Bangalore

ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಯಾಣಿಕರ ಒಳ ಉಡುಪುವಿನಲ್ಲಿ 2.28 ಕೆ.ಜಿ ಚಿನ್ನ ಪತ್ತೆ

(ನ್ಯೂಸ್ ಕಡಬ)newskadaba.com ಬೆಂಗಳೂರು, ಏ.10. ದುಬೈಯಿಂದ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮೂವರು ಪ್ರಯಾಣಿಕರ ಒಳಉಡುಪಿನಲ್ಲಿ 2.28 ಕೆಜಿ ಚಿನ್ನ ಪತ್ತೆಯಾಗಿರುವ ಬಗ್ಗೆ ವರದಿಯಾಗಿದೆ. ಇವರು ಚಿನ್ನಸಾಗಾಟಕ್ಕೆಂದು ಒಳ ಉಡುಪು ತಯಾರಿ ಮಾಡಿದ್ದರು. ಒಬ್ಬಾತ 3 ಚಿನ್ನದ ಬಿಸ್ಕೆತ್ ಮತ್ತು ಇಬ್ಬರು ಚಿನ್ನದ ಪೇಸ್ಟ್ ನ್ನು ಬಚ್ಚಿಟ್ಟುಕೊಂಡು ದುಬೈಯಿಂದ ವಿಮಾನದಲ್ಲಿ ಕೆಂಪೇಗೌಡ ವಿಮಾನ ನಿಲ್ಧಾಣಕ್ಕೆ ಬಂದಿಳಿದ್ದರು ಎನ್ನಲಾಗಿದೆ.

ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಯಾಣಿಕರ ಒಳ ಉಡುಪುವಿನಲ್ಲಿ 2.28 ಕೆ.ಜಿ ಚಿನ್ನ ಪತ್ತೆ Read More »

ಕರ್ನಾಟಕ

ರಾಜ್ಯದಲ್ಲಿ `CNG-PNG’ ಅನಿಲ ದರಗಳು 7 ರೂ.ವರೆಗೆ ಇಳಿಕೆ!   ➤ ಕೇಂದ್ರ ಸರ್ಕಾರ ಪ್ರಕಟ  

(ನ್ಯೂಸ್ ಕಡಬ) newskadaba.com. ಬೆಂಗಳೂರು,ಏ.10. ಕೇಂದ್ರ ಸರ್ಕಾರವು ಸಾಂದ್ರಿಕೃತ ನೈಸರ್ಗಿಕ ಅನಿಲ (CNG) ಹಾಗೂ ಪೈಪ್ಡ್ ನೈಸರ್ಗಿಕ ಅನಿಲ (PNG) ದರ ಇಳಿಕೆ ಮಾಡಿದ ಬೆನ್ನಲ್ಲೇ ಕರ್ನಾಟಕದಲ್ಲೂ ಎರಡೂ ಅನಿಲಗಳ ದರ 6 ರಿಂದ 7 ರೂ. ನಷ್ಟು ಇಳಿಕೆಯಾಗಿದೆ. ಜಿಎಐಎಲ್ ಸಿಎನ್ ಜಿ ಹಾಗೂ ಪಿಎನ್ ಜಿ ಅನಿಲ ದರ ಇಳಿಕೆ ಬಗ್ಗೆ ಪ್ರಕಟಣೆ ಹೊರಡಿಸಿದ್ದು, ಬೆಂಗಳೂರು ಮತ್ತು ದಕ್ಷಿಣ ಕನ್ನಡದಲ್ಲಿ ಪಿಎನ್ ಜಿ ದರವನ್ನು 7 ರೂ.ಹಾಗೂ ಕಂಪನಿ ಕಾರ್ಯನಿರ್ವಹಿಸುವ ಇತರ ನಗರಗಳಲ್ಲಿ 6

ರಾಜ್ಯದಲ್ಲಿ `CNG-PNG’ ಅನಿಲ ದರಗಳು 7 ರೂ.ವರೆಗೆ ಇಳಿಕೆ!   ➤ ಕೇಂದ್ರ ಸರ್ಕಾರ ಪ್ರಕಟ   Read More »

ಕರ್ನಾಟಕ

ರಾಜ್ಯದ 20 ಜಿಲ್ಲೆಗಳಲ್ಲಿ ಮುಂದಿನ 24 ಗಂಟೆ ಮಳೆ ➤ ಹವಾಮಾನ ಇಲಾಖೆ

(ನ್ಯೂಸ್ ಕಡಬ)newskadaba.com ಬೆಂಗಳೂರು, ಏ. 08. ರಾಜ್ಯದ 20 ಜಿಲ್ಲೆಗಳಲ್ಲಿ ಮುಂದಿನ 24 ಗಂಟೆಗಳ ಕಾಲ ಮಳೆಯಾಗಲಿದ್ದು, ಜನರು ಎಚ್ಚರಿಕೆಯಿಂದ ಇರುವಂತೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹಾವೇರಿ, ಕೊಪ್ಪಳ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಬೆಳಗಾವಿ, ಧಾರವಾಡ, ಗದಗ, ರಾಯಚೂರು, ಬಳ್ಳಾರಿ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಶಿವಮೊಗ್ಗ ಜಿಲ್ಲೆ ಸೇರಿದಂತೆ ಹಲವು ಜಿಲ್ಲೆಗಳು ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಆಯಾಯ ಜಿಲ್ಲಾಧಿಕಾರಿಗಳಿಗೆ ಅಗತ್ಯ ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಗಿದೆ ಎಂದು ತಿಳಿಸಿದೆ. ಹಲವು ಜಿಲ್ಲೆಗಳಲ್ಲಿ ಮೋಡ

ರಾಜ್ಯದ 20 ಜಿಲ್ಲೆಗಳಲ್ಲಿ ಮುಂದಿನ 24 ಗಂಟೆ ಮಳೆ ➤ ಹವಾಮಾನ ಇಲಾಖೆ Read More »

ಕರ್ನಾಟಕ

ವಿಧಾನಸಭಾ ಚುನಾವಣಾ ಕಣಕ್ಕಿಳಿದ ರಾಜಕೀಯ ಪಕ್ಷಗಳ ‘ಸೈಬರ್‌ ಸೈನ್ಯಗಳು’

(ನ್ಯೂಸ್ ಕಡಬ)newskadaba.com ಬೆಂಗಳೂರು, ಏ.08. ಇಂದಿನ ಚುನಾವಣೆಗಳು ಕೇವಲ ಭಾಷಣ, ಸಮಾವೇಶ, ಮೈದಾನ ರಾಜಕಾರಣಕ್ಕಷ್ಟೇ ಸೀಮಿತವಾಗಿಲ್ಲ. ಕ್ರಿಯಾಶೀಲ ಮನಸ್ಸಿನ ಅದ್ಭುತ ಯೋಚನೆಗಳೂ ಪ್ರಮುಖ ಅಸ್ತ್ರಗಳಾಗಿ ಬಳಕೆಯಾಗುತ್ತವೆ. ಇಂತಹ ಪ್ರಬಲ ಅಸ್ತ್ರಗಳನ್ನು ಯಾವ ಸಮಯದಲ್ಲಿ ಬಳಸುತ್ತಾರೆ, ಅದರ ಪರಿಣಾಮಗಳು ಏನಾಗಬಹುದು ಎಂಬ ನಿಖರ ಲೆಕ್ಕಾಚಾರ ಇದ್ದರಷ್ಟೇ ಚುನಾವಣೆಗಳ ದಿಕ್ಕು– ದೆಸೆಗಳನ್ನು ಬದಲಿಸಲು ಸಾಧ್ಯ. ಇದೊಂದು ರೀತಿಯಲ್ಲಿ ‘ಮೈಂಡ್‌ ಗೇಮ್‌’. ಮಾಹಿತಿ ತಂತ್ರಜ್ಞಾನ ಇದಕ್ಕೆ ಪ್ರಮುಖ ವೇದಿಕೆ. ಸಾಮಾಜಿಕ ಜಾಲ ತಾಣಗಳು ಇದರ ‘ಅಸ್ತ್ರ’ಗಳು. ರಾಜ್ಯದಲ್ಲಿ ವಿಧಾನಸಭಾ ಚುನಾವಣಾ ಕಣಕ್ಕೆ

ವಿಧಾನಸಭಾ ಚುನಾವಣಾ ಕಣಕ್ಕಿಳಿದ ರಾಜಕೀಯ ಪಕ್ಷಗಳ ‘ಸೈಬರ್‌ ಸೈನ್ಯಗಳು’ Read More »

ಕರ್ನಾಟಕ

ಜಯಲಲಿತಾ ಅವರಿಂದ ಜಪ್ತಿ ಮಾಡಲಾಗಿದ್ದ ಆಸ್ತಿ ಹರಾಜು ➤ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ನೇಮಕ

(ನ್ಯೂಸ್ ಕಡಬ)newskadaba.com ಬೆಂಗಳೂರು, ಏ.08. 1996ರ ಅಕ್ರಮ ಆಸ್ತಿ ಪ್ರಕರಣದಲ್ಲಿ ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿವಂಗತ ಜೆ. ಜಯಲಲಿತಾ ಅವರಿಂದ ವಶಪಡಿಸಿಕೊಂಡ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಯನ್ನು ವಿಲೇವಾರಿ ಮಾಡಲು ರಾಜ್ಯ ಸರ್ಕಾರವು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ (ಎಸ್‌ಎಸ್‌ಪಿ) ಅನ್ನು ನೇಮಿಸಿದೆ. ಜಯಲಲಿತಾ ಮತ್ತು ಇತರರ ಪ್ರಕರಣದಲ್ಲಿ ವಶಪಡಿಸಿಕೊಂಡ ಆಸ್ತಿಗಳ ವಿಲೇವಾರಿ ಕುರಿತು ಕರ್ನಾಟಕ ರಾಜ್ಯದ ಪರವಾಗಿ ನಗರದ ವಿಶೇಷ ನ್ಯಾಯಾಲಯಕ್ಕೆ ಹಾಜರಾಗಲು ಕಿರಣ್ ಎಸ್ ಜವಳಿ ಅವರನ್ನು ಎಸ್‌ಪಿಪಿಯಾಗಿ ನೇಮಿಸಲಾಗಿದೆ.  

ಜಯಲಲಿತಾ ಅವರಿಂದ ಜಪ್ತಿ ಮಾಡಲಾಗಿದ್ದ ಆಸ್ತಿ ಹರಾಜು ➤ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ನೇಮಕ Read More »

ಕರ್ನಾಟಕ

ರೌಡಿಶೀಟ್‌ನಲ್ಲಿ ಫೈಟರ್‌ ರವಿ ಹೆಸರು ಮುಂದುವರಿಕೆಗೆ ಹೈಕೋರ್ಟ್ ತಡೆ

(ನ್ಯೂಸ್ ಕಡಬ)newskadaba.com ಬೆಂಗಳೂರು, ಏ.08. ರೌಡಿಶೀಟ್‌ ನಲ್ಲಿ ಫೈಟರ್ ರವಿ ಅಲಿಯಾಸ್ ಬಿ.ಎಂ ಮಲ್ಲಿಕಾರ್ಜುನ ಅವರ ಹೆಸರು ಮುಂದುವರಿಸುವುದಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ರೌಡಿ ಶೀಟ್‌ನಿಂದ ತಮ್ಮ ಹೆಸರು ತೆಗೆದುಹಾಕುವುದಕ್ಕೆ ಸಂಬಂಧಿಸಿದ ಮನವಿಯನ್ನು ತಿರಸ್ಕರಿದ್ದ ಪೊಲೀಸ್ ಇಲಾಖೆಯ ಕ್ರಮ ಪ್ರಶ್ನಿಸಿ ಫೈಟರ್ ರವಿ ಅಲಿಯಾಸ್ ಮಲ್ಲಿಕಾರ್ಜುನ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿ ವಿಚಾರಣೆ ನಡೆಸಿ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ಈ ಆದೇಶ ನೀಡಿದೆ.  

ರೌಡಿಶೀಟ್‌ನಲ್ಲಿ ಫೈಟರ್‌ ರವಿ ಹೆಸರು ಮುಂದುವರಿಕೆಗೆ ಹೈಕೋರ್ಟ್ ತಡೆ Read More »

ಕರ್ನಾಟಕ

ಅಪ್ರಾಪ್ತೆ ಮೇಲೆ ಅತ್ಯಾಚಾರ .!   ➤ ದೂರು ದಾಖಲು  

(ನ್ಯೂಸ್ ಕಡಬ)Newskadaba.com ಬೆಂಗಳೂರು,ಏ.07 ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಆಘಾತಕಾರಿ ಕೃತ್ಯವೊಂದು ನಡೆದಿದೆ. 16 ವರ್ಷದ ಬಾಲಕಿ ಮೇಲೆ ಶಾಲೆಯಲ್ಲೇ ಅತ್ಯಾಚಾರವೆಸಗಲಾಗಿದ್ದು, ಆರೋಪಿ ಧರಿಸಿದ್ದ ಹಳದಿ ಶರ್ಟ್ ಸಹಾಯದಿಂದ ಆತನನ್ನು ಈಗ ಬಂಧಿಸಲಾಗಿದೆ. ಬಾಲಕಿ ಪೋಷಕರು ಎಂ ಸಿ ಡಿ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸಂತ್ರಸ್ತೆ ಸೇರಿದಂತೆ ತಮ್ಮ ಇಬ್ಬರು ಮಕ್ಕಳೊಂದಿಗೆ ಅಲ್ಲಿಯೇ ವಾಸವಾಗಿದ್ದರು. ಶಾಲೆಯನ್ನು  ಕೆಲವು ದಿನಗಳಿಂದ ಮುಚ್ಚಲಾಗಿತ್ತು ಎನ್ನಲಾಗಿದ್ದು, ಘಟನೆ ನಡೆದ ದಿನ ಪೋಷಕರು ಮಕ್ಕಳನ್ನು ಬಿಟ್ಟು ವೇತನ ಪಡೆಯಲು ಹೊರ ಹೋಗಿದ್ದರು.ಈ ವೇಳೆ ಕಳ್ಳತನ ಮಾಡಲು ಅಲ್ಲಿಗೆ

ಅಪ್ರಾಪ್ತೆ ಮೇಲೆ ಅತ್ಯಾಚಾರ .!   ➤ ದೂರು ದಾಖಲು   Read More »

ಕರ್ನಾಟಕ

ಕ್ಷುಲ್ಲಕ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆ.!   ➤ ದೂರು ದಾಖಲು

(ನ್ಯೂಸ್ ಕಡಬ)Newskadaba.com ಬೆಂಗಳೂರು,ಏ.07 ಚಿಕ್ಕ ಮಕ್ಕಳು ಚಾಕೋಲೆಟ್(chocolate), ಚಿಪ್ಸ್ ಸೇರಿದಂತೆ ತಿಂಡಿ ತಿನಿಸುಗಳಿಗೆ ಹಠ ಮಾಡುವುದು ಸಹಜ.ಆದರೆ ಇಲ್ಲೊಬ್ಬಳು ಮಹಿಳೆ ಪತಿ ಚಾಕೊಲೇಟ್ ತಂದು ಕೊಡಲಿಲ್ಲ ಎಂದು ಬೇಸತ್ತು ನೇಣಿಗೆ ಶರಣಾಗಿದ್ದಾಳೆ. ಈ ಘಟನೆ ಬೆಂಗಳೂರಿನ ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ನಂದಿನಿ‌(30) ನೇಣಿ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಮಹಿಳೆ.  

ಕ್ಷುಲ್ಲಕ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆ.!   ➤ ದೂರು ದಾಖಲು Read More »

ಕರ್ನಾಟಕ

ರಾಜ್ಯದಲ್ಲಿ ಅಮುಲ್ ಹಾಲಿನ ಉತ್ಪನ್ನ ಮಾರಾಟ   ➤ ಕನ್ನಡಿಗರ ಆಕ್ರೋಶ..!!

(ನ್ಯೂಸ್ ಕಡಬ)Newskadaba.com ಬೆಂಗಳೂರು,ಏ.07 ನಂದಿನಿ ಬ್ರಾಂಡ್ ಮೂಲಕ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟ ಮಾಡುತ್ತಿರುವ ಕೆಎಂಎಫ್ ಗೆ ಸೆಡ್ಡು ಹೊಡೆಯಲು ಗುಜರಾತ್ ಮೂಲದ ಅಮುಲ್ ಮುಂದಾಗಿದೆ.ಆನ್ಲೈನ್ ಮೂಲಕ ಹಾಲು, ಮೊಸರು ವಿತರಣೆಗೆ ಗುಜಾರಾತ್ ನ ಅಮೂಲ್ ಸಜ್ಜಾಗಿದೆ. ಇದರ ವಿರುದ್ಧ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದು, ಸೇವ್ ನಂದಿನಿ ಅಭಿಯಾನ ಆರಂಭಿಸಿದ್ದಾರೆ. ಗೋ ಬ್ಯಾಕ್ ಅಮುಲ್ ಅಭಿಯಾನ ಆರಂಭಿಸಿರುವ ಕನ್ನಡಿಗರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.  

ರಾಜ್ಯದಲ್ಲಿ ಅಮುಲ್ ಹಾಲಿನ ಉತ್ಪನ್ನ ಮಾರಾಟ   ➤ ಕನ್ನಡಿಗರ ಆಕ್ರೋಶ..!! Read More »

ಕರ್ನಾಟಕ

ವಿದ್ಯುತ್ ಬಳಕೆದಾರರಿಗೆ ಗುಡ್ ನ್ಯೂಸ್   ➤ ನೀತಿ ಸಂಹಿತೆ ಪರಿಣಾಮ ದರ ಪರಿಷ್ಕರಣೆ ಮುಂದೂಡಿಕೆ..!!

(ನ್ಯೂಸ್ ಕಡಬ)Newskadaba.com ಬೆಂಗಳೂರು,ಏ.07  ರಾಜ್ಯ ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಕರ್ನಾಟಕ ವಿದ್ಯುತ್ಛಕ್ತಿ ನಿಯಂತ್ರಣ ಮಂಡಳಿ ವಿದ್ಯುತ್ ದರ ಪರಿಷ್ಕರಣೆ ಅನ್ವಯ ಹೊಸ ದರಗಳ ಪ್ರಕಟಣೆಯನ್ನು ಮುಂದೂಡಿದೆ. ಕರ್ನಾಟಕ ವಿದ್ಯುತ್ಛಕ್ತಿ ನಿಯಂತ್ರಣ ಮಂಡಳಿ ಎಸ್ಕಾಂಗಳ ಬೇಡಿಕೆ ಮತ್ತು ಸಾರ್ವಜನಿಕರ ಅಭಿಪ್ರಾಯದ ನಂತರ ವಿದ್ಯುತ್ ದರ ಪರಿಷ್ಕರಣೆ ಮಾಡಿ ಹೊಸ ದರಗಳ ಪ್ರಕಟಣೆಗೆ ಮುಂದಾಗಿತ್ತು. ನೀತಿ ಸಂಹಿತೆ ಹಿನ್ನೆಲೆಯಲ್ಲಿ ಅದನ್ನು ಮುಂದೂಡಲಾಗಿದೆ ಎಂದು ಹೇಳಲಾಗಿದೆ.  

ವಿದ್ಯುತ್ ಬಳಕೆದಾರರಿಗೆ ಗುಡ್ ನ್ಯೂಸ್   ➤ ನೀತಿ ಸಂಹಿತೆ ಪರಿಣಾಮ ದರ ಪರಿಷ್ಕರಣೆ ಮುಂದೂಡಿಕೆ..!! Read More »

ಕರ್ನಾಟಕ
Scroll to Top