crime

ಬೆಳ್ತಂಗಡಿ: ಚಾಲಕನ ನಿಯಂತ್ರಣ ತಪ್ಪಿ ರಿಕ್ಷಾ ಪಲ್ಟಿ ➤ ಮಗು ಮೃತ್ಯು…!

(ನ್ಯೂಸ್ ಕಡಬ)newskadaba.com ಬೆಳ್ತಂಗಡಿ, ಫೆ.01. ಚಾಲಕನ ನಿಯಂತ್ರಣ ತಪ್ಪಿ ಸೇತುವೆಗೆ ಢಿಕ್ಕಿಯಾಗಿ ಆಟೋ ರಿಕ್ಷಾ ಪಲ್ಟಿಯಾಗಿ ಮಗು ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕಿನ ಮಾಲಾಡಿಯಲ್ಲಿ ನಡೆದಿದೆ. ಕಾರ್ಕಳದ ಸಂತೋಷ್ ಹಾಗೂ ಗೀತಾ ದಂಪತಿಯ ಒಂದು ವರ್ಷದ ಮಗು ಮೃತಪಟ್ಟಿದೆ ಎಂದು ತಿಳಿದುಬಂದಿದೆ. ದಂಪತಿ ಮಗುವಿನ ಜೊತೆ ಸಂಬಂಧಿಕರ ಮನೆಗೆಂದು ರಿಕ್ಷಾದಲ್ಲಿ ಹೋಗುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ರಿಕ್ಷಾ ಸೇತುವೆಗೆ ಢಿಕ್ಕಿ ಹೊಡೆದು ಮಗುಚಿ ಬಿದ್ದಿದೆ‌.ಈ ವೇಳೆ ಮಗು ರಸ್ತೆಗೆಸೆಯಲ್ಪಟ್ಟು ಮೃತಪಟ್ಟಿದೆ. ಈ ಕುರಿತು ಪೂಂಜಾಲಕಟ್ಟೆ ಪೊಲೀಸ್ […]

ಬೆಳ್ತಂಗಡಿ: ಚಾಲಕನ ನಿಯಂತ್ರಣ ತಪ್ಪಿ ರಿಕ್ಷಾ ಪಲ್ಟಿ ➤ ಮಗು ಮೃತ್ಯು…! Read More »

ಕರಾವಳಿ, ಕ್ರೈಮ್ ನ್ಯೂಸ್

ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಮಹಿಳೆ ಮೇಲೆ ಗುಂಡಿನ ದಾಳಿ

(ನ್ಯೂಸ್ ಕಡಬ)newskadaba.com ದೆಹಲಿ, ಜ.31. ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ವಿವಾಹಿತ ಮಹಿಳೆ ಮೇಲೆ ಅಪರಿಚಿತರು ಗುಂಡಿನ ದಾಳಿ ನಡೆಸಿದ ಪರಿಣಾಮ ಮಹಿಳೆ ಮೃತಪಟ್ಟ ಘಟನೆ ದೆಹಲಿಯ ಪಶ್ಚಿಮ ವಿಹಾರದಲ್ಲಿ ನಡೆದಿದೆ. ಮೃತರನ್ನು ಜ್ಯೋತಿ(32) ಎಂದು ಗುರುತಿಸಲಾಗಿದೆ. ಫ್ಲಿಪ್‌ಕಾರ್ಟ್‌ನ ಕೊರಿಯರ್ ಇಲಾಖೆಯಲ್ಲಿ ಕೆಲಸ ಮಾಡುವ ಜ್ಯೋತಿ ಕೆಲಸ ಮುಗಿಸಿ ಸ್ಕೂಟರ್‌ ನಲ್ಲಿ ಮನೆಗೆ ಬರುತ್ತಿದ್ದ ವೇಳೆ ಬೈಕ್‌ ಹಾಗೂ ಸ್ಕೂಟಿಯಲ್ಲಿ ಬಂದ ದುಷ್ಕರ್ಮಿಗಳು ಜ್ಯೋತಿ ಮೇಲೆ ಗುಂಡಿನ ದಾಳಿ ಮಾಡಿದ್ದಾರೆ. ಗಂಭೀರ ಗಾಯಗೊಂಡ ಜ್ಯೋತಿ ಅವರನ್ನು ಆಸ್ಪತ್ರೆಗೆ

ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಮಹಿಳೆ ಮೇಲೆ ಗುಂಡಿನ ದಾಳಿ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಕಾರು – ಬಸ್‌ ನಡುವೆ ಅಪಘಾತ ➤ ನಾಲ್ವರು ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ)newskadaba.com ಮಹಾರಾಷ್ಟ್ರ, ಜ.31. ಕಾರು – ಬಸ್‌ ನಡುವಿನ ಭೀಕರ ಅಪಘಾತದಲ್ಲಿ ನಾಲ್ವರು ಸ್ಥಳದಲ್ಲೇ ಸಾವನ್ನಪಿದ ಘಟನ ಪಾಲ್ಘರ್‌ ನ ಮುಂಬೈ-ಅಹಮದಾಬಾದ್ ಹೆದ್ದಾರಿಯ ದಹನು ಪ್ರದೇಶದಲ್ಲಿ ನಡೆದಿದೆ. ಮೊಹಮ್ಮದ್ ಹಫೀಜ್ (36), ಇಬ್ರಾಹಿಂ ದಾವೂದ್ (60), ಆಶಿಯಾ (57) ಮತ್ತು ಇಸ್ಮಾಯಿಲ್ ದೇಸಾಯಿ (42) ಘಟನೆಯಲ್ಲಿ ಮೃತಪಟ್ಟ ದುರ್ಧೈವಿಗಳು. ಮೃತರು ಸೂರತ್‌ನ ಬಾರ್ಡೋಲಿ ನಿವಾಸಿಗಳು ಎಂದು ಪಾಲ್ಘರ್ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಬಾಳಾಸಾಹೇಬ್ ಪಾಟೀಲ್ ತಿಳಿಸಿದ್ದಾರೆ. ಕಾರು ಗುಜರಾತ್‌ನಿಂದ ಮುಂಬೈಗೆ ಬರುತ್ತಿತ್ತು, ಈ ವೇಳೆ ಚಾಲಕನ

ಕಾರು – ಬಸ್‌ ನಡುವೆ ಅಪಘಾತ ➤ ನಾಲ್ವರು ಸ್ಥಳದಲ್ಲೇ ಮೃತ್ಯು Read More »

ರಾಷ್ಟ್ರೀಯ ನ್ಯೂಸ್

ಅರವಿಂದ ಕ್ರೇಜಿವಾಲ್‌ಗೆ ಜೀವ ಬೆದರಿಕೆ ➤ ಆರೋಪಿ ಪೊಲೀಸರ ವಶಕ್ಕೆ

(ನ್ಯೂಸ್ ಕಡಬ)newskadaba.com ನವದೆಹಲಿ, ಜ.31. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಅಪರಿಚಿತ ವ್ಯಕ್ತಿಯಿಂದ ಕೊಲೆ ಬೆದರಿಕೆ ಬಂದಿದ್ದು, ಇದೀಗ ಆತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಪಿಸಿಆರ್ ಕರೆ ಮಾಡುವ ಮೂಲಕ ಅರವಿಂದ್ ಕೇಜ್ರಿವಾಲ್ ಅವರನ್ನು ಕೊಲ್ಲುವುದಾಗಿ ಆರೋಪಿಗಳು ಬೆದರಿಕೆ ಹಾಕಿದ್ದಾರೆ. ಇನ್ನು ಕರೆ ಬಂದ ನಂತರ ದೆಹಲಿ ಪೊಲೀಸರು ಆತನನ್ನು ಗುರುತಿಸಿ ತಕ್ಷಣ ಬಂಧಿಸಿರುವುದಾಗಿ ವರದಿಯಾಗಿದೆ. ಕರೆ ಮಾಡಿದ ವ್ಯಕ್ತಿ 38 ವರ್ಷದ ಮಾನಸಿಕ ಅಸ್ವಸ್ಥ ವ್ಯಕ್ತಿ ತಿಳಿಯಲಾಗಿದ್ದು, ಇದೀಗ ಆರೋಪಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ತಿಳಿಯಲಾಗಿದೆ.

ಅರವಿಂದ ಕ್ರೇಜಿವಾಲ್‌ಗೆ ಜೀವ ಬೆದರಿಕೆ ➤ ಆರೋಪಿ ಪೊಲೀಸರ ವಶಕ್ಕೆ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಬೆಳ್ತಂಗಡಿ: ಅಪರಿಚಿತ ವ್ಯಕ್ತಿಯ ಬ್ಲ್ಯಾಕ್ ಮೇಲ್ ಗೆ ಬಿ.ಕಾಂ ವಿದ್ಯಾರ್ಥಿ ಆತ್ಮಹತ್ಯೆ !

(ನ್ಯೂಸ್ ಕಡಬ)newskadaba.com ಬೆಳ್ತಂಗಡಿ, ಜ.30. ಅಪರಿಚಿತ ವ್ಯಕ್ತಿಯ ಬ್ಲ್ಯಾಕ್ ಮೇಲ್ ಗೆ ಹೆದರಿ ಬಿ.ಕಾಂ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ. ಮೃತ ವಿದ್ಯಾರ್ಥಿಯನ್ನು ಧರ್ಮಸ್ಥಳ ಗ್ರಾಮದ ಅಶೋಕ್ ನಗರ ನಿವಾಸಿ, ಬೆಳ್ತಂಗಡಿ ಖಾಸಗಿ ಕಾಲೇಜಿನ ದ್ವಿತೀಯ ಬಿ.ಕಾಂ ವಿದ್ಯಾರ್ಥಿ ಹರ್ಷಿತ್ (19) ಎಂದು ಗುರುತಿಸಲಾಗಿದೆ. ಹರ್ಷಿತ್ ಇನ್‌ಸ್ಟಾಗ್ರಾಂ ಖಾತೆಯ ಮೂಲಕ ಸುಮಾರು 15 ದಿನಗಳ ಹಿಂದೆ ಓರ್ವ ಅಪರಿಚಿತ ವ್ಯಕ್ತಿಯು ಸಂಪರ್ಕಕ್ಕೆ ಬಂದಿದ್ದು, ಆ ಬಳಿಕ ಹರ್ಷಿತ್ ಆತನೊಂದಿಗೆ ಇನ್‌ ಸ್ಟಾಗ್ರಾಂ ಮೂಲಕ

ಬೆಳ್ತಂಗಡಿ: ಅಪರಿಚಿತ ವ್ಯಕ್ತಿಯ ಬ್ಲ್ಯಾಕ್ ಮೇಲ್ ಗೆ ಬಿ.ಕಾಂ ವಿದ್ಯಾರ್ಥಿ ಆತ್ಮಹತ್ಯೆ ! Read More »

ಕರಾವಳಿ, ಕ್ರೈಮ್ ನ್ಯೂಸ್

ಕಾರಿನಲ್ಲಿ ಎಂಡಿಎಂಎ ಮಾದಕ ವಸ್ತು ಸಾಗಾಟ ➤ ಇಬ್ಬರ ಬಂಧನ

(ನ್ಯೂಸ್ ಕಡಬ)newskadaba.com ಕಾಸರಗೋಡು, ಜ.30. ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ ಎಂಡಿಎಂಎ ಮಾದಕ ವಸ್ತು ಸಹಿತ ಇಬ್ಬರನ್ನು ಅಬಕಾರಿ ದಳದ ಸಿಬ್ಬಂದಿಗಳು ಬಂಧಿಸಿದ್ದಾರೆ. ಕುಂಬಳೆ ಬಂಬ್ರಾಣದ ಅಬ್ದುಲ್ ರುಮೈಸ್ (27) ಮತ್ತು ಉಪ್ಪಳ ಪೆರಿಂಗಡಿಯ ಎಂ.ಕೆ ಮುಸ್ತಾಫಾ (39) ಬಂಧಿತರು ಎಂದು ತಿಳಿದುಬಂದಿದೆ. ಇವರಿಂದ 69 ಗ್ರಾಂ. ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿದ್ದು, ಉಪ್ಪಳ ಪೇಟೆಯಲ್ಲಿ ಸಂಶಯಾಸ್ಪದವಾಗಿ ಕಂಡು ಬಂದ ಕಾರನ್ನು ತಡೆದು ತಪಾಸಣೆ ನಡೆಸಿದಾಗ ಮಾದಕವಸ್ತು ಪತ್ತೆಯಾಗಿದೆ. ಇನ್ನು ಬಂಧಿತ ರುಮೈಸ್ ಐದು ವರ್ಷಗಳ ಹಿಂದೆ ನಡೆದ ಕೊಲೆ

ಕಾರಿನಲ್ಲಿ ಎಂಡಿಎಂಎ ಮಾದಕ ವಸ್ತು ಸಾಗಾಟ ➤ ಇಬ್ಬರ ಬಂಧನ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಮಂಜೇಶ್ವರ: 30 ಕಿಲೋ ಗಾಂಜಾ ವಶ ! ➤ ಆರೋಪಿ ಅರೆಸ್ಟ್

(ನ್ಯೂಸ್ ಕಡಬ)newskadaba.com ಮಂಜೇಶ್ವರ, ಜ.30. ಮಂಜೇಶ್ವರ ಮೀಯಪದವಿನ ನಿರ್ಮಾಣ ಹಂತದಲ್ಲಿರುವ ಮನೆಯಿಂದ ಸುಮಾರು 30 ಕಿಲೋ ಗಾಂಜಾ ವನ್ನು ಕಾಸರಗೋಡು ಅಬಕಾರಿ ದಳದ ಸಿಬ್ಬಂದಿಗಳು ವಶಪಡಿಸಿಕೊಂಡಿದ್ದು ,ಓರ್ವನನ್ನು ಬಂಧಿಸಿದ್ದಾರೆ. ಗಾಂಜಾ ಸಾಗಾಟಕ್ಕೆ ಬಳಸುತ್ತಿದ್ದ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ಮನೆ ಮಾಲಕ ಮುಸ್ತಾಫ ಎಂಬಾತನನ್ನು ಬಂಧಿಸಲಾಗಿದೆ. ಅಬಕಾರಿ ದಳಕ್ಕೆ ಲಭಿಸಿದ ಖಚಿತ ಮಾಹಿತಿಯಂತೆ ದಾಳಿ ನಡೆಸಲಾಗಿದೆ.

ಮಂಜೇಶ್ವರ: 30 ಕಿಲೋ ಗಾಂಜಾ ವಶ ! ➤ ಆರೋಪಿ ಅರೆಸ್ಟ್ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್
Crime

ಚಾಲಕ ಮತ್ತು ಕಂಡಕ್ಟರ್‌ ನಡುವೆ ರಂಪಾಟ ! ➤ ರಸ್ತೆಯ ಮಧ್ಯೆ ಬಸ್ ನಿಲ್ಲಿಸಿ ಹೊಡೆದಾಟ

(ನ್ಯೂಸ್ ಕಡಬ)newskadaba.com ಉಡುಪಿ, ಜ.30. ರಸ್ತೆಯ ಮಧ್ಯೆ ಖಾಸಗಿ ಬಸ್ ಕಂಡಕ್ಟರ್‌ಗೆ ಕೆಎಸ್ಆರ್‌‌ಟಿಸಿ ಬಸ್ ಚಾಲಕ ಮತ್ತು ಖಾಸಗಿ ಬಸ್ ಕಂಡಕ್ಟರ್‌ ನಡುವೆ ಗಲಾಟೆ ನಡೆದಿರುವ ಘಟನೆ ಕಾರ್ಕಳ ಬಸ್ ನಿಲ್ದಾಣದಲ್ಲಿ ನಡೆದಿದೆ. ಉಡುಪಿ ಕಾರ್ಕಳ ಸರಕಾರಿ ಬಸ್ ಚಾಲಕ ಮೊಹಮ್ಮದ್ ಸೈಯದ್ ಮತ್ತು ಖಾಸಗಿ ಬಸ್ ಕಂಡಕ್ಟರ್ ನಡುವೆ ಬಸ್ ಗೆ ಸೈಡ್ ಕೊಡುವ ವಿಚಾರದಲ್ಲಿ ವಾಗ್ವಾದ ನಡೆದಿದೆ. ಸರಕಾರಿ ಬಸ್ ಚಾಲಕನಿಗೆ ಅವಾಚ್ಯವಾಗಿ ಖಾಸಗಿ ಬಸ್ ಕಂಡಕ್ಟರ್ ನಿಂದಿಸಿದ್ದು, ಇದರಿಂದ ಕೋಪಗೊಂಡು ಕಂಡಕ್ಟರ್ ಮೇಲೆ

ಚಾಲಕ ಮತ್ತು ಕಂಡಕ್ಟರ್‌ ನಡುವೆ ರಂಪಾಟ ! ➤ ರಸ್ತೆಯ ಮಧ್ಯೆ ಬಸ್ ನಿಲ್ಲಿಸಿ ಹೊಡೆದಾಟ Read More »

ಕರಾವಳಿ, ಕ್ರೈಮ್ ನ್ಯೂಸ್

ಉಡುಪಿ: ಗಿಫ್ಟ್ ನೆಪದಲ್ಲಿ ಸಾವಿರಾರು ರೂ. ವಂಚನೆ

(ನ್ಯೂಸ್ ಕಡಬ)newskadaba.com ಉಡುಪಿ, ಜ.30. ಎಲೆಕ್ಟ್ರಾನಿಕ್ಸ್‌ ಸಾಮಾಗ್ರಿ ಗಿಫ್ಟ್ ವಿಜೇತರಾಗಿದ್ದೀರಿ ಎಂದು ನಂಬಿಸಿ ವ್ಯಕ್ತಿಯೊಬ್ಬರಿಗೆ ಸಾವಿರಾರು ರೂ. ವಂಚಿಸಿರುವ ಬಗ್ಗೆ ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದೀಚ್ಚಾ ಪರೇಶ್‌ ಕಾಮತ್‌ ಎಂಬವರಿಗೆ ಯಾರೋ ಕರೆ ಮಾಡಿ ಎಲೆಕ್ಟ್ರಾನಿಕ್ಸ್‌ ಸಾಮಾಗ್ರಿ ಗಿಫ್ಟ್ ಬಂದಿದೆ ಎಂದು ನಂಬಿಸಿದ್ದರು. ಗಿಫ್ಟ್ ಕಳುಹಿಸಲು ಬ್ಯಾಂಕ್‌ ಖಾತೆ ನೀಡಿ ಇದಕ್ಕೆ ಹಣ ವರ್ಗಾಯಿಸುವಂತೆ ತಿಳಿಸಿದ್ದು, ಅದರಂತೆ ಒಟ್ಟು 33,998 ರೂ. ಪಾವತಿಸಿ, ಗಿಫ್ಟ್ ಹಾಗೂ ಹಣ ಹಿಂದೆ ಕೊಡದೇ ವಂಚಿಸಿದ್ದಾರೆ ಎಂದು

ಉಡುಪಿ: ಗಿಫ್ಟ್ ನೆಪದಲ್ಲಿ ಸಾವಿರಾರು ರೂ. ವಂಚನೆ Read More »

ಕರಾವಳಿ, ಕ್ರೈಮ್ ನ್ಯೂಸ್

ಬ್ರೇಕಪ್‌ ಆಗಿದ್ದಕ್ಕೆ 40 ಲಕ್ಷ ರೂ. ಮೌಲ್ಯದ ಕಾರಿಗೆ ಬೆಂಕಿ ಹಚ್ಚಿದ ಭೂಪ

(ನ್ಯೂಸ್ ಕಡಬ)newskadaba.com ಚೆನ್ನೈ, ಜ.28. ಪ್ರೇಯಸಿಯೊಂದಿಗೆ ಜಗಳ ಆಗಿದ್ದಕ್ಕೆ ಹುಡುಗರು ಫೋನ್‌ ಹೊಡೆದಾಕಬಹುದು, ಅಳಬಹುದು, ಒಂದಿಷ್ಟು ದಿನ ಮಾತು ಬಿಡಬಹುದು. ಆದರೆ, ಇಲ್ಲೊಬ್ಬ ತನ್ನ 40 ಲಕ್ಷ ರೂ. ಮೌಲ್ಯದ ಮರ್ಸಿಡಿಸ್‌ ಬೆಂಜ್‌ ಕಾರಿಗೆ ಬೆಂಕಿ ಹಚ್ಚಿದ್ದಾನೆ. ತಮಿಳುನಾಡಿನ ಕಂಚಿಯಲ್ಲಿ 28 ವರ್ಷದ ವೈದ್ಯನೊಬ್ಬ ಬ್ರೇಕಪ್‌ ಆಗಿದ್ದಕ್ಕೆ ತನ್ನ ಐಷಾರಾಮಿ ಕಾರಿಗೆ ಅಗ್ನಿ ಸ್ಪರ್ಶ ಮಾಡಿದ್ದಾನೆ. ಕಾರಿಗೆ ಬೆಂಕಿ ಹೊತ್ತಿಕೊಂಡಿರುವುದನ್ನು ನೋಡಿದ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಬ್ರೇಕಪ್‌ ಆಗಿದ್ದಕ್ಕೆ 40 ಲಕ್ಷ ರೂ. ಮೌಲ್ಯದ ಕಾರಿಗೆ ಬೆಂಕಿ ಹಚ್ಚಿದ ಭೂಪ Read More »

ರಾಷ್ಟ್ರೀಯ ನ್ಯೂಸ್
Scroll to Top