ರೌಡಿಶೀಟ್‌ನಲ್ಲಿ ಫೈಟರ್‌ ರವಿ ಹೆಸರು ಮುಂದುವರಿಕೆಗೆ ಹೈಕೋರ್ಟ್ ತಡೆ

(ನ್ಯೂಸ್ ಕಡಬ)newskadaba.com ಬೆಂಗಳೂರು, ಏ.08. ರೌಡಿಶೀಟ್‌ ನಲ್ಲಿ ಫೈಟರ್ ರವಿ ಅಲಿಯಾಸ್ ಬಿ.ಎಂ ಮಲ್ಲಿಕಾರ್ಜುನ ಅವರ ಹೆಸರು ಮುಂದುವರಿಸುವುದಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.

ರೌಡಿ ಶೀಟ್‌ನಿಂದ ತಮ್ಮ ಹೆಸರು ತೆಗೆದುಹಾಕುವುದಕ್ಕೆ ಸಂಬಂಧಿಸಿದ ಮನವಿಯನ್ನು ತಿರಸ್ಕರಿದ್ದ ಪೊಲೀಸ್ ಇಲಾಖೆಯ ಕ್ರಮ ಪ್ರಶ್ನಿಸಿ ಫೈಟರ್ ರವಿ ಅಲಿಯಾಸ್ ಮಲ್ಲಿಕಾರ್ಜುನ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿ ವಿಚಾರಣೆ ನಡೆಸಿ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ಈ ಆದೇಶ ನೀಡಿದೆ.

 

Scroll to Top