Bangalore

ಬಿಜೆಪಿಯ 189 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

(ನ್ಯೂಸ್ ಕಡಬ)newskadaba.com ಬೆಂಗಳೂರು, ಏ.12. ರಾಜ್ಯ ವಿಧಾನಸಭಾ ಚುನಾವಣಾ ಹಿನ್ನೆಲೆ ಬಿಜೆಪಿ ತನ್ನ ಮೊದಲ ಹಂತದ 189 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ ಎಂದು ವರದಿ ತಿಳಿಸಿದೆ. ಬಿಜೆಪಿಯಿಂದ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡುವ ಸಂಬಂಧ ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಮಹತ್ವದ ಸಭೆ ನಡೆದಿತ್ತು. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಹಾಗೂ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ನೇತೃತ್ವದಲ್ಲಿ ಇಂದು ನವದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ನಡೆಯುತ್ತಿರುವ ಕೇಂದ್ರೀಯ ಚುನಾವಣಾ ಸಮಿತಿ […]

ಬಿಜೆಪಿಯ 189 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ Read More »

ಕರ್ನಾಟಕ

ನಾಳೆಯಿಂದ ವಿಧಾನಸಭೆ ಚುನಾವಣೆಯ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭ

(ನ್ಯೂಸ್ ಕಡಬ)newskadaba.com ಬೆಂಗಳೂರು, ಏ.12. ರಾಜ್ಯದಲ್ಲಿ ಮೇ. 10ರಂದು ನಡೆಯಲಿರುವ ಚುನಾವಣೆಗೆ ನಾಳೆ ಅಧಿಸೂಚನೆ ಹೊರಬೀಳಲಿದ್ದು, (ನಾಳೆ)ಯಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಲಿದೆ. ಇದರೊಂದಿಗೆ ವಿಧಾನಸಭೆ ಚುನಾವಣೆಯ ಅಧಿಕೃತ ಪ್ರಕ್ರಿಯೆಗಳು ಆರಂಭವಾಗಲಿವೆ. ಏ.20 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಏ.21ರಂದು ನಾಮಪತ್ರಗಳ ಪರಿಶೀಲನೆ ಕಾರ್ಯ ನಡೆಯಲಿದ್ದು, ಉಮೇದುವಾರಿಕೆ ವಾಪಾಸ್‌ ಪಡೆಯಲು ಏ.24ರಂದು ಕೊನೆಯ ದಿನವಾಗಿದೆ. ಮೇ.10 ಕ್ಕೆ ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ಹಾಗೂ ಫಲಿತಾಂಶ ಪ್ರಕಟವಾಗಲಿದೆ.

ನಾಳೆಯಿಂದ ವಿಧಾನಸಭೆ ಚುನಾವಣೆಯ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭ Read More »

ಕರ್ನಾಟಕ

‘ಮೊದಲ ಪಟ್ಟಿಯೇ ಗೆಲುವಿನ ದಿಕ್ಸೂಚಿ’ ➤ ಸಿಎಂ ಬೊಮ್ಮಾಯಿ

(ನ್ಯೂಸ್ ಕಡಬ)newskadaba.com ಬೆಂಗಳೂರು, ಏ.12. ಪಕ್ಷದ ವತಿಯಿಂದ ಬಿಡುಗಡೆ ಮಾಡಿರುವ 189 ಅಭ್ಯರ್ಥಿಗಳ ಮೊದಲ ಪಟ್ಟಿಯೇ ಗೆಲುವಿನ ದಿಕ್ಸೂಚಿಯಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 189 ಅಭ್ಯರ್ಥಿಗಳಲ್ಲಿ ಹೊಸ ಮುಖ ತರುವ ನಿಟ್ಟಿನಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಮೊದಲ ಪಟ್ಟಿ ನೋಡಿದರೆ ಈ ಬಾರಿ ಬಿಜೆಪಿ ಮತ್ತೊಮ್ಮೆ ಗೆಲುವು ಸಾಧಿಸುವ ದಿಕ್ಸೂಚಿ ಆಗಿದೆ ಎಂದರು. ಇನ್ನೆರಡು ದಿನಗಳಲ್ಲಿ ಎರಡನೇ ಪಟ್ಟಿ ಬಿಡುಗಡೆ ಆಗಲಿದೆ ಎಂದು ತಿಳಿಸಿದ್ದಾರೆ.

‘ಮೊದಲ ಪಟ್ಟಿಯೇ ಗೆಲುವಿನ ದಿಕ್ಸೂಚಿ’ ➤ ಸಿಎಂ ಬೊಮ್ಮಾಯಿ Read More »

ಕರ್ನಾಟಕ

ಕಾರು ಪಾರ್ಕಿಂಗ್ ವಿಚಾರಕ್ಕೆ ಚಾಲಕ ಹಾಗೂ ಟ್ರಾಫಿಕ್ ನಡುವೆ ವಾಗ್ವಾದ..!   ➤ಚಾಲಕನ ಜೊತೆ ಅನುಚಿತ ವರ್ತನೆ ಮಾಡಿದ  ‘ಟ್ರಾಫಿಕ್ ಪೊಲೀಸ್’.!

(ನ್ಯೂಸ್ ಕಡಬ)Newskadaba.com ಬೆಂಗಳೂರು,ಏ.11 ಚಾಲಕನೋರ್ವ ಕನ್ನಡದಲ್ಲಿ ಮಾತನಾಡದಿದ್ದಕ್ಕೆ ಟ್ರಾಫಿಕ್ ಪೊಲೀಸ್ ಒಬ್ಬರು ಚಾಲಕನ ಜೊತೆ ಅನುಚಿತವಾಗಿ ವರ್ತಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಈ ಘಟನೆ ನಡೆದಿದ್ದು, ಕಾರು ಚಾಲಕ ವಿಕ್ರಮ್ ಅನ್ಸಾರಿ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.ಕಾರು ಪಾರ್ಕಿಂಗ್ ವಿಚಾರಕ್ಕೆ ಚಾಲಕ ಹಾಗೂ ಟ್ರಾಫಿಕ್ ನಡುವೆ ವಾಗ್ವಾದ ನಡೆದಿದೆ ಎನ್ನಲಾಗಿದೆ.    

ಕಾರು ಪಾರ್ಕಿಂಗ್ ವಿಚಾರಕ್ಕೆ ಚಾಲಕ ಹಾಗೂ ಟ್ರಾಫಿಕ್ ನಡುವೆ ವಾಗ್ವಾದ..!   ➤ಚಾಲಕನ ಜೊತೆ ಅನುಚಿತ ವರ್ತನೆ ಮಾಡಿದ  ‘ಟ್ರಾಫಿಕ್ ಪೊಲೀಸ್’.! Read More »

ಕರ್ನಾಟಕ

ಸ್ವಯಂಪ್ರೇರಿತ ರಾಜೀನಾಮೆ ನೀಡುವ ಉದ್ಯೋಗಿಗಳಿಗೆ 1 ವರ್ಷದ ವೇತನ ಘೋಷಿಸಿದ ಕಂಪನಿಗಳು..!

(ನ್ಯೂಸ್ ಕಡಬ)Newskadaba.com ಬೆಂಗಳೂರು,ಏ.11  ಸ್ವಯಂಪ್ರೇರಣೆಯಿಂದ ರಾಜೀನಾಮೆ ನೀಡುವ ಉದ್ಯೋಗಿಗಳಿಗೆ ಕೆಲವು ಕಂಪನಿಗಳು 1 ವರ್ಷದ ವೇತನ ನೀಡೋದಾಗಿ ಘೋಷಿಸಿವೆ. ಅಮೆಜಾನ್‌ನಲ್ಲಿ 5-8 ವರ್ಷಗಳ ಅನುಭವ ಹೊಂದಿರುವ ಕೆಲವು ಹಿರಿಯ ಮ್ಯಾನೇಜರ್‌ಗಳು ಸ್ವಯಂಪ್ರೇರಣೆಯಿಂದ ರಾಜೀನಾಮೆ ನೀಡಿದರೆ ಒಂದು ವರ್ಷದ ಸಂಬಳದ ಬೇರ್ಪಡಿಕೆ ಪ್ಯಾಕೇಜ್‌ಗೆ ಅರ್ಹರಾಗಿರುತ್ತಾರೆ. ಕಂಪನಿಯು ‘ನಿರ್ಗಮಿಸುವ ಉದ್ಯೋಗಿಗಳಿಗೆ ರಜೆಯನ್ನು ನೀಡುತ್ತಿದೆ, ಆದ್ದರಿಂದ ಅವರ ಷೇರುಗಳನ್ನು ಬೋನಸ್‌ಗಳಾಗಿ ಇರಿಸಬಹುದು ಮತ್ತು ಪಾವತಿಸಬಹುದು’.  

ಸ್ವಯಂಪ್ರೇರಿತ ರಾಜೀನಾಮೆ ನೀಡುವ ಉದ್ಯೋಗಿಗಳಿಗೆ 1 ವರ್ಷದ ವೇತನ ಘೋಷಿಸಿದ ಕಂಪನಿಗಳು..! Read More »

ಕರ್ನಾಟಕ

ಠಾಣೆಗೆ ದೂರು ನೀಡಲು ಬಂದ ಮಹಿಳೆಯ ಜತೆ ಅನುಚಿತವಾಗಿ ವರ್ತಿಸಿದ SI..!!*  

(ನ್ಯೂಸ್ ಕಡಬ)Newskadaba.com ಬೆಂಗಳೂರು,ಏ.11  ದೂರು ನೀಡಲು ಬಂದ ಮಹಿಳೆಯ ಜತೆ ಅನುಚಿತವಾಗಿ ವರ್ತಿಸಿದ ಆರೋಪ, ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆಯ ಸಬ್​ ಇನ್ಸ್​ಪೆಕ್ಟರ್ ವಿರುದ್ಧ ಕೇಳಿಬಂದಿದೆ. ​ವರದಕ್ಷಿಣೆ ಪ್ರಕರಣ ಸಂಬಂಧ ಮಹಿಳೆಯ ಹೇಳಿಕೆ ಪಡೆಯುವ ನೆಪದಲ್ಲಿ ಮಹಿಳೆಯ ಜತೆ ಎಸ್​ಐ ಮಂಜುನಾಥ ಸ್ವಾಮಿ ಅನುಚಿತವಾಗಿ ವರ್ತಿಸಿದ್ದಾರೆ ಎನ್ನಲಾಗಿದೆ. ಮಹಿಳೆಯ ಅನುಮತಿ ಇಲ್ಲದೆ ಎಲ್ಲೆಂದರಲ್ಲಿ ಮೈ-ಕೈ ಮುಟ್ಟಿ ಅಸಭ್ಯವಾಗಿ ವರ್ತಿಸಿರುವ ಆಪಾದನೆ ಇದೆ. ಠಾಣೆಯಲ್ಲಿ ಮಾತ್ರವಲ್ಲದೆ, ವಾಟ್ಸ್​ಆಯಪ್​ ಮೆಸೇಜ್ ಮೂಲಕವೂ ಕಿರುಕುಳ ನೀಡುತ್ತಿದ್ದಾರೆ ಎಂದು ಸಂತ್ರಸ್ತ ಮಹಿಳೆ ಆರೋಪಿಸಿದ್ದಾರೆ. ಮನೆಗೆ

ಠಾಣೆಗೆ ದೂರು ನೀಡಲು ಬಂದ ಮಹಿಳೆಯ ಜತೆ ಅನುಚಿತವಾಗಿ ವರ್ತಿಸಿದ SI..!!*   Read More »

ಕರ್ನಾಟಕ

ಚುನಾವಣೆ ಹೊತ್ತಲ್ಲಿ ಉದ್ಭವಿಸಿದ ನಂದಿನಿ-ಅಮೂಲ್ ವಿವಾದ.! ➤ಅಮುಲ್ಗಿಂತ ನಂದಿನಿ ಹಾಲಿನ ಬ್ರಾಂಡ್ ಉತ್ತಮ ಎಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್!

ನ್ಯೂಸ್ ಕಡಬ)Newskadaba.com ಬೆಂಗಳೂರು,ಏ.11 ತಿರುಮಲ ತಿರುಪತಿ ದೇವಸ್ಥಾನಕ್ಕೆ ಅಪಾರ ದೇಣಿಗೆ ನೀಡಲು ಭಕ್ತರೊಬ್ಬರು ಮುಂದೆ ಬಂದಿದ್ದು, 262 ಎಕರೆ ಜಮೀನು ನೀಡುವುದಾಗಿ ತಿಳಿಸಿದ್ದಾ ಬೆಂಗಳೂರು ಮೂಲಕದ ಮುರಳಿಕೃಷ್ಣ ಎಂಬವರು ತಿರುಪತಿ ಜಿಲ್ಲೆಯ ಡಕ್ಕಿಲಿ ಮಂಡಲದ ರೇಗಾಡಿಪಲ್ಲಿ ಮತ್ತು ನೆಲ್ಲೂರು ಜಿಲ್ಲೆಯ ಸೈದಾಪುರಂ ಮಂಡಲದ ಪೋತೆಗುಂಟಾದಲ್ಲಿ 262 ಎಕರೆ ಜಮೀನು ಹೊಂದಿದ್ದಾರೆ.  

ಚುನಾವಣೆ ಹೊತ್ತಲ್ಲಿ ಉದ್ಭವಿಸಿದ ನಂದಿನಿ-ಅಮೂಲ್ ವಿವಾದ.! ➤ಅಮುಲ್ಗಿಂತ ನಂದಿನಿ ಹಾಲಿನ ಬ್ರಾಂಡ್ ಉತ್ತಮ ಎಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್! Read More »

ಕರ್ನಾಟಕ

PSI ಹಗರಣದಲ್ಲಿ ಭಾಗಿಯಾದವರ ಬಗ್ಗೆ ವರದಿ ಕೇಳಿದ ಹೈಕೋರ್ಟ್

(ನ್ಯೂಸ್ ಕಡಬ)newskadaba.com ಬೆಂಗಳೂರು, ಏ.11. ಕರ್ನಾಟಕ ಪೊಲೀಸ್ ಇಲಾಖೆಯಲ್ಲಿನ 545 ಪಿಎಸ್ಐ ಹುದ್ದೆಗಳ ಭರ್ತಿಗಾಗಿ ನಡೆದಿದ್ದ ನೇಮಕಾತಿ ಪ್ರಕ್ರಿಯೆಯಲ್ಲಿನ ಹಗರಣ ಸಂಬಂಧ ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ. ಇದನ್ನು ಪ್ರಶ್ನಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್, ಹಗರಣದಲ್ಲಿ ಭಾಗಿಯಾದವರ ವರದಿ ನೀಡುವಂತೆ ಸೂಚಿಸಿದೆ. ಅರ್ಜಿ ಸಲ್ಲಿಸಿರುವ 145 ಜನರಲ್ಲಿ ಯಾರೆಲ್ಲಾ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಜೂನ್ 15ರೊಳಗೆ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ವಿಭಾಗೀಯ ಪೀಠ ನಿರ್ದೇಶಿಸಿದೆ. ಕರ್ನಾಟಕ ಪೊಲೀಸ್ ಇಲಾಖೆಯಲ್ಲಿನ 545 ಪಿಎಸ್ಐ ಹುದ್ದೆಗಳ

PSI ಹಗರಣದಲ್ಲಿ ಭಾಗಿಯಾದವರ ಬಗ್ಗೆ ವರದಿ ಕೇಳಿದ ಹೈಕೋರ್ಟ್ Read More »

ಕರ್ನಾಟಕ

ತಿರುಪತಿ ತಿಮ್ಮಪ್ಪನಿಗೆ 250 ಎಕರೆ ಭೂಮಿ ದಾನ ನೀಡಿದ  ವೆಂಕಟೇಶ್ವರ ಸ್ವಾಮಿ ಭಕ್ತ..!

(ನ್ಯೂಸ್ ಕಡಬ)Newskadaba.com ಬೆಂಗಳೂರು,ಏ.11 ತಿರುಮಲ ತಿರುಪತಿ ದೇವಸ್ಥಾನಕ್ಕೆ ಅಪಾರ ದೇಣಿಗೆ ನೀಡಲು ಭಕ್ತರೊಬ್ಬರು ಮುಂದೆ ಬಂದಿದ್ದು, 262 ಎಕರೆ ಜಮೀನು ನೀಡುವುದಾಗಿ ತಿಳಿಸಿದ್ದಾರೆ. ಬೆಂಗಳೂರು ಮೂಲಕದ ಮುರಳಿಕೃಷ್ಣ ಎಂಬವರು ತಿರುಪತಿ ಜಿಲ್ಲೆಯ ಡಕ್ಕಿಲಿ ಮಂಡಲದ ರೇಗಾಡಿಪಲ್ಲಿ ಮತ್ತು ನೆಲ್ಲೂರು ಜಿಲ್ಲೆಯ ಸೈದಾಪುರಂ ಮಂಡಲದ ಪೋತೆಗುಂಟಾದಲ್ಲಿ 262 ಎಕರೆ ಜಮೀನು ಹೊಂದಿದ್ದಾರೆ.  

ತಿರುಪತಿ ತಿಮ್ಮಪ್ಪನಿಗೆ 250 ಎಕರೆ ಭೂಮಿ ದಾನ ನೀಡಿದ  ವೆಂಕಟೇಶ್ವರ ಸ್ವಾಮಿ ಭಕ್ತ..! Read More »

ಕರ್ನಾಟಕ

ಚರಂಡಿಯಲ್ಲಿ ಸಿಕ್ಕ ಮೃತದೇಹದ ಕೇಸ್ ಗೆ ಟ್ವಿಸ್ಟ್.! ➤ ಯುವಕನಿಗೆ ಅಪಹರಿಸಿ ಹಲ್ಲೆ ನಡೆಸಿ ಹತ್ಯೆ

(ನ್ಯೂಸ್ ಕಡಬ)newskadaba.com ಬೆಂಗಳೂರು, ಏ.11. ಕಳ್ಳತನದ ಆರೋಪದಲ್ಲಿ ಯುವಕನನ್ನು ವಾರದ ಕಾಲ ಕೂಡಿ ಹಾಕಿ ಹಲ್ಲೆ ನಡೆಸಿ‌ ಕೊಲೆ ಮಾಡಿ ಚರಂಡಿಗೆ ಎಸೆದ ಅಮಾನವೀಯ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಚರಂಡಿಯಲ್ಲಿ ಸಿಕ್ಕ ಕೊಳೆತ ಮೃತದೇಹ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಸೈಫುಲ್ಲಾ(36) ಎಂಬುವನಿಗೆ ಕೊಲೆ ಮಾಡಿ ಚರಂಡಿಗೆ ಮೃತದೇಹ ಎಸೆದಿದ್ದ ಆರೋಪದಡಿ ಗುಜರಿ ಅಂಗಡಿ ಮಾಲೀಕ ಸೇರಿ ಮೂವರನ್ನು ರಾಮಮೂರ್ತಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪ್ರಶಾಂತ್, ಜಬಿ ಹಾಗೂ ಶಾಬಾಜ್ ಎಂಬಾತನನ್ನು ಬಂಧಿಸಲಾಗಿದೆ.

ಚರಂಡಿಯಲ್ಲಿ ಸಿಕ್ಕ ಮೃತದೇಹದ ಕೇಸ್ ಗೆ ಟ್ವಿಸ್ಟ್.! ➤ ಯುವಕನಿಗೆ ಅಪಹರಿಸಿ ಹಲ್ಲೆ ನಡೆಸಿ ಹತ್ಯೆ Read More »

ಕರ್ನಾಟಕ, ಕ್ರೈಮ್ ನ್ಯೂಸ್
Scroll to Top