Accident

ಸಾಗರ: ಖಾಸಗಿ ಬಸ್ – ಆಟೋ ರಿಕ್ಷಾ ಢಿಕ್ಕಿ ► ಐವರು ಮೃತ್ಯು, ಓರ್ವ ಗಂಭೀರ

(ನ್ಯೂಸ್ ಕಡಬ) newskadaba.com ಶಿವಮೊಗ್ಗ, ಆ.05. ಖಾಸಗಿ ಬಸ್ ಹಾಗೂ ಆಟೊ ನಡುವೆ ಢಿಕ್ಕಿ ಸಂಭವಿಸಿ ಆಟೊದಲ್ಲಿದ್ದ ಐದು ಮಂದಿ ಪ್ರಯಾಣಿಕರು ಸ್ಥಳದಲ್ಲಿಯೇ ಮೃತಪಟ್ಟು, ಓರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 206ರ ಸಾಗರ ತಾಲೂಕಿನ ಆನಂದಪುರ ಸಮೀಪದ ಆಚಾಪುರ ಎಂಬಲ್ಲಿ ಶನಿವಾರದಂದು ನಡೆದಿದೆ. ಮೃತಪಟ್ಟವರು ಆಟೊದಲ್ಲಿದ್ದ ತುಮಕೂರು ಜಿಲ್ಲೆ ಶಿರಾ ತಾಲೂಕಿನ ಭುವನಹಳ್ಳಿ ತಾವರೆಕೆರೆ ನಿವಾಸಿ ತಿಪ್ಪೇಸ್ವಾಮಿ, ಕುಮಾರ, ರಾಮು, ಪುಟ್ಟರಾಜು ಹಾಗೂ ಶಿವು ಎಂದು ಗುರುತಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಇನ್ನೋರ್ವನ ಸ್ಥಿತಿ ಚಿಂತಾಜನಕವಾಗಿದ್ದು, ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರು […]

ಸಾಗರ: ಖಾಸಗಿ ಬಸ್ – ಆಟೋ ರಿಕ್ಷಾ ಢಿಕ್ಕಿ ► ಐವರು ಮೃತ್ಯು, ಓರ್ವ ಗಂಭೀರ Read More »

ಕರ್ನಾಟಕ

ಭೀಕರ ರಸ್ತೆ ಅಪಘಾತಕ್ಕೆ ಐವರು ಬಲಿ ► ಆರು ವಿದೇಶಿ ಪ್ರಜೆಗಳು ಗಂಭೀರ

(ನ್ಯೂಸ್ ಕಡಬ) newskadaba.com ಕೋಲಾರ, ಆ.05. ಟೆಂಪೊ ಟ್ರಾವೆಲರ್​ಗೆ ಲಾರಿಯೊಂದು ಢಿಕ್ಕಿಯಾದುದರಿಂದ ನಾಲ್ವರು ವಿದೇಶಿಯರು ಸೇರಿದಂತೆ ಐವರು ಮೃತಪಟ್ಟ ದಾರುಣ ಘಟನೆ ಕೋಲಾರದ ಆಂಧ್ರ ಗಡಿ ಪ್ರದೇಶದಲ್ಲಿ ನಡೆದಿದೆ. ಕೋಲಾರದ ಗಡಿ ಆಂದ್ರ ಪ್ರದೇಶದ ಅನಂತಪುರಂ ಜಿಲ್ಲೆ ಪುಂಗನೂರು ಈಡಗಪಲ್ಲಿ ಬಳಿ ಈ ದುರ್ಘಟನೆ ನಡೆದಿದೆ. ಇವರು ಸ್ಪೇನ್​​ ದೇಶದ ಜನರು ಭಾರತದಲ್ಲಿ ನಡೆಸುತ್ತಿರುವ ರೂರಲ್ ಡೆವಲಪ್‍ಮೆಂಟ್ ಟ್ರಸ್ಟಿನ ಕಾರ್ಯ ವೈಖರಿಯ ಪರಿಶೀಲನೆಗೆಂದು ಭಾರತಕ್ಕೆ ಆಗಮಿಸಿದ್ದು, ಅನಂತಪುರಂ ನಿಂದ ಪುದುಚೇರಿಗೆ ಪ್ರಯಾಣಿಸುತ್ತಿದ್ದಾಗ ಟೆಂಪೋ ಟ್ರಾವೆಲ್ಲರ್ ಮತ್ತು ಲಾರಿ

ಭೀಕರ ರಸ್ತೆ ಅಪಘಾತಕ್ಕೆ ಐವರು ಬಲಿ ► ಆರು ವಿದೇಶಿ ಪ್ರಜೆಗಳು ಗಂಭೀರ Read More »

ರಾಷ್ಟ್ರೀಯ ನ್ಯೂಸ್

ಕೋಡಂದೂರು: ಬೈಕ್ – ಕಾರು ಢಿಕ್ಕಿ ► ಸವಾರರಿಬ್ಬರಿಗೆ ಗಾಯ

(ನ್ಯೂಸ್ ಕಡಬ) newskadaba.com ಕಡಬ, ಆ.04. ಸುಬ್ರಹ್ಮಣ್ಯ – ಧರ್ಮಸ್ಥಳ ರಾಜ್ಯ ಹೆದ್ದಾರಿಯ ಕೋಡಂದೂರು ಎಂಬಲ್ಲಿ ಸ್ವಿಫ್ಟ್ ಕಾರು ಹಾಗೂ ಬೈಕ್ ನಡುವೆ ಢಿಕ್ಕಿ ಸಂಭವಿಸಿ ಸವಾರರಿಬ್ಬರು ಗಾಯಗೊಂಡ ಘಟನೆ ಶುಕ್ರವಾರದಂದು ನಡೆದಿದೆ. ಗಾಯಾಳುಗಳನ್ನು ಸ್ಥಳೀಯ ನಿವಾಸಿಗಳಾದ ಸತೀಶ್ ಹಾಗೂ ಗಫೂರ್ ಎಂದು ಗುರುತಿಸಲಾಗಿದ್ದು, ಕಡಬ ಸಮುದಾಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಕಡಬ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕೋಡಂದೂರು: ಬೈಕ್ – ಕಾರು ಢಿಕ್ಕಿ ► ಸವಾರರಿಬ್ಬರಿಗೆ ಗಾಯ Read More »

ಕರಾವಳಿ

ಕಡಬ: ಬೈಕ್-ಆಂಬ್ಯುಲೆನ್ಸ್ ಢಿಕ್ಕಿ ► ಓರ್ವ ಗಂಭೀರ – ಸವಾರನಿಗೆ ಗಾಯ

(ನ್ಯೂಸ್ ಕಡಬ) newskadaba.com ಕಡಬ, ಆ.01. ಇಲ್ಲಿನ ಪಂಜ ರಸ್ತೆಯ ಅಜ್ಜಿಕಟ್ಟೆ ಎಂಬಲ್ಲಿ ಸೇರಿದ ಆಂಬ್ಯುಲೆನ್ಸ್ ಹಾಗೂ ಬೈಕ್ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಸವಾರರಿಬ್ಬರು ಗಾಯಗೊಂಡ ಘಟನೆ ಮಂಗಳವಾರ ಸಂಜೆ ನಡೆದಿದೆ. ಗಾಯಾಳುಗಳನ್ನು 102 ನೇ ನೆಕ್ಕಿಲಾಡಿ ಗ್ರಾಮದ N.Coop ನಿವಾಸಿಗಳಾದ ವಿಶ್ವನಾಥ್(18) ಹಾಗೂ ಅಲಗರಾಜ್(48) ಎಂದು ಗುರುತಿಸಲಾಗಿದೆ. ಅಲಗರಾಜ್ ರವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಕಡಬದಿಂದ ಕೋಡಿಂಬಾಳ ಕಡೆಗೆ ತೆರಳುತ್ತಿದ್ದ ಬೈಕಿಗೆ ಕಡಬಕ್ಕೆ ಆಗಮಿಸುತ್ತಿದ್ದ ಕರ್ನಾಟಕ ರಾಜ್ಯ ರಬ್ಬರ್ ಅಭಿವೃದ್ಧಿ ನಿಗಮಕ್ಕೆ ಸೇರಿದ ತೂಫಾನ್

ಕಡಬ: ಬೈಕ್-ಆಂಬ್ಯುಲೆನ್ಸ್ ಢಿಕ್ಕಿ ► ಓರ್ವ ಗಂಭೀರ – ಸವಾರನಿಗೆ ಗಾಯ Read More »

ಕರಾವಳಿ

ಕಾರವಾರ: ಬೆಂಕಿಗಾಹುತಿಯಾದ ಟವೇರಾ ► ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾದ ಚಾಲಕ

(ನ್ಯೂಸ್ ಕಡಬ) newskadaba.com ಕಾರವಾರ, ಆ.01. ಶಾರ್ಟ್ ಸರ್ಕ್ಯೂಟ್ ಉಂಟಾದ ಪರಿಣಾಮ ಟವೇರಾ ಕಾರೊಂದು ಬೆಂಕಿಗಾಹುತಿಯಾಗಿ ಸಂಪೂರ್ಣ ಭಸ್ಮವಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಉಮ್ಮಚಗಿ ಎಂಬಲ್ಲಿ ಮಂಗಳವಾರ ಬೆಳಗ್ಗಿನ ಜಾವ ನಡೆದಿದೆ. ಘಟನೆಯಿಂದ ಮುಂಡಗೋಡು ನಿವಾಸಿ ಕಾರು ಚಾಲಕ ಪ್ರಭು  ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವರು ಕಾರಿನಲ್ಲಿ ಯಲ್ಲಾಪುರದ ಉಮ್ಮಚಗಿಯಿಂದ  ತನ್ನ ಊರಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಸ್ಥಳಕ್ಕೆ ಯಲ್ಲಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ

ಕಾರವಾರ: ಬೆಂಕಿಗಾಹುತಿಯಾದ ಟವೇರಾ ► ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾದ ಚಾಲಕ Read More »

ಕರ್ನಾಟಕ

ಖಾಸಗಿ ಬಸ್ – ಕ್ವಾಲಿಸ್ ಢಿಕ್ಕಿ ► ಜೆಡಿಎಸ್ ತಾಲೂಕು ಅಧ್ಯಕ್ಷ ಸೇರಿ ತಂದೆ ಮಗ ಮೃತ್ಯು

(ನ್ಯೂಸ್ ಕಡಬ) newskadaba.com  ತುಮಕೂರು, ಆ.01.  ಕ್ವಾಲಿಸ್ ಕಾರು ಹಾಗೂ ಖಾಸಗಿ ಬಸ್ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ಕ್ವಾಲಿಸ್ ವಾಹನದಲ್ಲಿದ್ದ ತಂದೆ-ಮಗ ಸ್ಥಳದಲ್ಲೇ ಮೃತಪಟ್ಟ ಹೃದಯವಿದ್ರಾವಕ ಘಟನೆ ತುಮಕೂರಿನ ನರುಗನಹಳ್ಳಿ ಕ್ರಾಸ್ ಬಳಿ ನಡೆದಿದೆ. ಘಟನೆಯಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಎಚ್.ಸಿ. ಕುಮಾರ್ ಹಾಗೂ ಅವರ ಪುತ್ರ ಜೀವನ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹೊನ್ನುಡಿಕೆಯಿಂದ ತುಮಕೂರಿಗೆ ಬರುತಿದ್ದ ಕಾರಿಗೆ ಕುಣಿಗಲ್ ಕಡೆಗೆ ತೆರಳುತ್ತಿದ್ದ ಎಸ್‍ಆರ್‍ಎಸ್ ಖಾಸಗಿ ಬಸ್ ಚಾಲಕ ತನ್ನ ಮುಂದಿದ್ದ ವಾಹನವನ್ನು ಓವರ್ ಟೇಕ್ ಮಾಡುವ ಸಂದರ್ಭದಲ್ಲಿ ಢಿಕ್ಕಿಯಾಗಿದೆ.

ಖಾಸಗಿ ಬಸ್ – ಕ್ವಾಲಿಸ್ ಢಿಕ್ಕಿ ► ಜೆಡಿಎಸ್ ತಾಲೂಕು ಅಧ್ಯಕ್ಷ ಸೇರಿ ತಂದೆ ಮಗ ಮೃತ್ಯು Read More »

ಕರ್ನಾಟಕ

ಮಾಣಿ ಅಪಘಾತದ ಗಾಯಾಳು ಬೈಕ್ ಸವಾರ ಮೃತ್ಯು ► ಸಹ ಸವಾರ ಗಂಭೀರ

(ನ್ಯೂಸ್ ಕಡಬ) newskadaba.com ವಿಟ್ಲ, ಜು.30. ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮಾಣಿ ಶಾಲಾ ಬಳಿ ಕಾರು ಮತ್ತು ಬೈಕ್ ಮಧ್ಯೆ ಢಿಕ್ಕಿ ಸಂಭವಿಸಿ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬೈಕ್ ಸವಾರ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಭಾನುವಾರ ರಾತ್ರಿ ನಡೆದಿದೆ. ಮಾಣಿಯಿಂದ ಉಪ್ಪಿನಂಗಡಿ ಕಡೆಗೆ ತೆರಳುತ್ತಿದ್ದ ಬೈಕಿಗೆ ಎದುರಿನಿಂದ ಬಂದ ಕೇರಳ ನೋದಣಿಯ ಕಾರು ಡಿಕ್ಕಿ ಹೊಡೆದುದರ ಪರಿಣಾಮ ಬೈಕ್ ಸವಾರ ಬೆಳ್ತಂಗಡಿ ತಾಲೂಕಿನ ಕರಾಯ ಬದಿಯಾರು ನಿವಾಸಿ ಜಾಫರ್

ಮಾಣಿ ಅಪಘಾತದ ಗಾಯಾಳು ಬೈಕ್ ಸವಾರ ಮೃತ್ಯು ► ಸಹ ಸವಾರ ಗಂಭೀರ Read More »

ಕರಾವಳಿ

ಕಡಬ: ಬೈಕ್ ಢಿಕ್ಕಿಯಾಗಿ ಪಾದಚಾರಿ ಮೃತ್ಯು ► ರಸ್ತೆ ದಾಟುತ್ತಿದ್ದಾಗ ನಡೆದ ಘಟನೆ

(ನ್ಯೂಸ್ ಕಡಬ) newskadaba.com ಕಡಬ, ಜು.30. ಇಲ್ಲಿನ ಮುಖ್ಯ ಪೇಟೆಯ ಪಂಜ ರಸ್ತೆಯಲ್ಲಿ ಪಾದಚಾರಿ ವೃದ್ಧರೋರ್ವರಿಗೆ ಬೈಕೊಂದು ಢಿಕ್ಕಿಯಾಗಿ ಪಾದಚಾರಿ ಮೃತಪಟ್ಟ ಘಟನೆ ಭಾನುವಾರ ಸಂಜೆ ನಡೆದಿದೆ. ಕಡಬ ಸಮುದಾಯ ಆಸ್ಪತ್ರೆಯ ಮುಂಭಾಗದಲ್ಲಿ ರಸ್ತೆ ದಾಟುತ್ತಿದ್ದ ಕೊಂಬಾರು ಗ್ರಾಮದ ಕಮರ್ಕಜೆ ನಿವಾಸಿ ದೇವಪ್ಪ ಗೌಡ (80) ಎಂಬವರಿಗೆ ಪಂಜಕ್ಕೆ ತೆರಳುತ್ತಿದ್ದ ಬೈಕ್ ಢಿಕ್ಕಿಯಾದುದರಿಂದ ಗಾಯಗಳಾಗಿದ್ದು, ಕಡಬ ಸಮುದಾಯ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಈ ಬಗ್ಗೆ ಕಡಬ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಕಡಬ: ಬೈಕ್ ಢಿಕ್ಕಿಯಾಗಿ ಪಾದಚಾರಿ ಮೃತ್ಯು ► ರಸ್ತೆ ದಾಟುತ್ತಿದ್ದಾಗ ನಡೆದ ಘಟನೆ Read More »

ಕರಾವಳಿ

ಬೈಕ್ – ಬಸ್ ಢಿಕ್ಕಿ: ರಸ್ತೆಗೆಸೆಯಲ್ಪಟ್ಟ ಸವಾರ ಮೃತ್ಯು ► ಅಪಘಾತದ ತೀವ್ರತೆಗೆ ಬಸ್ಸಿನೊಳಗೆ ಸಿಲುಕಿಕೊಂಡ ಬೈಕ್

(ನ್ಯೂಸ್ ಕಡಬ) newskadaba.com ಪಡುಬಿದ್ರೆ, ಜು. 29. ಬೈಕೊಂದು ಬಸ್ಸಿಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ರಸ್ತೆಗೆಸೆಯಲ್ಪಟ್ಟು ಮೃತಪಟ್ಟ ಘಟನೆ ಶನಿವಾರದಂದು ಮಂಗಳೂರು – ಕುಂದಾಪುರ ಹೆದ್ದಾರಿಯ ಪಡುಬಿದ್ರೆ ಸಮೀಪದ ಬೀಡು ಎಂಬಲ್ಲಿ ನಡೆದಿದೆ. ಮೃತ ಬೈಕ್  ಸವಾರನನ್ನು ಮುಲ್ಕಿಯ ಕಿಲ್ಪಾಡಿ ನಿವಾಸಿ ಅವಿನಾಶ್ ದೇವಾಡಿಗ (28) ಎಂದು ಗುರುತಿಸಲಾಗಿದೆ. ಅವಿನಾಶ್ ಚಲಾಯಿಸುತ್ತಿದ್ದ ಯಮಹಾ FZ ಬೈಕ್ ಖಾಸಗಿ ಬಸ್‍ಗೆ ಢಿಕ್ಕಿ ಹೊಡೆದ ತೀವ್ರತೆಗೆ ಬಸ್ಸಿನ ಮುಂಭಾಗ ಜಖಂಗೊಂಡಿದ್ದು, ಬೈಕ್ ಬಸ್ಸಿನ ಒಳಗಡೆ ಸಿಲುಕಿಕೊಂಡಿದೆ. ಸವಾರನ ನಿಯಂತ್ರಣ

ಬೈಕ್ – ಬಸ್ ಢಿಕ್ಕಿ: ರಸ್ತೆಗೆಸೆಯಲ್ಪಟ್ಟ ಸವಾರ ಮೃತ್ಯು ► ಅಪಘಾತದ ತೀವ್ರತೆಗೆ ಬಸ್ಸಿನೊಳಗೆ ಸಿಲುಕಿಕೊಂಡ ಬೈಕ್ Read More »

ಕರ್ನಾಟಕ

ಓಲಾ ಕ್ಯಾಬ್ ಲಾರಿಗೆ ಢಿಕ್ಕಿ: ಇಬ್ಬರು ಮೃತ್ಯು

(ನ್ಯೂಸ್ ಕಡಬ) newskadaba.com ಬೆಂಗಳೂರು, ಜು.29. ಓಲಾ ಕ್ಯಾಬೊಂದು ನಿಂತಿದ್ದ ಲಾರಿಗೆ ಢಿಕ್ಕಿ ಹೊಡೆದ ಪರಿಣಾಮ ಕಾರ ಚಾಲಕ ಹಾಗೂ ಪ್ರಯಾಣಿಕನೋರ್ವ ಮೃತಪಟ್ಟ ಘಟನೆ ಬೆಂಗಳುರಿನ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ಶನಿವಾರ ಬೆಳಿಗ್ಗೆ ನಡೆದಿದೆ. ಮೃತರನ್ನು ಕ್ಯಾಬ್ ಚಾಲಕ ಶಂಕರ್ ಹಾಗೂ ಪ್ರಯಾಣಿಕ ದೆಹಲಿಯ ಉಮೇಶ್ ಕುಮಾರ್ ಮಿಶ್ರಾ ಎಂದು ಗುರುತಿಸಲಾಗಿದೆ. ಇಂದು ಬೆಳಿಗ್ಗೆ ಬೆಂಗಳೂರಿನ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯ ಜಿಕೆವಿಕೆ ಮೇಲ್ಸೇತುವೆಯಲ್ಲಿ ರಸ್ತೆ ಬದಿ ನಿಲ್ಲಿಸಲಾಗಿದ್ದ ಲಾರಿಗೆ ಓಲಾ ಕ್ಯಾಬ್ ಹಿಂದಿನಿಂದ ಢಿಕ್ಕಿ

ಓಲಾ ಕ್ಯಾಬ್ ಲಾರಿಗೆ ಢಿಕ್ಕಿ: ಇಬ್ಬರು ಮೃತ್ಯು Read More »

ಕರ್ನಾಟಕ
Scroll to Top