crime

crime, arrest, suspected

ಬಂಟ್ವಾಳ : ಲಾರಿ ಮತ್ತು ಸ್ಕೂಟರ್ ಅಪಘಾತ ಪ್ರಕರಣ ➤ ಆರೋಪಿ ಅರೆಸ್ಟ್…!!!!

(ನ್ಯೂಸ್ ಕಡಬ) newskadaba.com  ಬಂಟ್ವಾಳ, ಜ.06. ಲಾರಿ ಮತ್ತು ಸ್ಕೂಟರ್ ನಡುವೆ ಅಪಘಾತ ಸಂಭವಿಸಿ ಸ್ಕೂಟರ್ ಸವಾರ ಮೃತಪಟ್ಟಿರುವ ಘಟನೆ ಬಂಟ್ವಾಳದಲ್ಲಿ ವರದಿಯಾಗಿದೆ. ಈ ಕುರಿತು ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗದೇ ಐದು ವರ್ಷಗಳಿಂದ  ತಲೆಮರೆಸಿಕೊಂಡಿದ್ದ ಆರೋಪಿ ಲಾರಿ ಚಾಲಕನನ್ನು ಮೆಲ್ಕಾರ್ ಟ್ರಾಫಿಕ್ ಎಸ್.ಐ ಮೂರ್ತಿ ಅವರು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ ಎನ್ನಲಾಗಿದೆ. ಕಲ್ಲಡ್ಕ ಸಮೀಪದ ನರಹರಿ ಎಂಬಲ್ಲಿ ಲಾರಿ ಮತ್ತು ಸ್ಕೂಟರ್ ಢಿಕ್ಕಿಯಾಗಿ ಮೃತಪಟ್ಟಿದ್ದ ಎನ್ನಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಲಾರಿ ಚಾಲಕ ಕೇರಳದ ಕಾಸರಗೋಡು […]

ಬಂಟ್ವಾಳ : ಲಾರಿ ಮತ್ತು ಸ್ಕೂಟರ್ ಅಪಘಾತ ಪ್ರಕರಣ ➤ ಆರೋಪಿ ಅರೆಸ್ಟ್…!!!! Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ತರಬೇತಿ ವೇಳೆ ಲಘು ವಿಮಾನ ಗರ್ಭಗುಡಿಗೆ ಢಿಕ್ಕಿ..!!

(ನ್ಯೂಸ್ ಕಡಬ) newskadaba.com  ಭೋಪಾಲ್, ಜ.06. ತರಬೇತಿ ವೇಳೆ ಲಘು ವಿಮಾನವೊಂದು ದೇವಾಸ್ಥಾನದ ಮೇಲಿನ ಗರ್ಭಗುಡಿಗೆ ಢಿಕ್ಕಿ ಹೊಡೆದು ಪತನಗೊಂಡಿದ್ದು, ಈ ಸಂಧರ್ಭದಲ್ಲಿ ಹಿರಿಯ ಪೈಲಟ್ ದುರ್ಮರಣಕ್ಕೀಡಾಗಿರುವ ಘಟನೆ ಮಧ್ಯಪ್ರದೇಶದ ರೇವಾ ಎಂಬಲ್ಲಿ ಸಂಭವಿಸಿರುವುದಾಗಿ ವರದಿಯಾಗಿದೆ. ಮಧ್ಯಪ್ರದೇಶದ ರೇವಾ ಜಿಲ್ಲೆಯ ಡುಮ್ರಿ ಗ್ರಾಮದಲ್ಲಿರುವ ದೇವಸ್ಥಾನದ ಗರ್ಭಗುಡಿಯ ಶಿಖರಕ್ಕೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.  

ತರಬೇತಿ ವೇಳೆ ಲಘು ವಿಮಾನ ಗರ್ಭಗುಡಿಗೆ ಢಿಕ್ಕಿ..!! Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಸುಬ್ರಹ್ಮಣ್ಯ: ಇನ್ ಸ್ಟಾಗ್ರಾಂ ಪರಿಚಯ – ಅನ್ಯಕೋಮಿನ ಯುವಕನ ಭೇಟಿಗೆ ಬಂದ ಯುವತಿ ➤ ಯುವಕನಿಗೆ ಸಾರ್ವಜನಿಕರಿಂದ ಹಿಗ್ಗಾಮುಗ್ಗಾ ಥಳಿತ..!

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಜ. 06. ಇನ್ ಸ್ಟಾಗ್ರಾಂನಲ್ಲಿ ಪರಿಚಯಗೊಂಡ ಹಿಂದೂ ಯುವತಿಯನ್ನು ಅನ್ಯಕೋಮಿನ ಯುವಕನೋರ್ವ ಭೇಟಿಯಾಗಿದ್ದಕ್ಕೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಸುಬ್ರಹ್ಮಣ್ಯದಲ್ಲಿ ವರದಿಯಾಗಿದೆ. ಇನ್ ಸ್ಟಾಗ್ರಾಂ ಮೂಲಕ ಪರಿಚಯವಾಗಿದ್ದ ಕಲ್ಲುಗುಂಡಿಯ ಅನ್ಯಕೋಮಿನ ಯುವಕ ಮತ್ತು ಸುಬ್ರಮಣ್ಯದ ಹಿಂದೂ ಯುವತಿ ಹಲವು ದಿನಗಳ ಕಾಲ ಫೋನ್ ಮೂಲಕ ಮಾತನಾಡುತ್ತಿದ್ದು, ಭೇಟಿಯಾಗಲು ಪ್ಲಾನ್ ಮಾಡಿ, ಅದರಂತೆ ಸುಬ್ರಹ್ಮಣ್ಯ ಬಸ್ ಸ್ಟಾಂಡ್ ನಲ್ಲಿ ಭೇಟಿಯಾಗಿದ್ದರು. ಈ ವಿಚಾರ ತಿಳಿದ ಗುಂಪೊಂದು ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದು, ಪರಿಣಾಮ ಯುವಕನ ತಲೆ

ಸುಬ್ರಹ್ಮಣ್ಯ: ಇನ್ ಸ್ಟಾಗ್ರಾಂ ಪರಿಚಯ – ಅನ್ಯಕೋಮಿನ ಯುವಕನ ಭೇಟಿಗೆ ಬಂದ ಯುವತಿ ➤ ಯುವಕನಿಗೆ ಸಾರ್ವಜನಿಕರಿಂದ ಹಿಗ್ಗಾಮುಗ್ಗಾ ಥಳಿತ..! Read More »

ಕರಾವಳಿ, ಕ್ರೈಮ್ ನ್ಯೂಸ್

ಬುದ್ದಿವಾದ ಹೇಳಿದ್ದಕ್ಕೆ 9ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ಕೋಲಾರ, ಜ. 06. ಪೋಷಕರು ಬುದ್ದಿವಾದ ಹೇಳಿದ್ದಕ್ಕೆ ಮನನೊಂದ ಬಾಲಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೋಲಾರ ಜಿಲ್ಲೆಯ ಮುಳಬಾಗಲು ತಾಲ್ಲೂಕಿನ ಮುಷ್ಟೂರು ಗ್ರಾಮದಲ್ಲಿ ಸಂಭವಿಸಿದೆ. ಆತ್ಮಹತ್ಯೆ ಮಾಡಿಕೊಂಡ ಬಾಲಕನನ್ನು ಉದಯ್ ಕುಮಾರ್ ಎಂದು ಗುರುತಿಸಲಾಗಿದೆ. ಮನೆಯವರು ಈತನಿಗೆ ವಿದ್ಯಾಭ್ಯಾಸದ ಕಡೆ ಹೆಚ್ಚಿನ ಗಮನ ಕೊಡುವಂತೆ ಬುದ್ದಿವಾದ ಹೇಳಿದ್ದರಿಂದ ಮನನೊಂದು ಬಾಲಕ ವಿಷ ಸೇವಿಸಿದ್ದು, ಕೂಡಲೇ ಉದಯ್ ಕುಮಾರ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಕುರಿತು

ಬುದ್ದಿವಾದ ಹೇಳಿದ್ದಕ್ಕೆ 9ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿದ್ದ ವೇಳೆ ಹೃದಯಾಘಾತ- ವ್ಯಕ್ತಿ ಮೃತ್ಯು

(ನ್ಯೂಸ್ ಕಡಬ) newskadaba.com ಇಂದೋರ್‌, ಜ. 06. ಜಿಮ್‌ನಲ್ಲಿ ವ್ಯಾಯಾಮ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಕುಸಿದು ಬಿದ್ದು ಹೃದಯಾಘಾತದಿಂದ ಮೃತಪಟ್ಟ ಘಟನೆ ಇಂದೋರ್ ಎಂಬಲ್ಲಿ ವರದಿಯಾಗಿದೆ. ಈ ಕುರಿತು ಆಘಾತಕಾರಿ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಜಿಮ್‌ನಲ್ಲಿ ವೃಂದಾವನದ ಮಾಲೀಕ ಪ್ರದೀಪ್ ರಘುವಂಶಿ ಕಸರತ್ತು ನಡೆಸುತ್ತಿದ್ದಾಗ ಹೃದಯಾಘಾತಗೊಂಡು ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆಂದು ಮೂಲಗಳು ತಿಳಿಸಿವೆ.

ಜಿಮ್ ನಲ್ಲಿ ವರ್ಕೌಟ್ ಮಾಡುತ್ತಿದ್ದ ವೇಳೆ ಹೃದಯಾಘಾತ- ವ್ಯಕ್ತಿ ಮೃತ್ಯು Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ವಿಟ್ಲ: ಆಟೋ ಮತ್ತು ಕಾರಿನ ನಡುವೆ ಮುಖಾಮುಖಿ ಢಿಕ್ಕಿ

(ನ್ಯೂಸ್ ಕಡಬ) newskadaba.com ವಿಟ್ಲ, ಜ. 06. ಆಟೋ ರಿಕ್ಷಾ ಮತ್ತು ಕಾರಿನ ನಡುವೆ ಅಪಘಾತ ನಡೆದಿರುವ ಘಟನೆ ವಿಟ್ಲ ಸಮೀಪದ ಸೇರಾಜೆ ರಸ್ತೆಯ ನೀರಕಣಿ ಎಂಬಲ್ಲಿ ಸಂಭವಿಸಿದೆ. ಘಟನೆಯಿಂದ ಆಟೋದಲ್ಲಿದ್ದವರಿಗೆ ಗಾಯವಾಗಿದ್ದು, ಎರಡೂ ವಾಹನಗಳು ಜಖಂಗೊಂಡಿದೆ ಎಂದು ತಿಳಿದುಬಂದಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿ ತಿಳಿಸಿದೆ.

ವಿಟ್ಲ: ಆಟೋ ಮತ್ತು ಕಾರಿನ ನಡುವೆ ಮುಖಾಮುಖಿ ಢಿಕ್ಕಿ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಮೀನುಗಾರಿಕೆಗೆ ತೆರಳಿದ್ದ ಬೋಟ್ ಬಂಡೆಗೆ ಢಿಕ್ಕಿ ➤ ಐವರು ಮೀನುಗಾರರ ರಕ್ಷಣೆ

(ನ್ಯೂಸ್ ಕಡಬ) newskadaba.com ಕಾಪು, ಜ. 06. ಕಾಪುವಿನಿಂದ ಎಂಟು ಮೈಲಿ ನಾಟಿಕಲ್ ದೂರದ ಸಮುದ್ರದಲ್ಲಿ ಮೀನುಗಾರಿಕಾ ಬೋಟ್ ವೊಂದು ಬಂಡೆಗೆ ಡಿಕ್ಕಿ ಹೊಡೆದು ಅಪಘಾತಕ್ಕೀಡಾಗಿರುವ ಘಟನೆ ಕಾಪುವಿನಲ್ಲಿ ವರದಿಯಾಗಿದೆ. ಘಟನೆಯ ವೇಳೆ ಬೋಟ್ ನಲ್ಲಿದ್ದ ಐವರು ಮೀನುಗಾರರನ್ನು ಮತ್ತೊಂದು ಬೋಟ್ ಸಿಬ್ಬಂದಿ ರಕ್ಷಿಸಿದ್ದಾರೆ ಎನ್ನಲಾಗಿದೆ. ಬಾಡನಿಡಿಯೂರಿನ ಭಾಸ್ಕರ್ ಎಂ. ಪುತ್ರನ್ ಎಂಬವರ ಮಾಲಿಕತ್ವದ “ಸ್ವರ್ಣಗೈರಿ” ಬೋಟ್ ಮಲ್ಪೆ ಬಂದರ್ ನಿಂದ ಮೀನುಗಾರಿಕೆಗೆ ತೆರಳಿತ್ತು ಎಂದು ತಿಳಿದುಬಂದಿದೆ. ಬಂಡೆಗೆ ಡಿಕ್ಕಿ ಹೊಡೆದು ಅಪಘಾತಕ್ಕಿಡಾಗಿ ಬೋಟ್ ನ ಒಳಗೆ

ಮೀನುಗಾರಿಕೆಗೆ ತೆರಳಿದ್ದ ಬೋಟ್ ಬಂಡೆಗೆ ಢಿಕ್ಕಿ ➤ ಐವರು ಮೀನುಗಾರರ ರಕ್ಷಣೆ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಬೆಳ್ತಂಗಡಿ: ಚಿರತೆ ದಾಳಿಗೆ ಜಾನುವಾರು ಬಲಿ ➤ ಬೋನ್ ಅಳವಡಿಸಿದ ಅರಣ್ಯ ಇಲಾಖೆ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಜ. 06. ಚಿರತೆ ದಾಳಿಗೆ ದನವೊಂದು ಬಲಿಯಾದ ಘಟನೆ ಬೆಳ್ತಂಗಡಿ ತಾಲೂಕಿನ ಕುದ್ಯಾರು ಗ್ರಾಮದಲ್ಲಿ ಸಂಭವಿಸಿದೆ. ಕುದ್ಯಾಡಿ ಗ್ರಾಮದ ಕೆಳಗಿನಬೆಟ್ಟು ಮನೆಯ ಶೀನ ಪೂಜಾರಿ ಎಂಬವರು ದನವನ್ನು ತೋಟದಲ್ಲಿ ಮೇಯಲು ಬಿಟ್ಟಿದ್ದ ವೇಳೆ, ಚಿರತೆಯೊಂದು ಏಕಾಏಕಿ ದಾಳಿ ಮಾಡಿದೆ ಎನ್ನಲಾಗಿದೆ. ಚಿರತೆ ದಾಳಿಗೆ ದನ ಮೃತಪಟ್ಟಿದ್ದು, ಕೂಡಲೇ ಸ್ಥಳೀಯ ಪಂಚಾಯತ್ ಸದಸ್ಯರೊಬ್ಬರಿಗೆ ಕರೆ ಮಾಡಿ ವಿಷಯ ತಿಳಿಸಿದ್ದು ಅವರು ಅರಣ್ಯ ಇಲಾಖೆಗೆ ಮಾಹಿತಿ ತಿಳಿಸಿದ್ದಾರೆ ಎಂದು ವರದಿಯಾಗಿದೆ.  

ಬೆಳ್ತಂಗಡಿ: ಚಿರತೆ ದಾಳಿಗೆ ಜಾನುವಾರು ಬಲಿ ➤ ಬೋನ್ ಅಳವಡಿಸಿದ ಅರಣ್ಯ ಇಲಾಖೆ Read More »

ಕರಾವಳಿ, ಕ್ರೈಮ್ ನ್ಯೂಸ್

ಪುತ್ತೂರು: ಬೈಕ್ ಢಿಕ್ಕಿ- ಬಾಲಕನಿಗೆ ಗಾಯ ➤ ಮಾನವೀಯತೆ ಮೆರೆದ ಕಾಂಗ್ರೆಸ್ ವಲಯಾಧ್ಯಕ್ಷ

(ನ್ಯೂಸ್ ಕಡಬ) newskadaba.com ಪುತ್ತೂರು, ಜ. 06. ಶಾಲೆ ಬಿಟ್ಟು ಮನೆಗೆ ತೆರಳುತ್ತಿದ್ದ ವಿದ್ಯಾರ್ಥಿಗೆ ಬೈಕ್ ಡಿಕ್ಕಿ ಹೊಡೆದು ಬಾಲಕ ಗಾಯಗೊಂಡ ಘಟನೆ ಕುಂಬ್ರದಲ್ಲಿ ನಡೆದಿದೆ. ಗಾಯಗೊಂಡ ಬಾಲಕನನ್ನು ಕೊಯಿಲತ್ತಡ್ಕ ಜನತಾ ಕಾಲನಿ ನಿವಾಸಿ ಖೈರುನ್ನಿಸಾ ಎಂಬವರ ಪುತ್ರ ಶಿಹಾಬ್ ಎಂದು ಗುರುತಿಸಲಾಗಿದೆ. ಈತ ಶಾಲೆ ಬಿಟ್ಟು ಮನೆಗೆ ತೆರಳುತ್ತಿದ್ದ ವೇಳೆ ಅತಿವೇಗದಿಂದ ಬಂದ ಕೇರಳ ನೋಂದಣಿಯ ಬೈಕ್ ಡಿಕ್ಕಿ ಹೊಡೆದು ಗಾಯಗೊಂಡಿದ್ದ ಈತನನ್ನು ಕುಂಬ್ರ ವಲಯ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಪೂಜಾರಿ ಬೊಳ್ಳಾಡಿ ತಕ್ಷಣವೇ ಆಸ್ಪತ್ರೆಗೆ

ಪುತ್ತೂರು: ಬೈಕ್ ಢಿಕ್ಕಿ- ಬಾಲಕನಿಗೆ ಗಾಯ ➤ ಮಾನವೀಯತೆ ಮೆರೆದ ಕಾಂಗ್ರೆಸ್ ವಲಯಾಧ್ಯಕ್ಷ Read More »

ಕರಾವಳಿ

ಪುತ್ತೂರು: ವಿದ್ಯಾರ್ಥಿನಿ ಅಪ್ರಾಪ್ತೆಯಾಗಿದ್ದ ಸಂದರ್ಭ ಲೈಂಗಿಕ ಕಿರುಕುಳ ಆರೋಪ ➤ ಯುವಕನ ವಿರುದ್ದ ಪೋಕ್ಸೋ ಪ್ರಕರಣ ದಾಖಲು

(ನ್ಯೂಸ್ ಕಡಬ) newskadaba.com ಪುತ್ತೂರು, ಜ. 06. ವಿದ್ಯಾರ್ಥಿನಿಯೋರ್ವಳು ಅಪ್ರಾಪ್ತೆಯಾಗಿದ್ದ ಸಂದರ್ಭ ಆಕೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಕೋಡಿಯಡ್ಕ ನಿವಾಸಿ ಯುವಕನ ವಿರುದ್ಧ ಸಂಪ್ಯ ಪೊಲೀಸರು ಪೋಕ್ಸೋ ಪ್ರಕರಣ ದಾಖಲಿಸಿದ ಘಟನೆ ವರದಿಯಾಗಿದೆ. ಆರೋಪಿ ಕೋಳಿ ಅಂಗಡಿ ಹೊಂದಿರುವ ಕೋಡಿಯಡ್ಕ ನಿವಾಸಿ ರಾಹುಲ್ ಎಂದು ಗುರುತಿಸಲಾಗಿದೆ. ಆರೋಪಿ ರಾಹುಲ್, ವಿದ್ಯಾರ್ಥಿನಿ ಅಪ್ರಾಪ್ತೆಯಾಗಿದ್ದ ಸಂದರ್ಭ ಆಕೆಗೆ ಕೋಳಿ ಫಾರಂನಲ್ಲಿ ಲೈಂಗಿಕ ಕಿರುಕುಳ ನೀಡಿರುವುದಾಗಿ ಮತ್ತು ಆಕೆಗೆ ಬೆದರಿಕೆಯೊಡ್ಡಿರುವುದಾಗಿ ಪುತ್ತೂರು ನಿವಾಸಿ ಸದ್ಯ ಮಂಗಳೂರಿನ ಕಾಲೇಜೊಂದರ ವಿದ್ಯಾರ್ಥಿನಿ ನೀಡಿದ

ಪುತ್ತೂರು: ವಿದ್ಯಾರ್ಥಿನಿ ಅಪ್ರಾಪ್ತೆಯಾಗಿದ್ದ ಸಂದರ್ಭ ಲೈಂಗಿಕ ಕಿರುಕುಳ ಆರೋಪ ➤ ಯುವಕನ ವಿರುದ್ದ ಪೋಕ್ಸೋ ಪ್ರಕರಣ ದಾಖಲು Read More »

ಕರ್ನಾಟಕ, ಕ್ರೈಮ್ ನ್ಯೂಸ್
Scroll to Top