crime

ಅಕ್ರಮ ಮರಳು ಸಾಗಾಟ ಪ್ರಕರಣ➤ ಆರೋಪಿ ಸೆರೆ

(ನ್ಯೂಸ್ ಕಡಬ) newskadaba.com. ಹಾವೇರಿ, ಫೆ.17. ಅಕ್ರಮ ಮರಳು ಸಾಗಾಟ ಪ್ರಕರಣಕ್ಕೆ ಸಂಬಂಧಿಸಿ ತಲೆಮರೆಸಿಕೊಂಡಿದ್ದ,  ಆರೋಪಿಯನ್ನು ವಿಟ್ಲ ಪೊಲೀಸರು ಬಂಧಿಸಿರುವ ಘಟನೆ ವರದಿಯಾಗಿದೆ. ಕೇರಳದ ಕೊಯಿಲಾಂಡಿ ನಿವಾಸಿ ಸುರೇಶ್ ಬಾಬು ಯಾನೆ ಸೂರಿ ಬಂಧಿತ ಆರೋಪಿಯಾಗಿದ್ದಾನೆ. ಈ ಅಕ್ರಮ ಮರಳು ಸಾಗಾಟದ ಪ್ರಮುಖ ಆರೋಪಿಯಾಗಿದ್ದ ಈತ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ. ಈತನ ಪತ್ತೆಗೆ ವಾರೆಂಟ್ ಜಾರಿಯಾಗಿತ್ತು. ಇದೀಗ ಆರೋಪಿಯನ್ನು ವಿಟ್ಲ ಠಾಣೆ ಎಸ್ಸೈ ಜಯರಾಮ್ ಕೇರಳದ ಕೊಯಿಲಾಂಡಿಯ ವಾರಾಂಗೀಲ್ ಎಂಬಲ್ಲಿ ಬಂಧಿಸಿದ್ದಾರೆ.

ಅಕ್ರಮ ಮರಳು ಸಾಗಾಟ ಪ್ರಕರಣ➤ ಆರೋಪಿ ಸೆರೆ Read More »

ಕರಾವಳಿ, ಕ್ರೈಮ್ ನ್ಯೂಸ್

ಮೃತದೇಹವನ್ನು ಗೂಡ್ಸ್ ವಾಹನದಲ್ಲಿ ತಂದು ಕಸದ ರಾಶಿಗೆ ಎಸೆದ ದುಷ್ಕರ್ಮಿಗಳು ➤ ಆರೋಪಿಗಳು ಬಂಧನ

(ನ್ಯೂಸ್ ಕಡಬ) newskadaba.com ಉಡುಪಿ, ಫೆ.17. ಅಸ್ವಸ್ಥ ಕಾರ್ಮಿಕ ಮೃತಪಟ್ಟಿದ್ದಾನೆ ಎಂದು ಉಳಿದ ಇಬ್ಬರು ಆತನನ್ನು ಗೂಡ್ಸ್ ವಾಹನವೊಂದರಲ್ಲಿ ಹಾಕಿ ತಂದು ಕಸದ ರಾಶಿಗೆ ಎಸೆದ ಪ್ರಕರಣ ಕೆಮ್ಮಣ್ಣು ಸಂತೆ ಮಾರುಕಟ್ಟೆಯ ಬಳಿ ಸಂಭವಿಸಿದೆ. ಮೃತ ವ್ಯಕ್ತಿಯನ್ನು ಹನುಮಂತ ಎಂದು ಗುರುತಿಸಲಾಗಿದೆ. ಈತ ವಾರದ ಸಂತೆ ಹಿನ್ನೆಲೆಯಲ್ಲಿ ಕೆಮ್ಮಣ್ಣು ಮಾರುಕಟ್ಟೆಗೆ ವ್ಯಾಪಾರ ನಡೆಸಲು ಬಂದಿದ್ದ ಎನ್ನಲಾಗಿದೆ.ಆದರೆ ಅಸ್ವಸ್ಥಗೊಂಡು ಮೃತಪಟ್ಟಿದ್ದನು.ಇದನ್ನು ಕಂಡು ಇತರ ಇಬ್ಬರು ವ್ಯಾಪಾರಿಗಳು ಹನುಮಂತನ ಮೃತದೇಹವನ್ನು ಗೂಡ್ಸ್ ವಾಹನದಲ್ಲಿ ಸಾಗಿಸಿಕೊಂಡು ಹೋಗಿ ಕೆಮ್ಮಣ್ಣು ಸಂತೆಮಾರುಕಟ್ಟೆ ಬಳಿಯ

ಮೃತದೇಹವನ್ನು ಗೂಡ್ಸ್ ವಾಹನದಲ್ಲಿ ತಂದು ಕಸದ ರಾಶಿಗೆ ಎಸೆದ ದುಷ್ಕರ್ಮಿಗಳು ➤ ಆರೋಪಿಗಳು ಬಂಧನ Read More »

ಕರಾವಳಿ, ಕ್ರೈಮ್ ನ್ಯೂಸ್

ನ್ಯಾಯಕೊಡಿ ಎಂದು ಹಲ್ಲೆಗೊಳಗಾದ ಪತಿಯನ್ನು ಎಸ್ಪಿ ಕಚೇರಿಗೆ ಹೆಗಲ ಮೇಲೆ ಹೊತ್ತುಕೊಂಡು ಬಂದ ಪತ್ನಿ

(ನ್ಯೂಸ್ ಕಡಬ) newskadaba.com ಮಧ್ಯಪ್ರದೇಶ, ಫೆ.17.  ಹಲ್ಲೆಗೊಳಗಾದ ವ್ಯಕ್ತಿಯೋರ್ವನಿಗೆ ನ್ಯಾಯ ಕೋರಿ ಆತನ ಪತ್ನಿ ಆತನನ್ನು ಹೆಗಲ ಮೇಲೆ ಹೊತ್ತು ಎಸ್ ಪಿ ಕಚೇರಿಗೆ ಕರೆದುಕೊಂಡು ಬಂದ ಘಟನೆ ಮಧ್ಯಪ್ರದೇಶದಲ್ಲಿ ಸಂಭವಿಸಿದೆ.   ಶಾದೂಲ್ ಜಿಲ್ಲೆಯಲ್ಲಿ ಸೋಹಾಗ್ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಹರಿ ಗ್ರಾಮದ ಗೆಂಡಲಾಲ್ ಯಾದವ್ ಎಂಬ ಕೂಲಿ ಕಾರ್ಮಿಕ ಕೆಲಸ ಮುಗಿಸಿಕೊಂಡು ಬರುವಾಗ ಮೂವರು ದುಷ್ಕರ್ಮಿಗಳು ಆತನಿಗೆ ಹಲ್ಲೆ ನಡೆಸಿ ದರೋಡೆ ಮಾಡಿದ್ದರು. ಇದರಿಂದ ಗೆಂಡಲಾಲ್ ಪತ್ನಿ ತನ್ನ ಗಾಯಾಳು ಪತಿಯನ್ನು ಹೆಗಲ ಮೇಲೆ

ನ್ಯಾಯಕೊಡಿ ಎಂದು ಹಲ್ಲೆಗೊಳಗಾದ ಪತಿಯನ್ನು ಎಸ್ಪಿ ಕಚೇರಿಗೆ ಹೆಗಲ ಮೇಲೆ ಹೊತ್ತುಕೊಂಡು ಬಂದ ಪತ್ನಿ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ವಾಹನವೊಂದರಲ್ಲಿ ಸುಟ್ಟು ಸ್ಥಿತಿಯಲ್ಲಿ ಎರಡು ಮೃತದೇಹಗಳು ಪತ್ತೆ

(ನ್ಯೂಸ್ ಕಡಬ) newskadaba.com ಹರಿಯಾಣ, ಫೆ.17.  ವಾಹನವೊಂದರಲ್ಲಿ ಸುಟ್ಟ ಸ್ಥಿತಿಯಲ್ಲಿ ಎರಡು ಶವಗಳು ಪತ್ತೆಯಾಗಿದ್ದು. ಮೃತರನ್ನು ನಾಸಿರ್ (25) ಮತ್ತು ಜುನೈದ್ ಅಲಿಯಾಸ್ ಜುನಾ (35) ಎಂದು ಗುರುತಿಸಲಾಗಿದೆ. ಇಬ್ಬರನ್ನು ಅಪಹರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಾಲ್ಕು ಚಕ್ರದ ವಾಹನದಲ್ಲಿ ಎರಡು ಸುಟ್ಟ ಮೃತದೇಹಗಳು ಪತ್ತೆಯಾಗಿವೆ. ಅಪಹರಣಕಾರರು ಮೊದಲು ಇಬ್ಬರನ್ನೂ ಥಳಿಸಿ, ನಂತರ ಅಪಹರಿಸಿ, ವಾಹನವನ್ನು ತೆಗೆದುಕೊಂಡು ಹೋಗಿ ಸುಟ್ಟುಹಾಕಲಾಗಿದೆ ಎಂದು ವರದಿ ತಿಳಿಸಿದೆ.      

ವಾಹನವೊಂದರಲ್ಲಿ ಸುಟ್ಟು ಸ್ಥಿತಿಯಲ್ಲಿ ಎರಡು ಮೃತದೇಹಗಳು ಪತ್ತೆ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

11 ಲಕ್ಷ ರೂ. ಗಾಂಜಾ ಜಪ್ತಿ ➤ಆರೋಪಿ ಬಂಧನ

(ನ್ಯೂಸ್ ಕಡಬ) newskadaba.com ಭಾಲ್ಕಿ, ಫೆ.16.  ಭಾಲ್ಕಿ ಉಪವಿಭಾಗದ ಭಾಲ್ಕಿ ಗ್ರಾಮೀಣ ಠಾಣೆ ಪೊಲೀಸರ ಕಾರ್ಯಾರಣೆಯಿಂದ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ರೂ.11,2000/- ಗಾಂಜಾ ಜಪ್ತಿ ಮಾಡಿ, ಗಾಂಜಾ ಸಾಗಾಟ ಪ್ರಕರಣದಲ್ಲಿ ಆರೋಪಿತರನ್ನು ಬಂಧಿಸಿರುವುದಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕ ಚನ್ನಬಸವಣ್ಣ ಲಂಗೋಟಿ ಮೆಚ್ಚುಗೆ ವ್ಯಕ್ತ ಪಡಿಸಿದರು ಎಂದು ವರದಿಯಾಗಿದೆ. ಗ್ರಾಮೀಣ ಪೊಲೀಸ್ ಠಾಣೆಗೆ ಆಗಮಿಸಿದ ಎಸ್.ಪಿ ಚನ್ನಬಸವಣ್ಣ ಲಂಗೋಟಿಯವರು ಪತ್ರಕರ್ತರೊಂದಿಗೆ ಮಾತನಾಡಿ, ಭಾಲ್ಕಿ ಗ್ರಾಮೀಣ ಠಾಣೆಯ ವ್ಯಾಪ್ತಿಯ ಅಂಬೇಸಾಂಗವಿ ಕ್ರಾಸ್ ಹತ್ತಿರ ರಾಷ್ಟೀಯ ಹೆದ್ದಾರಿ 50 ರಲ್ಲಿ ವಿಶಾಖಪಟ್ಟಣ

11 ಲಕ್ಷ ರೂ. ಗಾಂಜಾ ಜಪ್ತಿ ➤ಆರೋಪಿ ಬಂಧನ Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಪತ್ನಿಯನ್ನು ಬರ್ಬರವಾಗಿ ಕೊಂದ ಪಾಪಿ ಪತಿ!

(ನ್ಯೂಸ್ ಕಡಬ) newskadaba.com ಕಲಬುರಗಿ, ಫೆ.16.  ಪತ್ನಿಯ ನಡತೆ ಶಂಕಿಸಿದ ಗಂಡ ಆಕೆ ಮಲಗಿದ್ದಾಗ ತಲೆ ಮೇಲೆ ದೊಡ್ಡ ಕಲ್ಲನ್ನು ಎತ್ತಿ ಹಾಕಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕಲಬುರಗಿಯ ಅಂಬಿಕಾ ನಗರದಲ್ಲಿ ಸಂಭವಿಸಿದೆ. ಮೃತ ಗೃಹಿಣಿಯನ್ನು 39 ವರ್ಷದ ಫರೀದಾ ಬೇಗಂ ಎಂದು ಗುರುತಿಸಲಾಗಿದೆ. ಇನ್ನು ಆರೋಪಿ ಪತಿ ಏಜಾಜ್ ಅಹ್ಮದ್ ಕಳೆದ ರಾತ್ರಿ ನಿದ್ದೆಗೆ ಜಾರಿದ ಫರೀದಾ ಬೇಗಂ ಮೇಲೆ ಕಲ್ಲು ಎತ್ತಿಹಾಕಿ ಕೊಂದಿದ್ದಾನೆ ಎಂದು ವರದಿಯಾಗಿದೆ. ಎಜಾಜ್ ಹಾಗೂ ಫರೀದಾ ಬೇಗಂ ಇಬ್ಬರು

ಪತ್ನಿಯನ್ನು ಬರ್ಬರವಾಗಿ ಕೊಂದ ಪಾಪಿ ಪತಿ! Read More »

ಕರ್ನಾಟಕ, ಕ್ರೈಮ್ ನ್ಯೂಸ್

 ಚಾಕೋಲೇಟ್ ಆಸೆ ತೋರಿಸಿ ಬಾಲಕಿಯ ಮೇಲೆ ಅತ್ಯಾಚಾರ

(ನ್ಯೂಸ್ ಕಡಬ) newskadaba.com ದಾವಣಗೆರೆ, ಫೆ.16. ಚಾಕೊಲೇಟ್ ಆಸೆ ತೋರಿಸಿ ಕರೆದೊಯ್ದು ಬಾಲಕಿ ಮೇಲೆ ಅತ್ಯಾಚಾರ ಎಸಗಿರುವ ಘಟನೆ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ. ಮನೆಯಲ್ಲಿ ಯಾರು ಇಲ್ಲದನ್ನ ಗಮನಿಸಿದ ಆರೋಪಿ, ಬಾಲಕಿಗೆ ಚಾಕೊಲೇಟ್ ಆಸೆ ತೋರಿಸಿ ದೇವಸ್ಥಾನದ ಬಳಿ ಕರೆದುಕೊಂಡು ಹೋಗಿ ಬಾಯಿಗೆ ಬಟ್ಟೆ ಹಾಕಿ ಅತ್ಯಾಚಾರ ಮಾಡಿದ್ದಾನೆ. ಬಾಲಕಿಯನ್ನು ಮನೆಯಲ್ಲಿ ಬಿಟ್ಟು ತಾಯಿ ಕೂಲಿ ಕೆಲಸಕ್ಕೆ ಹೋಗಿದ್ದರು. ಈ ವೇಳೆ ದೇವಸ್ಥಾನದ ಬಳಿ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ. ಆರೋಪಿಗಾಗಿ ಪೊಲೀಸರು

 ಚಾಕೋಲೇಟ್ ಆಸೆ ತೋರಿಸಿ ಬಾಲಕಿಯ ಮೇಲೆ ಅತ್ಯಾಚಾರ Read More »

ಕರ್ನಾಟಕ, ಕ್ರೈಮ್ ನ್ಯೂಸ್

 ಹುಡುಗಿಯರನ್ನು ಚುಡಾಯಿಸಬೇಡ ಎಂದು ಬುದ್ದಿವಾದ ಹೇಳಿದ ವ್ಯಕ್ತಿಯನ್ನು ಅಪಹರಿಸಿ ಹತ್ಯೆ

(ನ್ಯೂಸ್ ಕಡಬ) newskadaba.com ಮೈಸೂರು, ಫೆ.16. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಬುದ್ಧಿವಾದ ಹೇಳಿದ ವ್ಯಕ್ತಿಯನ್ನೇ ಅಪಹರಿಸಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಹತ್ಯೆಗೆ ಮುನ್ನ ಕೊಲೆಯಾದ ವ್ಯಕ್ತಿಯನ್ನು ಆರೋಪಿಗಳು ಹೊತ್ತುಕೊಂಡು ಹೋಗಿದ್ದರು. ಸಯ್ಯದ್ ಮನ್ಸೂರ್ (32) ಕೊಲೆಯಾಗಿದ್ದ ದುರ್ದೈವಿ ಎಂದು ತಿಳಿದುಬಂದಿದೆ. ಮೈಸೂರಿನ ಕಲ್ಯಾಣಗಿರಿ ನಿವಾಸಿ ಮನ್ಸೂರ್, ಭಾನುವಾರದಿಂದ ನಾಪತ್ತೆಯಾಗಿದ್ದರು. ಈ ಕುರಿತು ಎನ್ ಆರ್ ಮೊಹಲ್ಲಾದ ಜಬೀ ಸೈಯದ್ ಝೈನುಲ್ಲಾ ವಿರುದ್ದ ಪ್ರಕರಣ ದಾಖಲಾಗಿತ್ತು. ಜಬೀ ಹುಡಗಿಯರನ್ನು ಚುಡಾಯಿಸುತ್ತಿದ್ದ. ಹೀಗಾಗಿ ಇದು ತಪ್ಪು ಎಂದು ಮನ್ಸೂರ್,

 ಹುಡುಗಿಯರನ್ನು ಚುಡಾಯಿಸಬೇಡ ಎಂದು ಬುದ್ದಿವಾದ ಹೇಳಿದ ವ್ಯಕ್ತಿಯನ್ನು ಅಪಹರಿಸಿ ಹತ್ಯೆ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಮೂವರು ಯುವಕರ ಮೃತ್ಯು ಪ್ರಕರಣಕ್ಕೆ ತಿರುವು ➤‌  ಅಪಘಾತವಲ್ಲ ಹತ್ಯೆಯೆಂದು ದೃಢ!!

(ನ್ಯೂಸ್ ಕಡಬ)newskadaba.com ದಾವಣಗೆರೆ,ಫೆ.15. ದಾವಣಗೆರೆ ತಾಲೂಕಿನ ಆನಗೋಡು ಗ್ರಾಮದ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ   ರಾತ್ರಿ ಅಪಘಾತದಲ್ಲಿ ದಾವಣಗೆರೆ ಹೊರ ವಲಯದ ಶ್ರೀರಾಮನಗರದ ಮೂವರು ಯುವಕರು ಮೃತಪಟ್ಟಿದ್ದಾರೆ ಎಂಬ ಘಟನೆಯ ಕುರಿತು  ಹಿಂದಿನ ರಹಸ್ಯ ಭೇದಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸರು ಕೊಲೆ ಮಾಡಿ ಪರಾರಿಯಾಗಿದ್ದ ಲಾರಿ ಚಾಲಕ ಹಾಗೂ ದಾವಣಗೆರೆಯ ಮೂವರು ದರೋಡೆಕೋರರನ್ನು ಬಂಧಿಸಿದ್ದಾರೆ.

ಮೂವರು ಯುವಕರ ಮೃತ್ಯು ಪ್ರಕರಣಕ್ಕೆ ತಿರುವು ➤‌  ಅಪಘಾತವಲ್ಲ ಹತ್ಯೆಯೆಂದು ದೃಢ!! Read More »

ಕರ್ನಾಟಕ

ಕೆಲಸ ಕೊಡಿಸುವುದಾಗಿ ಹಣ ಪಡೆದ ಪ್ರಕರಣ: ➤‌ ಆರೋಪಿಗಳು ಅರೆಸ್ಟ್​

(ನ್ಯೂಸ್ ಕಡಬ)newskadaba.com ಹಾಸನ,ಫೆ.15. ಹಾವೇರಿ ಜಿಲ್ಲೆಯ ಕಾಗಿನೆಲೆ ಮಠದಲ್ಲಿ ಸೋಲಾರ್ ಪ್ರಾಜೆಕ್ಟ್ ಕೆಲಸಕೊಡಿಸುವುದಗಿ ನಂಬಿಸಿ 21 ಲಕ್ಷ ರೂ ಪಡೆದು ವಂಚಿಸಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ತುಮಕೂರು ಜಿಲ್ಲೆ ಕೆ.ಲಕ್ಕಿಹಳ್ಳಿ ಗ್ರಾಮದ ರಘು, ಚಿಕ್ಕಮಗಳೂರು ಜಿಲ್ಲೆಯ ಬಿ.ಕೋಡಿಹಳ್ಳಿ ಗ್ರಾಮದ ಶ್ರೀಧರ್ ಅಲಿಯಾಸ್ ಸಿದ್ದಪ್ಪ ಬಂಧಿತ ಆರೋಪಿಗಳು ಎಂದು ವರದಿಯಾಗಿದೆ. ಬಂಧಿತರಿಂದ 9.19 ಲಕ್ಷ ನಗದು ಮತ್ತು ಮೂರು ಕಾರುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ಮಾಹಿತಿ ನೀಡಿದ್ದಾರೆ

ಕೆಲಸ ಕೊಡಿಸುವುದಾಗಿ ಹಣ ಪಡೆದ ಪ್ರಕರಣ: ➤‌ ಆರೋಪಿಗಳು ಅರೆಸ್ಟ್​ Read More »

ಕರ್ನಾಟಕ
Scroll to Top