Bangalore

ತಂದೆ ಹತ್ಯೆಗೆ ಒಂದು ಕೋಟಿ ರೂ. ಸುಪಾರಿ ಕೊಟ್ಟ ಪಾಪಿ ಮಗ    ➤ ಹೆಣದ ಮುಂದೆ ಭಾರಿ ಹೈಡ್ರಾಮಾ !

(ನ್ಯೂಸ್ ಕಡಬ)newskadaba.com ಬೆಂಗಳೂರು, ಫೆ.28. ಇಲ್ಲೊಬ್ಬ ಪಾಪಿ ಮಗ ತಂದೆ ಹತ್ಯೆಗೆ ಸುಪಾರಿ ಕೊಟ್ಟಿದ್ದಾನೆ. ಅದು ಬರೋಬ್ಬರಿ ಒಂದು ಕೋಟಿ ರೂಪಾಯಿಗೆ ಎಂದು ವರದಿ ತಿಳಿಸಿದೆ. ತಂದೆಯನ್ನ ಕೊಚ್ಚಿ ಕೊಚ್ಚಿ ಕೊಂದು ಹಾಕ್ತಿದ್ರೆ ಮಗ ನೋಡ್ತಾ ನಿಂತಿದ್ದ. ಉಳಿಸಿಕೊಳ್ಳೋ ಹೈಡ್ರಾಮಾ ಆಡಿದ್ದ. ಆದರೆ ಪೊಲೀಸರ ತನಿಖೆ ಮುಂದೆ ಎಲ್ಲಾ ಬಟಾಬಯಲಾಗಿದೆ.  

ತಂದೆ ಹತ್ಯೆಗೆ ಒಂದು ಕೋಟಿ ರೂ. ಸುಪಾರಿ ಕೊಟ್ಟ ಪಾಪಿ ಮಗ    ➤ ಹೆಣದ ಮುಂದೆ ಭಾರಿ ಹೈಡ್ರಾಮಾ ! Read More »

ಕರ್ನಾಟಕ, ಕ್ರೈಮ್ ನ್ಯೂಸ್

ಶಾಲಾ-ಕಾಲೇಜು ದೋಚುತ್ತಿದ್ದ ಗ್ಯಾಂಗ್ ಪೊಲೀಸ್ ಬಲೆಗೆ     

(ನ್ಯೂಸ್ ಕಡಬ)newskadaba.com ಬೆಂಗಳೂರು, ಫೆ.28. ಶಾಲಾ-ಕಾಲೇಜುಗಳನ್ನು ಗುರಿಯಾಗಿಸಿ ಕೊಂಡು ರಾತ್ರಿ ವೇಳೆ ಕಳ್ಳತನ ಮಾಡುತ್ತಿದ್ದ ಮೂವರು ಅಂತರ್ ರಾಜ್ಯ ಕಳ್ಳರನ್ನು ಜ್ಞಾನಭಾರತಿ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ ಎಂದು ತಿಳಿದುಬಂದಿದೆ. ಆರೋಪಿಗಳನ್ನು ತಮಿಳುನಾಡಿನ ಸೇಲಂ ಜಿಲ್ಲೆಯ ನಿವಾಸಿಗಳಾದ ಅಣ್ಣಾ ದೊರೈ (42), ವೀರಮಲೈ ಅಲಿಯಾಸ್ ಕುಮಾರ್ (40) ಮತ್ತು ಬಾಬು (34) ಎಂದು ಗುರುತಿಸಲಾಗಿದೆ ಎನ್ನಲಾಗಿದೆ. ಫೆಬ್ರವರಿ 10 ರಂದು ನಾಗದೇವನಹಳ್ಳಿಯ ವಿಎಸ್‌ಎಸ್ ಶಾಲೆಯಲ್ಲಿ ಕಳ್ಳತನ ನಡೆದಿದ್ದು, ದುಷ್ಕರ್ಮಿಗಳು ರೂ. 5 ಲಕ್ಷ ಮತ್ತು ಕೆಲವು ಎಲೆಕ್ಟ್ರಾನಿಕ್ ವಸ್ತುಗಳನ್ನು ಕದ್ದೊಯ್ದಿದ್ದರು

ಶಾಲಾ-ಕಾಲೇಜು ದೋಚುತ್ತಿದ್ದ ಗ್ಯಾಂಗ್ ಪೊಲೀಸ್ ಬಲೆಗೆ      Read More »

ಕರ್ನಾಟಕ, ಕ್ರೈಮ್ ನ್ಯೂಸ್

ಹೈ ಕೋರ್ಟ್ ಆದೇಶದಂತೆ 15,000 ಶಿಕ್ಷಕರ ಹೊಸ ಪಟ್ಟಿ ಪ್ರಕಟ

(ನ್ಯೂಸ್ ಕಡಬ)newskadaba.com ಬೆಂಗಳೂರು, ಫೆ.28. ಪದವೀಧರ ಶಾಲಾ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯು ಹೈಕೋರ್ಟ್ ಆದೇಶ ದಂತೆ ತಂದೆಯ ಆದಾಯ ಪ್ರಮಾಣ ಪತ್ರ ಸಲ್ಲಿಸಿರುವ ವಿವಾಹಿತ ಮಹಿಳಾ ಅಭ್ಯರ್ಥಿಗಳನ್ನೂ ಪರಿಗಣಿಸಿ 1:1 ಅನುಪಾತದಲ್ಲಿ ಹೊಸ ತಾತ್ಕಾಲಿಕ ಪಟ್ಟಿಯನ್ನು ಸೋಮವಾರ ತನ್ನ ವೆಬ್ಸೈಟ್ನಲ್ಲಿ ಪ್ರಕಟಿಸಿದೆ ಎಂದು ವರದಿ ತಿಳಿಸಿದೆ. 15 ಸಾವಿರ ಶಿಕ್ಷಕರ ಹುದ್ದೆಗಳಿಗೆ ಪರೀಕ್ಷೆ ನಡೆಸಿದ್ದ ಶಿಕ್ಷಣ ಇಲಾಖೆಯು 2022ರ ನವೆಂಬರ್ನಲ್ಲಿ 1:1 ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಿತ್ತು ಎನ್ನಲಾಗಿದೆ.

ಹೈ ಕೋರ್ಟ್ ಆದೇಶದಂತೆ 15,000 ಶಿಕ್ಷಕರ ಹೊಸ ಪಟ್ಟಿ ಪ್ರಕಟ Read More »

ಕರ್ನಾಟಕ

ಕರ್ನಾಟಕದಲ್ಲಿ ಇನ್ನಷ್ಟು ನಗರಗಳಿಗೆ ಎಲೆಕ್ಟ್ರಿಕ್ ಬಸ್ ಸೇವೆ ಆರಂಭ       

(ನ್ಯೂಸ್ ಕಡಬ)newskadaba.com ಬೆಂಗಳೂರು, ಫೆ.28. ಪರಿಸರ ಸ್ನೇಹಿ ಎಲೆಕ್ಟ್ರಿಕ್‌ ಬಸ್‌ ಸೇವೆ ಆರಂಭಿಸಿರುವ ಕೆ.ಎಸ್‌.ಆರ್‌ಟಿ.ಸಿ ಗೆ ಮಾರ್ಚ್‌ 15ರೊಳಗೆ ಮತ್ತೆ 25 ಬಸ್‌ಗಳು ಸೇರ್ಪಡೆಯಾಗಲಿದ್ದು, ಶೀಘ್ರದಲ್ಲೇ ಬಸ್‌ಗಳನ್ನು ಯಾವ ಮಾರ್ಗಗಳಿಗೆ ನಿಯೋಜಿಸಬೇಕೆನ್ನುವ ಬಗ್ಗೆ ನಿಗಮ ತೀರ್ಮಾನ ಕೈಗೊಳ್ಳಲಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.   ಕೆಎಸ್‌ಆರ್‌ಟಿಸಿ ಜ.16ರಂದು ಮೊದಲ ಎಲೆಕ್ಟ್ರಿಕ್‌ ಬಸ್‌(ಇವಿ ಪವರ್‌ ಪ್ಲಸ್‌) ಕಾರ್ಯಾಚರಣೆಯನ್ನು ಬೆಂಗಳೂರು-ಮೈಸೂರು ನಡುವೆ ಆರಂಭಿಸಿತ್ತು.    

ಕರ್ನಾಟಕದಲ್ಲಿ ಇನ್ನಷ್ಟು ನಗರಗಳಿಗೆ ಎಲೆಕ್ಟ್ರಿಕ್ ಬಸ್ ಸೇವೆ ಆರಂಭ        Read More »

ಕರ್ನಾಟಕ

ಬೆಂಗಳೂರು: ಸಿಇಟಿ ಪರೀಕ್ಷಾ ವೇಳಾಪಟ್ಟಿ ಪ್ರಕಟ

(ನ್ಯೂಸ್ ಕಡಬ)newskadaba.com ಬೆಂಗಳೂರು, ಫೆ.25. ವಿವಿಧ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕಾಗಿ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಯ (CET) ದಿನಾಂಕ ನಿಗದಿಯಾಗಿದ್ದು, ಮೇ 20ರಿಂದ ಸಾಮಾನ್ಯ ಪ್ರವೇಶ ಪರೀಕ್ಷೆಗಳು ಆರಂಭವಾಗಲಿವೆ. ಮೇ. 20 ಮತ್ತು 21ರಂದು ಸಿಇಟಿ ಕನ್ನಡ ಕಡ್ಡಾಯ ಪರೀಕ್ಷೆ ನಡೆಯಲಿದೆ. ಹೊರನಾಡು, ಗಡಿನಾಡು ವಿದ್ಯಾರ್ಥಿಗಳಿಗೆ ಕನ್ನಡ ಪರೀಕ್ಷೆ ನಡೆಸಲಾಗುತ್ತೆ. ಮೇ.22ರಂದು ಸಿಇಟಿ ಅಂಗವಾಗಿ ಕನ್ನಡ ಪರೀಕ್ಷೆ ನಡೆಸಲಾಗುವುದು. ಇಂಜಿನಿಯರಿಂಗ್ / ವಾಸ್ತುಶಿಲ್ಪ ಕೋರ್ಸುಗಳು, ಫಾರ್ಮ್ ಸೈನ್ಸ್ ಅಂದ್ರೆ ಬಿಎಸ್ಸಿ(ಕೃಷಿ), ಬಿ.ಎಸ್.ಸಿ (ರೇಷ್ಮೆ ಕೃಷಿ), ಬಿಎಸ್ಸಿ

ಬೆಂಗಳೂರು: ಸಿಇಟಿ ಪರೀಕ್ಷಾ ವೇಳಾಪಟ್ಟಿ ಪ್ರಕಟ Read More »

ಕರ್ನಾಟಕ

ಬೈಕ್ ಸವಾರನ ಅಡ್ಡಗಟ್ಟಿ ಕತ್ತು ಕೊಯ್ದು ಹತ್ಯೆ

(ನ್ಯೂಸ್ ಕಡಬ)newskadaba.com ಬೆಂಗಳೂರು, ಫೆ.23. ಬೈಕ್ ನಲ್ಲಿ ತೆರಳುತ್ತಿದ್ದ ಕಾರ್ಪೆಂಟರ್ ಅಡ್ಡ ಗಟ್ಟಿ ಕತ್ತು ಕೊಯ್ದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಜ್ಞಾನ ಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯ ಮಂಗನಹಳ್ಳಿ ಬಳಿ ನಡೆದಿದೆ. ಮಂಗನಹಳ್ಳಿ ನಿವಾಸಿ ದಿನೇಶ್(46) ಹತ್ಯೆಯಾದವರು ಎಂದು ಹೇಳಲಾಗಿದೆ. ನಿರ್ಜನ ಪ್ರದೇಶದಲ್ಲಿ ಬೈಕ್ ನಲ್ಲಿ ತೆರಳುತ್ತಿದ್ದ ದಿನೇಶ್ ಅವರನ್ನು ಅಡ್ಡಗಟ್ಟಿ ಮಾರಕಾಸ್ತ್ರದಿಂದ ಕತ್ತು ಕೊಯ್ದು ಕೊಲೆ ಮಾಡಲಾಗಿದೆ. ಪಕ್ಕದ ಖಾಲಿ ಜಾಗದಲ್ಲಿ ಲಾಂಗ್ ಎಸೆದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕ್ ಸವಾರನ ಅಡ್ಡಗಟ್ಟಿ ಕತ್ತು ಕೊಯ್ದು ಹತ್ಯೆ Read More »

ಕರ್ನಾಟಕ, ಕ್ರೈಮ್ ನ್ಯೂಸ್

ರಾಜ್ಯದಲ್ಲಿ ಬಿಸಿಲ ಝಳ ತೀವ್ರ !     ➤  ಹೆಚ್ಚಿದ ಜ್ವರ ಪ್ರಕರಣ; ತಜ್ಞರಲ್ಲಿ ಆತಂಕ

(ನ್ಯೂಸ್ ಕಡಬ)newskadaba.com ಬೆಂಗಳೂರು, ಫೆ,22.  ರಾಜ್ಯದಲ್ಲಿ ಈ ಬಾರಿ ಫೆಬ್ರವರಿ ಮಧ್ಯ ಭಾಗದಲ್ಲಿ ಬಿಸಿಲ ಝಳ ತೀವ್ರವಾಗಿದೆ. ವಾಡಿಕೆಗಿಂತ ಹೆಚ್ಚು ಬಿಸಿಲಿದ್ದು, ಮುಂದಿನ ದಿನಗಳಲ್ಲಿ ಬಿಸಿಲು ಇನ್ನಷ್ಟು ಹೆಚ್ಚಳಗೊಳ್ಳುವ ಭೀತಿ ತಲೆದೂರಿದ್ದು, ಸಾಮಾನ್ಯವಾಗಿ ಮಾರ್ಚ್ ಬಳಿಕ ಬಿಸಿಲ ಬೇಗೆ ಹೆಚ್ಚಾಗುತ್ತಿತ್ತು. ಆದರೆ, ತಾಪಮಾನ ಹೆಚ್ಚಾಗಿದೆ. ಇದರಿಂದ ಜ್ವರ ಪ್ರಕರಣಗಳು ಹೆಚ್ಚಾಗುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.  

ರಾಜ್ಯದಲ್ಲಿ ಬಿಸಿಲ ಝಳ ತೀವ್ರ !     ➤  ಹೆಚ್ಚಿದ ಜ್ವರ ಪ್ರಕರಣ; ತಜ್ಞರಲ್ಲಿ ಆತಂಕ Read More »

ಕರ್ನಾಟಕ

ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ ನವಜಾತ ಶಿಶು ‘ಜೀರೋ ಟ್ರಾಫಿಕ್’ ನಲ್ಲಿ ಬೆಂಗಳೂರಿಗೆ

(ನ್ಯೂಸ್ ಕಡಬ)newskadaba.com ಬೆಂಗಳೂರು, ಫೆ.18. ಆಗಷ್ಟೇ ಜನಿಸಿದ ಮಗುವಿಗೆ ಹೃದಯ ಸಮಸ್ಯೆ ಇರುವುದನ್ನು ಗಮನಿಸಿ ತಕ್ಷಣ ಶಸ್ತ್ರ ಚಿಕಿತ್ಸೆ ಅಗತ್ಯವಿದೆ ಎಂಬ ಕಾರಣಕ್ಕೆ ಜೀರೋ ಟ್ರಾಫಿಕ್ ನಲ್ಲಿ ಬೆಂಗಳೂರಿನ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುವ ಘಟನೆ ನಡೆದಿದೆ. ಅಶ್ವಿನಿ ಎಂಬುವರು ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದು, ಆದರೆ ಜನಿಸಿದ ಮಗುವಿನಲ್ಲಿ ಹೃದಯ ಸಮಸ್ಯೆ ಇರುವುದನ್ನು ವೈದ್ಯರು ಗಮನಿಸಿದ್ದರು. ಕೂಡಲೇ ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆ ತಜ್ಞ ವೈದ್ಯರನ್ನು ಸಂಪರ್ಕಿಸಿದ್ದು, ತಕ್ಷಣದ ಶಸ್ತ್ರಚಿಕಿತ್ಸೆ ಅಗತ್ಯವಿರುವ ಕಾರಣ ಬೆಂಗಳೂರಿಗೆ ಕರೆದುಕೊಂಡು

ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ ನವಜಾತ ಶಿಶು ‘ಜೀರೋ ಟ್ರಾಫಿಕ್’ ನಲ್ಲಿ ಬೆಂಗಳೂರಿಗೆ Read More »

ಕರ್ನಾಟಕ

ಎಣ್ಣೆ ಸಪ್ಲೈ ತಡವಾಗಿದ್ದಕ್ಕೆ ಬಾರ್​ ಸಿಬ್ಬಂದಿ ಮೇಲೆ ಹಲ್ಲೆ   ➤23 ದಿನದ ಬಳಿಕ ಯುವಕ ಮೃತ್ಯು

(ನ್ಯೂಸ್ ಕಡಬ) newskadaba.com ಬೆಂಗಳೂರು, ಫೆ.17.  ಬಾರ್​ನಲ್ಲಿ ಸಪ್ಲೈ ತಡವಾಗಿದ್ದಕ್ಕೆ ಸಿಬ್ಬಂದಿ ಬಸವರಾಜು (39) ಎಂಬುವವರ ಮೇಲೆ ಹಲ್ಲೆ ಮಾಡಲಾಗಿತ್ತು. ತೀವ್ರವಾಗಿ ಗಾಯಗೊಂಡಿದ್ದ ಬಸವರಾಜ ನಿರ್ಲಕ್ಷ್ಯವಹಿಸಿದ್ದಾನೆ. ಬಳಿಕ ಮಾರನೇ ದಿನ ತಲೆ ತಿರುಗುವಂತಾಗಿದ್ದು, ಕೂಡಲೇ ಆಸ್ಪತ್ರೆಗೆ ಸೇರಿಸಲಾಗಿ ಚಿಕಿತ್ಸೆ ಪಡೆಯುತ್ತಿದ್ದ. ಇದೀಗ 23 ದಿನದ ಬಳಿಕ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ. ಇನ್ನು ಬಾರ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದ ಆರೋಪಿಗಳಾದ ಸುರೇಶ್(29), ವಿನೋದ್ ಕುಮಾರ್ ( 28) ಎಂಬುವವರನ್ನ ಕುಮಾರಸ್ವಾಮಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.

ಎಣ್ಣೆ ಸಪ್ಲೈ ತಡವಾಗಿದ್ದಕ್ಕೆ ಬಾರ್​ ಸಿಬ್ಬಂದಿ ಮೇಲೆ ಹಲ್ಲೆ   ➤23 ದಿನದ ಬಳಿಕ ಯುವಕ ಮೃತ್ಯು Read More »

ಕರ್ನಾಟಕ, ಕ್ರೈಮ್ ನ್ಯೂಸ್

ಸಿಎಂ ಬೊಮ್ಮಾಯಿ ಬಜೆಟ್ ಮಂಡನೆ ➤ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್​ ಪಾಸ್​​​​ ವ್ಯವಸ್ಥೆ…

(ನ್ಯೂಸ್ ಕಡಬ) newskadaba.com ಬೆಂಗಳೂರು, ಫೆ.17. ಶಾಲಾ ಕಾಲೇಜು ವಿದ್ಯಾರ್ಥಿನಿಯರಿಗೆ ಬಂಪರ್ ಗಿಫ್ಟ್​ ನೀಡಿದ್ದು, ಸರ್ಕಾರ ಉಚಿತ ಬಸ್​ಪಾಸ್ ಸೌಲಭ್ಯ ಘೋಷಣೆ ಮಾಡಿದೆ. ವಿದ್ಯಾವಾಹಿನಿ ಯೋಜನೆ ಯಡಿ 350 ಕೋಟಿ ವೆಚ್ಚದಲ್ಲಿ ಉಚಿತ ಬಸ್ಸು ಪಾಸ್ ಸೌಲಭ್ಯ  ನೀಡಲಿದೆ ಎಂದು ವರದಿಯಾಗಿದೆ.  ಇದರಿಂದ ರಾಜ್ಯದ 8 ಲಕ್ಷ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಪ್ರಯೋಜನವಾಗಲಿದೆ.  

ಸಿಎಂ ಬೊಮ್ಮಾಯಿ ಬಜೆಟ್ ಮಂಡನೆ ➤ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್​ ಪಾಸ್​​​​ ವ್ಯವಸ್ಥೆ… Read More »

ಕರ್ನಾಟಕ
Scroll to Top