ಮೀನುಗಾರಿಕೆಗೆ ತೆರಳಿದ್ದ ಬೋಟ್ ಬಂಡೆಗೆ ಢಿಕ್ಕಿ ➤ ಐವರು ಮೀನುಗಾರರ ರಕ್ಷಣೆ

(ನ್ಯೂಸ್ ಕಡಬ) newskadaba.com ಕಾಪು, ಜ. 06. ಕಾಪುವಿನಿಂದ ಎಂಟು ಮೈಲಿ ನಾಟಿಕಲ್ ದೂರದ ಸಮುದ್ರದಲ್ಲಿ ಮೀನುಗಾರಿಕಾ ಬೋಟ್ ವೊಂದು ಬಂಡೆಗೆ ಡಿಕ್ಕಿ ಹೊಡೆದು ಅಪಘಾತಕ್ಕೀಡಾಗಿರುವ ಘಟನೆ ಕಾಪುವಿನಲ್ಲಿ ವರದಿಯಾಗಿದೆ.

ಘಟನೆಯ ವೇಳೆ ಬೋಟ್ ನಲ್ಲಿದ್ದ ಐವರು ಮೀನುಗಾರರನ್ನು ಮತ್ತೊಂದು ಬೋಟ್ ಸಿಬ್ಬಂದಿ ರಕ್ಷಿಸಿದ್ದಾರೆ ಎನ್ನಲಾಗಿದೆ. ಬಾಡನಿಡಿಯೂರಿನ ಭಾಸ್ಕರ್ ಎಂ. ಪುತ್ರನ್ ಎಂಬವರ ಮಾಲಿಕತ್ವದ “ಸ್ವರ್ಣಗೈರಿ” ಬೋಟ್ ಮಲ್ಪೆ ಬಂದರ್ ನಿಂದ ಮೀನುಗಾರಿಕೆಗೆ ತೆರಳಿತ್ತು ಎಂದು ತಿಳಿದುಬಂದಿದೆ. ಬಂಡೆಗೆ ಡಿಕ್ಕಿ ಹೊಡೆದು ಅಪಘಾತಕ್ಕಿಡಾಗಿ ಬೋಟ್ ನ ಒಳಗೆ ನೀರು ತುಂಬಿತ್ತು ಎನ್ನಲಾಗಿದೆ. ಸಿಬ್ಬಂದಿ ಬೋಟ್ ನಲ್ಲಿದ್ದ ಎಲ್ಲರನ್ನೂ ರಕ್ಷಿಸಿದ್ದು, ಘಟನೆಯಿಂದ 30 ಲಕ್ಷ ರೂ. ನಷ್ಟ ಉಂಟಾಗಿದೆ ಎಮದು ದೂರಿನಲ್ಲಿ ಭಾಸ್ಕರ್ ತಿಳಿಸಿದ್ದಾರೆ.

Scroll to Top