crime

ಆಟೋ ಹತ್ತಿದ ಮಗಳನ್ನೇ ಪಟಾಯಿಸಿದ ➤ ಸೂಸೈಡ್​ ನಾಟಕ ಮಾಡಿದ ಯುವತಿ ಮೃತ್ಯು

(ನ್ಯೂಸ್ ಕಡಬ)newskadaba.com  ಬೆಂಗಳೂರು, ಜ.21. ಆಟೋ ಡ್ರೈವರ್ ಜೊತೆಗೆ ಪ್ರೀತಿಗೆ ಬಿದ್ದಿದ್ದ ಮಗಳಿಗೆ ಪೋಷಕರು ಬುದ್ಧಿಮಾತು ಹೇಳಲು ಮುಂದಾಗಿದ್ದರು. ಆದರೆ ಈ ವೇಳೆ ಆತ್ಮಹತ್ಯೆ ಮಾಡಿಕೊಳ್ಳುವ ನಾಟಕ ಮಾಡಿದ್ದ ಯುವತಿ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಘಟನೆ ಬೆಂಗಳೂರು ನಗರದ ಹೆಚ್​​ಎಎಲ್​​ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮೃತ ಯುವತಿಯನ್ನು ಲಾವಣ್ಯ ಎಂದು ಗುರುತಿಸಲಾಗಿದ್ದು, ತನ್ನ ಪ್ರೀತಿಯನ್ನು ಸಾಬೀತು ಪಡಿಸಲು ಮುಂದಾಗಿ ವಿಷ ಸೇವನೆ ಮಾಡಿದ್ದ ಯುವತಿ ಸಾವು ಬದುಕಿನ ನಡುವಿನ ಹೋರಾಟದಲ್ಲಿ ಕೊನೆಯುಸಿರೆಳೆದಿದ್ದಾಳೆ.  

ಆಟೋ ಹತ್ತಿದ ಮಗಳನ್ನೇ ಪಟಾಯಿಸಿದ ➤ ಸೂಸೈಡ್​ ನಾಟಕ ಮಾಡಿದ ಯುವತಿ ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್

ಹೆಂಡತಿ ಜೊತೆ ಸಲುಗೆಯಿಂದ ಮಾತನಾಡಿದ್ದಕ್ಕೆ ಸಂಬಂಧಿಯನ್ನೇ ಹತ್ಯೆಗೈದ ಪತಿರಾಯ      

(ನ್ಯೂಸ್ ಕಡಬ)newskadaba.com  ವಿಜಯಪುರ, ಜ.21. ಹೆಂಡತಿ ಜೊತೆ ಸಲುಗೆಯಿಂದ ಮಾತನಾಡಿದ್ದಕ್ಕೆ ಗಂಡ ಸಂಬಂಧಿಯನ್ನೇ ಕೊಲೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ. ಕಾಳಿಕಾ ನಗರ ನಿವಾಸಿ ಈರಯ್ಯಾ ಮಠ ಎಂಬಾತನು ಅದೇ ಬಡಾವಣೆಯ ದಾನಯ್ಯ ಗಣಚಾರಿ ಪತ್ನಿ ವಾಣಿಯೊಂದಿಗೆ ಸಲುಗೆಯಿಂದ ಮಾತನಾಡುತ್ತಿದ್ದ. ಇದೇ ಕಾರಣಕ್ಕೆ ಅವಳ ಪತಿ ದಾನಯ್ಯ ಗಣಚಾರಿ ಕೊಲೆ ಮಾಡಿದ್ದಾನೆ. ಈ ಘಟನೆ ಸಂಬಂಧ ಇಬ್ಬರು ಪ್ರಮುಖ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಈರಯ್ಯಾ ಮಠ ಎಂಬುವವರು ತಮ್ಮ ಪತ್ನಿ ಕವಿತಾಳ ಜೊತೆಗೆ ಬಾಡಿಗೆ ಮನೆಯಲ್ಲಿ ವಾಸಗಿದ್ದರು.

ಹೆಂಡತಿ ಜೊತೆ ಸಲುಗೆಯಿಂದ ಮಾತನಾಡಿದ್ದಕ್ಕೆ ಸಂಬಂಧಿಯನ್ನೇ ಹತ್ಯೆಗೈದ ಪತಿರಾಯ       Read More »

ಕರ್ನಾಟಕ, ಕ್ರೈಮ್ ನ್ಯೂಸ್

ವ್ಯಕ್ತಿಯೊಬ್ಬರ ಅಕ್ರಮ ಬಂಧನ ➤ ಇನ್ಸ್ ಪೆಕ್ಟರ್ ವಿರುದ್ಧ DYSP ದಾಳಿ

(ನ್ಯೂಸ್ ಕಡಬ)newskadaba.com  ಬೆಂಗಳೂರು, ಜ.21. ವ್ಯಕ್ತಿಯೊಬ್ಬರನ್ನು ಅಕ್ರಮವಾಗಿ ಬಂಧಿಸಿಡಲಾಗಿದ್ದ ಶೇಷಾದ್ರಿಪುರ ಠಾಣೆ ಮೇಲೆ ರಾಜ್ಯ ಮಾನವ ಹಕ್ಕು ಆಯೋಗದ ಅಧಿಕಾರಿಗಳು ದಾಳಿ ಮಾಡಿದ್ದು, ಹಲವು ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ. ಶೇಷಾದ್ರಿಪುರ ಠಾಣೆ ಇನ್‌ಸ್ಪೆಕ್ಟರ್ ಹೇಮಂತ್‌ ಕುಮಾರ್ ವಿರುದ್ಧ ರಾಜ್ಯ ಮಾನವ ಹಕ್ಕುಗಳ ಆಯೋಗದಲ್ಲಿ (ಎಸ್‌ಎಚ್‌ಆರ್‌ಸಿ) ದಾಖಲಾಗಿದ್ದ ಪ್ರಕರಣದಲ್ಲಿ ಡಿ.ವೈ.ಎಸ್ಪಿ ಕೇಶವ್ ನೇತೃತ್ವದ ತಂಡ ಈ ದಾಳಿ ಮಾಡಿದೆ. ‘ಸ್ಥಳೀಯ ನಿವಾಸಿ ಆರ್. ಶ್ರೀಧರ್ ಎಂಬುವರನ್ನು ಪೊಲೀಸರು ಅಕ್ರಮ ಬಂಧನದಲ್ಲಿರಿಸಿದ್ದರು. ಯಾವುದೇ ದೂರು ಹಾಗೂ ಎಫ್‌ಐಆರ್ ಇಲ್ಲದಿದ್ದರೂ ಠಾಣೆಯಲ್ಲಿ

ವ್ಯಕ್ತಿಯೊಬ್ಬರ ಅಕ್ರಮ ಬಂಧನ ➤ ಇನ್ಸ್ ಪೆಕ್ಟರ್ ವಿರುದ್ಧ DYSP ದಾಳಿ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಅನ್ಯಕೋಮಿನ ಜೋಡಿ ಲಾಡ್ಜ್ ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

(ನ್ಯೂಸ್ ಕಡಬ)newskadaba.com  ಕಾಸರಗೋಡು, ಜ.21. ನಾಪತ್ತೆಯಾಗಿದ್ದ ಅನ್ಯಕೋಮಿನ ಜೋಡಿ ಲಾಡ್ಜ್ ವೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ರಾಜಾಪುರ ಕಲ್ಲಾರು ಒಕ್ಲಾವು ನಿವಾಸಿ ಮಹಮ್ಮದ್ ಶರೀಫ್ (40) ಮತ್ತು ಕಲ್ಲಾರು ಅಡಕಂ ಪುಲಿಕುಳಿಯ ಸಿಂಧು (36)ಮೃತರು ಎಂದು ಗುರುತಿಸಲಾಗಿದೆ. ಜನವರಿ 7ರಂದು ಇಬ್ಬರೂ ನಾಪತ್ತೆಯಾಗಿದ್ದರು. ಈ ಕುರಿತು ನಾಪತ್ತೆ ಪ್ರಕರಣ ದಾಖಲಿಸಿ ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ಇದೀಗ ಗುರುವಾಯೂರು ಪಡಿಯಾರ ನಾಡೆಯ  ಕೊಠಡಿಯೊಳಗೆ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಇಬ್ಬರೂ ಪತ್ತೆಯಾಗಿದ್ದಾರೆ ಎಂದು ವರದಿ ತಿಳಿಸಿದೆ.  

ಅನ್ಯಕೋಮಿನ ಜೋಡಿ ಲಾಡ್ಜ್ ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಶಾಸಕರಿಗೇ ಬಿಗ್ ಶಾಕ್ ನೀಡಿದ ಭೂಕಳ್ಳರು ➤  ಶಾಸಕರ ನಿವೇಶನವನ್ನೇ ಕಬಳಿಸಿದ ಖದೀಮರು

(ನ್ಯೂಸ್ ಕಡಬ)newskadaba.com  ಬೆಂಗಳೂರು, ಜ.21. ರಾಜಧಾನಿ ಬೆಂಗಳೂರಿನಲ್ಲಿ ಶಾಸಕ ಗೂಳಿಹಟ್ಟಿ ಶೇಖರ್ ಸೇರಿದಂತೆ ಮೂವರು ಶಾಸಕರ ನಿವೇಶನಗಳನ್ನು ಕಬಳಿಸಲಾಗಿದೆ. ಭೂಗಳ್ಳರು ನಕಲಿ ದಾಖಲೆ ಸೃಷ್ಟಿಸಿ ತಮಗೆ ಮಂಜೂರಾಗಿದ್ದ ಬಿಡಿಎ ನಿವೇಶನ ಕಬಳಿಸಿದ್ದಾಗಿ ಶಾಸಕ ಗೂಳಿಹಟ್ಟಿ ಶೇಖರ್ ಆರೋಪಿಸಿದ್ದು, ಸಂಜಯನಗರ ಠಾಣೆಗೆ ದೂರು ನೀಡಿದ್ದಾರೆ. ಗೂಳಿಹಟ್ಟಿ ಶೇಖರ್ ನೀಡಿದ ದೂರಿನ ಮೇರೆಗೆ ಹಲಸೂರು ನಿವಾಸಿ ರಾಮಮೂರ್ತಿ, ಅನುರಾಧ, ದೀಪಿಕಾ, ನಿವೇದಿತಾ, ಸಾಚ್ಯಮಾಟೆ ಡೆವಲಪರ್ಸ್, ಜೆಪಿ ನಗರದ ಜೆಮ್ಮಿ ರಾಹೂರ್, ಮಲ್ಲೇಶ್ವರಂ ನ ಶ್ರೀಕೃಷ್ಣ ಕನ್ಸ್ಟ್ರಕ್ಷನ್ ಇಂಡಿಯಾ ಕಂಪನಿ, ಮಂಜೇಗೌಡ,

ಶಾಸಕರಿಗೇ ಬಿಗ್ ಶಾಕ್ ನೀಡಿದ ಭೂಕಳ್ಳರು ➤  ಶಾಸಕರ ನಿವೇಶನವನ್ನೇ ಕಬಳಿಸಿದ ಖದೀಮರು Read More »

ಕರಾವಳಿ, ಕ್ರೈಮ್ ನ್ಯೂಸ್

ಮಂಗಳೂರು: ಗಸ್ತು ನಿರತ ಪೊಲೀಸರ ಮೇಲೆ ಹಲ್ಲೆ

(ನ್ಯೂಸ್ ಕಡಬ)newskadaba.com  ಮಂಗಳೂರು, ಜ 21. ಗಸ್ತು ನಿರತ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಐವರ ವಿರುದ್ಧ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿದೆ. ಮಂಗಳೂರು ಗ್ರಾಮಾಂತರ ಠಾಣೆಯ ಪೊಲೀಸ್ ಕಾನ್‌ಸ್ಟೇಬಲ್ ಮಲ್ಲಿಕಾರ್ಜುನ ಅಂಗಡಿ ಮತ್ತು ಪ್ರದೀಪ್ ನಾಗನ ಗೌಡರೊಂದಿಗೆ ಗಸ್ತು ನಿರತರಾಗಿದ್ದಾಗ ತುಪ್ಪೆಕಲ್ಲಿನ ಕಾಂಕ್ರಿಟ್ ರಸ್ತೆಯ ಬಳಿಯ ಖಾಲಿ ಸ್ಥಳದಲ್ಲಿ ಮಾರುತಿ ಸುಝುಕಿ ಬಿಳಿ ಬಣ್ಣದ ಆಲ್ಟೋ ಕಾರೊಂದರ ಬಳಿ ಇಬ್ಬರು ಅಪರಿಚಿತರು ನಿಂತಿದ್ದರು. ಮತ್ತು ಕಾರಿನೊಳಗೆ ಮೂವರಿದ್ದರು ಎನ್ನಲಾಗಿದೆ. ಗಸ್ತು ಕರ್ತವ್ಯದಲ್ಲಿದ್ದ

ಮಂಗಳೂರು: ಗಸ್ತು ನಿರತ ಪೊಲೀಸರ ಮೇಲೆ ಹಲ್ಲೆ Read More »

ಕರಾವಳಿ, ಕ್ರೈಮ್ ನ್ಯೂಸ್

 ಪುತ್ತೂರು : ಹಣದ ವಿಚಾರದಲ್ಲಿ ಅಪಹರಣಗೈದು ಕೊಲೆ ಬೆದರಿಕೆ !

(ನ್ಯೂಸ್ ಕಡಬ)newskadaba.com ಪುತ್ತೂರು, ಜ.21. ಹಣದ ವಿಚಾರದಲ್ಲಿ ತಂಡವೊಂದು ವ್ಯಕ್ತಿಯನ್ನು ಅಪಹರಣ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದಲ್ಲದೆ, ಆತನ ಸಹೋದರನಿಗೆ ಕೊಲೆ‌ ಮಾಡುವುದಾಗಿ ಜೀವ ಬೆದರಿಕೆ ಹಾಕಿದ ಘಟನೆ ವರದಿಯಾಗಿದೆ. ಕೊಯಿಲ ನಿವಾಸಿ ನಿಝಾಮ್ ಅವರು ಹಲ್ಲೆ ಸಂತ್ರಸ್ತ. ಅವರನ್ನು ಮಂಗಳೂರಿನ ಭಾಗಕ್ಕೆ ಕರೆದುಕೊಂಡು ಹೋಗಿ ಹಲ್ಲೆ ನಡೆಸಲಾಗಿದೆ ಎನ್ನಲಾಗಿದೆ. ಅವರು ಪುತ್ತೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಸಹೋದರ ಶಾರೂಕ್ (23) ಅವರನ್ನು ಅಪಹರಣ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆಂದು ಹೇಳಲಾಗಿದೆ.  ಹಣ ಕೊಡದಿದ್ದರೆ ಶಾರೂಕ್ ನನ್ನು

 ಪುತ್ತೂರು : ಹಣದ ವಿಚಾರದಲ್ಲಿ ಅಪಹರಣಗೈದು ಕೊಲೆ ಬೆದರಿಕೆ ! Read More »

ಕರಾವಳಿ, ಕ್ರೈಮ್ ನ್ಯೂಸ್

ಖೋಟಾ ನೋಟು ಜಾಲ ಪತ್ತೆ  !! ➤  ಖತರ್ನಾಕ್ ಗ್ಯಾಂಗ್ ಅರೆಸ್ಟ್

(ನ್ಯೂಸ್ ಕಡಬ)newskadaba.com  ಚಿಕ್ಕಬಳ್ಳಾಪುರ, ಜ.20. ಜಿಲ್ಲೆಯಲ್ಲಿ ಖೋಟಾ ನೋಟಿನ ಜಾಲ ಪತ್ತೆಯಾಗಿದ್ದು, 2000 ರೂಪಾಯಿ ಮುಖಬೆಲೆಯ 1.29 ಕೋಟಿ ಮೌಲ್ಯದ ನಕಲಿ ನೋಟುಗಳನ್ನ ಚಿಂತಾಮಣಿ ಪೊಲೀಸರು ವಶ ಪಡಿಸಿಕೊಂಡಿದ್ದಾರೆ. ಚಿಂತಾಮಣಿ ತಾಲೂಕು ಊಲವಾಡಿ ಗ್ರಾಮದ ಬಾರ್ನ್ ಫೌಂಡೇಶನ್ ಕಟ್ಟಡದಲ್ಲಿ ನಡೆಯುತ್ತದ್ದ ನಕಲಿ ನೋಟು ತಯಾರಿಕಾ ಅಡ್ಡೆ ಮೇಲೆ ದಾಳಿ ಮಾಡಿದ ಪೊಲೀಸರು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಶೇಖ್ ಹಿದಾಯತ್, ದಾವೂದ್ ವಾಸಿಮ್ ಹಾಗೂ ಶಿವಣ್ಣ ಬಂಧಿತ ಆರೋಪಿಗಳು. ಕಟ್ಟಡದ ಕೋಣೆಯೊಂದರಲ್ಲೇ ನಕಲಿ ನೋಟುಗಳನ್ನು ಪ್ರಿಂಟ್​ ಮಾಡುತ್ತಿದ್ದರು.    

ಖೋಟಾ ನೋಟು ಜಾಲ ಪತ್ತೆ  !! ➤  ಖತರ್ನಾಕ್ ಗ್ಯಾಂಗ್ ಅರೆಸ್ಟ್ Read More »

ಕರ್ನಾಟಕ, ಕ್ರೈಮ್ ನ್ಯೂಸ್

ವೇಶ್ಯಾವಾಟಿಕೆ ಜಾಲದಲ್ಲಿ ಬಂಧಿತ ವ್ಯಕ್ತಿ ನಾನಲ್ಲ !! ➤  ನ್ಯೂರಾನ್ ಚಿತ್ರದ ನಟ ‘ಯುವ’ ಸ್ಪಷ್ಟನೆ

(ನ್ಯೂಸ್ ಕಡಬ)newskadaba.com  ಬೆಂಗಳೂರು, ಜ.20. ಡೇಟಿಂಗ್ ಆ್ಯಪ್‌ನಲ್ಲಿ ಮಹಿಳೆಯರ ನಕಲಿ‌ ಫೋಟೊ ಸೃಷ್ಟಿಸಿ ಗ್ರಾಹಕರನ್ನು ವೇಶ್ಯಾವಾಟಿಕೆ ದಂಧೆಗೆ ಸೆಳೆದು ಅಕ್ರಮ ಹಣ‌ ಸಂಪಾದನೆ‌ ಪ್ರಕರಣದಲ್ಲಿ ಇತ್ತೀಚೆಗೆ ಸ್ಯಾಂಡಲ್​ವುಡ್​ ನಟರೊಬ್ಬರ ಹೆಸರು ಕೇಳಿಬಂದಿತ್ತು.  ಈ ಸಂಬಂಧ ನಟ ಮಾಧ್ಯಮಗೋಷ್ಟಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ. ನನ್ನನ್ನೇ ಹೋಲುವ ಮಂಜುನಾಥ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.‌ ನಾನು ಯಾವುದೇ ಪ್ರಕರಣದಲ್ಲಿ ಭಾಗಿಯಾಗಿಲ್ಲ ಎಂದು  ನ್ಯೂರಾನ್ ಚಿತ್ರದ ನಾಯಕ ನಟ ಯುವ ಸ್ಪಷ್ಟನೆ ನೀಡಿದ್ದಾರೆ. ಖಾಸಗಿ ಆ್ಯಪ್​​ನಲ್ಲಿ ಯುವ ನಟ ವೇಶ್ಯಾವಾಟಿಕೆ ಜಾಲದಲ್ಲಿ ತೊಡಗಿಕೊಂಡು

ವೇಶ್ಯಾವಾಟಿಕೆ ಜಾಲದಲ್ಲಿ ಬಂಧಿತ ವ್ಯಕ್ತಿ ನಾನಲ್ಲ !! ➤  ನ್ಯೂರಾನ್ ಚಿತ್ರದ ನಟ ‘ಯುವ’ ಸ್ಪಷ್ಟನೆ Read More »

ಕರ್ನಾಟಕ

ಕರ್ತವ್ಯನಿರತ ಸರ್ಕಲ್ ಇನ್ಸ್ ಪೆಕ್ಟರ್​ ಮೇಲೆ ಹಲ್ಲೆ ! ➤  ಮಾಜಿ ಕಾರ್ಪೊರೇಟರ್​ ಬಂಧನ

(ನ್ಯೂಸ್ ಕಡಬ)newskadaba.com ಬೆಂಗಳೂರು, ಜ.20. ಕರ್ತವ್ಯ ನಿರತ ಸಿಪಿಐ ಮೇಲೆ ಹಲ್ಲೆ ಮಾಡಿದ ಆರೋಪದ ಮೇಲೆ ಮಾಜಿ ಬಿಜೆಪಿ ಕಾರ್ಪೊರೇಟರ್​ ವಿ.ಬಾಲಕೃಷ್ಣನನ್ನು ಕಗ್ಗಲೀಪುರ ಪೊಲೀಸರು ಬಂಧಿಸಿದ್ದಾರೆ. ವಾರ್ಡ್ ನಂಬರ್ 185 ಯಲಚೇನಹಳ್ಳಿ ವಾರ್ಡ್ ಮಾಜಿ ಕಾರ್ಪೋರೇಟರ್ ಬಾಲಕೃಷ್ಣ ಬಂಧಿತ ಆರೋಪಿ. ಜಮೀನು ವ್ಯಾಜ್ಯ ವಿಚಾರವಾಗಿ ಮಾತನಾಡಲು  ಕಗ್ಗಲೀಪುರ ಠಾಣೆಗೆ ತೆರಳಿದ್ದರು. ಇದೇ ವೇಳೆ ಸರ್ಕಲ್ ಇನ್ಸ್ ಪೆಕ್ಟರ್ ವಿಜಯ ಕುಮಾರ್ ಜೊತೆಗೆ ಮಾತಿನ ಚಕಮಕಿಯಾಗಿ ಕೊನೆಗೆ ಸರ್ಕಲ್ ಇನ್ಸ್ಪೆಕ್ಟರ್ ವಿಜಯ್ ಕುಮಾರ್ ಕತ್ತಿನ ಪಟ್ಟಿ ಹಿಡಿದು ಬಾಲಕೃಷ್ಣ

ಕರ್ತವ್ಯನಿರತ ಸರ್ಕಲ್ ಇನ್ಸ್ ಪೆಕ್ಟರ್​ ಮೇಲೆ ಹಲ್ಲೆ ! ➤  ಮಾಜಿ ಕಾರ್ಪೊರೇಟರ್​ ಬಂಧನ Read More »

ಕರ್ನಾಟಕ, ಕ್ರೈಮ್ ನ್ಯೂಸ್
Scroll to Top