Bangalore

ಕೊನೆಗೂ ಬರುತ್ತಿದೆ ಚಿತ್ರನಟ ಉಪೇಂದ್ರರ ಹೊಸ ರಾಜಕೀಯ ಪಕ್ಷ ► ಪಕ್ಷದ ಹೆಸರು ತಿಳಿಯುವ ಕುತೂಹಲವೇ…?

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ.21. ರಾಜ್ಯ ರಾಜಕಾರಣದ ಹೊಸ ಮುಖ, ಚಿತ್ರರಂಗದ ದಿಗ್ಗಜ ರಾಜಕೀಯಕ್ಕೆ ಬರೋದಾಗಿ ಘೋಷಿಸಿ ತೀವ್ರ ಸಂಚಲನ ಮೂಡಿಸಿರುವ ನಟ ರಿಯಲ್ ಸ್ಟಾರ್ ಉಪೇಂದ್ರ ಅವರ ಹೊಸ ಪಕ್ಷದ ಹೆಸರು ಕೊನೆಗೂ ಅಂತಿಮವಾಗಿದೆ. ಉಪೇಂದ್ರ ಅವರ ಪಕ್ಷದ ಹೆಸರು ಮಾಧ್ಯಮಗಳಲ್ಲಿ ಪ್ರಜಾಕಾರಣ, ಪ್ರಜಾಕೀಯ ಎಂದು ಬಿತ್ತರವಾಗಿತ್ತು. ಆದರೆ ಕೊನೆಗೆ ಪಕ್ಷದ ಹೆಸರು `ಉತ್ತಮ ಪ್ರಜಾ ಪಾರ್ಟಿ’ ಎಂದು ಅಂತಿಮಗೊಂಡಿದೆ ಎನ್ನಲಾಗಿದೆ. ಸದಸ್ಯತ್ವ ನೋಂದಣಿಯ ಅರ್ಜಿಯಲ್ಲಿ ಉಪೇಂದ್ರರ ನೂತನ ಪಕ್ಷದ ಹೆಸರು ಬಹಿರಂಗವಾಗಿದೆ. ಈಗಾಗಲೇ […]

ಕೊನೆಗೂ ಬರುತ್ತಿದೆ ಚಿತ್ರನಟ ಉಪೇಂದ್ರರ ಹೊಸ ರಾಜಕೀಯ ಪಕ್ಷ ► ಪಕ್ಷದ ಹೆಸರು ತಿಳಿಯುವ ಕುತೂಹಲವೇ…? Read More »

ಕರ್ನಾಟಕ

ಕಾರಿಗೆ ಢಿಕ್ಕಿ ಹೊಡೆದ ಬಿಎಂಟಿಸಿ ಬಸ್ ► ಅಪಾಯದಿಂದ ಪಾರಾದ ಕಾರು ಚಾಲಕ

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ .21, ಚಲಿಸುತ್ತಿದ್ದ ಕಾರ್‍ಗೆ ಬಿಎಂಟಿಸಿ ಬಸ್ಸೊಂದು ಡಿಕ್ಕಿ ಹೊಡೆದುದರಿಂದ ಕಾರು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಬೆಂಗಳೂರಿನ ನಾಯಂಡನಹಳ್ಳಿ ಜಂಕ್ಷನ್ ಬಳಿ ಸೋಮವಾರ ಬೆಳಿಗ್ಗೆ ನಡೆದಿದೆ. ಮೈಸೂರು ರಸ್ತೆ ಕಡೆಗೆ ತೆರಳುತಿದ್ದ ಕಾರಿಗೆ ಬಿಎಂಟಿಸಿ ಬಸ್ ನಾಯಂಡನಹಳ್ಳಿ ಜಂಕ್ಷನ್ ಬಳಿ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಕಾರು ಜಖಂಗೊಂಡಿದೆ. ಘಟನೆಯಿಂದಾಗಿ ಅದೃಷ್ಟವಶಾತ್ ಕಾರ್ ಚಾಲಕ ಕೀರ್ತಿ ಪಾರಾಗಿದ್ದಾರೆ. ಸ್ಥಳಕ್ಕೆ ಆಗಮಿಸಿದ ಬ್ಯಾಟರಾಯನಪುರ ಸಂಚಾರಿ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕಾರಿಗೆ ಢಿಕ್ಕಿ ಹೊಡೆದ ಬಿಎಂಟಿಸಿ ಬಸ್ ► ಅಪಾಯದಿಂದ ಪಾರಾದ ಕಾರು ಚಾಲಕ Read More »

ಕರ್ನಾಟಕ

ನಾಳೆ ಬ್ಯಾಂಕ್ ಸಿಬ್ಬಂದಿಗಳ ಮುಷ್ಕರ ► ಯಾವೆಲ್ಲ ಬ್ಯಾಂಕುಗಳು ತೆರೆದಿರುತ್ತವೆ ಎಂದು ತಿಳಿಯಬೇಕೇ..?

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ.21. ಶುಕ್ರವಾರ ನಡೆದ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ (ಯುಎಫ್‍ಬಿಯು), ಭಾರತೀಯ ಬ್ಯಾಂಕ್‍ಗಳ ಒಕ್ಕೂಟ, ವಾಣಿಜ್ಯ ಸೇವಾ ಇಲಾಖೆ ಮತ್ತು ಮುಖ್ಯ ಕಾರ್ಮಿಕ ಆಯುಕ್ತರ ಸಭೆಯು ವಿಫಲವಾಗಿದ್ದರಿಂದ ಮಂಗಳವಾರದಂದು ಸಾರ್ವಜನಿಕ ರಂಗದ ರಾಷ್ಟ್ರೀಕೃತ ಬ್ಯಾಂಕ್‍ಗಳ ಬಂದ್ ಗೆ ಅಖಿಲ ಭಾರತ ಬ್ಯಾಂಕ್ ನೌಕರರ ಒಕ್ಕೂಟದ (ಎಐಬಿಒಸಿ) ಕಾರ್ಯದರ್ಶಿ ಡಿ. ಥಾಮಸ್ ಫ್ರಾಂಕೋ ರಾಜೇಂದ್ರ ದೇವ್ ಕರೆ ನೀಡಿದ್ದಾರೆ. ಸರಕಾರಿ ಸ್ವಾಮ್ಯದ ಬ್ಯಾಂಕ್‍ಗಳು ಮತ್ತು ಖಾಸಗಿ ಬ್ಯಾಂಕ್‍ಗಳನ್ನು ಸದ್ಯ ವಿಲೀನಗೊಳಿಸಲು ಸಾಧ್ಯವಿಲ್ಲ.

ನಾಳೆ ಬ್ಯಾಂಕ್ ಸಿಬ್ಬಂದಿಗಳ ಮುಷ್ಕರ ► ಯಾವೆಲ್ಲ ಬ್ಯಾಂಕುಗಳು ತೆರೆದಿರುತ್ತವೆ ಎಂದು ತಿಳಿಯಬೇಕೇ..? Read More »

ರಾಷ್ಟ್ರೀಯ ನ್ಯೂಸ್

‘ಅಡಚಣೆಗಾಗಿ ಕ್ಷಮಿಸಿ’ ಸಿರಿಯಲ್ ಖ್ಯಾತಿಯ ನಟ ಗುರುಮೂರ್ತಿ ನಿಧನ

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ . 19,: ತೀವ್ರ ಹೃದಯಾಘಾತದಿಂದ ಹಿರಿಯ ನಟ ಗುರುಮೂರ್ತಿ(70) ಕಳೆದ ರಾತ್ರಿ ನಗರದ ಕನಕಪುರ ರಸ್ತೆ ಯ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ಶುಕ್ರವಾರ ಸಂಜೆ ಮನೆಯಲ್ಲಿ ಯಾರು ಇಲ್ಲದ ವೇಳೆ ತೀವ್ರ ಹೃದಯಾಘಾತವಾಗಿದೆ. ಕೊಡಲೇ ಅವರನ್ನು ರಾಜಶೇಖರ್ ಆಸ್ಪತ್ರೆಗೆ ದಾಖಲಿಸಲಾಯಿತಾದರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಗುರುಮೂರ್ತಿಯವರು ಪತ್ನಿ ಪೂರ್ಣಿಮಾ, ಮಕ್ಕಳಾದ ಜಯಂತ್, ನಿಶಾಂತ್ ಸೇರಿದಂತೆ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಕಿರಿಯ ಪುತ್ರ ಯೂರೋಪ್ ಪ್ರವಾಸದಲ್ಲಿರುವುದರಿಂದ ವಾಪಸ್ ಬಂದ ನಂತರ ಅಂತ್ಯಕ್ರಿಯೆ

‘ಅಡಚಣೆಗಾಗಿ ಕ್ಷಮಿಸಿ’ ಸಿರಿಯಲ್ ಖ್ಯಾತಿಯ ನಟ ಗುರುಮೂರ್ತಿ ನಿಧನ Read More »

ಕರ್ನಾಟಕ

ಗೂಬೆಯನ್ನು ಬಿಟ್ಟು ದರೋಡೆ ಮಾಡುತ್ತಿದ್ದ ತಂಡದ ಬಂಧನ ► ಸಿನಿಮೀಯ ಶೈಲಿಯಲ್ಲಿ ದರೋಡೆ ಮಾಡುತ್ತಿದ್ದ ಚೋರರು

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ.07.  ಮೂಕ ಜೀವಿಯಾದ ಗೂಬೆಯನ್ನು ಬಳಸಿಕೊಮಡು ಸಿನಿಮೀಯ ಶೈಲಿಯಲ್ಲಿ ಮನೆ ದರೋಡೆ ನಡೆಸುತ್ತಿರುವ ತಂಡವನ್ನು ಬಂಧಿಸಿರುವ ರಾಜ್ಯ ಸಿಐಡಿ ಅರಣ್ಯ ಇಲಾಖೆಯ ಅಧಿಕಾರಿಗಳು ಕಾಟನ್ ಪೇಟೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಬೆಂಗಳೂರಿನ ಕಾಟನ್‍ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಕೆಲ ಶ್ರೀಮಂತರನ್ನು ಟಾರ್ಗೆಟ್ ಮಾಡುತ್ತಿದ್ದ ಈ ತಂಡ, ದೂರದ ಕಾಡುಗಳಿಂದ ಗೂಬೆಗಳನ್ನು ಹಿಡಿದು ತಂದು ಮನೆಯವರಿಗೆ ಗೊತ್ತಾಗದ ಹಾಗೇ ಒಳಗೆ ಬಿಡುತ್ತಿದ್ದರು. ನಂತರ ಇದೇ ತಂಡದ ಸದಸ್ಯರು ಹೋಗಿ ನಿಮ್ಮ ಮನೆಗೆ ಗೂಬೆ ನುಗ್ಗಿದೆ. ಅದು ಅನಿಷ್ಟದ ಸಂಕೇತವಾಗಿದ್ದು,

ಗೂಬೆಯನ್ನು ಬಿಟ್ಟು ದರೋಡೆ ಮಾಡುತ್ತಿದ್ದ ತಂಡದ ಬಂಧನ ► ಸಿನಿಮೀಯ ಶೈಲಿಯಲ್ಲಿ ದರೋಡೆ ಮಾಡುತ್ತಿದ್ದ ಚೋರರು Read More »

ಕರ್ನಾಟಕ

ಶೀಘ್ರದಲ್ಲೇ ಬರಲಿದೆ ಹೆಚ್ಡಿಕೆ ಮಾಲಕತ್ವದ ಕ್ಯಾಬ್ ಸರ್ವೀಸ್ ► ‘ನಮ್ಮ ಟೈಗರ್’ ಆ್ಯಪ್ ಆಧಾರಿತ ಕ್ಯಾಬ್ ಸೇವೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ.01. ಓಲಾ, ಉಬರ್ ನಂತಹ ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆಯ ಸಂಸ್ಥೆಗಳಿಗೆ ಸಡ್ಡು ಹೊಡೆದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮಾರ್ಗದರ್ಶನದಲ್ಲಿ ಚಾಲಕರೇ ಸೇರಿ ಆರಂಭಿಸುತ್ತಿರುವ ಆ್ಯಪ್ ಆಧಾರಿತ ಕ್ಯಾಬ್ ಸೇವೆ ‘ನಮ್ಮ ಟೈಗರ್‘ ಶೀಘ್ರದಲ್ಲೇ ಆರಂಭವಾಗಲಿದೆ. ಈ ಮೊದಲು HDK Cab ಎಂದು ಹೆಸರಿಡಲು ಚಾಲಕ ಮುಖಂಡರು ನಿರ್ಧರಿಸಿದ್ದರು. ಆದರೆ ಎಚ್.ಡಿ. ಕುಮಾರಸ್ವಾಮಿಯವರ ನಿರ್ದೇಶನದಂತೆ ತಮ್ಮ ಹೆಸರಿನ ಬದಲು ‘ನಮ್ಮ ಟೈಗರ್’ ಎಂದು ಹೆಸರಿಸಲಾಗಿದೆ. ಈ ನೂತನ ಕ್ಯಾಬ್ ಸೇವೆ ಆಗಸ್ಟ್ 15ರೊಳಗೆ ಸಾರ್ವಜನಿಕ

ಶೀಘ್ರದಲ್ಲೇ ಬರಲಿದೆ ಹೆಚ್ಡಿಕೆ ಮಾಲಕತ್ವದ ಕ್ಯಾಬ್ ಸರ್ವೀಸ್ ► ‘ನಮ್ಮ ಟೈಗರ್’ ಆ್ಯಪ್ ಆಧಾರಿತ ಕ್ಯಾಬ್ ಸೇವೆ Read More »

ಕರ್ನಾಟಕ

ಓಲಾ ಕ್ಯಾಬ್ ಲಾರಿಗೆ ಢಿಕ್ಕಿ: ಇಬ್ಬರು ಮೃತ್ಯು

(ನ್ಯೂಸ್ ಕಡಬ) newskadaba.com ಬೆಂಗಳೂರು, ಜು.29. ಓಲಾ ಕ್ಯಾಬೊಂದು ನಿಂತಿದ್ದ ಲಾರಿಗೆ ಢಿಕ್ಕಿ ಹೊಡೆದ ಪರಿಣಾಮ ಕಾರ ಚಾಲಕ ಹಾಗೂ ಪ್ರಯಾಣಿಕನೋರ್ವ ಮೃತಪಟ್ಟ ಘಟನೆ ಬೆಂಗಳುರಿನ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ಶನಿವಾರ ಬೆಳಿಗ್ಗೆ ನಡೆದಿದೆ. ಮೃತರನ್ನು ಕ್ಯಾಬ್ ಚಾಲಕ ಶಂಕರ್ ಹಾಗೂ ಪ್ರಯಾಣಿಕ ದೆಹಲಿಯ ಉಮೇಶ್ ಕುಮಾರ್ ಮಿಶ್ರಾ ಎಂದು ಗುರುತಿಸಲಾಗಿದೆ. ಇಂದು ಬೆಳಿಗ್ಗೆ ಬೆಂಗಳೂರಿನ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯ ಜಿಕೆವಿಕೆ ಮೇಲ್ಸೇತುವೆಯಲ್ಲಿ ರಸ್ತೆ ಬದಿ ನಿಲ್ಲಿಸಲಾಗಿದ್ದ ಲಾರಿಗೆ ಓಲಾ ಕ್ಯಾಬ್ ಹಿಂದಿನಿಂದ ಢಿಕ್ಕಿ

ಓಲಾ ಕ್ಯಾಬ್ ಲಾರಿಗೆ ಢಿಕ್ಕಿ: ಇಬ್ಬರು ಮೃತ್ಯು Read More »

ಕರ್ನಾಟಕ

ಶೋಭಾ ಕರಂದ್ಲಾಜೆಯಿಂದ ಸುಳ್ಳಿನ ರಾಜಕೀಯ: ಸಚಿವ ಖಾದರ್

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ.25. ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಅವರ ಅನುಮಾನಾಸ್ಪದ ಸಾವಿಗೆ ಸಂಬಂಧಿಸಿ ರಾಜ್ಯ ಸರಕಾರದ ಮೇಲೆ ವಿನಾಕಾರಣ ಆರೋಪ ಮಾಡಿದ್ದ ಸಂಸದೆ ಶೋಭಾ ಕರಂದ್ಲಾಜೆ ಇದೀಗ ರಾಜಕೀಯ ಪ್ರೇರಿತವಾಗಿ ಪಡಿತರ ಚೀಟಿ ಮಾಫಿಯಾ ಎಂಬ ಸುಳ್ಳು ಸುದ್ದಿ ಹರಡಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆಹಾರ ಸಚಿವ ಯು.ಟಿ.ಖಾದರ್ ಆಕ್ಷೇಪಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಅನುರಾಗ್ ತಿವಾರಿ ಅವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ಮಾಡಲಾದ ಆರೋಪದ ಬಗ್ಗೆ ಲಿಖಿತವಾಗಿ ದೂರು ನೀಡುವಂತೆ ತಿಳಿಸಲಾಗಿತ್ತು.

ಶೋಭಾ ಕರಂದ್ಲಾಜೆಯಿಂದ ಸುಳ್ಳಿನ ರಾಜಕೀಯ: ಸಚಿವ ಖಾದರ್ Read More »

ಕರ್ನಾಟಕ

ರೈತರ ಸಾಲ ಮನ್ನಾ ಮಾಡಲು ಆಗ್ರಹಿಸಿ ನಾಳೆ ಕರ್ನಾಟಕ ಬಂದ್

(ನ್ಯೂಸ್ ಕಡಬ) newskadaba.com ಬೆಂಗಳೂರು, ಜೂ.11. ಕೇಂದ್ರ ಹಾಗೂ ರಾಜ್ಯ ಸರಕಾರಗಳು ರೈತರ ಸಾಲವನ್ನು ಮನ್ನಾ ಮಾಡಬೇಕು,‌ ಮಧ್ಯಪ್ರದೇಶದ ಮಂದಸೌರ್ ನಲ್ಲಿ ನಡೆದ ಗೋಲಿಬಾರ್ ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯು ನಾಳೆ (ಜೂ.12 ನೇ ಸೋಮವಾರ) ರಾಜ್ಯ ಬಂದ್ ಗೆ ಕರೆ ನೀಡಿದೆ. ರೈತರ ನ್ಯಾಯಯುತ ಬೇಡಿಕೆಯನ್ನು ಈಡೇರಿಸಲು ಆಗ್ರಹಿಸಿ ರೈತರು ಮಧ್ಯಪ್ರದೇಶದ ಮಂದಸೌರ್ ನಲ್ಲಿ ಪ್ರತಿಭಟನೆ ಮಾಡುತ್ತಿದ್ದಾಗ ಪೊಲೀಸರು ಗೋಲಿಬಾರ್ ಮಾಡಿಸುವ ಮೂಲಕ ಹಲವು ರೈತರ ಸಾವಿಗೆ ಕಾರಣವಾಗಿದ್ದು, ಇದನ್ನು ಖಂಡಿಸಿ

ರೈತರ ಸಾಲ ಮನ್ನಾ ಮಾಡಲು ಆಗ್ರಹಿಸಿ ನಾಳೆ ಕರ್ನಾಟಕ ಬಂದ್ Read More »

ಕರ್ನಾಟಕ
Scroll to Top