Bangalore

ಬಾಯ್ಲರ್ ಸಿಡಿದು ಮೂವರು ಕಾರ್ಮಿಕರ ಸ್ಥಿತಿ ಗಂಭೀರ

(ನ್ಯೂಸ್ ಕಡಬ)newskadaba.com  ಬೆಂಗಳೂರು, ಮಾ.01. ಬಾಯ್ಲರ್ ಸಿಡಿದು ಮೂವರು ಕಾರ್ಮಿಕರಿಗೆ ಗಂಭೀರ ಗಾಯಗಳಾದ ಘಟನೆ ಬೆಂಗಳೂರು ನಗರದ ಅನೇಕಲ್ ನ ಬೊಮ್ಮಸಂದ್ರದಲ್ಲಿ ನಡೆದಿದೆ. ಬೊಮ್ಮಸಂದ್ರದ ಬಾಲ್ ಫಾರ್ಮ ಕಂಪನಿಯಲ್ಲಿ ಈ ದುರಂತ ಸಂಭವಿಸಿದೆ. ಪರಿಣಾಮ ಪ್ರದೀಪ್, ಮುರುಗನ್, ಕಿರಣ್ ಎಂಬ ಮೂವರು ಕಾರ್ಮಿಕರ ಸ್ಥಿತಿ ಗಂಭೀರವಾಗಿದೆ. ಮೈ ಮೇಲೆ ಭಾರಿ ಪ್ರಮಾಣದ ಕೆಮಿಕಲ್ ಬಿದ್ದು ತೀವ್ರತರದ ಗಾಯಗಳಾಗಿದೆ.  

ಬಾಯ್ಲರ್ ಸಿಡಿದು ಮೂವರು ಕಾರ್ಮಿಕರ ಸ್ಥಿತಿ ಗಂಭೀರ Read More »

ಕರ್ನಾಟಕ, ಕ್ರೈಮ್ ನ್ಯೂಸ್

ರಾಜ್ಯದಲ್ಲಿ `ಹಳೆಯ ಪಿಂಚಣಿ ಯೋಜನೆ’ ಜಾರಿಗೆ ಸಮಿತಿ ರಚಿಸಿ ರಾಜ್ಯ ಸರ್ಕಾರ ಆದೇಶ

(ನ್ಯೂಸ್ ಕಡಬ)newskadaba.com ಬೆಂಗಳೂರು, ಮಾ.01. ರಾಜ್ಯದಲ್ಲಿ ರಾಷ್ಟ್ರೀಯ ಪಿಂಚಣಿ ಯೋಜನೆಯ ಬದಲಾಗಿ ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೆ ಸಮಿತಿ ರಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ರಾಜ್ಯ ಸರ್ಕಾರವು ರಾಜ್ಯದಲ್ಲಿ ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲು ತೀರ್ಮಾನಿಸಿ ಆದೇಶ ಹೊರಡಿಸಿದೆ.

ರಾಜ್ಯದಲ್ಲಿ `ಹಳೆಯ ಪಿಂಚಣಿ ಯೋಜನೆ’ ಜಾರಿಗೆ ಸಮಿತಿ ರಚಿಸಿ ರಾಜ್ಯ ಸರ್ಕಾರ ಆದೇಶ Read More »

ಕರ್ನಾಟಕ

ಸರಕಾರಿ ನೌಕರರ ಸಂಘದ ಮುಷ್ಕರ ವಾಪಸ್

(ನ್ಯೂಸ್ ಕಡಬ)newskadaba.com ಬೆಂಗಳೂರು, ಮಾ.01. ಸರ್ಕಾರದ ಅಧಿಕೃತ ಆದೇಶದ ಬೆನ್ನಲ್ಲೇ ಅನಿರ್ದಿಷ್ಟ ಮುಷ್ಕರವನ್ನು ವಾಪಸ್ ತೆಗೆದುಕೊಂಡಿದ್ದೇವೆ ಎಂದು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ತಿಳಿಸಿದರು. ಏಪ್ರಿಲ್ 1 ರಿಂದ ಶೇ.17ರಷ್ಟು ವೇತನ ಹೆಚ್ಚಿಸಿ ಎಂದು ಸರ್ಕಾರ ಆದೇಶ ನೀಡಿದೆ. ಈ ಸರ್ಕಾರದ ಆದೇಶವನ್ನು ಸಾಮೂಹಿಕವಾಗಿ ಒಪ್ಪಿಕೊಳ್ಳುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಭರವಸೆಗಳು ಸಿಗುತ್ತವೆ ಎಂಬ ನಿರೀಕ್ಷೆಯಲ್ಲಿದ್ದೇವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅನಿರ್ದಿಷ್ಟ ಅವಧಿಯ ಮುಷ್ಕರವನ್ನು ವಾಪಸ್ ಪಡೆದಿದ್ದೇವೆ ಎಂದು ಮಾಹಿತಿ

ಸರಕಾರಿ ನೌಕರರ ಸಂಘದ ಮುಷ್ಕರ ವಾಪಸ್ Read More »

ಕರ್ನಾಟಕ

ಮಾಜಿ ಪ್ರಧಾನಿ ಎಚ್​​.ಡಿ. ದೇವೇಗೌಡ ಆಸ್ಪತ್ರೆಗೆ ದಾಖಲು        

(ನ್ಯೂಸ್ ಕಡಬ)newskadaba.com  ಬೆಂಗಳೂರು, ಮಾ.01. ಮಾಜಿ ಪ್ರಧಾನಿ ಎಚ್​​.ಡಿ. ದೇವೇಗೌಡ ಅವರು ಅನಾರೋಗ್ಯ ಹಿನ್ನೆಲೆಯಲ್ಲಿ ಮಂಗಳವಾರ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಎಚ್ ಡಿಡಿ ಅವರು ಕಾಲುನೋವಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ದೇವೇಗೌಡರ ಆರೋಗ್ಯ ಸ್ಥಿತಿ ಅಷ್ಟೊಂದು ಉತ್ತಮವಾಗಿಲ್ಲ ಎಂದು ಎರಡು ದಿನಗಳ ಹಿಂದೆಯೇ ಕುಮಾರಸ್ವಾಮಿ ತಿಳಿಸಿದ್ದರು. ಹಾಸನ ಕ್ಷೇತ್ರದ ಟಿಕೆಟ್ ಹಂಚಿಕೆ ಬಗ್ಗೆ ದೇವೇಗೌಡರ ಸಮ್ಮುಖದಲ್ಲಿ ನಿರ್ಧಾರ ಕೈಗೊಳ್ಳುತ್ತೇವೆ. ಈ ವಿಚಾರವಾಗಿ ದೇವೇಗೌಡರಿಗೆ ಹೆಚ್ಚಿನ ಹೊರೆ ನೀಡುವುದು ತನಗಿಷ್ಟವಿಲ್ಲ. ದೇವೇಗೌಡರ ಆರೋಗ್ಯವೇ ಮುಖ್ಯ ಎಂದು ಕುಮಾರಸ್ವಾಮಿ ಹೇಳಿದ್ದರು.

ಮಾಜಿ ಪ್ರಧಾನಿ ಎಚ್​​.ಡಿ. ದೇವೇಗೌಡ ಆಸ್ಪತ್ರೆಗೆ ದಾಖಲು         Read More »

ಕರ್ನಾಟಕ

ಸರ್ಕಾರಿ ನೌಕರರ ವೇತನ ಶೇ.17ರಷ್ಟು ಹೆಚ್ಚಳ ಮಾಡಲು ಆದೇಶ 

(ನ್ಯೂಸ್ ಕಡಬ)newskadaba.com ಬೆಂಗಳೂರು, ಮಾ.01. ಸರ್ಕಾರಿ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಹಣಕಾಸು ಇಲಾಖೆ ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಡೆಸಿದ್ದು, ಸರ್ಕಾರಿ ನೌಕರರ ವೇತನ ಶೇ.17ರಷ್ಟು ಹೆಚ್ಚಳ ಮಾಡಲು ಆದೇಶ ಹೊರಡಿಸಲಾಗಿದೆ. ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, ಸರ್ಕಾರಿ ನೌಕರರ ವೇತನ ಶೇ.17ರಷ್ಟು ಹೆಚ್ಚಳ ಮಾಡಲು ನಿರ್ಧರಿಸಲಾಗಿದ್ದು, ಈ ಕುರಿತು ಆದೇಶ ಹೊರಡಿಸಲಾಗುವುದು ಎಂದು ಹೇಳಿದರು.  

ಸರ್ಕಾರಿ ನೌಕರರ ವೇತನ ಶೇ.17ರಷ್ಟು ಹೆಚ್ಚಳ ಮಾಡಲು ಆದೇಶ  Read More »

ಕರ್ನಾಟಕ

ನೌಕರರಿಂದ ಮುಷ್ಕರಕ್ಕೆ ಕರೆ ,ತುರ್ತು ಸಭೆ ಕರೆದ ಮುಖ್ಯಮಂತ್ರಿ

(ನ್ಯೂಸ್ ಕಡಬ)newskadaba.com ಬೆಂಗಳೂರು, ಮಾ.01. ಇಂದು ನೌಕರರ ಸಂಗದಿಂದ ಪ್ರತಿಭಟನೆಯನ್ನು ಕೈಗೊಂಡಿದ್ದೂ ನಅಳೆ ನೌಕರರು ಮುಷ್ಟರಕ್ಕೆ ಕರೆಕೊಟ್ಟಿರುವ ಹಿನ್ನಲೆ ದಿಕ್ಕು ತೋಚದಂತಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗೃಹ ಕಛೆರಿ ಕೃಷ್ನಾದಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಲಿದ್ದಾರೆ. ಇನ್ನ ಈ ಸಭೆಯಲ್ಲಿ ಎಲ್ಲಾ ಇಲಾಖೆಗೆ ಸಂಬಂಧಪಟ್ಟ ಸಚಿವರು ಮತ್ತ ಸರ್ಕಾರಿ ಅಧಿಕಾರಿಗಳು ಭಾಗಿಯಅಗಲಿದ್ದಾರೆ ಇನ್ನು ಬಲ್ಲ ಮಾಹಿತಿ ಪ್ರಕಾರ ಗೃಹ ಮಂತ್ರಿ ಅರಗ ಜ್ಞಾನೆಂದ್ರ ಗೋವಿಂದ ಕಾರಜೋಳ. ತೋಟಗಾರಿಕೆ ಸಚಿವ ಮುನಿರತ್ನ ಸಭೇಯಲ್ಲಿ ಭಾಗವಹಿಸಲಿದ್ದಾರೆ.

ನೌಕರರಿಂದ ಮುಷ್ಕರಕ್ಕೆ ಕರೆ ,ತುರ್ತು ಸಭೆ ಕರೆದ ಮುಖ್ಯಮಂತ್ರಿ Read More »

ಕರ್ನಾಟಕ

ಇಂದು ಸರಕಾರಿ ಕಚೇರಿ ಬಂದ್     ➤ ಮುಷ್ಕರ ನಿರ್ಧಾರ  ಹಿಂದಕ್ಕೆ ಪಡೆಯದ  ರಾಜ್ಯ ಸರ್ಕಾರಿ ನೌಕರರ ಸಂಘ

(ನ್ಯೂಸ್ ಕಡಬ)newskadaba.com  ಬೆಂಗಳೂರು, ಮಾ.01. ಇಂದಿನಿಂದ  ಅನಿರ್ದಿಷ್ಟಾವಧಿ ಅವಧಿ ಮುಷ್ಕರಕ್ಕೆ ಕರೆ ನೀಡಿರುವ  ಸಂಘ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜೊತೆಗಿನ ಸಭೆ ವಿಫಲ. ನಡುರಾತ್ರಿ ನಡೆದ ಸಭೆಯಲ್ಲಿ ಸರ್ಕಾರದ ಭರವಸೆ ಒಪ್ಪದ ಸಂಘದ ಪ್ರಮುಖರು ಎಂದು ವರದಿಯಾಗಿದೆ. ಹೀಗಾಗಿ ಇಂದು ಮುಷ್ಕರ ನಡೆಸಲು ನಿರ್ಧಾರ ಮಾಡಿದ್ದು,  ರಾಜ್ಯ ವ್ಯಾಪಿ 22 ಇಲಾಖೆಗಳ 5.30 ಲಕ್ಷ ಸರ್ಕಾರಿ ನೌಕರರು ಮುಷ್ಕರದಲ್ಲಿ ಭಾಗಿಯಾಗಿದ್ದಾರೆ.  

ಇಂದು ಸರಕಾರಿ ಕಚೇರಿ ಬಂದ್     ➤ ಮುಷ್ಕರ ನಿರ್ಧಾರ  ಹಿಂದಕ್ಕೆ ಪಡೆಯದ  ರಾಜ್ಯ ಸರ್ಕಾರಿ ನೌಕರರ ಸಂಘ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಅಕ್ರಮ ನರಿ ಸಾಕಾಣೆ       ➤ಆರೋಪಿ ಅರೆಸ್ಟ್..!

(ನ್ಯೂಸ್ ಕಡಬ)newskadaba.com ಬೆಂಗಳೂರು, ಫೆ.28. ನರಿಯನ್ನ ಅಕ್ರಮವಾಗಿ ಸಾಕಿದ್ದ ಆರೋಪಿಯನ್ನು ಅರಣ್ಯ ಅಧಿಕಾರಿಗಳು ಬಂಧಿಸಿದ್ದಾರೆ. ಲಕ್ಷ್ಮಿಕಾಂತ್ (42) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿ ಲಕ್ಷ್ಮಿಕಾಂತ್ ಏಳು ತಿಂಗಳ ಹಿಂದೆ ನರಿಯನ್ನು ಅರಣ್ಯದಿಂದ ಹಿಡಿದು ತಂದಿದ್ದ. ಬಳಿಕ ತನ್ನ ಕೋಳಿ ಫಾರಂನ ಪಂಜರದಲ್ಲಿ ನರಿಯನ್ನ ಸಾಕಿಕೊಂಡಿದ್ದ.  

ಅಕ್ರಮ ನರಿ ಸಾಕಾಣೆ       ➤ಆರೋಪಿ ಅರೆಸ್ಟ್..! Read More »

ಕರ್ನಾಟಕ, ಕ್ರೈಮ್ ನ್ಯೂಸ್

ಇಂದು ಬೆಂಗಳೂರಿಗೆ ಉಪರಾಷ್ಟ್ರಪತಿ ಭೇಟಿ

(ನ್ಯೂಸ್ ಕಡಬ)newskadaba.com ಬೆಂಗಳೂರು, ಫೆ.28. ಇಂದು ಉಪರಾಷ್ಟ್ರಪತಿ ಆಗಮನದಿಂದ ಬೆಂಗಳೂರು ನಗರದ ಕೆಲವು ರಸ್ತೆಗಳಲ್ಲಿ ಸಂಚಾರ ವ್ಯತ್ಯಯ ಆಗಲಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಸಹಕರಿಸುವಂತೆ ಮನವಿ ಸಂಚಾರಿ ಪೊಲೀಸರು ಮನವಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಹಲವು ರಸ್ತೆಗಳಲ್ಲಿ ಸಂಚಾರ ನಿರ್ಬಂಧ ವಿಧಿಸಲಾಗಿದೆ. ಇಂದು ಸಂಜೆ 4 ರಿಂದ 6 ರವರೆಗೆ ಸಂಚಾರ ನಿಯಮ ಬದಲಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮನವಿ ನಗರ ಸಂಚಾರಿ ಪೊಲೀಸರು  ಮನವಿ ಮಾಡಿದ್ದಾರೆ.

ಇಂದು ಬೆಂಗಳೂರಿಗೆ ಉಪರಾಷ್ಟ್ರಪತಿ ಭೇಟಿ Read More »

ಕರ್ನಾಟಕ

ವಂಚನೆ ಪ್ರಕರಣ; ವಿದೇಶಿ ಪ್ರಜೆ ಅರೆಸ್ಟ್..!     

(ನ್ಯೂಸ್ ಕಡಬ)newskadaba.com ಬೆಂಗಳೂರು, ಫೆ.28. ದೇಶದಲ್ಲಿ ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗ ಕೊಡಿಸುವುದಾಗಿ ಅಮಾಯಕರನ್ನು ನಂಬಿಸಿ ವಿವಿಧ ಶುಲ್ಕಗಳ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಪಡೆದು ವಂಚಿಸಿದ್ದ ನೈಜೀರಿಯಾ ಪ್ರಜೆಯನ್ನು ಈಶಾನ್ಯ ಸೈಬರ್‌ ಕ್ರೈಂ ಠಾಣೆ ಪೊಲೀಸರು ಬಂಧಿಸಿದ್ದಾರೆ ಎಂದು ವರದಿ ತಿಳಿಸಿದೆ. ಬಂಧಿತ ಆರೋಪಿ ನೈಜೀರಿಯಾದ ನೋಕೊಚಾ ಕಾಸ್ಮೀರ್‌ ಇಕೆಂಬಾ ಎಂಬಾತನಿಂದ ಸಿಮ್‌ ಕಾರ್ಡ್‌ಗಳು, ಆರು ಮೊಬೈಲ್‌ ಫೋನ್‌ಗಳು, ಒಂದು ಲ್ಯಾಪ್‌ಟಾಪ್‌, ಎರಡು ಡೆಬಿಟ್‌ ಕಾರ್ಡ್‌ ಹಾಗೂ ಪಾಸ್‌ಪೋರ್ಟ್‌ ಜಪ್ತಿ ಮಾಡಲಾಗಿದೆ ಎನ್ನಲಾಗಿದೆ.  

ವಂಚನೆ ಪ್ರಕರಣ; ವಿದೇಶಿ ಪ್ರಜೆ ಅರೆಸ್ಟ್..!      Read More »

ಕರ್ನಾಟಕ, ಕ್ರೈಮ್ ನ್ಯೂಸ್
Scroll to Top