Bangalore

ನ್ಯಾಯಸಮ್ಮತ ಚುನಾವಣೆಗಾಗಿ 10 ಪೊಲೀಸ್ ಅಧಿಕಾರಿಗಳ ವರ್ಗಾವಣೆ ..!   ➤ ಚುನಾವಣಾ ಆಯೋಗ ಆದೇಶ!

(ನ್ಯೂಸ್ ಕಡಬ)Newskadaba.com ಬೆಂಗಳೂರು,ಏ.18 ಮೇ 10 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯ “ಚುನಾವಣಾ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಮತ್ತು ನ್ಯಾಯಸಮ್ಮತ ಚುನಾವಣೆಗಾಗಿ” ಪೊಲೀಸ್ ಉಪ ಆಯುಕ್ತ ಸೇರಿದಂತೆ 10 ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಚುನಾವಣಾ ಆಯೋಗ ಆದೇಶಿಸಿದೆ ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ. ಡಿಸಿಪಿ(ಉತ್ತರ) ಬೆಂಗಳೂರು, ಯಶವಂತಪುರ ಮತ್ತು ಬೆಂಗಳೂರಿನ ಎಸಿಪಿ ಹಾಗೂ ನಾಲ್ವರು ಪೊಲೀಸ್ ಇನ್ಸ್ಪೆಕ್ಟರ್ಗಳು – ರಾಜರಾಜೇಶ್ವರಿ ನಗರ, ಯಶವಂತಪುರ, ನಂದಿನಿ ಲೇಔಟ್ ಪೊಲೀಸ್ ಠಾಣೆ ಮತ್ತು ರಾಜಗೋಪಾಲ್ ನಗರ […]

ನ್ಯಾಯಸಮ್ಮತ ಚುನಾವಣೆಗಾಗಿ 10 ಪೊಲೀಸ್ ಅಧಿಕಾರಿಗಳ ವರ್ಗಾವಣೆ ..!   ➤ ಚುನಾವಣಾ ಆಯೋಗ ಆದೇಶ! Read More »

ಕರ್ನಾಟಕ

43 ಅಭ್ಯರ್ಥಿಗಳ ಕಾಂಗ್ರೆಸ್‌ ನ ಮೂರನೇ ಪಟ್ಟಿ ರಿಲೀಸ್‌    ➤ ಕೋಲಾರದಿಂದ ಸಿದ್ದರಾಮಯ್ಯಗೆ ಟಿಕೆಟ್‌ ಇಲ್ಲ

(ನ್ಯೂಸ್ ಕಡಬ)newskadaba.com ಬೆಂಗಳೂರು, ಏ.15. ಕರ್ನಾಟಕ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‌ ಮೂರನೇ ಪಟ್ಟಿ ಬಿಡುಗಡೆ ಮಾಡಿದ್ದು, 43 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ ಎಂದು ವರದಿ ತಿಳಿಸಿದೆ. ಈಗಾಗಲೇ ಮೊದಲ ಪಟ್ಟಿಯಲ್ಲಿ 124 ಹಾಗೂ ಎರಡನೇ ಪಟ್ಟಿಯಲ್ಲಿ 42 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ್ದ ಕಾಂಗ್ರೆಸ್‌ ಈಗ 43 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸಿದ್ದು, ಇನ್ನು 15 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಬೇಕಿದೆ ಎಂದು ವರದಿಯಾಗಿದೆ.  

43 ಅಭ್ಯರ್ಥಿಗಳ ಕಾಂಗ್ರೆಸ್‌ ನ ಮೂರನೇ ಪಟ್ಟಿ ರಿಲೀಸ್‌    ➤ ಕೋಲಾರದಿಂದ ಸಿದ್ದರಾಮಯ್ಯಗೆ ಟಿಕೆಟ್‌ ಇಲ್ಲ Read More »

ಕರ್ನಾಟಕ

ನಟ ಚೇತನ್‌ ಅಹಿಂಸಾ ವೀಸಾ ರದ್ದು ಮಾಡಿದ ಕೇಂದ್ರ ಸರ್ಕಾರ

(ನ್ಯೂಸ್ ಕಡಬ)newskadaba.com ಬೆಂಗಳೂರು, ಏ.15. ಹಿಂದುಗಳನ್ನು ಕೆರಳಿಸುವಂಥ ಹೇಳಿಕೆಗಳನ್ನು ನೀಡುವ ಮೂಲಕವೇ ಸುದ್ದಿಯಾಗುತ್ತಿದ್ದ ನಟ ಚೇತನ್‌ ಅಹಿಂಸಾ ಅವರ ಸಾಗರೋತ್ತರ ವೀಸಾವನ್ನು ಕೇಂದ್ರ ಸರ್ಕಾರ ರದ್ದು ಮಾಡಿದೆ. ನಟ ಚೇತನ್ ವೀಸಾ ರದ್ದುಗೊಳಿಸಿ ಕೇಂದ್ರ ಗೃಹ ಇಲಾಖೆ ನೋಟಿಸ್‌ ಜಾರಿ ಮಾಡಿದೆ. ಸಾಗರೋತ್ತರ ಭಾರತೀಯ ನಾಗರೀಕ ವೀಸಾ ಹೊಂದಿದ್ದ ಚೇತನ್‌, ಹೋರಾಟದ ಮೂಲಕವೇ ಇಲ್ಲಿ ಸುದ್ದಿಯಾಗಿದ್ದರು. ಏಪ್ರಿಲ್ 14 ರಂದು, ಚೇತನ್ ಅವರು ಮಾರ್ಚ್ 28 ರಂದು ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿಯಿಂದ (FRRO) ಪತ್ರವನ್ನು ಸ್ವೀಕರಿಸಿದ್ದಾರೆ

ನಟ ಚೇತನ್‌ ಅಹಿಂಸಾ ವೀಸಾ ರದ್ದು ಮಾಡಿದ ಕೇಂದ್ರ ಸರ್ಕಾರ Read More »

ಕರ್ನಾಟಕ

ದಾಖಲೆ ಇಲ್ಲದೆ ಸಾಗಿಸುತ್ತಿದ್ದ 18 ಲಕ್ಷ ಹಣ ಜಪ್ತಿ

(ನ್ಯೂಸ್ ಕಡಬ)newskadaba.com ಬೆಂಗಳೂರು, ಏ.15. ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಚಾಣದ ಸದ್ದು‌ ಜೋರಾಗಿದೆ. ತಡರಾತ್ರಿ ಬಸವನಗುಡಿ ಪೊಲೀಸರು ದಾಖಲೆ ಇಲ್ಲದೆ ಸಾಗಿಸುತ್ತಿದ್ದ 18 ಲಕ್ಷ ಹಣವನ್ನ ಜಪ್ತಿ ಮಾಡಿದ್ದಾರೆ‌. ರಿಷಭ್ ಎಂಬಾತನಿಂದ ಹಣ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಹ್ಯುಂಡೈ ಕ್ರೆಟಾ ಕಾರಿನಲ್ಲಿ ಹೋಗುತ್ತಿದ್ದ ರಿಷಭ್ ಎಂಬಾತನನ್ನ ಪೊಲೀಸರು ತಡೆದು ಪರಿಶೀಲನೆ ನಡೆಸಿದ್ದರು. ಈ ವೇಳೆ 2 ಸಾವಿರ, 500 ಹಾಗೂ‌ 200 ರೂ. ಮುಖಬೆಲೆಯ ಒಟ್ಟು 18 ಲಕ್ಷ ರೂ‌ ನಗದು ಪತ್ತೆಯಾಗಿದೆ. ಸದ್ಯ

ದಾಖಲೆ ಇಲ್ಲದೆ ಸಾಗಿಸುತ್ತಿದ್ದ 18 ಲಕ್ಷ ಹಣ ಜಪ್ತಿ Read More »

ಕರ್ನಾಟಕ

ಆಸ್ಪತ್ರೆಗಳಲ್ಲಿ `ಮರಣ ಕಾರಣ’ ವೈದ್ಯಕೀಯ ಪ್ರಮಾಣಪತ್ರ ನೋಂದಣಿ ಕಡ್ಡಾಯ ➤ ರಾಜ್ಯ ಸರ್ಕಾರ ಸುತ್ತೋಲೆ

(ನ್ಯೂಸ್ ಕಡಬ)newskadaba.com ಬೆಂಗಳೂರು, ಏ.14. ರಾಜ್ಯದ ಎಲ್ಲಾ ಸರ್ಕಾರಿ/ಖಾಸಗಿ ಆಸ್ಪತ್ರೆಗಳಲ್ಲಿ ಮರಣ ಪ್ರಮಾಣ ಪತ್ರದಲ್ಲಿ `ಮರಣ ಕಾರಣ’ ಭರ್ತಿ ಮಾಡುವುದು ಕಡ್ಡಾಯ ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಎಲ್ಲಾ ವೈದ್ಯರು/ವೈದ್ಯ ವೃತ್ತಿಪರರು ಉಪಚರಿಸಿದ ವ್ಯಕ್ತಿಯು ಮೃತನಾದಲ್ಲಿ ಮೃತ ವ್ಯಕ್ತಿಯ ಮರಣ ಕಾರಣವನ್ನು ಮರಣ ಕಾರಣ ವೈದ್ಯಕೀಯ ಪಮಾಣ ಪತ್ರ (ನಮೂನೆ-4/4ಎ) ರಲ್ಲಿ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಿ ಜನನ, ಮರಣ ಮುಖ್ಯ ನೋಂದಣಾಧಿಕಾರಿಗಳ ಕಛೇರಿಗೆ ಸಲ್ಲಿಸುವುದು ಕಡ್ಡಾಯವಾಗಿರುತ್ತದೆ ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.  

ಆಸ್ಪತ್ರೆಗಳಲ್ಲಿ `ಮರಣ ಕಾರಣ’ ವೈದ್ಯಕೀಯ ಪ್ರಮಾಣಪತ್ರ ನೋಂದಣಿ ಕಡ್ಡಾಯ ➤ ರಾಜ್ಯ ಸರ್ಕಾರ ಸುತ್ತೋಲೆ Read More »

ಕರ್ನಾಟಕ

ಡ್ರಗ್ಸ್ ಬಗ್ಗೆ ಮತ್ತೊಂದು ವಿವಾದಾತ್ಮಕ ಪೋಸ್ಟ್ ➤ ಗಾಂಜಾ ಕೃಷಿಯನ್ನು ಕಾನೂನುಬದ್ಧಗೊಳಿಸಿ ಎಂದ ನಟ ಚೇತನ್

(ನ್ಯೂಸ್ ಕಡಬ)newskadaba.com ಬೆಂಗಳೂರು, ಏ.14. ಸದಾ ಒಂದಲ್ಲೊಂದು ವಿಚಾರ, ಟೀಕೆಗಳ ಮೂಲಕ ಸುದ್ದಿಯಾಗುವ ನಟ ಚೇತನ್ ಇದೀಗ ಮತ್ತೆ ಹೊಸ ವಿವಾದವೊಂದು ಸೃಷ್ಟಿಸಿದ್ದಾರೆ. ಹಿಮಾಚಲ ಮುಖ್ಯಮಂತ್ರಿ ಸುಖು ಗಾಂಜಾ ವಿಚಾರವಾಗಿ ಮಾತನಾಡಿದ್ದನ್ನು ಅನುಮೋದಿಸುವ ಮೂಲಕ ‘ಗಾಂಜಾ ಕೃಷಿಯನ್ನು ಕಾನೂನುಬದ್ಧಗೊಳಿಸಿ ಎಂದು ನಟ ಚೇತನ್ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ. ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಫೇಸ್ ಬುಕ್ ನಲ್ಲಿ ಬರೆದುಕೊಂಡ ಚೇತನ್, ಹಿಮಾಚಲದ ಮುಖ್ಯಮಂತ್ರಿಯ ನಡೆಯು ಒಳ್ಳೆಯದು ಕರ್ನಾಟಕವೂ ಇದರತ್ತ ಗಮನ ಹರಿಸುವ ಮೂಲಕ

ಡ್ರಗ್ಸ್ ಬಗ್ಗೆ ಮತ್ತೊಂದು ವಿವಾದಾತ್ಮಕ ಪೋಸ್ಟ್ ➤ ಗಾಂಜಾ ಕೃಷಿಯನ್ನು ಕಾನೂನುಬದ್ಧಗೊಳಿಸಿ ಎಂದ ನಟ ಚೇತನ್ Read More »

ಕರ್ನಾಟಕ

ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಡಿಸಿಎಂ ಲಕ್ಷ್ಮಣ ಸವದಿ ಕಾಂಗ್ರೆಸ್‌ ಗೆ ಸೇರ್ಪಡೆ

(ನ್ಯೂಸ್ ಕಡಬ)newskadaba.com ಬೆಂಗಳೂರು, ಏ.14. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ನಿರಾಕರಿಸಿದ ನಂತರ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ರಾಜೀನಾಮೆ ನೀಡಿದ ಎರಡು ದಿನಗಳ ನಂತರ ಕರ್ನಾಟಕದ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿ, ಸವದಿ ಅವರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ ಎಂದು ದೃಢಪಡಿಸಿದರು. ಮಾಜಿ ಬಿಜೆಪಿ ನಾಯಕ ಅಥಣಿ ವಿಧಾನಸಭಾ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದರು, ಆದರೆ ಹಾಲಿ ಶಾಸಕ ಮಹೇಶ್ ಕುಮಟಳ್ಳಿ ಅವರಿಗೆ ಟಿಕೆಟ್ ನೀಡಲಾಯಿತು.

ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಡಿಸಿಎಂ ಲಕ್ಷ್ಮಣ ಸವದಿ ಕಾಂಗ್ರೆಸ್‌ ಗೆ ಸೇರ್ಪಡೆ Read More »

ಕರ್ನಾಟಕ

ಕೆಟ್ಟು‌ ನಿಂತಿದ್ದ ಆಟೋದಲ್ಲಿ ಬರೊಬ್ಬರಿ 1 ಕೋಟಿ ರೂ.ಹಣ ಪತ್ತೆ

(ನ್ಯೂಸ್ ಕಡಬ)newskadaba.com ಬೆಂಗಳೂರು, ಏ.14. ಕೆಟ್ಟು ನಿಂತ ಆಟೋದಲ್ಲಿ ಬರೊಬ್ಬರಿ ಒಂದು ಕೋಟಿ ರೂ.‌ಹಣ ಪತ್ತೆಯಾದ ಘಟನೆ ಹಲಸೂರು ಗೇಟ್ ಪೊಲೀಸ್ ಠಾಣೆ ಬಳಿ ನಡೆದಿದೆ. ಠಾಣೆ ಬಳಿಯ ಚೆಕ್ ಪೋಸ್ಟ್ ಪಕ್ಕ ಆಟೋ ಕೆಟ್ಟು ನಿಂತ ಸಂದರ್ಭದಲ್ಲಿ ಪೊಲೀಸರು ಅನುಮಾನಗೊಂಡು ಪರಿಶೀಲನೆ ನಡೆಸಿದಾಗ ಘಟನೆ ಬೆಳಕಿಗೆ ಬಂದಿದೆ.

ಕೆಟ್ಟು‌ ನಿಂತಿದ್ದ ಆಟೋದಲ್ಲಿ ಬರೊಬ್ಬರಿ 1 ಕೋಟಿ ರೂ.ಹಣ ಪತ್ತೆ Read More »

ಕರ್ನಾಟಕ

PFI ನಿಷೇಧದ ವೇಳೆ ಬಂಧಿತ 8 ಮಂದಿಯ ಬಿಡುಗಡೆ

(ನ್ಯೂಸ್ ಕಡಬ)newskadaba.com ಬೆಂಗಳೂರು, ಏ.14. PFI ನಿಷೇಧದ ವೇಳೆ ಬಂಧಿತ 8 ಮಂದಿ ಆರೋಪಿಗಳಿಗೆ ಬೆಂಗಳೂರಿನ ಸಿಟಿ ಸಿವಿಲ್ ನ್ಯಾಯಾಲಯ ಜಾಮೀನು ನೀಡಿದೆ. ದೇಶಾದ್ಯಂತ ಪಿಎಫ್’ಐ ಕಚೇರಿ, ನಾಯಕರ ಮನೆ ಮೇಲೆ ದಾಳಿ ನಡೆಸಿದ ಎನ್ ಐಎ ಮತ್ತು ಸ್ಥಳೀಯ ಪೊಲೀಸರು ಹಲವರನ್ನು ಬಂಧಿಸಿದ್ದರು. ಕರ್ನಾಟಕದಲ್ಲಿ ಒಟ್ಟು 19 ಮಂದಿಯ ವಿರುದ್ಧ ಯುಎಪಿಎ ಮತ್ತು ಐಪಿಸಿ 153ಎ, 120ಬಿ ಸೆಕ್ಷನ್’ ಗಳಡಿ ಎಫ್’ಐಆರ್ ದಾಖಲಿಸಲಾಗಿತ್ತು. ಈ ಪೈಕಿ 15 ಮಂದಿಯನ್ನು ಬಂಧಿಸಲಾಗಿದೆ. ನಾಲ್ವರು ತಲೆಮರೆಸಿಕೊಂಡಿದ್ದಾರೆ ಎಂದು ಇತ್ತೀಚೆಗೆ

PFI ನಿಷೇಧದ ವೇಳೆ ಬಂಧಿತ 8 ಮಂದಿಯ ಬಿಡುಗಡೆ Read More »

ಕರ್ನಾಟಕ

ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭ ಹಿನ್ನೆಲೆ ➤ ಮೊದಲ ದಿನವೇ 221 ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ

(ನ್ಯೂಸ್ ಕಡಬ)newskadaba.com ಬೆಂಗಳೂರು, ಏ.14. ಚುನಾವಣೆಗೆ ಅಧಿಸೂಚನೆಯೊಂದಿಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. ಮೊದಲ ದಿನವೇ ರಾಜ್ಯಾದ್ಯಾಂತ 221 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಬಿಜೆಪಿಯ 27 ಅಭ್ಯರ್ಥಿಗಳು, ಕಾಂಗ್ರೆಸ್​ನ 26, ಎಎಪಿ 10, ಜೆಡಿಎಸ್​ 12, 45 ಸ್ವತಂತ್ರ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.ನೋಂದಾಯಿಯ ಮಾನ್ಯತೆ ಹೊಂದಿರದ ಪಕ್ಷಗಳು 100 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ ಎಂದು ವರದಿ ತಿಳಿಸಿದೆ. ಮೇ 10 ರಂದು ಮತದಾನ ಹಾಗೂ ಮೇ 13 ರಂದು ಮತ ಎಣಿಕೆ ಆರಂಭವಾಗುತ್ತದೆ. ಇನ್ನು ನಾಮಪತ್ರ ಸಲ್ಲಿಕೆಗೆ ಏಪ್ರಿಲ್​

ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭ ಹಿನ್ನೆಲೆ ➤ ಮೊದಲ ದಿನವೇ 221 ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ Read More »

ಕರ್ನಾಟಕ
Scroll to Top