Accident

ಕೈಕಂಬ: ಕೆಎಸ್ಸಾರ್ಟಿಸಿ ಬಸ್ ಢಿಕ್ಕಿ ► ಪಾದಚಾರಿ ಗಂಭೀರ

(ನ್ಯೂಸ್ ಕಡಬ) newskadaba.com ಕಡಬ, ಡಿ.03. ಪಾದಚಾರಿ ವ್ಯಕ್ತಿಯೋರ್ವರಿಗೆ ಕೆಎಸ್ಸಾರ್ಟಿಸಿ ಬಸ್ಸೊಂದು ಢಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಗಂಭೀರ ಗಾಯಗೊಂಡ ಘಟನೆ ಭಾನುವಾರ ಸಂಜೆ ಕೈಕಂಬ ಎಂಬಲ್ಲಿ ನಡೆದಿದೆ. ಧರ್ಮಸ್ಥಳದಿಂದ ಸುಬ್ರಹ್ಮಣ್ಯ ಮೂಲಕ ಬೆಂಗಳೂರಿಗೆ ತೆರಳುತ್ತಿದ್ದ ಬಸ್ ಕೈಕಂಬ ಸರಕಾರಿ ಶಾಲೆಯ ಬಳಿಯಿಂದ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ಢಿಕ್ಕಿ ಹೊಡೆದಿದೆ. ತಕ್ಷಣವೇ ಗಾಯಾಳುವನ್ನು ಪಿಕಪ್ ವಾಹನದ ಮೂಲಕ ಕರೆದುಕೊಂಡು ಬಂದು ಕಡಬ ಸಮುದಾಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಎ.ಜೆ. ಆಸ್ಪತ್ರೆಗೆ ಕರೆದುಕೊಂಡು […]

ಕೈಕಂಬ: ಕೆಎಸ್ಸಾರ್ಟಿಸಿ ಬಸ್ ಢಿಕ್ಕಿ ► ಪಾದಚಾರಿ ಗಂಭೀರ Read More »

ಕರಾವಳಿ

ಬುಡೋಳಿ: ಬೈಕ್-ಜುಪಿಟರ್ ಢಿಕ್ಕಿ ► ಸವಾರರಿಬ್ಬರು ಗಂಭೀರ

(ನ್ಯೂಸ್ ಕಡಬ) newskadaba.com ವಿಟ್ಲ, ಡಿ.01. ಬೈಕ್ ಮತ್ತು ಟಿವಿಎಸ್ ಜುಪಿಟರ್ ಮಧ್ಯೆ ಢಿಕ್ಕಿ ಸಂಭವಿಸಿ ಸವಾರರಿಬ್ಬರು ಗಂಭೀರ ಗಾಯಗೊಂಡ ಘಟನೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬುಡೋಳಿ ಸಮೀಪ ಶುಕ್ರವಾರ ರಾತ್ರಿ ನಡೆದಿದೆ. ಗಾಯಗೊಂಡ ಬೈಕ್ ಸವಾರನನ್ನು ಉಪ್ಪಿನಂಗಡಿ ನಿವಾಸಿ ಮುಸ್ತಫಾ ಮತ್ತು ಜುಪಿಟರ್ ಸವಾರ ಗಡಿಯಾರ ನಿವಾಸಿ ಝುಬೈರ್ ಎಂದು ಗುರುತಿಸಲಾಗಿದೆ. ಗಂಭೀರ ಗಾಯಗೊಂಡ ಗಾಯಾಳುಗಳನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬುಡೋಳಿ: ಬೈಕ್-ಜುಪಿಟರ್ ಢಿಕ್ಕಿ ► ಸವಾರರಿಬ್ಬರು ಗಂಭೀರ Read More »

ಕರಾವಳಿ

ಮಂಗಳೂರು: ಪೊಲೀಸ್ ಬಸ್ – ಲಾರಿ‌ ಢಿಕ್ಕಿ ► ನಾಲ್ವರು ಗಂಭೀರ

(ನ್ಯೂಸ್ ಕಡಬ) newskadaba.com ಮಂಗಳೂರು, ಡಿ.01. ಪೊಲೀಸ್ ಬಸ್ ಹಾಗೂ ಮೀನು ಸಾಗಾಟ ಲಾರಿ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ ನಾಲ್ವರು ಗಂಭೀರ ಗಾಯಗೊಂಡ ಘಟನೆ ಶುಕ್ರವಾರದಂದು ನಗರದ ಪಂಪುವೆಲ್ ಬಳಿ ನಡೆದಿದೆ. ತೊಕ್ಕೊಟ್ಟಿನಿಂದ ಮಂಗಳೂರು ಕಡೆ ಬರುತ್ತಿದ್ದ ಪೊಲೀಸ್ ಬಸ್ ಹಾಗೂ ಮಂಗಳೂರಿನಿಂದ ಕೇರಳ ಕಡೆ ತೆರಳುತ್ತಿದ್ದ ಮೀನಿನ ಲಾರಿಗಳು ಮುಖಾಮುಖಿ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಲಾರಿ ಹಾಗೂ ಪೊಲೀಸ್ ಬಸ್ ಚಾಲಕ ಸೇರಿದಂತೆ ನಾಲ್ವರು ಗಂಭೀರ ಗಾಯಗೊಂಡಿದ್ದು, ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದಂತೆ

ಮಂಗಳೂರು: ಪೊಲೀಸ್ ಬಸ್ – ಲಾರಿ‌ ಢಿಕ್ಕಿ ► ನಾಲ್ವರು ಗಂಭೀರ Read More »

ಕರಾವಳಿ

ಕೊಡಾಜೆ: ಖಾಸಗಿ ಬಸ್ ಪಲ್ಟಿ ► ಹಲವರಿಗೆ ಗಾಯ

(ನ್ಯೂಸ್ ಕಡಬ) newskadaba.com ವಿಟ್ಲ, ನ. 30. ಚಾಲಕನ ನಿಯಂತ್ರಣ ಕಳೆದುಕೊಂಡ ಖಾಸಗಿ ಬಸ್ಸೊಂದು ಪಲ್ಟಿಯಾದ ಘಟನೆ ಮಾಣಿ- ಮೈಸೂರು ರಾಜ್ಯ ಹೆದ್ದಾರಿಯ ಕೊಡಾಜೆಯಲ್ಲಿ ಗುರುವಾರದಂದು ನಡೆದಿದೆ. ಮಡಿಕೇರಿಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಬಸ್ಸಿನಲ್ಲಿದ್ದ ಸುಮಾರು 20ಕ್ಕಿಂತಲೂ ಅಧಿಕ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಘಟನೆ ತೀವ್ರತೆಗೆ ಬಸ್ ರಸ್ತೆಯಿಂದ ಪೊದೆಯೊಂದಕ್ಕೆ ನುಗ್ಗಿ ಪಲ್ಟಿಯಾಗಿದೆ. ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿದ್ದಾರೆ.

ಕೊಡಾಜೆ: ಖಾಸಗಿ ಬಸ್ ಪಲ್ಟಿ ► ಹಲವರಿಗೆ ಗಾಯ Read More »

ಕರಾವಳಿ

ಕಲ್ಲಡ್ಕ: ಮೂರು ಕಾರುಗಳ ನಡುವೆ ಸರಣಿ ಅಪಘಾತ ► ಇಬ್ಬರಿಗೆ ಗಾಯ

(ನ್ಯೂಸ್ ಕಡಬ) newskadaba.com ಬಂಟ್ವಾಳ, ನ.26. ಸ್ವಿಫ್ಟ್, ಇಂಡಿಕಾ ಮತ್ತು ವ್ಯಾಗನಾರ್ ಕಾರುಗಳ ನಡುವೆ ಸರಣಿ ಅಪಘಾತವಾಗಿ ಇಬ್ಬರು ಗಾಯಗೊಂಡ ಘಟನೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಕಲ್ಲಡ್ಕ ಸಮೀಪದ ನರಹರಿ ಪರ್ವತದ ಬಳಿ ಭಾನುವಾರ ಸಂಜೆ ನಡೆದಿದೆ. ಮಂಗಳೂರು ಕಡೆಗೆ ತೆರಳುತ್ತಿದ್ದ ಸ್ವಿಫ್ಟ್ ಕಾರು ಮತ್ತು ಮಾಣಿ ಕಡೆಗೆ ತೆರಳುತ್ತಿದ್ದ ಇಂಡಿಕಾ ಕಾರು ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದ್ದು, ಇದೇ ವೇಳೆ ಇಂಡಿಕಾ ಕಾರಿನ ಹಿಂದಿನಿಂದ ಬರುತ್ತಿದ್ದ ವ್ಯಾಗನಾರ್ ಕಾರಿನ ಚಾಲಕ ಏಕಾಏಕಿ ಬ್ರೇಕ್

ಕಲ್ಲಡ್ಕ: ಮೂರು ಕಾರುಗಳ ನಡುವೆ ಸರಣಿ ಅಪಘಾತ ► ಇಬ್ಬರಿಗೆ ಗಾಯ Read More »

ಕರಾವಳಿ

ಸುಳ್ಯ: ಮನೆಯ ಮೇಲೆ ಉರುಳಿ ಬಿದ್ದ ಬೋರ್‍ವೆಲ್ ಲಾರಿ ► ನೂತನವಾಗಿ ನಿರ್ಮಾಣಗೊಳ್ಳುತ್ತಿದ್ದ ಮನೆಗೆ ಹಾನಿ

(ನ್ಯೂಸ್ ಕಡಬ) newskadaba.com ಸುಳ್ಯ, ನ.24. ಬೋರ್‍ವೆಲ್ ಲಾರಿಯೊಂದು ಆಯತಪ್ಪಿ ನೂತನವಾಗಿ ನಿರ್ಮಾಣಗೊಳ್ಳುತ್ತಿದ್ದ ಮನೆಯೊಂದರ ಮೇಲೆ ಬಿದ್ದ ಘಟನೆ ಸುಳ್ಯದ ಜಾಲ್ಸೂರಿನಲ್ಲಿ ಗುರುವಾರದಂದು ನಡೆದಿದೆ. ಶಾಫಿ ಎಂಬವರ ಮನೆಯಲ್ಲಿ ಬೋರ್‍ವೆಲ್ ತೆಗೆಯಲೆಂದು ತೆರಳುತ್ತಿದ್ದ ಲಾರಿಯು ಜಾಲ್ಸೂರು ಗ್ರಾಮದ ಬೊಳುಬೈಲು ಎಂಬಲ್ಲಿಗೆ ತಲುಪಿದಾಗ ಇಕ್ಕಟ್ಟಾದ ರಸ್ತೆಯಲ್ಲಿ ಸಾಗುತ್ತಿದ್ದಾಗ ರವಿ ಎಂಬವರ ಕಾಂಪೌಂಡ್ ಕುಸಿದು ಬಿದ್ದು ನೂತನವಾಗಿ ನಿರ್ಮಿಸುತ್ತಿದ್ದ ಮನೆಯ ಮೇಲೆ ಬಿದ್ದಿದೆ. ಘಟನೆಯಲ್ಲಿ ಮನೆಗೆ ಹಾನಿಯಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಸುಳ್ಯ: ಮನೆಯ ಮೇಲೆ ಉರುಳಿ ಬಿದ್ದ ಬೋರ್‍ವೆಲ್ ಲಾರಿ ► ನೂತನವಾಗಿ ನಿರ್ಮಾಣಗೊಳ್ಳುತ್ತಿದ್ದ ಮನೆಗೆ ಹಾನಿ Read More »

ಕರಾವಳಿ

ಕೆಮ್ಮಾರ: ಭೀಕರ ಅಪಘಾತಕ್ಕೆ ಇಬ್ಬರು ಬಲಿ, ಮೂವರು ಗಂಭೀರ ► ಸೇತುವೆಯ ತಡೆಗೋಡೆಗೆ ಗುದ್ದಿದ ಜೀಪ್

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ನ.23. ಜೀಪೊಂದು ಸೇತುವೆಯ ತಡೆಗೋಡೆಗೆ ಢಿಕ್ಕಿ ಹೊಡೆದು ಉಂಟಾದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟು ಮೂವರು ಗಂಭೀರ ಗಾಯಗೊಂಡ ಘಟನೆ ಉಪ್ಪಿನಂಗಡಿ – ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕೆಮ್ಮಾರ ಎಂಬಲ್ಲಿ ಗುರುವಾರ ತಡ ರಾತ್ರಿ ನಡೆದಿದೆ. ಮೃತರನ್ನು ಕಾಣಿಯೂರಿನ ಕಟ್ಟತ್ತಾರು ನಿವಾಸಿಗಳಾದ ಶಿವಪ್ಪ ಮತ್ತು ಸುಶೀಲಾ ಎಂದು ಗುರುತಿಸಲಾಗಿದೆ. ಇವರು ತಮ್ಮದೇ ಜೀಪಿನಲ್ಲಿ ಉಪ್ಪಿನಂಗಡಿಯಿಂದ ಕಾಣಿಯೂರಿಗೆ ಆಲಂಕಾರು ಶಾಂತಿಮೊಗರು ಮೂಲಕ ತೆರಳುತ್ತಿರುವಾಗ ಜೀಪು ಚಾಲಕನ ನಿಯಂತ್ರಣ ತಪ್ಪಿ ಕೆಮ್ಮಾರ

ಕೆಮ್ಮಾರ: ಭೀಕರ ಅಪಘಾತಕ್ಕೆ ಇಬ್ಬರು ಬಲಿ, ಮೂವರು ಗಂಭೀರ ► ಸೇತುವೆಯ ತಡೆಗೋಡೆಗೆ ಗುದ್ದಿದ ಜೀಪ್ Read More »

ಕರಾವಳಿ

ಕುಂಡಾಜೆ: ಸ್ಕಿಡ್ ಆಗಿ ರಸ್ತೆಗುರುಳಿದ ದ್ವಿಚಕ್ರ ವಾಹನ ► ಇಬ್ಬರಿಗೆ ಗಂಭೀರ ಗಾಯ

(ನ್ಯೂಸ್ ಕಡಬ) newskadaba.com ಕಡಬ, ನ.23. ದ್ವಿಚಕ್ರ ವಾಹನವೊಂದು ಸ್ಕಿಡ್ ಆಗಿ ನೆಲಕ್ಕುರುಳಿದ ಪರಿಣಾಮ ಇಬ್ಬರು ಗಂಭೀರ ಗಾಯಗೊಂಡ ಘಟನೆ ಗುರುವಾರದಂದು ಸಂಜೆ ಆಲಂಕಾರು ಸಮೀಪದ ಕುಂಡಾಜೆ ಎಂಬಲ್ಲಿ ನಡೆದಿದೆ. ಘಟನೆಯಲ್ಲಿ ದ್ವಿಚಕ್ರ ವಾಹನ ಸವಾರ ಶರವೂರು ಮಿತ್ರಡ್ಕ ನಿವಾಸಿ ಪೂವಪ್ಪ ಮತ್ತು ಸಹ ಸವಾರ ಜನಾರ್ದನ ಮೂಲ್ಯ ಎಂಬವರು ಗಂಭೀರವಾಗಿ ಗಾಯಗೊಂಡಿದ್ದು, ಪೂವಪ್ಪರವರನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಮತ್ತು ಜನಾರ್ದನ ಮೂಲ್ಯರವರನ್ನು ಪುತ್ತೂರಿನ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಡಬ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ

ಕುಂಡಾಜೆ: ಸ್ಕಿಡ್ ಆಗಿ ರಸ್ತೆಗುರುಳಿದ ದ್ವಿಚಕ್ರ ವಾಹನ ► ಇಬ್ಬರಿಗೆ ಗಂಭೀರ ಗಾಯ Read More »

ಕರಾವಳಿ

ಹೋಂಡಾ ಡಿಯೋ – ಲಾರಿ ಢಿಕ್ಕಿ ► ಗಾಯಗೊಂಡ ಡಿಯೋ‌ ಸವಾರ ಆಸ್ಪತ್ರೆಗೆ

(ನ್ಯೂಸ್ ಕಡಬ) newskadaba.com ಬಂಟ್ವಾಳ, ನ.23. ಲಾರಿಯೊಂದು ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಬಿ.ಸಿ.ರೋಡಿನ ಫ್ಲೈ ಓವರ್ ಬಳಿ ಗುರುವಾರದಂದು ನಡೆದಿದೆ.   ಗಾಯಾಳು ದ್ವಿಚಕ್ರ ವಾಹನ ಸವಾರನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಅಪಘಾತದಿಂದಾಗಿ ಬಿ.ಸಿ.ರೋಡಿನಲ್ಲಿ ಕೆಲ ಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಘಟನೆ ಸಂಬಂಧ ಮೆಲ್ಕಾರ್ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೋಂಡಾ ಡಿಯೋ – ಲಾರಿ ಢಿಕ್ಕಿ ► ಗಾಯಗೊಂಡ ಡಿಯೋ‌ ಸವಾರ ಆಸ್ಪತ್ರೆಗೆ Read More »

ಕರಾವಳಿ

ವಿಟ್ಲ: ಲಾರಿ – ಬೈಕ್ ಢಿಕ್ಕಿ ► ಸವಾರರಿಬ್ಬರು ಗಂಭೀರ

(ನ್ಯೂಸ್ ಕಡಬ) newskadaba.com ವಿಟ್ಲ, ನ.23. ಗೂಡ್ಸ್ ಲಾರಿ ಮತ್ತು ಯಮಹಾ FZ ಬೈಕ್ ನಡುವೆ ಢಿಕ್ಕಿ ಸಂಭವಿಸಿ ಸವಾರರಿಬ್ಬರು ಗಂಭೀರ ಗಾಯಗೊಂಡ ಘಟನೆ ಗುರುವಾರದಂದು ಕಾಡುಮಠ ಸೇತುವೆ ಸಮೀಪದ ಅಪಾಯಕಾರಿ ತಿರುವಿನಲ್ಲಿ ನಡೆದಿದೆ. ಘಟನೆಯಲ್ಲಿ ಮಂಚಿ ಸಮೀಪದ ನಾಡಾಜೆ ನಿವಾಸಿಗಳಿಬ್ಬರು ಗಂಭೀರ ಗಾಯಗೊಂಡಿದ್ದು, ಗಾಯಾಳುಗಳನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾಡುಮಠ ಸೇತುವೆ ಕಾಮಗಾರಿಯು ಅಪೂರ್ಣವಾಗಿ ಇರುವುದರಿಂದ ಹಳೆಯ ರಸ್ತೆ ಮತ್ತು ಹೊಸ ರಸ್ತೆಯ ಬಗ್ಗೆ ವಾಹನ ಚಾಲಕರಲ್ಲಿ ಗೊಂದಲ ಉಂಟಾಗುತ್ತಿದ್ದು, ಕಳೆದ ಎರಡು ತಿಂಗಳಲ್ಲಿ

ವಿಟ್ಲ: ಲಾರಿ – ಬೈಕ್ ಢಿಕ್ಕಿ ► ಸವಾರರಿಬ್ಬರು ಗಂಭೀರ Read More »

ಕರಾವಳಿ
Scroll to Top