ಸುಳ್ಯ: ನಿಂತಿದ್ದ ಹುಂಡೈ ಕಾರಿಗೆ ಅಲ್ಟೋ ಕಾರು ಢಿಕ್ಕಿ ➤ ಪ್ರಯಾಣಿಕರು ಅಪಾಯದಿಂದ ಪಾರು



(ನ್ಯೂಸ್ ಕಡಬ) newskadaba.com ಸುಳ್ಯ, ಎ. 07. ನಿಂತಿದ್ದ ಹುಂಡಾಯ್ ಕಾರಿಗೆ ಅಲ್ಟೋ ಕಾರೊಂದು ಢಿಕ್ಕಿ ಹೊಡೆದ ಘಟನೆ ಇಲ್ಲಿನ ಜ್ಯೋತಿ ವೃತ್ತದ ಬಳಿ ನಡೆದಿದೆ.








ಸುಳ್ಯ ಜಯನಗರ ನಿವಾಸಿ ಕೇಶವ ಎಂಬವರು ಜ್ಯೋತಿ ವೃತ್ತದ ಬಳಿ ತಮ್ಮ ಹುಂಡೈ ಕಾರನ್ನು ನಿಲ್ಲಿಸಿದ್ದು, ಈ ಸಂದರ್ಭ ಐವರ್ನಾಡು ನಿವಾಸಿ ವೀರನಾಥ ಎಂಬವರು ತನ್ನ ಆಲ್ಟೋ ಕಾರಿನಲ್ಲಿ ಸುಳ್ಯಕ್ಕೆ ಬರುತ್ತಿದ್ದರು. ಈ ಸಂದರ್ಭದಲ್ಲಿ ಕಾರಿನ ಬ್ರೇಕ್ ಜಾಮ್ ಆಗಿ ಜ್ಯೋತಿ ವೃತ್ತದ ಬಳಿ ನಿಂತಿದ್ದ ಹುಂಡೈ ಕಾರಿಗೆ ಡಿಕ್ಕಿ ಹೊಡೆದಿದೆ. ಘಟನೆಯಿಂದ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ಘಟನಾ ಸ್ಥಳಕ್ಕೆ ಸುಳ್ಯ ಠಾಣಾ ಉಪನಿರೀಕ್ಷಕ ಎಂ ಆರ್ ಹರೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.






error: Content is protected !!
Scroll to Top