crime

crime, arrest, suspected

ವಿದ್ಯಾರ್ಥಿನಿಗೆ ಕಿರುಕುಳ: ಆರೋಪಿ ಬಂಧನ

(ನ್ಯೂಸ್ ಕಡಬ) newskadaba.com ವೇಣೂರು, ಅ. 16. ಕಾಲೇಜು ವಿದ್ಯಾರ್ಥಿನಿಯರಿಗೆ ಚುಡಾಯಿಸಿ ಮೊಬೈಲ್ ನಂಬರಿಗೆ ಒತ್ತಾಯಿಸಿದ್ದ ಯುವಕನೊಬ್ಬನನ್ನು ಹಿಂದು ಜಾಗರಣ ವೇದಿಕೆಯ ಕಾರ್ಯಕರ್ತರ ನೆರವಿನಿಂದ ವೇಣೂರು ಪೊಲೀಸರು ಬಂಧಿಸಿದ್ದಾರೆ. ವೇಣೂರಿನ ಗೋಳಿಯಂಗಡಿಯಲ್ಲಿರುವ ಪ್ರತಿಷ್ಠಿತ ಧರ್ಮಸ್ಥಳ ಐ ಟಿ ಐ ಕಾಲೇಜಿಗೆ ಹೋಗುತ್ತಿರುವ ವಿದ್ಯಾರ್ಥಿನಿಯರನ್ನು ಅವ್ಯಾಚ್ಯ ಶಬ್ದಗಳಿಂದ ಮಾತನಾಡುತ್ತಾ, ನಿನ್ನ ಮೊಬೈಲ್ ನಂಬರ್ ಕೊಡು, ಪ್ರತಿದಿನ ಬೈಕಿನಲ್ಲಿ ಕಾಲೇಜಿಗೆ ಡ್ರಾಪ್ ಮಾಡುತ್ತೇನೆ ಎಂದು ಪೀಡಿಸುತ್ತಿದ್ದನು. ಇದರಿಂದ ಗಾಬರಿಗೊಂಡ ಯುವತಿಯು ಸಂಘಟನೆಯ ಕಾರ್ಯಕರ್ತರಿಗೆ ಮಾಹಿತಿ ತಿಳಿಸಿದ್ದಾಳೆ ಎನ್ನಲಾಗಿದೆ.    

ವಿದ್ಯಾರ್ಥಿನಿಗೆ ಕಿರುಕುಳ: ಆರೋಪಿ ಬಂಧನ Read More »

ಕರಾವಳಿ, ಕ್ರೈಮ್ ನ್ಯೂಸ್

ಪ್ರಾಂಶುಪಾಲರ ಕಿರುಕುಳ ತಾಳಲಾರದೆ ಉಪನ್ಯಾಸಕಿ ಆತ್ಮಹತ್ಯೆಗೆ ಯತ್ನ..!

(ನ್ಯೂಸ್ ಕಡಬ) newskadaba.com ಬೆಂಗಳೂರು, ಅ. 15.  ಪ್ರಾಂಶುಪಾಲರು ಹಾಗೂ ಸಹೋದ್ಯೋಗಿಗಳ ಕಿರುಕುಳ ತಾಳಲಾರದೆ ಉಪನ್ಯಾಸಕಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆಯೊಂದು ತಿಲಕನಗರ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ನಡೆದಿದೆ. ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯನ್ನು ಶಬಾನಾ (44) ಎಂದು ಗುರುತಿಸಲಾಗಿದೆ. ಜಯನನಗರದ 9ನೇ ಹಂತದಲ್ಲಿ ನೆಲೆಸಿರುವ ಶಬಾನಾ ಅವರು, ಎರಡೂವರೆ ವರ್ಷದಿಂದ ಜಯನಗರದ ಖಾಸಗಿ ಕಾಲೇಜಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ವೃತ್ತಿಗೆ ಸಂಬಂಧಿಸಿದಂತೆ ಪ್ರಾಂಶುಪಾಲರು ಹಾಗೂ ಸಹೋದ್ಯೋಗಿಗಳ ನಡುವೆ ಶಬಾನಾ ಮನಸ್ತಾಪವಾಗಿತ್ತು. ಇದೇ ಕಾರಣಕ್ಕೆ ಆಗಾಗ್ಗೆ ಜಗಳ ನಡೆದಿದ್ದವು. ಈ ಘಟನೆ ಬಳಿಕ

ಪ್ರಾಂಶುಪಾಲರ ಕಿರುಕುಳ ತಾಳಲಾರದೆ ಉಪನ್ಯಾಸಕಿ ಆತ್ಮಹತ್ಯೆಗೆ ಯತ್ನ..! Read More »

ಕರ್ನಾಟಕ, ಕ್ರೈಮ್ ನ್ಯೂಸ್
Theft, crime, Robbery

ದೇವಸ್ಥಾನದ ಆವರಣದಲ್ಲಿದ್ದ ಮಹಿಳೆಯರ ಚಿನ್ನದ ಸರ ಕಳವು- ಪ್ರಕರಣ ದಾಖಲು

(ನ್ಯೂಸ್ ಕಡಬ) newskadaba.com ಅ.15. ನಗರದ ಮಂಗಳಾದೇವಿ ದೇವಸ್ಥಾನದಲ್ಲಿ ನಡೆಯುವ ನವರಾತ್ರಿ ಉತ್ಸವಕ್ಕೆ ಹೋಗಿದ್ದ ಮೂವರು ಮಹಿಳೆಯರ ಚಿನ್ನದ ಸರ ಕಳವಾದ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಂಗಳಾದೇವಿ ದೇವಸ್ಥಾನದಲ್ಲಿ ನಡೆಯುವ ನವರಾತ್ರಿ ಉತ್ಸವದ ಪ್ರಯುಕ್ತ ನಡೆಯುವ ದೇವರ ದರ್ಶನಕ್ಕೆ ಅ.11ರಂದು ಹೋದ ವೇಳೆ ಲೀಲಾ ಎಂಬವರ ಕುತ್ತಿಗೆಯಲ್ಲಿದ್ದ 6 ಪವನ್ ತೂಕದ ಸರ ಕಳವುಗೈಯ್ಯಲಾಗಿತ್ತು. ಅದೇ ವೇಳೆ ಕಮಲಾಕ್ಷಿ ಎಂಬವರ 3 ಪವನ್ ಮತ್ತು ಮೀನಾಕ್ಷಿ ಎಂಬವರ 4 ಪವನ್ ತೂಕದ ಚಿನ್ನದ ಸರ

ದೇವಸ್ಥಾನದ ಆವರಣದಲ್ಲಿದ್ದ ಮಹಿಳೆಯರ ಚಿನ್ನದ ಸರ ಕಳವು- ಪ್ರಕರಣ ದಾಖಲು Read More »

ಕರಾವಳಿ, ಕ್ರೈಮ್ ನ್ಯೂಸ್

ಆ್ಯಸಿಡ್ ಸೇವಿಸಿದ್ದ ವ್ಯಕ್ತಿ ಮೃತ್ಯು..!

(ನ್ಯೂಸ್ ಕಡಬ) newskadaba.com ಅ. 15. ರಬ್ಬರ್‌ ಆ್ಯಸಿಡ್‌ ಸೇವಿಸಿ ಅಸೌಖ್ಯಕ್ಕೊಳಗಾಗಿದ್ದ ಮರ್ಕಂಜ ಗ್ರಾಮದ ಗೋಳಿಯಡ್ಕ ಶೇಷಪ್ಪ ಗೌಡ ಪಾಲ್ತಾಡು ಎಂಬವರು ಮೃತಪಟ್ಟಿರುವುದಾಗಿ ವರದಿಯಾಗಿದೆ. ಶೇಷಪ್ಪ ಗೌಡರು ನಾಲ್ಕು ದಿನಗಳ ಹಿಂದೆ ರಬ್ಬರ್‌ ಆ್ಯಸಿಡ್‌ ಸೇವಿಸಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಅಲ್ಲಿಂದ ಸುಳ್ಯ ಆಸ್ಪತ್ರೆಗೆ ಕರೆತರಲಾಯಿತು. ಅಲ್ಲಿ ಅವರು ಮೃತಪಟ್ಟಿದ್ದಾರೆ. ಮೃತರು ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಆ್ಯಸಿಡ್ ಸೇವಿಸಿದ್ದ ವ್ಯಕ್ತಿ ಮೃತ್ಯು..! Read More »

ಕರಾವಳಿ, ಕ್ರೈಮ್ ನ್ಯೂಸ್

ಮುನಿರತ್ನ ಕೇಸ್- ಮೂವರಿಗೆ ನಿರೀಕ್ಷಣಾ ಜಾಮೀನು

(ನ್ಯೂಸ್ ಕಡಬ) newskadaba.com ಅ. 15. ಶಾಸಕ ಮುನಿರತ್ನ ವಿರುದ್ಧ ದಾಖಲಾಗಿರುವ ಅತ್ಯಾಚಾರ ಪ್ರಕರಣದ ಮೂವರು ಆರೋಪಿಗಳಿಗೆ 82ನೇ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. 4ನೇ ಆರೋಪಿಯಾಗಿರುವ ಕಿರಣ್‌ ಕುಮಾರ್‌, ಆತನ ಸ್ನೇಹಿತರಾದ ಎ5 ಲೋಹಿತ್‌ ಕುಮಾರ್‌, ಎ6 ಮಂಜುನಾಥ್‌ಗೆ ಜಾಮೀನು ಮಂಜೂರಾಗಿರುವುದಾಗಿ ತಿಳಿದುಬಂದಿದೆ. ಜೊತೆಗೆ ತನಿಖೆಗೆ ಸಹಕಾರ ನೀಡಬೇಕು ಎಂದು ಕೋರ್ಟ್‌ ಷರತ್ತು ವಿಧಿಸಿದೆ. ಆರೋಪಿ ಕಿರಣ್‌ ಕುಮಾರ್‌ ತನ್ನನ್ನು ಮುನಿರತ್ನ ಸಂಬಂಧಿ ಎಂದು ಸಂತ್ರಸೆಗೆ ಪರಿಚಯಿಸಿಕೊಂಡಿದ್ದಾನೆ. ಬಳಿಕ ಸ್ನೇಹಿತರಾದ ಲೋಹಿತ್‌

ಮುನಿರತ್ನ ಕೇಸ್- ಮೂವರಿಗೆ ನಿರೀಕ್ಷಣಾ ಜಾಮೀನು Read More »

ಕರ್ನಾಟಕ, ಕ್ರೈಮ್ ನ್ಯೂಸ್

ಮನೆಗೆ ನುಗ್ಗಿ ಚಿನ್ನಾಭರಣ, ನಗದು ಕಳವು

(ನ್ಯೂಸ್ ಕಡಬ) newskadaba.com ಪುತ್ತೂರು, ಅ. 15. ಮನೆ ಮಂದಿ ಪ್ರವಾಸ ಹೋಗಿದ್ದ ಸಂದರ್ಭದಲ್ಲಿ ಮನೆಯ ಬೀಗ ಮುರಿದು ಒಳ ನುಗ್ಗಿದ ಕಳ್ಳರು ಚಿನ್ನಾಭರಣ ಮತ್ತು ನಗದು ಕಳವು ನಡೆಸಿದ ಪ್ರಕರಣವು ಕಡಬ ತಾಲೂಕಿನ ಸವಣೂರು ಎಂಬಲ್ಲಿ ನಡೆದಿದೆ. ಸವಣೂರು ನಿವಾಸಿ ಸಲೀಂ ಎಂಬವರ ಮನೆಯಲ್ಲಿ ಕಳ್ಳತನ ನಡೆದಿದ್ದು, ಸಲೀಂ ಅವರು ತನ್ನ ಪತ್ನಿ ಹಾಗೂ ಮಕ್ಕಳೊಂದಿಗೆ ಕಳೆದ ಶುಕ್ರವಾರ ಮನೆಗೆ ಬೀಗ ಹಾಕಿ ಪ್ರವಾಸ ಹೋಗಿದ್ದರು. ಪ್ರವಾಸ ಮುಗಿಸಿಕೊಂಡು ರವಿವಾರ ಮಧ್ಯರಾತ್ರಿ ವೇಳೆ ಮನೆಗೆ ವಾಪಾಸ್ಸು

ಮನೆಗೆ ನುಗ್ಗಿ ಚಿನ್ನಾಭರಣ, ನಗದು ಕಳವು Read More »

ಕರಾವಳಿ, ಕ್ರೈಮ್ ನ್ಯೂಸ್

ಹುಲಿ ವೇಷ ಹಾಕಲು ಹೋದ ವ್ಯಕ್ತಿ ನಾಪತ್ತೆ..!

(ನ್ಯೂಸ್ ಕಡಬ) newskadaba.com ವಿಟ್ಲ, ಅ. 15. ಹುಲಿ ವೇಷ ಹಾಕಲು ಇದೆ ಎಂದು ಮನೆಯಲ್ಲಿ ಹೇಳಿ ಹೋದ ವ್ಯಕ್ತಿ ನಾಪತ್ತೆಯಾಗಿರುವ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಪತ್ತೆಯಾದ ವ್ಯಕ್ತಿಯನ್ನು ವಿಟ್ಲ ಕಸಬಾ ಗ್ರಾಮದ ಪಳಿಕೆ ಅಣ್ಣಮೂಲೆ ನಿವಾಸಿ ಸುಂದರ ನಾಯ್ಕ್‌ (55) ಎಂದು ಗುರುತಿಸಲಾಗಿದೆ. ಸುಂದರ ನಾಯ್ಕ್‌ ರವರು ಕೂಲಿ ಕೆಲಸ ಮಾಡಿಕೊಂಡಿದ್ದು, ಅ.1 ರಂದು ಬೆಳಿಗ್ಗೆ ಮನೆಯಲ್ಲಿ ಇರುವಾಗ ನಾಳೆ ನಾನು ದಸರಾ ಹಬ್ಬದ ವೇಷ ಹಾಕಲು ಇದೆ ನಾನು ವಿಟ್ಲ

ಹುಲಿ ವೇಷ ಹಾಕಲು ಹೋದ ವ್ಯಕ್ತಿ ನಾಪತ್ತೆ..! Read More »

ಕರಾವಳಿ, ಕ್ರೈಮ್ ನ್ಯೂಸ್
Crime

ಬೆಳ್ಳಾರೆ: ಪಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆಗೆ ಯತ್ನ- ದೂರು ದಾಖಲು

(ನ್ಯೂಸ್ ಕಡಬ) newskadaba.com ಸುಳ್ಯ, ಅ. 14. ಮಹಿಳೆ ಮೇಲೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿ ಕೊಲೆಗೆ ಯತ್ನಿಸಿರುವ ಕುರಿತು ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುಳ್ಯ ತಾಲೂಕಿನ ಕೊಡಿಯಾಲ ಗ್ರಾಮದ ಕಲ್ಲರ್ಪೆ ನಿವಾಸಿ ಮಹಿಳೆಯೋರ್ವರು ಶನಿವಾರದಂದು ರಾತ್ರಿ ಮನೆಯಲ್ಲಿ ಮಲಗಿದ್ದ ಸಂದರ್ಭ ಮಹಿಳೆಯ ಬಾವ ಶಂಕರ ಅವರು ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ್ದಾರೆ ಎಂದು ಆರೋಪಿಸಲಾಗಿದೆ. ಗಂಭೀರ ಗಾಯಗೊಂಡಿರುವ ಮಹಿಳೆಯನ್ನು ಸಂಬಂಧಿಕರು ಸುಳ್ಯದ ಆಸ್ಪತ್ರೆಗೆ ಕರೆತಂದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬೆಂಕಿ ಹಚ್ಚಿರುವ

ಬೆಳ್ಳಾರೆ: ಪಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆಗೆ ಯತ್ನ- ದೂರು ದಾಖಲು Read More »

ಕರಾವಳಿ, ಕ್ರೈಮ್ ನ್ಯೂಸ್

ರೈಲು ಢಿಕ್ಕಿ ಹೊಡೆದ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ..!

(ನ್ಯೂಸ್ ಕಡಬ) newskadaba.com ಬಂಟ್ವಾಳ, ಅ. 14. ರೈಲು ಡಿಕ್ಕಿಯಾಗಿ ಮೃತಪಟ್ಟ ಸ್ಥಿತಿಯಲ್ಲಿ ವ್ಯಕ್ತಿಯೋರ್ವನ ಮೃತದೇಹ ಬಿಸಿರೋಡಿನ ರೈಲ್ವೆ ಹಳಿಯಲ್ಲಿ ಪತ್ತೆಯಾಗಿದೆ. ಮೃತಪಟ್ಟವರನ್ನು ಬಂಟ್ವಾಳ ‌ಕಾಮಾಜೆ ನಿವಾಸಿ ಕರುಣಾಕರ (35) ಎಂದು ಗುರುತಿಸಲಾಗಿದೆ. ವೃತ್ತಿಯಲ್ಲಿ ಮರದ ಕೆಲಸ ಮಾಡುತ್ತಿದ್ದ ಕರುಣಾಕರ ಅವರು ಮನೆಯ ಆಧಾರಸ್ತಂಭವಾಗಿದ್ದರು. ಸುಮಾರು 11 ಗಂಟೆಯ ವೇಳೆ ಬಿಜಾಪುರದಿಂದ ಮಂಗಳೂರಿಗೆ ಆಗಮಿಸುವ ರೈಲು ಡಿಕ್ಕಿಯಾಗಿರಿವುದಾಗಿ ತಿಳಿದುಬಂದಿದೆ. ಬಿಸಿರೋಡಿನ ರೈಲು ಸ್ಟೇಷನ್ ನ ಸಮೀಪದಲ್ಲಿ ಕುತ್ತಿಗೆ ಹಾಗೂ ದೇಹ ಎರಡು ಮಾರ್ಪಾಡು ಆಗಿರುವ ಸ್ಥಿತಿಯಲ್ಲಿ ಈತನ

ರೈಲು ಢಿಕ್ಕಿ ಹೊಡೆದ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ..! Read More »

ಕರಾವಳಿ, ಕ್ರೈಮ್ ನ್ಯೂಸ್

ನದಿ ನೀರಿನ ಸೆಳೆತಕ್ಕೆ ಸಿಲುಕಿ ಯುವಕ ಮೃತ್ಯು..!

(ನ್ಯೂಸ್ ಕಡಬ) newskadaba.com ಅ. 14 . ನದಿಗೆ ಇಳಿದಿದ್ದ ಯುವಕನೋರ್ವ ನದಿಯ ನೀರಿನ ಸೆಳೆತಕ್ಕೆ ಸಿಲುಕಿ ಮೃತಪಟ್ಟ ಘಟನೆ ನೆರಿಯ ಗ್ರಾಮದಲ್ಲಿ ಸಂಭವಿಸಿದೆ.   ಮೃತ ಯುವಕನನ್ನು ನೆರಿಯ ಗ್ರಾಮದ ತೋಟತ್ತಾಡಿ ಪಿತ್ತಿಲು ನಿವಾಸಿ ಶಿವಕುಮಾರ್ ಎಮದು ಗುರುತಿಸಲಾಗಿದೆ. ಯುವಕ. ಈತ ಭಾನುವಾರದಂದು ಗೆಳೆಯರೊಂದಿಗೆ ಮೀನು ಹಿಡಿಯಲೆಂದು ನೆರಿಯ ಗ್ರಾಮದ ಎಸ್ಟೇಟ್ ಒಂದರ ಸಮೀಪ ನದಿಗೆ ಹೋಗಿದ್ದ ಎನ್ನಲಾಗಿದೆ. ನದಿಯಲ್ಲಿ ಸಂಜೆಯ ವೇಳೆ ನಾಪತ್ತೆಯಾಗಿದ್ದ ಈತನನ್ನು ಸ್ಥಳೀಯರ ನೇತೃತ್ವದಲ್ಲಿ ಹುಡುಕಾಟ ನಡೆಸಿದಾಗ ಮೃತದೇಹ ಪತ್ತೆಯಾಗಿದೆ ಎನ್ನಲಾಗಿದೆ.

ನದಿ ನೀರಿನ ಸೆಳೆತಕ್ಕೆ ಸಿಲುಕಿ ಯುವಕ ಮೃತ್ಯು..! Read More »

ಕರಾವಳಿ, ಕ್ರೈಮ್ ನ್ಯೂಸ್
Scroll to Top