crime

ಮಂಗಳೂರು: ಚಿಕನ್ ಸೆಂಟರ್‌ನಲ್ಲಿ ಅಕ್ರಮ ಬೀಫ್ ಮಾರಾಟ ➤ ಇಬ್ಬರ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಎ. 07. ಇಲ್ಲಿನ ಕೋಳಿ ಅಂಗಡಿಯೊಂದರಲ್ಲಿ ದನದ ಮಾಂಸ ಮಾರಾಟ ಮಾಡುತ್ತಿದ್ದ ಆರೋಪದಡಿಯಲ್ಲಿ ದಾಳಿ ನಡೆಸಿದ ಬಜ್ಪೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಮಹಮ್ಮದ್ ಸಮೀರ್ ಹಾಗೂ ಮಹಮ್ಮದ್ ಸಫೀಕ್ ಎಂದು ಗುರುತಿಸಲಾಗಿದೆ. ಇವರು ಮೂಡುಪೆರಾರ ಗ್ರಾಮದ ಸೂರಲ್ಪಾಡಿಯ ಸಲ್ವಾ ಚಿಕನ್ ಸೆಂಟರ್ ನಲ್ಲಿ ಅಕ್ರಮವಾಗಿ ದನದ ಮಾಂಸ ಮಾರಾಟ ಮಾಡುತ್ತಿದ್ದು, ಈ ಕುರಿತ ಖಚಿತ ಮಾಹಿತಿಯನ್ನಾಧರಿಸಿ ಬಜಪೆ ಪೊಲೀಸರು ಚಿಕನ್ ಸೆಂಟರ್ ಗೆ ಢಿಡೀರ್ ದಾಳಿ ನಡೆಸಿದಾಗ ಪ್ರಕರಣ […]

ಮಂಗಳೂರು: ಚಿಕನ್ ಸೆಂಟರ್‌ನಲ್ಲಿ ಅಕ್ರಮ ಬೀಫ್ ಮಾರಾಟ ➤ ಇಬ್ಬರ ಬಂಧನ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಹುಲಿ ಚರ್ಮ ಹಾಗೂ ಉಗುರು ಸಾಗಿಸುತ್ತಿದ್ದ ಐವರ ಬಂಧನ

(ನ್ಯೂಸ್ ಕಡಬ) newskadaba.com ಹೆಬ್ರಿ, ಎ. 07. ಹುಲಿಯ ಚರ್ಮ ಹಾಗೂ ಉಗುರು ಸಾಗಿಸುತ್ತಿದ್ದ ಐವರು ಆರೋಪಿಗಳನ್ನು ಸೋಮೇಶ್ವರ ಚೆಕ್ ಪೋಸ್ಟ್‌ ಬಳಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಹುಬ್ಬಳ್ಳಿಯಿಂದ ಮಂಗಳೂರಿನ ಕಡೆ ಬೈಕ್‍ ಗಳಲ್ಲಿ ಹುಲಿಯ ಎರಡು ಚರ್ಮ ಮತ್ತು ಉಗುರುಗಳನ್ನು ಸಾಗಿಸುತ್ತಿದ್ದ ವೇಳೆ ಚೆಕ್‍ಪೋಸ್ಟ್‌ನಲ್ಲಿ ತಪಾಸಣೆ ನಡೆಸುತ್ತಿದ್ದ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಆರೋಪಿಗಳಿಂದ ಹುಲಿಯ ಉಗುರು, ಚರ್ಮ ಅಲ್ಲದೇ ಬೈಕ್ ಮತ್ತು ಮೊಬೈಲ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ. ಚರ್ಮ ಮತ್ತು ಉಗುರುಗಳನ್ನು ಪರೀಕ್ಷೆಗಾಗಿ ಫೋರೆನ್ಸಿಕ್ ಪ್ರಯೋಗಾಯಲಕ್ಕೆ ಕಳುಹಿಸಲಾಗಿದೆ. ಆರೋಪಿಗಳ ವಿಚಾರಣೆ

ಹುಲಿ ಚರ್ಮ ಹಾಗೂ ಉಗುರು ಸಾಗಿಸುತ್ತಿದ್ದ ಐವರ ಬಂಧನ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಸುಳ್ಯ: ನಿಂತಿದ್ದ ಹುಂಡೈ ಕಾರಿಗೆ ಅಲ್ಟೋ ಕಾರು ಢಿಕ್ಕಿ ➤ ಪ್ರಯಾಣಿಕರು ಅಪಾಯದಿಂದ ಪಾರು

(ನ್ಯೂಸ್ ಕಡಬ) newskadaba.com ಸುಳ್ಯ, ಎ. 07. ನಿಂತಿದ್ದ ಹುಂಡಾಯ್ ಕಾರಿಗೆ ಅಲ್ಟೋ ಕಾರೊಂದು ಢಿಕ್ಕಿ ಹೊಡೆದ ಘಟನೆ ಇಲ್ಲಿನ ಜ್ಯೋತಿ ವೃತ್ತದ ಬಳಿ ನಡೆದಿದೆ. ಸುಳ್ಯ ಜಯನಗರ ನಿವಾಸಿ ಕೇಶವ ಎಂಬವರು ಜ್ಯೋತಿ ವೃತ್ತದ ಬಳಿ ತಮ್ಮ ಹುಂಡೈ ಕಾರನ್ನು ನಿಲ್ಲಿಸಿದ್ದು, ಈ ಸಂದರ್ಭ ಐವರ್ನಾಡು ನಿವಾಸಿ ವೀರನಾಥ ಎಂಬವರು ತನ್ನ ಆಲ್ಟೋ ಕಾರಿನಲ್ಲಿ ಸುಳ್ಯಕ್ಕೆ ಬರುತ್ತಿದ್ದರು. ಈ ಸಂದರ್ಭದಲ್ಲಿ ಕಾರಿನ ಬ್ರೇಕ್ ಜಾಮ್ ಆಗಿ ಜ್ಯೋತಿ ವೃತ್ತದ ಬಳಿ ನಿಂತಿದ್ದ ಹುಂಡೈ ಕಾರಿಗೆ ಡಿಕ್ಕಿ

ಸುಳ್ಯ: ನಿಂತಿದ್ದ ಹುಂಡೈ ಕಾರಿಗೆ ಅಲ್ಟೋ ಕಾರು ಢಿಕ್ಕಿ ➤ ಪ್ರಯಾಣಿಕರು ಅಪಾಯದಿಂದ ಪಾರು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ವಿಟ್ಲ: ಅಕ್ರಮ ಗಾಂಜಾ ಸಾಗಾಟ ➤ ಓರ್ವ ಅರೆಸ್ಟ್

(ನ್ಯೂಸ್ ಕಡಬ) newskadaba.com ವಿಟ್ಲ, ಎ. 07. ಕಾರಿನಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ತಂಡವೊಂದನ್ನು ವಿಟ್ಲ ಪೊಲೀಸರು ಕೊಡಂಗಾಯಿ ಎಂಬಲ್ಲಿ ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ನಾಸಿರ್ ಎಂದು ಗುರುತಿಸಲಾಗಿದೆ. ವಿಟ್ಲ ಠಾಣಾ ಎಸ್ಐ ವಿನೋದ್ ರೆಡ್ಡಿ ನೇತೃತ್ವದ ತಂಡವು ವಿಟ್ಲದ ಕೊಡಂಗಾಯಿ ಎಂಬಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದರು. ಈ ಸಂದರ್ಭ ಸಾಲೆತ್ತೂರು ಕಡೆಯಿಂದ ಬಂದ ಬಿಳಿ ಬಣ್ಣದ ಆಲ್ಟೋ ಕಾರನ್ನು ನಿಲ್ಲಿಸಿ ತಪಾಸಣೆ ಮಾಡಿದಾಗ ಕಾರಿನಲ್ಲಿ ಚಾಲಕ ಮಾತ್ರವೇ ಇದ್ದು, ಕಾರಿನ ಹಿಂಬದಿ ಸೀಟಿನಲ್ಲಿ ಒಂದು ಪ್ಲಾಸ್ಟಿಕ್

ವಿಟ್ಲ: ಅಕ್ರಮ ಗಾಂಜಾ ಸಾಗಾಟ ➤ ಓರ್ವ ಅರೆಸ್ಟ್ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಉಡುಪಿ: ದ್ವಿಚಕ್ರ ವಾಹನ ಸ್ಕಿಡ್- ಸವಾರ ಮೃತ್ಯು

(ನ್ಯೂಸ್ ಕಡಬ) newskadaba.com ಉಡುಪಿ, ಫೆ. 01. ದ್ವಿಚಕ್ರ ವಾಹನ ಸ್ಕಿಡ್ ಆದ ಪರಿಣಾಮ ಯುವಕನೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ರವಿವಾರ ರಾತ್ರಿ ರಾಪ್ಟ್ರೀಯ ಹೆದ್ದಾರಿ ಸಂತೆಕಟ್ಟೆ ಸೇತುವೆ ಬಳಿ ನಡೆದಿದೆ. ಮೃತ ಯುವಕನನ್ನು ಕೊಳಲಗಿರಿಯ ಆಸೀಫ್(19) ಎಂದು ಗುರುತಿಸಲಾಗಿದೆ. ಈತ ನಿನ್ನೆ ರಾತ್ರಿ ಉಡುಪಿ ಕಡೆಯಿಂದ ಕೊಳಲಗಿರಿಗೆ ಹೋಂಡಾ ಆಕ್ಟೀವಾದಲ್ಲಿ ಹೋಗುತ್ತಿದ್ದ ವೇಳೆ ಸಂತೆಕಟ್ಟೆ ಸೇತುವೆಯಲ್ಲಿ ದ್ವಿಚಕ್ರ ವಾಹನ ಸ್ಕೀಡ್ ಆಗಿದ್ದು, ಪರಿಣಾಮ ಆಸೀಫ್ ಸೇತುವೆಯ ತಡೆಗೋಡೆಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿರುವುದಾಗಿ ಪೊಲೀಸರು

ಉಡುಪಿ: ದ್ವಿಚಕ್ರ ವಾಹನ ಸ್ಕಿಡ್- ಸವಾರ ಮೃತ್ಯು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಬೆಳ್ತಂಗಡಿ: ‘ತಾಂಟ್ ರೆ ಬಾ ತಾಂಟ್’ ಡೈಲಾಗ್ ಹೊಡೆದು ಯುವಕರಿಬ್ಬರಿಗೆ ಹಲ್ಲೆ ಪ್ರಕರಣ ➤ ಆರು ಮಂದಿಯ ಬಂಧನ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಜ. 24. ತಾಂಟ್ ರೇ ಬಾ ತಾಂಟ್ ಎಂಬ ಡೈಲಾಗ್ ಹೊಡೆದು , ಜಗಳವಾಡಿ ವ್ಯಕ್ತಿಯೋರ್ವನಿಗೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿಯನ್ನು ಬಂಧಿಸಿದ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ. ಬಂಧಿತ ಆರೋಪಿಗಳನ್ನು ಅಜಿತ್ ಕುಮಾರ್, ಅರುಣ್ ಕುಮಾರ್, ನಿತೀಶ್, ಆಶಿಶ್ ಕುಮಾರ್, ಪರಮೇಶ್ವರ್ ಮತ್ತು ನವೀನ‌ ಎಂದು ಗುರುತಿಸಲಾಗಿದೆ. ಅಲ್ತಾಫ್ ಎಂಬಾತ ಉಜಿರೆಯ ಎಂಪಾಯರ್ ಹೋಟೆಲ್ ವೊಂದರಲ್ಲಿ ಜ್ಯೂಸ್ ಮೇಕರ್ ಆಗಿದ್ದು, ಒಂದು ವಾರದ ಹಿಂದೆ ಹೋಟೆಲ್ ಗೆ ಬಂದ

ಬೆಳ್ತಂಗಡಿ: ‘ತಾಂಟ್ ರೆ ಬಾ ತಾಂಟ್’ ಡೈಲಾಗ್ ಹೊಡೆದು ಯುವಕರಿಬ್ಬರಿಗೆ ಹಲ್ಲೆ ಪ್ರಕರಣ ➤ ಆರು ಮಂದಿಯ ಬಂಧನ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಶಿರ್ವ: ಗಾಂಜಾ ಮಾರಾಟ ➤ ಯುವಕನ ಬಂಧನ

(ನ್ಯೂಸ್ ಕಡಬ) newskadaba.com ಶಿರ್ವ, ಜ. 07. ಗಾಂಜಾ ಮಾರಾಟ ಮಾಡುತ್ತಿದ್ದ ಯುವಕನೋರ್ವನನ್ನು ಬಂಧಿಸಿದ ಘಟನೆ ಶಿರ್ವದಲ್ಲಿ ನಡೆದಿದೆ. ಆರೋಪಿಯನ್ನು ಒರಿಸ್ಸಾ ಮೂಲದ ಬಡಾನಿಡಿಯೂರಿನ ಸಾಗರ್ (22) ಎಂದು ಗುರುತಿಸಲಾಗಿದೆ. ಈತನಿಂದ ಸುಮಾರು 32,000 ಸಾವಿರ ರೂ. ಮೌಲ್ಯದ ಒಂದು ಕೆ.ಜಿ 100 ಗ್ರಾಂ. ಗಾಂಜಾ, 7 ಪ್ಲಾಸ್ಟಿಕ್ ತೊಟ್ಟೆಗಳು, 1200 ರೂ. ನಗದು ಹಾಗೂ ಕೃತ್ಯಕ್ಕೆ ಬಳಸಿದ ಬೈಕ್ ಮತ್ತು ಮೊಬೈಲ್ ಫೋನನ್ನು ವಶಪಡಿಸಿಕೊಳ್ಳಾಗಿದೆ. ಈ ಕುರಿತು ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶಿರ್ವ: ಗಾಂಜಾ ಮಾರಾಟ ➤ ಯುವಕನ ಬಂಧನ Read More »

ಕರಾವಳಿ, ಕರ್ನಾಟಕ, ಬ್ರೇಕಿಂಗ್ ನ್ಯೂಸ್

70 ಸಾವಿರ ಹಣಕ್ಕೆ 1 ತಿಂಗಳ ಮಗುವನ್ನೇ ಮಾರಾಟ ಮಾಡಿದ ಪಾಪಿ ತಂದೆ…!

(ನ್ಯೂಸ್ ಕಡಬ) newskadaba.com ಹೈದರಾಬಾದ್, ಜ. 05. ಕೇವಲ 70 ಸಾವಿರ ರೂಪಾಯಿ ಹಣಕ್ಕಾಗಿ ತನ್ನ 1 ತಿಂಗಳ ಹೆಣ್ಣುಮಗುವನ್ನೇ ಮಾರಾಟ ಮಾಡಿದ ಘಟನೆ ಹೈದ್ರಾಬಾದ್ ನಲ್ಲಿ ನಡೆದಿದೆ. ಮಗುವಿನ ತಂದೆತಾಯಿ ಪುಟ್ ಪಾತ್ ಒಂದರಲ್ಲಿ ವಾಸಿಸುತ್ತಿದ್ದು, ಇದನ್ನು ಗಮನಿಸಿದ್ದ ಮತ್ತೋರ್ವ  ದಂಪತಿಯು ಮಗುವನ್ನ ತಮಗೆ ನೀಡುವಂತೆ ಕೇಳಿದ್ದು, ಇದನ್ನು ಒಪ್ಪಿದಪಾಪಿ ತಂದೆಯು ತಾಯಿಗೆ ತಿಳಿಯದ ಹಾಗೆ ಮಗುವನ್ನು 70 ಸಾವಿರ ರೂಪಾಯಿಗಳಿಗೆ ಮಾರಾಟ ಮಾಡಿದ್ದಾನೆ. ಇದೀಗ ಮಗುವನ್ನುತಾಯಿಯು ಪೊಲೀಸರಿಗೆ ದೂರು ನೀಡಿದ್ದು, ಈ ವೇಳೆ ಸಿಸಿ

70 ಸಾವಿರ ಹಣಕ್ಕೆ 1 ತಿಂಗಳ ಮಗುವನ್ನೇ ಮಾರಾಟ ಮಾಡಿದ ಪಾಪಿ ತಂದೆ…! Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಮಂಗಳೂರು: ಬಾವಿಗೆ ಬಿದ್ದ ಸ್ಕೂಟರ್ ➤ ಸವಾರ ಮೃತ್ಯು

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 05. ಸ್ಕೂಟರ್ ಸವಾರ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಪಕ್ಕಲಡ್ಕ ಸಮೀಪದ ಬಜಾಲ್ ಎಂಬಲ್ಲಿ ನಡೆದಿದೆ. ಮೃತ ಸವಾರನನ್ನು ಎಮ್ಮೆಕೆರೆಯ ಅಜತ್ (22) ಎಂದು ಗುರುತಿಸಲಾಗಿದೆ. ಸೋಮವಾರ ರಾತ್ರಿ ಬಜಾಲ್ ನ ಎತ್ತರದ ಪ್ರದೇಶದಲ್ಲಿ ತನ್ನ ಸ್ಕೂಟರ್ ನಲ್ಲಿ ಸಂಚರಿಸುತ್ತಿದ್ದ ವೇಳೆ ನಿಯಂತ್ರಣ ಕಳೆದುಕೊಂಡು ಪಕ್ಕದಲ್ಲಿರುವ ಬಾವಿಯ ಆವರಣಕ್ಕೆ ಢಿಕ್ಕಿ ಹೊಡೆದು ಸವಾರ ಬಾವಿಗೆ ಬಿದ್ದಿದ್ದಾರೆ ಎನ್ನಲಾಗಿದೆ.

ಮಂಗಳೂರು: ಬಾವಿಗೆ ಬಿದ್ದ ಸ್ಕೂಟರ್ ➤ ಸವಾರ ಮೃತ್ಯು Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್

ಚಾಲಕನ ನಿಯಂತ್ರಣ ತಪ್ಪಿ ನದಿಗೆ ಬಿದ್ದ ಕಾರು ➤ ಪ್ರಯಾಣಿಕರು ಅಪಾಯದಿಂದ ಪಾರು

(ನ್ಯೂಸ್ ಕಡಬ) newskadaba.com ಹಳೆಯಂಗಡಿ, ಜ. 05. ನದಿ ತೀರದ ರಸ್ತೆಯಲ್ಲಿ ಸಂಚರಿಸುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ನದಿಗೆ ಬಿದ್ದ ಘಟನೆ ರಾ.ಹೆದ್ದಾರಿ 66ರ ಪಾವಂಜೆ ಸೇತುವೆ ಬಳಿ ಇಂದು ಬೆಳಗ್ಗೆ ನಡೆದಿದೆ. ಕೃಷ್ಣಾಪುರ ಕಾಟಿಪಳ್ಳದ ನಿವಾಸಿ ಅಶ್ರಫ್ ಎಂಬವರು ತನ್ನ ಸ್ನೇಹಿತನೊಂದಿಗೆ ಪಾವಂಜೆ ಬಳಿಯ ಅರಾಂದ್ ಎಂಬ ಸ್ಥಳದಿಂದ ಹಿಂದಿರುಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದ್ದು, ಈ ಸಂದರ್ಭ ಪ್ರಯಾಣಿಕರಿಬ್ಬರು ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಕಾರು ನದಿಯಲ್ಲಿ ಮುಳುಗುತ್ತಿದ್ದಂತೆಯೇ ಅಶ್ರಫ್ ಮತ್ತು

ಚಾಲಕನ ನಿಯಂತ್ರಣ ತಪ್ಪಿ ನದಿಗೆ ಬಿದ್ದ ಕಾರು ➤ ಪ್ರಯಾಣಿಕರು ಅಪಾಯದಿಂದ ಪಾರು Read More »

ಕರಾವಳಿ, ಕ್ರೈಮ್ ನ್ಯೂಸ್, ಬ್ರೇಕಿಂಗ್ ನ್ಯೂಸ್
Scroll to Top