ಕುಂಡಾಜೆ: ಸ್ಕಿಡ್ ಆಗಿ ರಸ್ತೆಗುರುಳಿದ ದ್ವಿಚಕ್ರ ವಾಹನ ► ಇಬ್ಬರಿಗೆ ಗಂಭೀರ ಗಾಯ



(ನ್ಯೂಸ್ ಕಡಬ) newskadaba.com ಕಡಬ, ನ.23. ದ್ವಿಚಕ್ರ ವಾಹನವೊಂದು ಸ್ಕಿಡ್ ಆಗಿ ನೆಲಕ್ಕುರುಳಿದ ಪರಿಣಾಮ ಇಬ್ಬರು ಗಂಭೀರ ಗಾಯಗೊಂಡ ಘಟನೆ ಗುರುವಾರದಂದು ಸಂಜೆ ಆಲಂಕಾರು ಸಮೀಪದ ಕುಂಡಾಜೆ ಎಂಬಲ್ಲಿ ನಡೆದಿದೆ.







ಘಟನೆಯಲ್ಲಿ ದ್ವಿಚಕ್ರ ವಾಹನ ಸವಾರ ಶರವೂರು ಮಿತ್ರಡ್ಕ ನಿವಾಸಿ ಪೂವಪ್ಪ ಮತ್ತು ಸಹ ಸವಾರ ಜನಾರ್ದನ ಮೂಲ್ಯ ಎಂಬವರು ಗಂಭೀರವಾಗಿ ಗಾಯಗೊಂಡಿದ್ದು, ಪೂವಪ್ಪರವರನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಮತ್ತು ಜನಾರ್ದನ ಮೂಲ್ಯರವರನ್ನು ಪುತ್ತೂರಿನ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.






ಕಡಬ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

error: Content is protected !!
Scroll to Top