crime

ಏಕಾಏಕಿ ಚಲಿಸಲಾರಂಭಿಸಿದ ಬೆಂಕಿ ಹೊತ್ತಿ ಉರಿಯುತ್ತಿದ್ದ ಕಾರು- ವಿಡಿಯೋ ವೈರಲ್..!

(ನ್ಯೂಸ್ ಕಡಬ) newskadaba.com ಅ. 14 . ಬೆಂಕಿ ಹೊತ್ತಿ ಉರಿಯುತ್ತಿದ್ದ ಕಾರೊಂದು ತನ್ನಿಂದ ತಾನಾಗಿಯೇ ಚಲಿಸಿರುವ ಘಟನೆ ರಾಜಸ್ಥಾನದ ಜೈಪುರದ ಅಜ್ಮೀರ್ ರಸ್ತೆಯ ಸುದರ್ಶನಪುರದ ಬಳಿ ನಡೆದಿದೆ. ಸದ್ಯ ಬೆಂಕಿಯೊಂದಿಗೆ ಕಾರು ಚಲಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವ್ಯಕ್ತಿಯೊಬ್ಬರು ಚಲಾಯಿಸಿಕೊಂಡು ಹೋಗುತ್ತಿದ್ದ ಕಾರಿನ ಎ.ಸಿ.ಯಲ್ಲಿ ಸಮಸ್ಯೆ ಕಾಣಿಸಿಕೊಂಡು ಏಕಾಏಕಿ ಬೆಂಕಿ ಹೊತ್ತಿಕೊಂಡಿದ್ದು, ತಕ್ಷಣವೇ ಕಾರಿನಿಂದ ಚಾಲಕ ಕೆಳಗಿಳಿದಿದ್ದರು. ನೋಡನೋಡುತ್ತಿದ್ದಂತೆ ಬೆಂಕಿ ಧಗಧಗನೇ ಉರಿಯತೊಡಗಿದ್ದು, ಬಳಿಕ ಕಾರು ಇದ್ದಕ್ಕಿದ್ದಂತೆ ಮುಂದೆ ಚಲಿಸಿದೆ. ಇದರಿಂದ ಸುತ್ತಲೂ […]

ಏಕಾಏಕಿ ಚಲಿಸಲಾರಂಭಿಸಿದ ಬೆಂಕಿ ಹೊತ್ತಿ ಉರಿಯುತ್ತಿದ್ದ ಕಾರು- ವಿಡಿಯೋ ವೈರಲ್..! Read More »

ರಾಷ್ಟ್ರೀಯ ನ್ಯೂಸ್, ವೀಡಿಯೋ

ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣು..!

(ನ್ಯೂಸ್ ಕಡಬ) news kadaba.com ಅ. 14. ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಯಲಹಂಕ ತಾಲೂಕಿನ ಸಿಂಗನಾಯಕನಹಳ್ಳಿ ಗ್ರಾಮದಲ್ಲಿ ನಡೆದಿದೆ. ದಂಪತಿ ಮತ್ತು ಇಬ್ಬರು ಮಕ್ಕಳು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರನ್ನು ಅವಿನಾಶ್ (33), ಮಮತಾ (30), ಅಧಿರಾ (05), ಅಣ್ಣಯ್ಯ (03) ಎಂದು ಗುರುತಿಸಲಾಗಿದೆ. ಸ್ಥಳಕ್ಕೆ ರಾಜಾನುಕುಂಟೆ ಠಾಣೆ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣು..! Read More »

ಕರ್ನಾಟಕ, ಕ್ರೈಮ್ ನ್ಯೂಸ್
Crime

ಪ್ರಿಯಕರನೊಂದಿಗೆ ಸೇರಿ ಹೆತ್ತ ಮಕ್ಕಳನ್ನು ಕೊಂದ ಕ್ರೂರಿ ತಾಯಿ..!

(ನ್ಯೂಸ್ ಕಡಬ) newskadaba.com ಅ. 14 . ಪತಿಗೆ ಕೈ ಕೊಟ್ಟು ಪರಾರಿಯಾಗಿದ್ದ ಮಹಿಳೆಯೋರ್ವಳು ಪ್ರಿಯಕರನೊಂದಿಗೆ ಸೇರಿ ತಾನು ಜನ್ಮ ನೀಡಿದ್ದ ಕರುಳ ಕುಡಿಗಳನ್ನೇ ಕೊಲೆ ಮಾಡಿ ಸ್ಮಶಾನದಲ್ಲಿ ಹೂತು ಹಾಕಿರುವ ಘಟನೆ ರಾಮನಗರದ ಐಜೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ನಗರದ ಡಿಜೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಟ್ಯಾನರಿ ರಸ್ತೆಯಲ್ಲಿರುವ ಎ.ಕೆ ಕಾಲೋನಿ ನಿವಾಸಿ 24 ವರ್ಷದ ಮಹಿಳೆ ತನ್ನ ಮೂರು ವರ್ಷ ಹಾಗೂ 11 ತಿಂಗಳ ಕರುಳ ಕುಡಿಗಳನ್ನೇ ಬಲಿ ಪಡೆದ ಕ್ರೂರಿ ತಾಯಿ.

ಪ್ರಿಯಕರನೊಂದಿಗೆ ಸೇರಿ ಹೆತ್ತ ಮಕ್ಕಳನ್ನು ಕೊಂದ ಕ್ರೂರಿ ತಾಯಿ..! Read More »

ಕರ್ನಾಟಕ, ಕ್ರೈಮ್ ನ್ಯೂಸ್

ಪೆಟ್ರೋಲ್ ಹಾಕಿಸಿ ಹಣ ಕೊಡದೇ ಪರಾರಿ- ದೂರು ದಾಖಲು

(ನ್ಯೂಸ್ ಕಡಬ) newskadaba.com ಅ. 14. ಪೆಟ್ರೋಲ್ ಹಾಕಿಸಿ ಹಣ ಕೊಡದೇ ಚಾಲಕ ಕಾರಿನೊಂದಿಗೆ ಪರಾರಿಯಾಗಿರುವ ಘಟನೆ ಕಾರ್ಕಳದಲ್ಲಿ ನಡೆದಿದೆ. ಕಾರ್ಕಳದ ಅನು ಪೆಟ್ರೋಲ್ ಬಂಕ್‌ಗೆ ಕಾರಿನಲ್ಲಿ ಬಂದ ವ್ಯಕ್ತಿಯೋರ್ವ, 4253.88ರೂ. ಮೊತ್ತದ ಪೆಟ್ರೋಲ್ ಹಾಕಿಸಿಕೊಂಡು ಬಳಿಕ ಹಣ ನೀಡದೆ ಕಾರನ್ನು ಚಲಾಯಿಸಿಕೊಂಡು ಹೋಗಿ ಮೋಸ ಮಾಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೆಟ್ರೋಲ್ ಹಾಕಿಸಿ ಹಣ ಕೊಡದೇ ಪರಾರಿ- ದೂರು ದಾಖಲು Read More »

ಕರಾವಳಿ, ಬ್ರೇಕಿಂಗ್ ನ್ಯೂಸ್

ಕಾರು ಪಲ್ಟಿ: ಮಹಿಳೆ ಮೃತ್ಯು ಚಾಲಕ ಗಂಭೀರ ಗಾಯ

(ನ್ಯೂಸ್ ಕಡಬ) news kadaba.com ಅ. 14. ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಆಳೆತ್ತರದಲ್ಲಿರುವ ಅಡಿಕೆ ತೋಟಕ್ಕೆ ಬಿದ್ದು ಮಹಿಳೆ ಮೃತಪಟ್ಟು, ಚಾಲಕ ಗಂಭೀರವಾಗಿ ಗಾಯಗೊಂಡ ಘಟನೆ ಬಿಸಿರೋಡು – ಬೆಳ್ತಂಗಡಿ ರಾಜ್ಯ ಹೆದ್ದಾರಿಯ ಬಾಂಬಿಲ ಎಂಬಲ್ಲಿ ನಡೆದಿದೆ. ಮೃತಪಟ್ಟ ಮಹಿಳೆಯನ್ನು ಕೊಡಿಯಾಲ್ ಬೈಲು ನಿವಾಸಿ ಭಾಗೀರಥಿ (58) ಎಂದು ಗುರುತಿಸಲಾಗಿದೆ. ಚಾಲಕ ರೂಪೇಶ್ (40) ಅವರಿಗ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾರಿನಲ್ಲಿ ಮೂವರು ಪ್ರಯಾಣಿಸುತ್ತಿದ್ದರು. ಕಾರನ್ನು ಚಲಾಯಿಸುತ್ತಿದ್ದ ರೂಪೇಶ್ ಅವರ ಪತ್ನಿ

ಕಾರು ಪಲ್ಟಿ: ಮಹಿಳೆ ಮೃತ್ಯು ಚಾಲಕ ಗಂಭೀರ ಗಾಯ Read More »

ಕರಾವಳಿ, ಕ್ರೈಮ್ ನ್ಯೂಸ್
crime, arrest, suspected

ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿ ಅರೆಸ್ಟ್

(ನ್ಯೂಸ್ ಕಡಬ) newskadaba.com ಅ. 14. ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿಯನ್ನು ಬೆಳ್ತಂಗಡಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನನ್ನು ಆರೋಪಿ ಹಮೀದ್ ಯಾನೆ ಜಫಾರ್ ಹಮೀದ್ ಹಾನೆ ಕುಂಞಿಮೋನು ಎಂದು ಗುರುತಿಸಲಾಗಿದೆ. ಆರೋಪಿಯ ವಿರುದ್ಧ ದ.ಕ. ಜಿಲ್ಲೆಯ ಬಂಟ್ವಾಳ, ಉಪ್ಪಿನಂಗಡಿ, ಕಡಬ, ಪುತ್ತೂರು, ವೇಣೂರು, ಧರ್ಮಸ್ಥಳ, ಪುಂಜಾಲಕಟ್ಟೆ, ಮಂಗಳೂರು ನಗರ, ಬಂದರು ಠಾಣೆ, ಹೊರ ಜಿಲ್ಲೆಗಳಾದ ಹಾಸನದ ಬೇಲೂರು, ಚಿಕ್ಕಮಗಳೂರು ಜಿಲ್ಲೆ, ಕೊಪ್ಪ, ಹರಿಹರಪುರ, ಚಿಕ್ಕಮಗಳೂರು, ಮೂಡಿಗೆರೆ, ಉಡುಪಿ ಜಿಲ್ಲೆ ಪಡುಬಿದ್ರಿ, ಮಡಿಕೇರಿ ಹಾಗೂ

ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿ ಅರೆಸ್ಟ್ Read More »

ಕರಾವಳಿ, ಕ್ರೈಮ್ ನ್ಯೂಸ್

ಪಾಕ್‌ ಮೂಲದ ಬಬ್ಬರ್ ಖಾಲ್ಸಾ ಇಂಟರ್‌ನ್ಯಾಶನಲ್ ಉಗ್ರ ಸಂಘಟನೆ ಮುಖ್ಯಸ್ಥನ ವಿರುದ್ಧ ಎಫ್ ಐಆರ್

(ನ್ಯೂಸ್ ಕಡಬ) newskadaba.com ನವದೆಹಲಿ, ಅ. 12. ಕೆಲವು ತಿಂಗಳ ಹಿಂದೆ ಪಂಜಾಬ್‌ನಲ್ಲಿ ನಡೆದ ವಿಶ್ವ ಹಿಂದೂ ಪರಿಷತ್ ಮುಖಂಡ ವಿಕಾಸ್ ಪ್ರಭಾಕರ್ ಅಲಿಯಾಸ್ ವಿಕಾಸ್ ಬಗ್ಗಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ಮೂಲದ ಬಬ್ಬರ್ ಖಾಲ್ಸಾ ಇಂಟರ್‌ನ್ಯಾಶನಲ್ ಸಂಘಟನೆ ಮುಖ್ಯಸ್ಥ ವಾಧವಾ ಸಿಂಗ್ ಮತ್ತು ಇತರ ಐವರು ಭಯೋತ್ಪಾದಕರ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ ಚಾರ್ಜ್ ಶೀಟ್ ಸಲ್ಲಿಸಿದೆ. ಏಪ್ರಿಲ್ 13ರಂದು ಪಂಜಾಬ್‌ನ ರೂಪನಗರ ಜಿಲ್ಲೆಯ ನಂಗಲ್‌ನಲ್ಲಿರುವ ಅವರ ಮಿಠಾಯಿ ಅಂಗಡಿಯಲ್ಲಿ ಬಿಕೆಐ ಮಾಡ್ಯೂಲ್‌ಗೆ ಸೇರಿದ

ಪಾಕ್‌ ಮೂಲದ ಬಬ್ಬರ್ ಖಾಲ್ಸಾ ಇಂಟರ್‌ನ್ಯಾಶನಲ್ ಉಗ್ರ ಸಂಘಟನೆ ಮುಖ್ಯಸ್ಥನ ವಿರುದ್ಧ ಎಫ್ ಐಆರ್ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್
Crime

ಪುತ್ತೂರು ರೈಲ್ವೇ ನಿಲ್ದಾಣದಲ್ಲಿ ಅನ್ಯಧರ್ಮದ ವ್ಯಕ್ತಿಗೆ ಹಲ್ಲೆ – ನಾಲ್ವರನ್ನು ವಶಕ್ಕೆ ಪಡೆದ ಪೊಲೀಸರು

(ನ್ಯೂಸ್ ಕಡಬ) newskadaba.com ಅ. 12. ಬೆಂಗಳೂರಿನಿಂದ ಬರುತ್ತಿದ್ದ ರೈಲಿನಲ್ಲಿದ್ದ ಸುಳ್ಯದ ವ್ಯಕ್ತಿಯೋರ್ವರಿಗೆ ಅದೇ ರೈಲಿನಲ್ಲಿ ಬಂದ ನಾಲ್ವರು ಕಬಕ ಪುತ್ತೂರು ರೈಲು ನಿಲ್ದಾಣದಲ್ಲಿ ಹಲ್ಲೆ ನಡೆಸಿ ಪರಾರಿಯಾಗಿದ್ದು, ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ನಾಲ್ವರನ್ನು ಕೆಲವೇ ಕ್ಷಣಗಳಲ್ಲಿ ವಶಕ್ಕೆ ಪಡೆದ ಘಟನೆ ಪುತ್ತೂರಿನಲ್ಲಿ ನಡೆದಿದೆ. ಬೆಂಗಳೂರಿನಿಂದ ಪುತ್ತೂರು ಮಾರ್ಗವಾಗಿ ಮಂಗಳೂರಿಗೆ ಹೋಗುತ್ತಿದ್ದ ರೈಲಿನಲ್ಲಿ ಕೆಲವರು ಗಲಾಟೆ ಮಾಡುತ್ತಿರುವುದಾಗಿ ವ್ಯಕ್ತಿಯೊಬ್ಬರು ರೈಲ್ವೇ ಪೊಲೀಸರಿಗೆ ನೀಡಿದ್ದ ಮಾಹಿತಿಯಂತೆ ಪೊಲೀಸರು ನಾಲ್ವರಿಗೆ ಎಚ್ಚರಿಕೆ ನೀಡಿದ್ದರು. ಆದರೆ ಪೊಲೀಸರಿಗೆ ದೂರು ನೀಡಿದ ವ್ಯಕ್ತಿಯನ್ನೇ

ಪುತ್ತೂರು ರೈಲ್ವೇ ನಿಲ್ದಾಣದಲ್ಲಿ ಅನ್ಯಧರ್ಮದ ವ್ಯಕ್ತಿಗೆ ಹಲ್ಲೆ – ನಾಲ್ವರನ್ನು ವಶಕ್ಕೆ ಪಡೆದ ಪೊಲೀಸರು Read More »

ಕರಾವಳಿ, ಕ್ರೈಮ್ ನ್ಯೂಸ್
Crime

ಚಾಕುವಿನಿಂದ ಇರಿದು ಯುವಕನ ಬರ್ಬರ ಕೊಲೆ..!

(ನ್ಯೂಸ್ ಕಡಬ) newskadaba.com ಹುಬ್ಬಳ್ಳಿ, ಅ. 12.   ಹಳೆ ದ್ವೇಷಕ್ಕೆ ಯುವಕನ‌ನ್ನ ದುಷ್ಕರ್ಮಿಗಳು ಬರ್ಬರವಾಗಿ ಕೊಲೆಗೈದ ಘಟನೆ ಗೋಪನಕೊಪ್ಪದ ಸಂತೋಷನಗರದ ಬಳಿ ಶುಕ್ರವಾರ ನಡೆದಿದೆ. ಕೊಲೆಯಾದ ವ್ಯಕ್ತಿಯನ್ನು ಶಿವು ಚಂದ್ರಶೇಖರ್ ಕಮ್ಮಾರ (23) ಎಂದು ಗುರುತಿಸಲಾಗಿದೆ. ಕೊಲೆಗೈದ ಆರೋಪಿಯನ್ನು ಸುದೀಪ್ ರಾಯಾಪುರ ಎಂದು ಗುರುತಿಸಲಾಗಿದೆ. ಆಯುಧ ಪೂಜೆ ದಿನವೇ ಚಾಕುವಿನಿಂದ ಇರಿದು ಯುವಕನನ್ನ ದುಷ್ಕರ್ಮಿಗಳು ಬರ್ಬರವಾಗಿ ಕೊಲೆ ಮಾಡಿದ್ದು, ಸುಮಾರು ರಾತ್ರಿ 11.15 ಗಂಟೆಗೆ ಘಟನೆ ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಶಿವು ಕಮ್ಮಾರನನ್ನ ನಡುರಸ್ತೆಯಲ್ಲೇ ದುಷ್ಕರ್ಮಿಗಳು ಬರ್ಬರವಾಗಿ

ಚಾಕುವಿನಿಂದ ಇರಿದು ಯುವಕನ ಬರ್ಬರ ಕೊಲೆ..! Read More »

ಕರ್ನಾಟಕ, ಕ್ರೈಮ್ ನ್ಯೂಸ್

ಸಹೋದ್ಯೋಗಿಗೆ ʼಆಸಿಡ್‌ʼ ಮೆಸೇಜ್‌ ಮಾಡಿ ಕೆಲಸ ಕಳೆದುಕೊಂಡ ಯುವಕ

(ನ್ಯೂಸ್ ಕಡಬ) newskadaba.com ಬೆಂಗಳೂರು,ಅ. 12.   ಒಂದು ಮೆಸೇಜ್‌ನಿಂದ ಯುವಕನೊಬ್ಬ ತನ್ನ ಕೆಲಸವನ್ನೇ ಕಳೆದುಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈತ ತನ್ನ ಸಹೋದ್ಯೋಗಿ ಮಹಿಳೆಯ ಬಟ್ಟೆ ಧರಿಸುವಿಕೆಯ ಬಗ್ಗೆ ಕಮೆಂಟ್‌ ಮಾಡಿದ್ದು, ಈ ಕುರಿತು ದೂರು ದಾಖಲಿಸಲಾಗಿತ್ತು. ಮಹಿಳೆಗೆ ಆಸಿಡ್ ಹಾಕುತ್ತೀನಿ ಎಂದ ಯುವಕ ನಿಖಿತ್ ಶೆಟ್ಟಿ ಎಂಬಾತನ ವಿರುದ್ಧ ಆಕೆಯ ಪತಿ ಪೊಲೀಸರಿಗೆ ಎಕ್ಸ್‌ ನಲ್ಲಿ ಪೋಸ್ಟ್ ಮಾಡುವ ಮೂಲಕ ದೂರು ನೀಡಿದ್ದರು. ಯುವಕ ನಿಖಿತ್ ಇಟಿಯೋಸ್ ಡಿಜಿಟಲ್ ಸರ್ವಿಸ್ ಎಂಬ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ.

ಸಹೋದ್ಯೋಗಿಗೆ ʼಆಸಿಡ್‌ʼ ಮೆಸೇಜ್‌ ಮಾಡಿ ಕೆಲಸ ಕಳೆದುಕೊಂಡ ಯುವಕ Read More »

ಕರ್ನಾಟಕ, ಕ್ರೈಮ್ ನ್ಯೂಸ್
Scroll to Top