ್ನು ಬಳಸಿದ್ದಲ್ಲದೇ, ಮಹಿಳೆಯರ ಬಗ್ಗೆ ಅವಾಚ್ಯ ಶಬ್ದದಿಂದ ನಿಂದಿಸಿರುವ ಮುನಿರತ್ನರನ್ನು ಶಾಸಕ ಸ್ಥಾನದಿಂದ ವಜಾಗೊಳಿಸುವಂತೆ ದ.ಕ ಜಿಲ್ಲಾ ಕಾಂಗ್ರೆಸ್‌ನ ಪರಿಶಿಷ್ಟ ಘಟಕದ ಜಿಲ್ಲಾಧ್ಯಕ್ಷ ದಿನೇಶ್ ಮೂಳೂರು ನೇತೃತ್ವದ ನಿಯೋಗ ಮಂಗಳೂರು ಪೊಲೀಸ್ ಕಮಿಷನರ್ ಭೇಟಿಯಾಗಿ ದೂರು ಸಲ್ಲಿಸಿ ಮುನಿರತ್ನ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದೆ.   ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯೆ ಅಪ್ಪಿ ಎಸ್, ದ.ಕ ಜಿಲ್ಲಾ ಕಾಂಗ್ರೆಸ್ ಸಮಿತಿ

ಮುನಿರತ್ನರನ್ನು ಶಾಸಕ ಸ್ಥಾನದಿಂದ ವಜಾಗೊಳಿಸುವಂತೆ ದ.ಕ ಜಿಲ್ಲಾ ಕಾಂಗ್ರೆಸ್ ಘಟಕ ಆಗ್ರಹ Read More »

ಕರಾವಳಿ

ಸುಳ್ಯ ಸರ್ಕಲ್ ಇನ್ಸ್‌ಪೆಕ್ಟರ್ ಆಗಿ ತಿಮ್ಮಪ್ಪ ನಾಯ್ಕ ಅಧಿಕಾರ ಸ್ವೀಕಾರ

(ನ್ಯೂಸ್ ಕಡಬ) newskadaba.com ಸುಳ್ಯ, ಸೆ. 20. ಸುಳ್ಯ ಪೊಲೀಸ್ ವೃತ್ತ ನಿರೀಕ್ಷಕರಾಗಿ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಪೊಲೀಸ್ ವೃತ್ತ ನಿರೀಕ್ಷಕರಾಗಿದ್ದ ಬಂಟ್ವಾಳ ತಾಲೂಕಿನ ಮಿತ್ತೂರು ಮೂಲದ ತಿಮ್ಮಪ್ಪ ನಾಯ್ಕ ಅವರು ಗುರುವಾರದಂದು ಅಧಿಕಾರ ಸ್ವೀಕರಿಸಿದರು. ಅವರನ್ನು ಸುಳ್ಯಕ್ಕೆ ವರ್ಗಾವಣೆ ಮಾಡಿ ಸರಕಾರ ಆದೇಶ ಮಾಡಿತ್ತು. ಸುಳ್ಯ ಪ್ರಭಾರ ವೃತ್ತ ನಿರೀಕ್ಷಕರಾಗಿದ್ದ ಪುತ್ತೂರು ನಗರ ವೃತ್ತ ನಿರೀಕ್ಷಕ ಜಾನ್ಸನ್ ಅವರಿಂದ ತಿಮ್ಮಪ್ಪ ನಾಯ್ಕ ಅವರು ಅಧಿಕಾರ ಸ್ವೀಕರಿಸಿದ್ದಾರೆ. ತಿಮ್ಮಪ್ಪ ನಾಯ್ಕ ಅವರು ಆರಕ್ಷಕ ಉಪನಿರೀಕ್ಷಕರಾಗಿ ಮೈಸೂರಿನಲ್ಲಿ

ಸುಳ್ಯ ಸರ್ಕಲ್ ಇನ್ಸ್‌ಪೆಕ್ಟರ್ ಆಗಿ ತಿಮ್ಮಪ್ಪ ನಾಯ್ಕ ಅಧಿಕಾರ ಸ್ವೀಕಾರ Read More »

ಕರಾವಳಿ

ತಣ್ಣೀರು ಬಾವಿ ಬೀಚ್ ಕ್ಲೀನಿಂಗ್ ಮುಂದೂಡಿಕೆ

(ನ್ಯೂಸ್ ಕಡಬ) newskadaba.com ಮಂಗಳೂರು, ಸೆ. 20. ಭಾರತ ಸರ್ಕಾರದ ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ಸಚಿವಾಲಯ, ಇವರ ನಿರ್ದೇಶನದಂತೆ ರಾಷ್ಟ್ರೀಯ ಕರಾವಳಿ ಮಿಷನ್ ಅಡಿಯಲ್ಲಿ ಸೆಪ್ಟೆಂಬರ್ 21ರಂದು ”ತಣ್ಣೀರುಬಾವಿ ಬೀಚ್” ನಲ್ಲಿ  ಆಯೋಜಿಸಲಾದ ಬೀಚ್ ಕ್ಲೀನಿಂಗ್ ಚಟುವಟಿಕೆ, ಅಭಿಯಾನವನ್ನು ಮುಂದೂಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ತಣ್ಣೀರು ಬಾವಿ ಬೀಚ್ ಕ್ಲೀನಿಂಗ್ ಮುಂದೂಡಿಕೆ Read More »

ಕರಾವಳಿ

ವಿಧಾನಪರಿಷತ್ ಉಪಚುನಾವಣೆ- ದ.ಕ. ಸ್ಥಳೀಯ ಸಂಸ್ಥೆಗಳ ಕ್ಷೇತ್ರಕ್ಕೆ ಅ. 21ರಂದು ಮತದಾನ

(ನ್ಯೂಸ್ ಕಡಬ) newskadaba.com ಬೆಂಗಳೂರು, ಸೆ. 19. ಕೋಟ ಶ್ರೀನಿವಾಸ ಪೂಜಾರಿ ಅವರ ರಾಜೀನಾಮೆಯಿಂದ ತೆರವಾಗಿರುವ ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ವಿಧಾನಪರಿಷತ್ ಕ್ಷೇತ್ರದ ಉಪಚುನಾವಣೆಗೆ ಅಕ್ಟೋಬರ್ 21ರಂದು ಚುನಾವಣಾ ಆಯೋಗವು ದಿನಾಂಕ ಪ್ರಕಟಿಸಿದೆ. ಸೆಪ್ಟೆಂಬರ್ 26ರಂದು ಚುನಾವಣಾ ಅಧಿಸೂಚನೆ ಜಾರಿಗೆ ಬರಲಿದ್ದು, ಅಕ್ಟೋಬರ್ 3 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಅಕ್ಟೋಬರ್ 4ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ಅಕ್ಟೋಬರ್ 7 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಅಕ್ಟೋಬರ್ 21ರಂದು ಬೆಳಿಗ್ಗೆ 8ರಿಂದ ಸಂಜೆ 4 ಗಂಟೆಯವರೆಗೆ

ವಿಧಾನಪರಿಷತ್ ಉಪಚುನಾವಣೆ- ದ.ಕ. ಸ್ಥಳೀಯ ಸಂಸ್ಥೆಗಳ ಕ್ಷೇತ್ರಕ್ಕೆ ಅ. 21ರಂದು ಮತದಾನ Read More »

ಕರಾವಳಿ
Scroll to Top